ಇಡಿಯಪ್ಪಮ್
ಇಡಿಯಪ್ಪಮ್ ಅಥವಾ ನೂಲ್ ಪುಟ್ಟು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜೊತೆಗೆ ಶ್ರೀಲಂಕಾದಿಂದ ಹುಟ್ಟಿಕೊಂಡ ಅಕ್ಕಿ ಶಾವಿಗೆಯ ಒಂದು ಖಾದ್ಯವಾಗಿದೆ. ಅಕ್ಕಿ ಹಿಟ್ಟನ್ನು ನೂಡಲ್ಗಳಾಗಿ ಒತ್ತಿ, ಚಪ್ಪಟೆ ಬಿಲ್ಲೆಯಂತಹ ಆಕಾರದಲ್ಲಿ ಹೆಣೆದು ಹಬೆಯಲ್ಲಿ ಬೇಯಿಸಲಾಗುತ್ತದೆ.
ಇಡಿಯಪ್ಪಮ್ ಶ್ರೀಲಂಕಾದಲ್ಲಿ ಮತ್ತು ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳಾದ್ಯಂತ ವಿಶೇಷ ಪಾಕವಾಗಿದೆ. ತಮಿಳಿನಲ್ಲಿ ಇಡಿಯಪ್ಪಮ್ ಶಬ್ದವು ಎರಡು ಶಬ್ದಗಳಿಂದ ವ್ಯುತ್ಪನ್ನವಾಗಿದೆ - ಇಡಿ ಅಂದರೆ ಮಥಿಸು ಮತ್ತು ಅಪ್ಪಮ್ ಅಂದರೆ ಹಿಟ್ಟಿನ ಬಿಲ್ಲೆ. ತುಳು ಭಾಷೆಯಲ್ಲಿ ಇದನ್ನು ಸೇಮೆ ಡಾ ಅಡ್ಡೈ ಎಂದು ಕರೆಯಲಾಗುತ್ತದೆ. ಇದನ್ನು ತುಳುವ ಚಿಕನ್ ಅಥವಾ ಮೀನಿನ ಕರಿಯೊಂದಿಗೆ, ಮತ್ತು ರಸಾಯನ ಎಂದು ಕರೆಯಲ್ಪಡುವ ತೆಂಗಿನ ಹಾಲಿನ ಖಾದ್ಯದೊಂದಿಗೆ ತಿನ್ನಲಾಗುತ್ತದೆ.[೧]
ಇದನ್ನು ರಾಗಿ ಹಿಟ್ಟಿನಿಂದಲೂ ತಯಾರಿಸಬಹುದು. ಹಿಟ್ಟಾಗಿ ಮಾಡಿಕೊಳ್ಳಲು ಉಪ್ಪು ಮತ್ತು ನೀರನ್ನು ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಗಿನ ತಿಂಡಿಯಲ್ಲಿ ಅಥವಾ ರಾತ್ರಿಯ ಊಟದಲ್ಲಿ ಕರಿಯೊಂದಿಗೆ (ಆಲೂಗಡ್ಡೆ, ಮೀನು, ಮೊಟ್ಟೆ ಅಥವಾ ಮಾಂಸ) ಮತ್ತು ಕೊಬ್ಬರಿ ಚಟ್ನಿಯೊಂದಿಗೆ ಮುಖ್ಯ ಆಹಾರವಾಗಿ ಬಡಿಸಲಾಗುತ್ತದೆ.
ಉಲ್ಲೇಖಗಳು[ಬದಲಾಯಿಸಿ]
- ↑ "Idiyappam". Marias Menu. Retrieved 12 April 2014.