ವಿಷಯಕ್ಕೆ ಹೋಗು

ಆಸ್ಟರ್ ಲಿಟ್ಸ್ ಕದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಕದನದಲ್ಲಿ ನೆಪೋಲಿಯನ್ 1805 ಡಿಸೆಂಬರ್ 2ನೆಯ ತಾರೀಖು ಆಸ್ಟ್ರಿಯ ಮತ್ತು ರಷ್ಯ ರಾಜ್ಯಗಳ ಸಂಯುಕ್ತ ಸೈನ್ಯವನ್ನೆದುರಿಸಿ, ಪ್ರಚಂಡ ವಿಜಯ ಗಳಿಸಿದ. ಆಸ್ಟ್ರಿಯದ ಮತ್ತು ರಷ್ಯದ ಚಕ್ರವರ್ತಿಗಳೇ ಈ ಕದನದಲ್ಲಿ ಭಾಗವಹಿಸಿದ್ದರಿಂದ ಇದನ್ನು ಮೂರು ಸಾಮ್ರಾಟರ ಕದನ ಎಂದೂ ಕರೆಯುತ್ತಾರೆ. ಇದರಲ್ಲಿ ನೆಪೋಲಿಯನ್ ತೋರಿಸಿದ ವ್ಯೂಹನಿರ್ಮಾಣವಿವೇಕ, ಸೈನ್ಯಸಂಚಾಲನೋಪಾಯ ಗಳು ಇಡೀ ಯುರೋಪನ್ನೇ ದಿಗ್ಭ್ರಮೆಗೊಳಿಸಿದವು. ಮುಂದೆ ಕೆಲವು ವರ್ಷಕಾಲ ಅವನ ಸೈನ್ಯವನ್ನೆದುರಿಸಲು ಯುರೋಪಿನ ಇತರ ರಾಷ್ಟ್ರಗಳು ಹೆದರಿದವು. ಈ ವಿಜಯ ಪ್ರಾಪ್ತವಾದದ್ದು ಆತ ಚಕ್ರವರ್ತಿ ಪದವಿ ಧರಿಸಿದ ಮೊದಲ ವಾರ್ಷಿಕೋತ್ಸವದ ದಿನ. ಲಿಯೊ ಟಾಲ್ಸ್ಟಾಯ್ ತನ್ನ ವಾರ್ ಅಂಡ್ ಪೀಸ್ ಎಂಬ ಭವ್ಯ ಕಾದಂಬರಿಯಲ್ಲಿ ಈ ಕದನವನ್ನು ಮನೋಜ್ಞವಾಗಿ ಚಿತ್ರಿಸಿದ್ದಾನೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: