ಆಸ್ಟ್ರಿಚ್

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: {{{1}}}
ಉಷ್ಟ್ರಪಕ್ಷಿ

ಆಸ್ಟ್ರಿಚ್ ನನ್ನು ಕನ್ನಡದಲ್ಲಿ ಉಷ್ಟ್ರಪಕ್ಷಿಯೆಂದು ಕರೆಯಲಾಗುತ್ತದೆ. ಉಷ್ಟ್ರ ಪಕ್ಷಿಯು ಸ್ಟ್ರೂತಿಯೊ ಕುಲ ಹಾಗು ರೆಟೈಟ್ ಕುಟುಂಬಕ್ಕೆ ಸೇರಿದೆ. ಇವುಗಳು ಹಾರಲಾಗದ ಪಕ್ಷಿಗಳ ಜಾತಿಗೆ ಸೇರಿವೆ, ಇವುಗಳು ಹೆಚ್ಚಾಗಿ ಆಫ್ರಿಕಾದಲ್ಲಿ ಕಂಡುಬರುತ್ತದೆ. ಇವುಗಳು ವಿಶಿಷ್ಟವಾದ ರೂಪವನ್ನು ಹೊಂದಿದ್ದು ಉದ್ದವಾದ ಕುತ್ತಿಗೆ ಹಾಗು ಕಾಲುಗಳನ್ನು ಹೊಂದಿವೆ. ಇವುಗಳು ಗಂಟೆಗೆ ೭೦ ಕಿಲೋಮೀಟ್ರ್ ವೇಗದಲ್ಲಿ ಚಲಿಸುತ್ತದೆ. ಇವುಗಳು ಬೇರೆ ಪಕ್ಷಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು ದೊಡ್ಡ ಗಾತ್ರದ ಮೊಟ್ಟೆಯನ್ನು ಇಡುತ್ತವೆ. ಇದು ಅಕಶೇರುಕಗಳನ್ನು ತಿನ್ನುತ್ತವೆ ಆದರೂ ಉಷ್ಣ ಪಕ್ಷಿಗಳ ಆಹಾರದಲ್ಲಿ ಮುಖ್ಯವಾಗಿ ಸಸ್ಯಗಳ ಪದಾರ್ಥಗಳು ಸೇರಿರುತ್ತವೆ. ಇದು ೫ ರಿಂದ ೫೦ ಪಕ್ಷಿಗಳ ಅಲೆಮಾರಿ ಗುಂಪುಗಳಲ್ಲಿ ವಾಸಿಸುತ್ತವೆ. ಬೆದರಿಸಿದಾಗ ಇವುಗಳು ಅಡಗದೆ, ಓಡಿಹೋಗದೆ, ತಮ್ಮ ಶಕ್ತಿಯುತ ಕಾಲುಗಳಿಂದ ಆಕ್ರಮಣ ಮಾಡುತ್ತದೆ.

ವಿತರಣೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಉಷ್ಟ್ರಪಕ್ಷಿ ಉತ್ತರ ಮತ್ತು ದಕ್ಷಿಣ ಸಹಾರಾ, ಪೂರ್ವ ಆಫ್ರಿಕಾ, ಆಫ್ರಿಕಾದ ದಕ್ಷಿಣ ಮಳೆಕಾಡುಗಳಲ್ಲಿ ಕಂಡುಬರುತ್ತದೆ.