ವಿಷಯಕ್ಕೆ ಹೋಗು

ಆರ್. ಬಿಂದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್.ಬಿಂದು
ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವರು, ಕೇರಳ ಸರ್ಕಾರ
Assumed office
20 May 2021 (2021-05-20)
ಮುಖ್ಯಮಂತ್ರಿಪಿಣರಾಯಿ ವಿಜಯನ್
Preceded by
ಕೇರಳ ವಿಧಾನಸಭೆಯ ಸದಸ್ಯ
Assumed office
೨೦೨೧
Preceded byಕೆ. ಯು. ಅರುಣನ್
Constituencyಇರಿಂಜಲಕುಡ
ತ್ರಿಶೂರ್ ಮೇಯರ್
In office
೭ ಅಕ್ಟೋಬರ್ ೨೦೦೫ – ೬ ಅಕ್ಟೋಬರ್ ೨೦೧೦
Preceded byಜೋಸ್ ಕಟ್ಟುಕ್ಕಾರನ್
Succeeded byಐ. ಪಿ. ಪಾಲ್
Personal details
Bornಇರಿಂಜಲಕುಡ, ತ್ರಿಶೂರ್, ಕೇರಳ, ಭಾರತ
Political partyಭಾರತ ಕಮ್ಯುನಿಸ್ಟ್ ಪಕ್ಷ
Spouseಎ. ವಿಜಯರಾಘವನ್
Childrenಎ. ಹರಿಕೃಷ್ಣನ್
Residence(s)ತೇಜಸ್ವಿನಿ, ಹರಿಶ್ರೀ ನಗರ, ತ್ರಿಕುಮರಮಕುಟಮ್, ಅಯ್ಯಂತೋಳೆ, ತ್ರಿಶೂರ್, ಕೇರಳ
Alma mater

ಆರ್. ಬಿಂದು ಸಿಪಿಐ(ಎಂ) ಇವರು ಭಾರತೀಯ ರಾಜಕಾರಣಿಯಾಗಿದ್ದು, ಕೇರಳ ಸರ್ಕಾರದ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.[]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಬಿಂದು ಅವರು ೧೯೬೭ ರಲ್ಲಿ, ಎನ್ ರಾಧಾಕೃಷ್ಣನ್ ಮತ್ತು ಕೆ.ಕೆ.ಶಾಂತಕುಮಾರಿ ಅವರ ಪುತ್ರಿಯಾಗಿ ಜನಿಸಿದರು.[][][] ಅವರು ತಮ್ಮ ಶಿಕ್ಷಣವನ್ನು ಇರಿಂಜಲಕುಡ ಬಾಲಕಿಯರ ಪ್ರೌಢಶಾಲೆ, ಇರಿಂಜಲಕುಡದ ಸೇಂಟ್ ಜೋಸೆಫ್ ಕಾಲೇಜು ಮತ್ತು ಜೆಎನ್‌ಯು ದೆಹಲಿಯಲ್ಲಿ ಪೂರ್ಣಗೊಳಿಸಿದರು.[] ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮತ್ತು ಎಂಫಿಲ್ ಮತ್ತು ಪಿಎಚ್‌ಡಿ ಪಡೆದಿದ್ದಾರೆ.[] ಬಿಂದು ಅವರು ವಿದ್ಯಾರ್ಥಿ ರಾಜಕೀಯದ ಮೂಲಕ ಸಾಮಾಜಿಕ ಚಟುವಟಿಕೆಗಳಿಗೆ ಪ್ರವೇಶಿಸಿದರು.

ವೃತ್ತಿಜೀವನ

[ಬದಲಾಯಿಸಿ]

ಬಿಂದು ಅವರು ಕೇರಳದ ತ್ರಿಶೂರ್ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಜಿ ಮೇಯರ್ ಆಗಿದ್ದಾರೆ. ಅವರು ತ್ರಿಶೂರ್ ಜಿಲ್ಲೆಯ ಮೊದಲ ಮಹಿಳಾ ಸಚಿವರಾಗಿದ್ದಾರೆ. ಅವರು ಇರಿಂಜಲಕುಡ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ. ಬಿಂದು ಅವರು ತ್ರಿಶೂರ್‌ನ ಶ್ರೀ ಕೇರಳ ವರ್ಮಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದರು. ಅವರು ಎಐಡಿಡಬ್ಲ್ಯೂಎಯ ಕೇಂದ್ರ ಸಮಿತಿ ಸದಸ್ಯರಾಗಿದ್ದಾರೆ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಬಿಂದು ಅವರು ಮಾಜಿ ಸಂಸದ ಮತ್ತು ಸಿಪಿಐ (ಎಂ) ಕೇರಳ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಎ. ವಿಜಯರಾಘವನ್ ಅವರನ್ನು ವಿವಾಹವಾದರು.

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 21 May 2021. Retrieved 21 May 2021.{{cite web}}: CS1 maint: archived copy as title (link)
  2. "Meet the 11 women MLAs who will join the Kerala Assembly". Haritha John. The NewsMinute. 4 May 2021. Retrieved 7 May 2021.
  3. "Lalur residents to block road". The Hindu. 13 January 2010. Archived from the original on 18 January 2010. Retrieved 13 February 2010.
  4. "Veena George to replace KK Shailaja as Kerala health minister; here's list of new ministers and portfolios". Times Now. 19 May 2021. Retrieved 19 May 2021.
  5. "Thrissur gets its first woman minister". The Hindu (in Indian English). 2021-05-20. ISSN 0971-751X. Retrieved 2021-10-27.
  6. T. Ramavarman (Mar 11, 2021). "Kerala elections: R Bindu denies allegations against her candidature | Kerala Election News - Times of India". The Times of India (in ಇಂಗ್ಲಿಷ್). Retrieved 2021-10-27.


ಬಾಹ್ಯ ಕೊಂಡಿಗಳು

[ಬದಲಾಯಿಸಿ]