ಇತಿಹಾಸ ದರ್ಪಣ

ವಿಕಿಪೀಡಿಯ ಇಂದ
Jump to navigation Jump to search

ಇತಿಹಾಸ ದರ್ಪಣ - ITIHASA DARPANA[ಬದಲಾಯಿಸಿ]

ಇತಿಹಾಸ ದರ್ಪಣವು ಪ್ರಸ್ತುತ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇತಿಹಾಸಕ್ಕೆ ಮೀಸಲಾದ ಏಕೈಕ ತ್ರೈಮಾಸಿಕ ನಿಯತಕಾಲಿಕೆ. ೨೦೦೯ರ ಏಪ್ರಿಲ್ ನಿಂದ ಪ್ರಕಟಗೊಳ್ಳುತ್ತಿದೆ. ಇದರ ಸಂಪಾದಕರು ಹಂ.ಗು.ರಾಜೇಶ್. ಉಪಸಂಪಾದಕರಾಗಿ ಸುಂಕಂ ಗೋವರ್ಧನ, ರಶ್ಮಿ ಎಸ್ ಮತ್ತು ಶಿವಕುಮಾರಿ ಎಂ.ಎಸ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರೆಗೂ ೩೯ ಸಂಚಿಕೆಗಳು ಹೊರಬಂದಿವೆ. ಅವುಗಳಲ್ಲಿ 'ಕೃಷ್ಣದೇವರಾಯ ಮತ್ತು ವಿಜಯನಗರ ಸಾಮ್ರಾಜ್ಯ' , 'ನಮ್ಮ ಬೆಂಗಳೂರು' ಹಾಗೂ 'ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನಗಳು' ಮತ್ತು 'ಕರ್ನಾಟಕದ ಕಲೆ, ವಾಸ್ತುಶಿಲ್ಪ ಮತ್ತು ಪುರಾತತ್ತ್ವ: ಹೊಸ ಪರಿಶೋಧಗಳು' ಎಂಬ ಜನಪ್ರಿಯ ವಿಶೇಷ ಸಂಚಿಕೆಗಳು ಸೇರಿವೆ. ಸಂಶೋಧನಾತ್ಮಕ ಲೇಖನಗಳನ್ನು ಮಾತ್ರ ಪ್ರಕಟಿಸುತ್ತಾ ಬರುತ್ತಿದ್ದು, ನಾಡಿನ ವಿದ್ವದ್ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನ ಹಿರಿಯ ಕಿರಿಯ ವಿದ್ವಾಂಸರು ಮಾತ್ರವಲ್ಲದೆ ದೇಶ ವಿದೇಶಿಯ ವಿದ್ವಾಂಸರ ಲೇಖನಗಳು ಕೂಡ ಪ್ರಕಟವಾಗಿವೆ. ಜಪಾನಿನ ಇತಿಹಾಸಕಾರರಾದ ಓತಾ ನಬುಹಿರೊ, ಅಮೇರಿಕಾದ ಸಿಮೊನ್ ಕ್ಯಾಲಬ್, ನಾಡಿನ ಶೋಧಕರುಗಳಾದ ಸುರೇಂದ್ರ ರಾವ್, ಎಸ್.ಚಂದ್ರಶೇಖರ್, ಎಚ್.ಎಸ್.ಗೋಪಾಲ್ ರಾವ್, ಎಂ.ಜಮುನಾ, ಎಸ್.ಕೆ.ಅರುಣಿ, ಪಿ.ವಿ.ಕೃ‍ಷ್ಣಮೂರ್ತಿ, ರಹಮತ್ ತರೀಕೆರೆ, ಸಿ.ಆರ್.ಗೋವಿಂದರಾಜ್, ಎಂ.ವಿ.ಶ್ರೀನಿವಾಸ್, ದೇವರಕೊಂಡರೆಡ್ಡಿ, ಶೇಷಶಾಸ್ತ್ರಿ, ಯೋಗೇಶ್ವರಪ್ಪ, ವಿ.ಶೋಭಾ, ಯುವ ಸಂಶೋಧಕರಾದ ಪುರು‍ಷೋತ್ತಮ್, ಪ್ರದೀಪ್ ಕುಮಾರ್ ಶೆಟ್ಟಿ, ಸುಂಕಂ ಗೋವರ್ಧನ ಮೊದಲಾದವರು ಸಂಶೋಧನ ಲೇಖನಗಳನ್ನು ಬರೆದಿರುತ್ತಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಅವರು ಕೂಡ ಲೇಖನಗಳನ್ನು ಬರೆದಿದ್ದಾರೆ. ದೂರದ ಹಿಮಾಚಲ ಪ್ರದೇಶದ ಐ.ಐ.ಟಿ ಮಂಡಿಯಲ್ಲಿ ಸಹ ಪ್ರಾಧ್ಯಾಪಕರಾಗಿರು ಮನು ವಿ.ದೇವದೇವನ್ ಅವರು 'ಪುರಿ ಜಗನ್ನಾಥ ದೇವಾಲಯದ ಚರಿತ್ರೆ' ಕುರಿತು ಸಂಶೋಧನಾ ಲೇಖನಗಳ ಸರಣಿ ಪ್ರಕಟಗೊಂಡಿದ್ದು, ಹೆಚ್ಚು ಜನಪ್ರಿಯಗೊಂಡಿದೆ. ಆಸಕ್ತರು ಇತಿಹಾಸ ದರ್ಪಣದ ಚಂದಾದಾರರಾಗಬಹುದು.

ಪತ್ರಿಕಾ ವಿಳಾಸ: ಸಂಪಾದಕರು, ಇತಿಹಾಸ ದರ್ಪಣ, ನಂ-೩೩/ಎ, ಐ.ಟಿ.ಐ ಕಾಲೇಜು ಹತ್ತಿರ, ಕೆಂಪೇಗೌಡ ನಗರ, ವಿಶ್ವನೀಡಂ -ಅಂಚೆ, ಬೆಂಗಳೂರು-೫೬೦೦೯೧. ಅಥವಾ ಮಿಂಚಂಚೆ: itihasadarpana@gmail.com ಸಂಪರ್ಕಿಸಿ.