ವಿಷಯಕ್ಕೆ ಹೋಗು

ಆಲ್ಬ್ರೆಕ್ಟ್ ಫಾನ್ ಗ್ರಾಫೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಲ್‍ಬ್ರೆಕ್ಟ್ ಫಾನ್ ಗ್ರಾಫೆ ಇಂದ ಪುನರ್ನಿರ್ದೇಶಿತ)

ಆಲ್‌ಬ್ರೆಕ್ಟ್ ಡಬ್ಲು. ಇ. ಫಾನ್ ಗ್ರಾಫೆ (1828-70) ಜರ್ಮನಿಯ ಒಬ್ಬ ಪ್ರಸಿದ್ಧ ವೈದ್ಯ. ಈತ ಕಾರ್ಲ್ ಫರ್ಡಿನಾಂಡ್ ಫಾನ್ ಗ್ರಾಫೆಯ ಮಗ.

ಜೀವನ, ಸಾಧನೆಗಳು

[ಬದಲಾಯಿಸಿ]

ಆಲ್‌ಬ್ರೆಕ್ಟ್ ಜೀವಿಸಿದ್ದು ಕೇವಲ 42 ವರ್ಷಗಳವರೆಗೆ. ಈತ ಕಣ್ಣುರೋಗಗಳಲ್ಲಿ ಅನೇಕ ಶೋಧನೆಗಳನ್ನು ಮಾಡಿ 19ನೆಯ ಶತಮಾನದ ಪ್ರಮುಖ ನೇತ್ರವೈದ್ಯ ಎನಿಸಿಕೊಂಡ. ಈತನನ್ನು ನೇತ್ರರೋಗ ಪ್ರಾಧ್ಯಾಪಕನಾಗಿ 1858ರಲ್ಲಿ ನೇಮಕ ಮಾಡಲಾಯಿತು. 1866 ರಲ್ಲಿ ಪೂರ್ಣ ಪ್ರಾಧ್ಯಾಪಕನಾದ.[] ದೃಷ್ಟಿಮಾಂದ್ಯಗೊಳಿಸುವ ಮೋತಿಬಿಂದುವನ್ನು ಕೊಯ್ದು ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಇವನು ಯಶಸ್ವಿಯಾಗಿ ಜಾರಿಗೆ ತಂದ (1867).[] ಗುರಾಣಿಕ ಗ್ರಂಥಿಯ ಅಂತಃಸ್ರಾವದ ಹೆಚ್ಚುವರಿಯಾಗಿರುವ ರೋಗಸ್ಥಿತಿಯಲ್ಲಿ ಕಣ್ಣಿನ ರೆಪ್ಪೆಯಲ್ಲಿ ತೋರುವ ವಿಶಿಷ್ಟ ಲಕ್ಷಣಕ್ಕೆ ಈತನ ಹೆಸರನ್ನೇ ಕೊಡಲಾಗಿದೆ (1864). ಕಣ್ಣುಗುಡ್ಡೆಯಲ್ಲಿ ಏರಿದ ಒತ್ತಡ ಸ್ಥಿತಿಗೆ (ಗ್ಲಾಕೋಮ) ಪಾಪೆಕೊಯ್ತದ (ಐರಿಡೆಕ್ಟೊಮಿ) ವಿಧಾನವನ್ನು ಕಂಡುಹಿಡಿದ (1857).[] ಒಂದು ಕಣ್ಣಿನ ರೋಗಸ್ಥಿತಿಯಿಂದಾಗಿ ಇನ್ನೊಂದು ಕಣ್ಣು ವಿನಾಕಾರಣ ಸಹಭಾಗಗೊಳ್ಳುವ ಸ್ಥಿತಿಯನ್ನು (ಸಿಂಪಥೆಟಿಕ್ ಆ‍ಫ್‍ಥಾಲ್ಮಿಯ) ವಿವರಿಸಿದ (1866). ಮಿದುಳಿನ ರೋಗಗಳಲ್ಲಿ ಮತ್ತು ಹೆಚ್ಚುವರಿ ರಕ್ತ ಒತ್ತಡ ರೋಗದಲ್ಲಿ ಕೆಲವು ವೇಳೆ ಕುರುಡೂ, ದೃಷ್ಟಿಮಾಂದ್ಯವೂ ಉಂಟಾಗುವುದರಿಂದ ಆ ಘಟ್ಟಕ್ಕೆ ಪೂರ್ವವೇ ನೇತ್ರದರ್ಶಕದಿಂದ (ಆಪ್ಥಾಲ್ಮಾಸ್ಕೋಪ್) ಕಣ್ಣುಪರೀಕ್ಷೆಮಾಡಿ ರೋಗಗಳನ್ನು ಗುರುತಿಸುವ ವಿಧಾನವನ್ನು ಸಾರ್ವತ್ರಿಕವಾಗಿ ಬಳಕೆಗೆ ತಂದದ್ದು ಆಲ್‌ಬ್ರೆಕ್ಟನೇ. ಕ್ಷಯರೋಗ ಪೀಡಿತನಾಗಿ ತೀರ ತರುಣಪ್ರಾಯದಲ್ಲೇ ಮರಣ ಹೊಂದಿದ.

ಉಲ್ಲೇಖಗಳು

[ಬದಲಾಯಿಸಿ]
  1. Albrecht von Graefe @ Who Named It
  2.  Chisholm, Hugh, ed. (1911). "Gräfe, Albrecht von" . Encyclopædia Britannica. Vol. 12 (11th ed.). Cambridge University Press. p. 315. {{cite encyclopedia}}: Cite has empty unknown parameters: |separator= and |HIDE_PARAMETER= (help)
  3. Medical disctionary Graefe's operation
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: