ವಿಷಯಕ್ಕೆ ಹೋಗು

ಆರ್ಟುರೊ ಗ್ರಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಟುರೊ ಗ್ರಾಫ್

ಆರ್ಟುರೊ ಗ್ರಾಫ್ (1848 - 1913) ಒಬ್ಬ ಇಟಾಲಿಯನ್ ಕವಿ.

ಅಥೆನ್ಸ್‌ನಲ್ಲಿ ಹುಟ್ಟಿದನಾದರೂ ಈತನ ಪೂರ್ವಜರು ಜರ್ಮನರು. ನೇಪಲ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ 1882 ರಲ್ಲಿ ರೋಮಿನಲ್ಲಿ ಇಟಾಲಿಯನ್ ಸಾಹಿತ್ಯದ ಉಪನ್ಯಾಸಕನಾಗಿ ನಿಂತ. ಅನಂತರ ಟ್ಯೂರಿನಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ (1876 - 1913).[] ಕವಿ ಲೇಯಪಾರ್ಡೀಯಂತೆ ಈತನೂ ತೀವ್ರ ನಿರಾಶಾವಾದಿ. ಆತನನ್ನು ಕುರಿತು ಈತ ಕೆಲವು ಉತ್ತಮ ಲೇಖನಗಳನ್ನು ಬರೆದಿದ್ದಾನೆ.

ಈತನ ಕಾವ್ಯಗಳು ಅನೇಕ ಸಂಪುಟಗಳಲ್ಲಿ ಪ್ರಕಟವಾಗಿವೆ. ಈತ ಕೆಲವು ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಕಾವ್ಯಾಂಶವೇ ಪ್ರಧಾನವಾಗಿದೆ. ಈತನ ಕೃತಿಗಳು ಆ ಶತಮಾನದ ಭಾವಗೀತ ಸಾಹಿತ್ಯದಲ್ಲಿ ಉನ್ನತಸ್ಥಾನ ಪಡೆದಿವೆ. 1915 ರಲ್ಲಿ ಪೊಯೆಸಿ ಎಂಬ ಹೆಸರಿನ ಈತನ ಆಯ್ದ ಕವನಗಳು ಪ್ರಕಟಗೊಂಡಿವೆ. ಟ್ಯೂರಿನಿನಲ್ಲಿ ಈತ ಕಾಲವಾದ.

ಉಲ್ಲೇಖಗಳು

[ಬದಲಾಯಿಸಿ]
  1.  One or more of the preceding sentences incorporates text from a publication now in the public domainChisholm, Hugh, ed. (1911). "Graf, Arturo" . Encyclopædia Britannica. Vol. 12 (11th ed.). Cambridge University Press. p. 315. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: