ಆರ್‌ಬಿಎಲ್ ಬ್ಯಾಂಕ್
ಆರ್‌ಬಿಎಲ್ ಬ್ಯಾಂಕ್ (ಹಳೆಯ ಹೆಸರು -ರತ್ನಾಕರ್ ಬ್ಯಾಂಕ್ ಲಿಮಿಟೆಡ್) 1943 ರಲ್ಲಿ ಸ್ಥಾಪನೆಯಾದ ಹಾಗೂ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತದ ಒಂದು ಖಾಸಗಿ ವಲಯದ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಸಾಂಸ್ಥಿಕ ಬ್ಯಾಂಕಿಂಗ್ ಸೇವೆಗಳು, ಚಿಲ್ಲರೆ ಬ್ಯಾಂಕಿಂಗ್ ಸೇವೆಗಳು, ಮೈಕ್ರೋಬ್ಯಾಂಕಿಂಗ್ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತೀದೆ. ಒಟ್ಟು ೨೮ ರಾಜ್ಯಗಳಲ್ಲಿ ಈ ಬ್ಯಾಂಕಿನ ಶಾಖೆಗಳು ಇದ್ದು, ೬೦೩ ಶಾಖೆಗಳು, ೧೪೭೪ ಪ್ರಾತಿನಿಧಿಕ ಶಾಖೆಗಳು, ೪೧೨ ನಗದು ತೆಗೆಯುವ ಯಂತ್ರಗಳು ಅಸ್ತಿತ್ವದಲ್ಲಿ ಇವೆ. ಪ್ರಸ್ತುತ ಬ್ಯಾಂಕಿಗೆ ೧.೫ ಕೋಟಿಗೂ ಹೆಚ್ಚಿನ ಗ್ರಾಹಕರು ಇದ್ದಾರೆ. ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಈ ಸಂಸ್ಥೆ ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿ ಇದೆ.
ಇತಿಹಾಸ
[ಬದಲಾಯಿಸಿ]ಭಾರತೀಯ ಕಂಪೆನಿ ಕಾಯ್ದೆ ೧೯೧೩ರ ಅಡಿಯಲ್ಲಿ, ಜೂನ್ ೧೪ ೧೯೪೩ನೇ ಇಸವಿಯಲ್ಲಿ ರತ್ನಾಕರ್ ಬ್ಯಾಂಕ್ ಆರಂಭವಾಯಿತು.[೧] ಶುರುವಿನಲ್ಲಿ ಒಂದು ಪ್ರಾದೇಶಿಕ ಬ್ಯಾಂಕ್ ರೂಪದಲ್ಲಿ ಸ್ಥಾಪನೆಯಾದ ಈ ಬ್ಯಾಂಕನ್ನು ಸಾಂಗ್ಲಿಯ ಬಾಬಗೊಂಡ ಭುಜಗೊಂಡ ಪಾಟೀಲ್ ಮತ್ತು ಕೊಲ್ಲಾಪುರದ ಗಂಗಪ್ಪ ಸಿದ್ದಪ್ಪ ಚೌಗುಲೆ ಇಬ್ಬರು ಸೇರಿ ಸ್ಥಾಪಿಸಿದರು. ಆರಂಭದಲ್ಲಿ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ತಲಾ ಒಂದು ಶಾಖೆಯನ್ನು ತೆರೆಯಲಾಯಿತು. ಮುಖ್ಯವಾಗಿ ಕೊಲ್ಲಾಪುರ-ಸಾಂಗ್ಲಿ ವಲಯದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯ ವ್ಯಾಪಾರಿಗಳಿಗೆ ಈ ಬ್ಯಾಂಕ್ ಸೇವೆ ನೀಡುತ್ತಿತ್ತು.[೨]
1959 ರಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1934ರ ಪ್ರಕಾರ, ಈ ಬ್ಯಾಂಕ್ ಅನ್ನು 'ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್' ಎಂದು ವರ್ಗೀಕರಿಸಿತು. ನಂತರ 1970ನೇ ಇಸವಿಯಲ್ಲಿ, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕಿಂಗ್ ಪರವಾನಗಿಯನ್ನು ಪಡೆದುಕೊಂಡಿತು.[೩]
ಆಗಸ್ಟ್ 2014 ರಲ್ಲಿ, ಈ ಬ್ಯಾಂಕ್‌ನ ಹೆಸರನ್ನು 'ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್' ಎಂದು ಬದಲಾಯಿಸಲಾಯಿತು.[೧]
ಸ್ವಾಧೀನ
[ಬದಲಾಯಿಸಿ]2013 ರಲ್ಲಿ, ರತ್ನಾಕರ್ ಬ್ಯಾಂಕ್ ಭಾರತದಲ್ಲಿದ್ದ ಸ್ಕಾಟ್ಲೆಂಡ್ ಮೂಲದ 'ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್ ನ ಬಿಸಿನೆಸ್ ಬ್ಯಾಂಕಿಂಗ್, ಅಡಮಾನ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರ ವಿಭಾಗಗಳನ್ನು ಸ್ವಾಧೀನಪಡಿಸಿಕೊಂಡಿತು.[೪]
ಉಲ್ಲೇಖಗಳು
[ಬದಲಾಯಿಸಿ]- 1 2 "Company History - RBL Bank Ltd". economictimes.indiatimes.com. The Economic Times. Retrieved February 15, 2019.
- ↑ M, Sabarinath (2010-07-05). "Ratnakar Bank gets new-look board". The Economic Times. Retrieved 2019-09-21.
- ↑ Chakraborty, Somasroy (January 20, 2013). "Ratnakar Bank: From NH4 to NH8". business-standard.com. Business Standard. Retrieved February 15, 2019.
- ↑ https://economictimes.indiatimes.com/industry/banking/finance/banking/ratnakar-bank-to-buy-several-of-rbs-india-businesses/articleshow/21727887.cms?from=mdr