ಇಂದ್ರಗಿರಿ ಆದಿನಾಥ ಸ್ವಾಮಿ ಬಸದಿ, ಹಾಡುವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದ್ರಗಿರಿಯ ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕದ ಕರಾವಳಿ ಬಸದಿಗಳಲ್ಲೊಂದು.

ಸ್ಥಳ[ಬದಲಾಯಿಸಿ]

ಹಾಡುವಳ್ಳಿಯ ಬಸದಿ ಸಮುಚ್ಚಯದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಇಂದ್ರಗಿರಿ ಎಂಬ ಬೆಟ್ಟದ ಮೇಲೆ ಶ್ರೀ ಆದಿನಾಥ ಸ್ವಾಮಿಯ ಬಸದಿಯೆಂದು ಕರೆಯಲ್ಪಡುವ ಪಾಳು ಬಿದ್ದಿರುವ ಕಟ್ಟಡವೊಂದು ಸಿಗುತ್ತದೆ. ಅಲ್ಲಿ ಪರ‍್ಣವಾದ ಬಸದಿಯೆಂಬ ಕಟ್ಟಡವಿಲ್ಲ. ಮುರಿದುಬಿದ್ದಿರುವ ಕೆಲವು ಗೋಡೆಗಳು ಮತ್ತು ಕಲ್ಲು ಚಪ್ಪಡಿಗಳು ಮಾತ್ರ ಕಂಡು ಬರುತ್ತವೆ. ಈ ಪರಿಸರವು ಕಾಡಿನ ಗಿಡಮರಗಳಿಂದ ಆವೃತವಾಗಿದ್ದು ಇಲ್ಲಿಗೆ ಕಾಡಿನಲ್ಲಿ ದಾರಿ ಮಾಡಿಕೊಂಡು ಹೋಗಬೇಕಷ್ಟೇ.

ಹಿನ್ನಲೆ[ಬದಲಾಯಿಸಿ]

ಹಿಂದೆ ಇಲ್ಲಿ ಬಸದಿ ಕಟ್ಟಡವೊಂದು ಇದ್ದುದನ್ನು ಕಂಡವರಿಲ್ಲ. ಆದರೆ ಕೆಲವು ದಾಖಲೆಗಳ ಅನುಸಾರ ಇಲ್ಲಿ ಆದಿನಾಥ ಸ್ವಾಮಿಯ ಬಸದಿ ಇತ್ತು. ಇದಕ್ಕೆ ಪುರಾವೆಯಾಗಿ ಬಳಿಯಲ್ಲಿ ಅಕ್ಷರಗಳು ತುಂಬಾ ಸವೆದು ಹೋಗಿರುವ ಒಂದು ಶಿಲಾಶಾಸನವಿದೆ.[೧]

ಆವರಣ[ಬದಲಾಯಿಸಿ]

ಬಸದಿಯ ಮಧ್ಯದಲ್ಲಿ ಮೇಲ್ಗಡೆ ಜಿನ ಬಿಂಬದ ಇಕ್ಕೆಲೆಗಳಲ್ಲಿ ಶ್ರುತಪೀಠದೊಂದಿಗೆ ಉಪದೇಶ ಮಾಡುತ್ತಿರುವ ಮುನಿಗಳ ಆಕೃತಿ ಇರುವುದರಿಂದ ಇದು ಜೈನ ಶಾಸನವೆಂದೂ ಮತ್ತು ಬಳಿಯಲ್ಲಿದ್ದುದು ಜೈನ ಬಸದಿಯೆಂದೂ ಹೇಳಲು ಸಾಧ್ಯವಾಗುತ್ತದೆ. ಗರ್ಭಗೃಹ ಇರಬಹುದಾಗಿದ್ದ ಸ್ಥಳದಲ್ಲಿ ಚಾರಣ ಮುನಿಗಳ ಪಾದಗಳ ಉಬ್ಬುಶಿಲ್ಪವಿದೆ. ಇಲ್ಲಿಯ ಕಟ್ಟಡಗಳು ಬಹಳ ವರ್ಷಗಳ ಹಿಂದೆಯೇ ಬಿದ್ದಿರಬಹುದೆಂದು ಹೇಳಬಹುದು.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೬೯.