ವಿಷಯಕ್ಕೆ ಹೋಗು

ಆಲ್ ಲೇಡೀಸ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
All Ladies League
"ಆಲ್ ಲೇಡೀಸ್ ಲೀಗ್ (ALL)" ಎಂಬ ಲಾಭ ರಹಿತ ಸಂಸ್ಥೆ, ಭಾರತದಿಂದ ಕಾರ್ಯನಿರ್ವಹಿಸುತ್ತಿರುವ ಅತ್ಯುನ್ನತ ಅಂತರರಾಷ್ಟ್ರೀಯ ಮಹಿಳಾ ಚೇಂಬರ್ ಗಳಲ್ಲಿ ಒಂದಾಗಿದೆ.

ಆಲ್ ಲೇಡೀಸ್ ಲೀಗ್ (ALL) ಅಂದರೆ ಎಲ್ಲಾ ಮಹಿಳೆಯರ ಒಕ್ಕೂಟ'[] ಇದು ಅಂತರರಾಷ್ಟ್ರೀಯ ಮಹಿಳಾ ಚೇಂಬರ್ ಆಗಿದೆ[] ಮಹಿಳಾ ಕಲ್ಯಾಣಕ್ಕಾಗಿ[] ಮತ್ತು ಮಹಿಳಾ ನಾಯಕತ್ವದ ಸಬಲೀಕರಣಕ್ಕಾಗಿ, ಈ ಸಂಸ್ಥೆಯನ್ನು 2015 ರಲ್ಲಿ ಹರ್ಬೀನ್ ಅರೋರಾ ಅವರು ಸ್ಥಾಪಿಸಿದರು.[][][] ಸಮಾನಮನಸ್ಕ ವಿನಿಮಯ ಮತ್ತು ಸಮುದಾಯ ಮನೋಭಾವವನ್ನು ಉತ್ತೇಜಿಸಲು ಇದು ಮಹಿಳಾ ಆರ್ಥಿಕ ವೇದಿಕೆ / ವಿಮೆನ್ ಎಕೊನೊಮಿಕ್ಸ್ ಫೊರಮ್ (WEF)" ಎಂಬ ವೇದಿಕೆಯ ಅಂಗವನ್ನು ಹೊಂದಿದೆ. ALL ಮತ್ತು WEF ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ.[]

ಸ್ಥಾಪಕರು

[ಬದಲಾಯಿಸಿ]

ಡಾ. ಹರ್ಬೀನ್ ಅರೋರಾ ರೈ , ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ, ಲಂಡನ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜು ಮತ್ತು ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ ನಿಂದ ಸ್ನಾತಕೋತ್ತರ ಪದವಿ ಮತ್ತು ಪ್ಯಾರಿಸ್ III ವಿಶ್ವವಿದ್ಯಾಲಯದ ಸೊರ್ಬೊನ್ ನೌವೆಲ್ಲೆಯಿಂದ ಪಿಎಚ್ಡಿ ಪಡೆದಿದ್ದಾರೆ.ಅವರು ಲೇಖಕರೂ ಆಗಿದ್ದಾರೆ. ಅಲ್ಲದೆ ಆಧ್ಯಾತ್ಮಿಕ ಅನ್ವೇಷಕರು ಮತ್ತು ಮಾನವತಾವಾದಿಯಾಗಿದ್ದು, ಎಲ್ಲರ ಪವಿತ್ರ ಏಕತೆ ಮತ್ತು ಪರಸ್ಪರ ಸಂಬಂಧವನ್ನು ನಂಬುತ್ತಾರೆ. ಅವರು ಪ್ರಾಚೀನ ಭಾರತೀಯ ನೀತಿಗಳಾದ "ವಸುದೈವ ಕುಟುಂಬಕಂ" ನಿಂದ ಪ್ರೇರಿತರಾಗಿದ್ದಾರೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಭಕ್ತೆಯಾದ ಅವರು ಎಲ್ಲರನ್ನೂ ಪ್ರೀತಿಸಿ, ಸರ್ವರ ಸೇವೆ ಮಾಡಿ ಎಂಬ ಮಾರ್ಗದರ್ಶಿ ಮಂತ್ರವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ.[]

ಆಲ್ ಲೇಡೀಸ್ ಲೀಗ್ ನ ಪ್ರಮುಖ ಅಂಶಗಳು

[ಬದಲಾಯಿಸಿ]
  • ALL (ಆಲ್ ಲೇಡೀಸ್ ಲೀಗ್) ಜಾಗತಿಕ ಸಹೋದರತ್ವದ ಬಹುರಾಷ್ಟ್ರೀಯ ಆಂದೋಲನವಾಗಿದೆ.
  • ಎಲ್ಲರಲ್ಲೂ ಸಾಮರ್ಥ್ಯ. ಎಲ್ಲರಿಗೂ ಸಾಧ್ಯತೆಗಳು. ಎಲ್ಲರಿಗೂ ಅಧಿಕಾರ ಅನ್ನುವ ನೀತಿಗಳಿವೆ.
  • ಗಡಿಗಳನ್ನು ಮೀರಿದ ಸಹೋದರಿಯರು ಮತ್ತು ಆತ್ಮ ಸಹೋದರಿಯರಾಗಿ ಮಹಿಳೆಯರ ದೃಷ್ಟಿಕೋನವಿದೆ.
  • ವಿಶ್ವವ್ಯಾಪಿ ಜಾಲವನ್ನು ಬೆಳೆಸುವ ಆಭಿಲಾಷೆ ಇದೆ.
  • 2025 ರ ವೇಳೆಗೆ ಒಂದು ಮಿಲಿಯನ್ ಮಹಿಳೆಯರನ್ನು ಮತ್ತು 2026 ರ ವೇಳೆಗೆ 5 ಮಿಲಿಯನ್ ಮಹಿಳೆಯರನ್ನು ಸಂಪರ್ಕಿಸುವ ಮಿಷನ್ ಇದೆ.
  • ವಿಶ್ವಾದ್ಯಂತ ಮಹಿಳೆಯರ ಅಧ್ಯಾಯಗಳು / ವೃತ್ತಗಳು / ಗುಂಪುಗಳನ್ನು ರಚಿಸುವುದು. ಏಕಾಂಗಿಯಾಗಿ ನಾವು ಶ್ರಮಿಸುತ್ತೇವೆ, ಒಟ್ಟಾಗಿ ನಾವು ಅಭಿವೃದ್ಧಿ ಹೊಂದುತ್ತೇವೆ.
  • ಇದರ ಸದಸ್ಯತ್ವ ಉಚಿತವಾಗಿದ್ದು, ಉಲ್ಲೇಖ ಮತ್ತು ಆಹ್ವಾನದ ಮೂಲಕ ಸದಸ್ಯತ್ವ ದೊರಕುತ್ತದೆ.
  • ಎಲ್ಲಾ ಸಕಾರಾತ್ಮಕತೆ, ನಕಾರಾತ್ಮಕತೆ ಇರುವುದಿಲ್ಲ ಎನ್ನುವ ನೀತಿ ಸಂಹಿತೆಗಳಿವೆ .[]

ಚಟುವಟಿಕೆಗಳು

[ಬದಲಾಯಿಸಿ]

ALL ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತದೆ.[] ದಶಕದ ಮಹಿಳಾ ಪ್ರಶಸ್ತಿಗಳನ್ನು ಪಡೆದ ಗಣ್ಯರಲ್ಲಿ ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಸುಪ್ರಿಯಾ ಸುಳೆ ಸೇರಿದ್ದಾರೆ.[೧೦] ಚಂದಾ ಕೊಚ್ಚರ್, ನೈನಾ ಲಾಲ್ ಕಿದ್ವಾಯಿ, ಶೋಭನಾ ಭಾರ್ತಿಯಾ, ಶರ್ಮಿಳಾ ಠಾಗೋರ್, ರಿತು ಕುಮಾರ್, ಸೋಮದತ್ತ ಸಿಂಗ್, ಸಂಗೀತಾ ರೆಡ್ಡಿ, ಜೋಡಿ ಅಂಡರ್ಹಿಲ್[೧೧] ಮತ್ತು ಇತರರು. ಇದು ವಿವಿಧ ಕ್ಷೇತ್ರಗಳಲ್ಲಿನ ಗ್ರಾಮೀಣ ಮಹಿಳಾ ನಾಯಕರನ್ನು ಗುರುತಿಸಲು ಮತ್ತು ಗೌರವಿಸಲು ದಶಕದ ತಳಮಟ್ಟದ ಮಹಿಳೆ ಪ್ರಶಸ್ತಿಗಳನ್ನು ಸಹ ನೀಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Trade Marks Journal No: 1806" (PDF). Government of India. December 24, 2012. Archived from the original (PDF) on ಜೂನ್ 14, 2023.
  2. Staff Reporter (2014-10-15). "Bangalore to get All Ladies League". The Hindu (in Indian English). ISSN 0971-751X. Retrieved 2018-01-08.
  3. "Face Yoga and its Growing Popularity". pibmumbai.gov.in. Retrieved 2018-01-08.
  4. "Welcome to High Commission of India, Bangladesh". www.hcidhaka.gov.in (in ಇಂಗ್ಲಿಷ್). Archived from the original on 2016-04-18. Retrieved 2018-01-08.
  5. "'India needs affirmative action to empower women' - Times of India". The Times of India. Retrieved 2018-01-08.
  6. "'If women are happy the whole family is happy' - Times of India". The Times of India. Retrieved 2018-01-08.
  7. "About Us". Women Economic Forum. Retrieved 21 November 2023.
  8. ೮.೦ ೮.೧ https://www.aall.in/. {{cite web}}: Missing or empty |title= (help)
  9. "Mamanet – Every mother can - Women of the Decade Award in Community Leadership". www.mamanet.org.il. Retrieved 2018-01-08.
  10. "Women Of The Decade". 2014-01-07. Archived from the original on 2014-01-07. Retrieved 2023-06-12.
  11. "Ms. Jodie Underhill – WEF Awards". wefawards.org. Archived from the original on 2018-12-18. Retrieved 2018-01-30.


ಬಾಹ್ಯ ಕೊಂಡಿಗಳು

[ಬದಲಾಯಿಸಿ]