ವಿಷಯಕ್ಕೆ ಹೋಗು

ಇಟ್ರಸ್ಕನ್ ಸಂಸ್ಕೃತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಟ್ರಸ್ಕನ್ಸ್
  • 𐌓𐌀𐌔𐌄𐌍𐌍𐌀
  • Script error: The function "transl" does not exist.
ನಗರ-ರಾಜ್ಯಗಳು

Life span?
Location of ಇಟ್ರಸ್ಕನ್ ನಾಗರಿಕತೆ
ಇಟ್ರಸ್ಕನ್ ನಾಗರಿಕತೆಯ ವಿಸ್ತಾರ ಮತ್ತು ಹನ್ನೆರಡು ಇಟ್ರಸ್ಕನ್ ಲೀಗ್ ನಗರಗಳು
ರಾಜಧಾನಿ Not specified
ಭಾಷೆಗಳು ಇಟ್ರುಸ್ಕನ್ ಭಾಷೆ
ಧರ್ಮ ಇಟ್ರಸ್ಕನ್ ಧರ್ಮ
ಸರ್ಕಾರ ಪ್ರಧಾನ
Legislature ಇಟ್ರಸ್ಕನ್ ಲೀಗ್
ಐತಿಹಾಸಿಕ ಯುಗ ಕಬ್ಬಿಣದ ಯುಗ, ಪ್ರಾಚೀನ ಇತಿಹಾಸ
 -  ವಿಲ್ಲನೋವನ್ ಸಂಸ್ಕೃತಿ Enter start year
 -  ರೋಮ್ ಔಪಚಾರಿಕವಾಗಿ ಕೊನೆಯ ಇಟ್ರಸ್ಕನ್ ನಗರಗಳನ್ನು ಸೇರಿಕೊಂಡಿತು Enter end year
ಚಲಾವಣೆ ಇಟ್ರಸ್ಕನ್ ನಾಣ್ಯಗಳು (5th century BC onward)
ಇಂದು ಇವುಗಳ ಭಾಗ
Warning: Value not specified for "continent"

ಇಟ್ರಸ್ಕನ್ ಸಂಸ್ಕೃತಿ-ರೋಮ್ ಸಂಸ್ಕೃತಿಗಿಂತ ಮೊದಲು ಇಟಲಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂಸ್ಕೃತಿ. ಇಟ್ರಸ್ಕನರ ರಾಜ್ಯಕ್ಕೆ ಇಟ್ರೂರಿಯವೆಂದು ಹೆಸರು. ಈ ಜನ ಸುಮಾರು ಕ್ರಿ.ಪೂ. 800ರಲ್ಲಿ ಏಷ್ಯ ಮೈನರ್ ಪ್ರದೇಶದಿಂದ ಬಹುತೇಕ ಲಿಡಿಯದಿಂದ ಇಟಲಿಯ ಖನಿಜ ಸಂಪತ್ತಿನಿಂದ ಆಕರ್ಷಿತರಾಗಿ ಬಂದವರು-ಎಂದು ಹಿರಡಟಸ್ ಹೇಳಿರುವ ಅಭಿಪ್ರಾಯವನ್ನು ಈಚಿನ ಸಂಶೋಧಕರು ಒಪ್ಪಿದ್ದಾರೆ.

ಚಾರಿತ್ರಿಕ ಹಿನ್ನಲೆ

[ಬದಲಾಯಿಸಿ]

ಇವರ ಭಾಷೆ ಇಂಡೋ-ಯೂರೋಪಿಯನ್ ಭಾಷೆಗಿಂತ ಭಿನ್ನವಾದದು. ಇಟಲಿಯ ಈಗಿನ ಟಸ್ಕನಿ ಪ್ರದೇಶದಲ್ಲಿ ಬಾಳಿದ ಇವರ ಪ್ರಾಚೀನ ನಗರರಾಜ್ಯಗಳು ಕ್ರಿ.ಪೂ. 600ರ ಹೊತ್ತಿಗೆ ಉನ್ನತ ನಾಗರಿಕತೆಯನ್ನು ಹೊಂದಿದ್ದುವು. ಇವರು ಚತುರ ನಾವಿಕರಾಗಿದ್ದರು.[] ಕಡಲುಗಳ್ಳತನ, ವ್ಯಾಪಾರ ಮತ್ತು ಯುದ್ಧಗಳಿಂದಾಗಿ ಉನ್ನತ ಐಶ್ವರ್ಯವನ್ನು ಸಂಪಾದಿಸಿ ದುಂದು ಮತ್ತು ವಿಲಾಸಪೂರ್ಣ ಜೀವನವನ್ನು ನಡೆಸುತ್ತಿದ್ದರು. ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವಿತ್ತು. ಯುದ್ಧಬಂದಿಗಳ ಕೊಲೆ ಮತ್ತು ಗ್ಲೇಡಿಯೇಟರ್ ಕಾಳಗಗಳನ್ನು ಏರ್ಪಡಿಸುವುದು ರೂಢಿಯಲ್ಲಿತ್ತು. ಮತೀಯ ಸಂಬಂಧವಾದ ಆಚಾರಗಳು, ಹೆಚ್ಚಾಗಿ ಮರಣೋತ್ತರ ಕ್ರಿಯೆಗಳಿಗೆ ಸಂಬಂಧಪಟ್ಟವಾಗಿದ್ದುವು. ಮತೀಯ ಗುರುಗಳು ಭವಿಷ್ಯ ನಿರೂಪಣೆಯಲ್ಲಿ ನಿರತರಾಗಿರುತ್ತಿದ್ದರು. ಅವರ ಇಹಜೀವನ ಎಷ್ಟು ಭೋಗಮಯವೋ ಅದಕ್ಕೆ ವ್ಯತಿರಿಕ್ತವಾಗಿ ಅವರ ಮರಣೋತ್ತರ ಜೀವನ ಭೂತಪ್ರೇತಗಳಿಂದ ಕೂಡಿದ್ದು ಭಯೋತ್ಪಾದಕವಾಗಿತ್ತು. ಕುದುರೆ ಮತ್ತು ರಥಗಳ ಬಳಕೆ ಇತ್ತು. ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದ್ದರು. ಲೋಹದ ಕೆಲಸದಲ್ಲಿ ಔನ್ನತ್ಯ ಸಂಪಾದಿಸಿದ್ದರು. ವಾಶ್ತುಶಿಲ್ಪ ಮತ್ತು ಯಂತ್ರೋದ್ಯೋಗಗಳಲ್ಲಿ ಪ್ರಾವೀಣ್ಯ ಪಡೆದು ವ್ಯವಸಾಯವನ್ನು ಪ್ರೋತ್ಸಾಹಿಸುತ್ತಿದ್ದರು. ಇವರು ಕಾರ್ತೇಜಿನ ಸ್ನೇಹಿತರಾಗಿದ್ದರೆಂದೂ ಕ್ರಿ.ಪೂ. 474ರಲ್ಲಿ ಇವರ ನೌಕಾಪಡೆ ಸೈರಕ್ಸೂಸ್ ರಾಷ್ಟ್ರದ ನೌಕಾಪಡೆಯಿಂದ ನಾಶಹೊಂದಿತೆಂದೂ ತಿಳಿದುಬರುತ್ತದೆ. ಕ್ರಿ.ಪೂ. 423ರಿಂದ ಮೊದಲುಗೊಂಡು ರೋಮನರ ಹಾಗೂ ಇತರ ಪಂಗಡಗಳ ದಾಳಿಯಿಂದ ಇವರ ಸಂಸ್ಕೃತಿ ನಶಿಸಲಾರಂಭಿಸಿ ಕ್ರಿ.ಪೂ. 396ರಲ್ಲಿ ಇವರ ನಗರರಾಜ್ಯಗಳು ಕ್ರಮೇಣ ರೋಮನರ ಅಧೀನವಾದುವು. ಕ್ರಿ.ಪೂ. 309ರಲ್ಲಿ ನಡೆದ ವಡಿಮೋನಿಯ ಸರೋವರದ ಯುದ್ಧದಲ್ಲಿ ರೋಮನರು ಇವರನ್ನು ಸೋಲಿಸಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಮೇಲೆ ಇವರ ಸಂಸ್ಕೃತಿ ಅಧಃಪತನ ಹೊಂದಿತು.

ಇಟ್ರಸ್ಕನ್ ಕಲೆ

[ಬದಲಾಯಿಸಿ]

ಇಟಲಿಯಲ್ಲಿ ರೋಮನ್ ಜನಾಂಗ ಪ್ರಬಲಿಸುವುದಕ್ಕಿಂತ ಐದು ಶತಮಾನಗಳಿಗಿಂತ ಮುಂಚೆಯೇ ಇಟ್ರಸ್ಕನರ ಕಲೆ ಶ್ರೇಷ್ಠ ಹಾಗೂ ಸತ್ತ್ವಪೂರ್ಣವಾಗಿದ್ದು ಪರಿಪೂರ್ಣತೆಯನ್ನು ಪಡೆದಿತ್ತು.

ಕುರುಹುಗಳು

[ಬದಲಾಯಿಸಿ]
ಮೃತನ ಆಕೃತಿಯನ್ನು ರೂಪಿಸುವ ಶವಜಾಡಿಯ ಮುಚ್ಚಳ
ಚಿನ್ನದ ಆಭರಣಗಳು
ನೌಕಾಯುದ್ಧವನ್ನು ಚಿತ್ರಿಸಿರುವ ಜಾಡಿ
ಪೌರಾಣಿಕ ದೃಶ್ಯವೊಂದನ್ನು ರೂಪಿಸುವ ವರ್ಣಚಿತ್ರ
ಇಟ್ರಸ್ಕನ್ ಶೈಲಿಯ ದ್ವಾರ
ಕೊರ್ಟೊನಾದಿಂದ ಬೌಂಡರಿ ಸ್ಟೋನ್
ಎಟ್ರುಸ್ಕನ್: ತುಲಾರ್ ರಾಸ್ನಾಲ್
ಇಂಗ್ಲಿಷ್: ಜನರ ಗಡಿ

ರೋಮನ್ ಸಂಸ್ಕೃತಿಗಾದ ಪ್ರಭಾವ

[ಬದಲಾಯಿಸಿ]

ಅನಂತರ ಬಂದ ರೋಮನ್ ಸಂಸ್ಕೃತಿಗೂ ಕಲೆಗೂ ಇದು ಪ್ರಚೋದಕವಾಯಿತು. ನೆಲದಡಿಯಲ್ಲಿರುವ ಇದರ ಶವಾಗಾರಗಳಲ್ಲಿ ಇವರ ನಾಗರಿಕತೆಯನ್ನು ಪ್ರತಿಬಿಂಬಿಸುವ ಸುಂದರ ವರ್ಣಚಿತ್ರಗಳು, ಮನೆಗಳ ಆಕಾರದ ಚಿತಾಭಸ್ಮ ಪೆಟ್ಟಿಗೆಗಳು, ಚಿತ್ತಾರದ ಕೆಲಸವಿರುವ ಕಂಚಿನ ಕಲಶಪಾತ್ರೆಗಳು, ಕಂಚಿನ ರಥ, ಯುದ್ಧ ಕವಚಗಳು, ಯೋಧರ, ದೇವತೆಗಳ, ಭವಿಷ್ಯವಾದಿಗಳು, ಚಿಕ್ಕ ಪ್ರತಿಮೆಗಳು, ಮಣ್ಣಿನ ಪ್ರತಿಮೆಗಳ, ಚಿತ್ರಗಳಿಂದ ಅಲಂಕರಣಗೊಂಡ ಮಣ್ಣಿನ ಕಲಶ ಪಾತ್ರೆಗಳು, ಚಂದ್ರಕಾಂತಶಿಲೆ, ಬೆಳ್ಳಿ ಮತ್ತು ಕಂಚಿನ ಪಾತ್ರೆಗಳು, ನಾಜೂಕು ಕೆತ್ತನೆ ಕೆಲಸದ ಚಿನ್ನದ ಒಡವೆಗಳು, ಮುಖ ಕನ್ನಡಿಗಳು, ಪಾತ್ರ ಬಟ್ಟಲುಗಳು ಸಿಕ್ಕಿವೆ. ಚಿತ್ರಗಳಲ್ಲಿ ಹೆಂಗಸರನ್ನು ಗಂಡಸರಿಗಿಂತ ಬಿಳುಪಾಗಿಯೂ ಎಲ್ಲರನ್ನೂ ಪಾಶ್ರ್ವಮುಖವಾಗಿಯೂ ಚಿತ್ರಿಸಲಾಗಿದೆ. ತಮಗೆ ಪ್ರಿಯವಾದ ಔತಣ, ಭೋಜನಗಳಲ್ಲಿ, ಆಟೋಟ ಸ್ಫರ್ಧೆಗಳಲ್ಲಿ, ಕುದುರೆಯ ಓಟ, ಮೂರು ಕುದುರೆಗಳನ್ನು ಹೂಡಿದ ರಥಗಳ ಓಟ ಮೊದಲಾದವಲ್ಲಿ ಜನ ನಿರತರಾಗಿರುವಂತೆಯೂ ವಿವಿಧ ವಾದ್ಯಗಳನ್ನು ಹಿಡಿದ ಸಂಗೀತಗಾರರಿಂದಲೂ ತಟ್ಟೆ ಬಟ್ಟಲುಗಳನ್ನು ತರುತ್ತಿರುವ ದಾಸ ದಾಸಿಯರಿಂದಲೂ ಆವೃತವಾಗಿರುವಂತೆಯೂ ಇಲ್ಲಿನ ಅನೇಕ ಚಿತ್ರಗಳಲ್ಲಿ ತೋರಿಸಲಾಗಿದೆ. ಟಾರ್‍ಕ್ವಿನಿಯದ ಚಿರತೆಗಳ, ಶವಾಗಾರದ, ಔತಣದ, ಓಟದ, ಮಲ್ಲಯುದ್ಧದ ಚಿತ್ರಗಳು, ಕಂಚಿನ ಎರಕದಲ್ಲಿ ನೇಗಿಲಿಗೆ ಎತ್ತುಗಳನ್ನು ಹೂಡಿದ ರೈತ (ಕ್ರಿ.ಪೂ. 4ನೆಯ ಶತಮಾನ); ಈಟಿಯನ್ನು ಹಿಡಿದು ನಿಂತಿರುವ ಯೋಧ (ಕ್ರಿ.ಪೂ. 5ನೆಯ ಶತಮಾನ); ಪೆರೂಗಿಯದಲ್ಲಿ ಸಿಕ್ಕಿದ ಮುಳುಗುಗಾರ ಚಿತ್ತಾರದ ಕೆಲಸವಿರುವ ಕಂಚಿನ ರಥ, ಭವಿಷ್ಯವಾದಿಗಳ ಪ್ರತಿಮೆಗಳು, ಮಣ್ಣಿನಲ್ಲಿ ಚಿತ್ರಿಸಿರುವ ಯೋಧನ ತಲೆ, ಭರಣಿಗಳ ಮುಚ್ಚಳಗಳ ಮೇಲೆ ಚಿತ್ರಿಸಿರುವ ದಂಪತಿಗಳ ಕೆತ್ತನೆಗಳು; ಬಣ್ಣ ಬಳಿಯಲ್ಪಟ್ಟ ಮಣ್ಣಿನ ಅಪೊಲೊ ಪ್ರತಿಮೆಗಳು; ಸೂಕ್ಷ್ಮವಾದ ಕೆತ್ತನೆಯ, ವಿಚಿತ್ರ ಮೃಗಗಳ ಚಿತ್ರವುಳ್ಳ ಚಿನ್ನದ ಒಡವೆಗಳು- ಇವೇ ಮೊದಲಾದವು ಅವರ ಕಲೆಯ ಉತ್ತಮ ನಿದರ್ಶನಗಳಾಗಿವೆ. ಪಿಟುಲೋನಿಯದ ಮಂಡುಗೋರಿಯಲ್ಲಿ ದೊರೆತ ಮಣ್ಣಿನ ಪಾತ್ರೆಗಳಲ್ಲಿ ಜ್ಯಾಮಿತೀಯ ಆಕೃತಿಗಳಿದ್ದು 46 ಅಕ್ಷರಗಳನ್ನು ಬಿಡಿಸಲಾಗಿದೆ. ಚಿತ್ರಗಾರಿಕೆಯುಳ್ಳ ಮಣ್ಣಿನ ಕಲಶಗಳಲ್ಲಿ ಗ್ರೀಕ್ ಪ್ರಭಾವ ಕಂಡುಬರುತ್ತದೆ.

ಕಾಲಗಣನೆ

[ಬದಲಾಯಿಸಿ]
ಇಟ್ರಸ್ಕನ್ ನಾಗರಿಕತೆ
(900–27 BC)
ವಿಲ್ಲನೋವನ್ I 900–800 BC
ವಿಲ್ಲನೋವನ್ II 800–720 BC
ವಿಲ್ಲನೋವನ್ III (ಬೊಲೊಗ್ನಾ ಪ್ರದೇಶ) 720–680 BC[]
ವಿಲ್ಲನೋವನ್ IV (ಬೊಲೊಗ್ನಾ ಪ್ರದೇಶ) 680–540 BC[]
ಓರಿಯಂಟಲೈಸಿಂಗ್ ಅವಧಿ
(720–580 BC)
ಆರಂಭಿಕ ಓರಿಯಂಟಲೈಸಿಂಗ್ 720–680 BC
ಮಧ್ಯಮ ಓರಿಯಂಟಲೈಸಿಂಗ್ 680–625 BC
ಕೊನೆಯ ಓರಿಯಂಟಲೈಸಿಂಗ್ 625–580 BC
ಪುರಾತನ ಅವಧಿ
(580–480 BC)
ಪುರಾತನ 580–480 BC
ಶಾಸ್ತ್ರೀಯ ಅವಧಿ
(480–320 BC)
ಶಾಸ್ತ್ರೀಯ 480–320 BC
ಹೆಲೆನಿಸ್ಟಿಕ್ ಅವಧಿ
(320–27 BC)
ಹೆಲೆನಿಸ್ಟಿಕ್ 320–27 BC

ಉಲ್ಲೇಖ

[ಬದಲಾಯಿಸಿ]
  1. Potts, Charlotte R.; Smith, Christopher J. (2022). "The Etruscans: Setting New Agendas". Journal of Archaeological Research. 30 (4): 597–644. doi:10.1007/s10814-021-09169-x. hdl:10023/24245.
  2. ೨.೦ ೨.೧ Giovanna Bermond Montanari (2004). "L'Italia preromana. I siti etruschi: Bologna" (in ಇಟಾಲಿಯನ್). Treccani. Retrieved October 12, 2019.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: