ಆಮಿ ಮಘೇರಾ
ಆಮಿ ಮಘೇರಾ | |
|---|---|
೨೦೧೬ ರಲ್ಲಿ ಮಘೇರಾ | |
| ಉದ್ಯೋಗ | ನಟಿ |
| ಸಕ್ರಿಯ ವರ್ಷಗಳು | ೨೦೦೮–ಪ್ರಸ್ತುತ |
| ದೂರದರ್ಶನ | ಹಾಲಿಯೋಕ್ಸ್ |
ಆಮಿ ಮಘೇರಾ (ಮೊದಲು ಅಮೃತ್ ಮಘೇರಾ) ಇವರು ಬ್ರಿಟಿಷ್ ರೂಪದರ್ಶಿ ಮತ್ತು ನಟಿಯಾಗಿದ್ದು, ಹಿಂದಿ, ಇಂಗ್ಲಿಷ್ ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ೨೦೧೫ ರಿಂದ ೨೦೧೭ ರವರೆಗೆ, ಅವರು ಬ್ರಿಟಿಷ್ ಸೋಪ್ ಒಪೆರಾ ಹಾಲಿಯೋಕ್ಸ್‌ನಲ್ಲಿ ನೀತಾ ಕೌರ್ ಪಾತ್ರದಲ್ಲಿ ಕಾಣಿಸಿಕೊಂಡರು.
ವೃತ್ತಿಜೀವನ
[ಬದಲಾಯಿಸಿ]ಮಘೇರಾರವರು ತಮ್ಮ ವೃತ್ತಿಜೀವನವನ್ನು ಕಾನ್ಯೆ ವೆಸ್ಟ್ ಮತ್ತು ಗನ್ಸ್ ಎನ್ ರೋಸಸ್‌ರವರೊಂದಿಗೆ ನೃತ್ಯಗಾರ್ತಿಯಾಗಿ ಪ್ರಾರಂಭಿಸಿದರು. ಮುಂಬೈನಲ್ಲಿ ಬಾಲಿವುಡ್ ಚಿತ್ರದ ಸೆಟ್‌ಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಅವರನ್ನು ಮಾಡೆಲಿಂಗ್ ಸಂಸ್ಥೆಯು ಭಾರತದ ಅತ್ಯುನ್ನತ ಉನ್ನತ ಮಟ್ಟದ ಸೌಂದರ್ಯವರ್ಧಕ ಕಂಪನಿಯಾದ ಲ್ಯಾಕ್ಮೆಯೊಂದಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಐದು ವರ್ಷಗಳ ಒಪ್ಪಂದವನ್ನು ತಂದಿತು.[೧] ಡಿಸೆಂಬರ್ ೨೦೧೨ ರಲ್ಲಿ, ಒನ್ ಪೌಂಡ್ ಫಿಶ್ ಮ್ಯಾನ್‌ನ £೧ ಫಿಶ್ ಹಾಡಿಗೆ ಹಿನ್ನೆಲೆ ನೃತ್ಯಗಾರ್ತಿಯಾಗಿಯೂ ಅವರು ಕಾಣಿಸಿಕೊಂಡರು. ಇದು ಮಾಡೆಲಿಂಗ್‌ನಲ್ಲಿ ಅವರ ವೃತ್ತಿಜೀವನವನ್ನು ಪ್ರಾರಂಭಿಸಿತು. ಏಕೆಂದರೆ, ಅವರು ಸತ್ಯ ಪಾಲ್, ಮಿಸ್ ಸಿಕ್ಸ್ಟಿ, ಲೋರಿಯಲ್, ಸ್ಕೆಚರ್ಸ್, ನೋಕಿಯಾ ಮತ್ತು ಓಲೆ ಮುಂತಾದ ಪ್ರಸಿದ್ಧ ಬ್ರಾಂಡ್‌ಗಳೊಂದಿಗೆ ಕಾರ್ಯಯೋಜನೆಗಳನ್ನು ಮಾಡಿದರು. ಜೊತೆಗೆ, ಅಲಿಸನ್ ಕನುಗೊ ಮತ್ತು ನೀತಾ ಲುಲ್ಲಾ ಅವರಂತಹ ವಿನ್ಯಾಸಕರೊಂದಿಗೆ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದರು. ೨೦೧೪ ರಲ್ಲಿ, ಅವರು ಮ್ಯಾಡ್ ಅಬೌಟ್ ಡ್ಯಾನ್ಸ್‌ನಲ್ಲಿ ಕಾಣಿಸಿಕೊಂಡರು. ಅವರು ಚಿತ್ರಕ್ಕೆ ಪ್ರಮುಖ ಗಾಯನವನ್ನೂ ಮಾಡಿದರು. ಗಾಯಕ ಅಮರಿಂದರ್ ಗಿಲ್ ಅವರೊಂದಿಗೆ ಪಂಜಾಬಿ ಚಿತ್ರವಾದ ಗೊರೇಯನ್ ನು ಡಫಾ ಕರೋ ಶೀಘ್ರದಲ್ಲೇ ಬಂದಿತು.
ಏಪ್ರಿಲ್ ೨೦೧೫ ರಲ್ಲಿ, ಅವರು ನಟಿಸಿದ ಬ್ರಿಟಿಷ್-ಏಷ್ಯನ್ ಚಲನಚಿತ್ರ, ಅಮರ್ ಅಕ್ಬರ್ & ಟೋನಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ಬಿಡುಗಡೆಯಾಯಿತು. ನಂತರ, ಅವರು ಸಂಧ್ಯಾ ಮೃದುಲ್, ತನಿಷ್ಠ ಚಟರ್ಜಿ, ಸಾರಾ-ಜೇನ್ ಡಯಾಸ್ ಮತ್ತು ಅನುಷ್ಕಾ ಮಂಚಂದಾ ಅವರೊಂದಿಗೆ ೨೦೧೫ ರ ಚಲನಚಿತ್ರ ಆಂಗ್ರಿ ಇಂಡಿಯನ್ ಗೊಡೆಸಸ್‌ನಲ್ಲಿ ನಟಿಸಿದರು.[೨] ಅಕ್ಟೋಬರ್ ೨೦೧೫ ರಲ್ಲಿ, ಮಘೇರಾರವರು ಚಾನೆಲ್ ೪ ಸೋಪ್ ಒಪೆರಾ, ಹೋಲಿಯೋಕ್ಸ್‌ನ ಪಾತ್ರವರ್ಗದಲ್ಲಿ ನೀತಾ ಕೌರ್ ಪಾತ್ರದಲ್ಲಿ ಸೇರಿಕೊಂಡರು.[೩] ನವೆಂಬರ್ ೨೦೧೭ ರಲ್ಲಿ, ತಮ್ಮ ಪಾತ್ರವನ್ನು ಕೊಲ್ಲಲ್ಪಟ್ಟ ನಂತರ, ಅವರು ಧಾರಾವಾಹಿಯನ್ನು ತೊರೆದರು. ಅವರ ಸಾವಿನ ದೃಶ್ಯವು ೨೦೧೮ ರ ಇನ್‌ಸೈಡ್ ಸೋಪ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಶೋ-ಸ್ಟಾಪರ್‌ಗೆ ನಾಮನಿರ್ದೇಶನಗೊಂಡಿತು.[೪]
ವೈಯಕ್ತಿಕ ಜೀವನ
[ಬದಲಾಯಿಸಿ]ಮಾರ್ಚ್ ೩೧, ೨೦೨೧ ರಂದು, ಮಘೇರಾರವರು ಇನ್ಸ್ಟಾಗ್ರಾಮ್‌ಮಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿ, ಕಾನೂನುಬದ್ಧವಾಗಿ ತಮ್ಮ ಹೆಸರನ್ನು ಅಮೃತ್‌ನಿಂದ ಆಮಿ ಎಂದು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಆಮಿ ತಮಗೆ ಜೀವಮಾನದ ಅಡ್ಡಹೆಸರು ಎಂದು ಅವರು ಹೇಳಿದ್ದಾರೆ ಮತ್ತು ಅವರು "ನನ್ನ ಮಿಶ್ರ ಪರಂಪರೆಯಾದ ಭಾರತೀಯ ಮತ್ತು ಬಿಳಿಯ ಬಗ್ಗೆ ಹೆಮ್ಮೆಪಡುತ್ತೇನೆ. ತನ್ನ ಹೆಸರಿನ ಬದಲಾವಣೆಯು ಯಾವುದೇ ಸಂಸ್ಕೃತಿಗೆ ಬೆನ್ನು ತಿರುಗಿಸಲು ಅಲ್ಲ. ಏಕೆಂದರೆ, ತನ್ನ ತಾಯಿಯ ಭಾರತೀಯ ಉಪನಾಮ ಮಘೇರಾವನ್ನು ಕಾಪಾಡಿಕೊಳ್ಳುತ್ತಿದ್ದೇನೆ" ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.[೫]
ಚಲನಚಿತ್ರ
[ಬದಲಾಯಿಸಿ]| ವರ್ಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಪಣಿಗಳು |
|---|---|---|---|---|
| ೨೦೦೮ | ಯುವರಾಜ್ | ಶಾಜಿಯಾ | ಹಿಂದಿ | ಆಮಿ ಮಾಘೇರಾ ಎಂದು ಸಲ್ಲುತ್ತದೆ. |
| ೨೦೧೪ | ಗೋರೆಯನ್ ನು ದಫ್ಫಾ ಕರೋ | ಅಲಿಶಾ | ಪಂಜಾಬಿ | ಪುರುಷ ನಾಯಕನಾಗಿ ಅಮ್ರೀಂದರ್ ಗಿಲ್ ಜೊತೆ |
| ೨೦೧೪ | ಮ್ಯಾಡ್ ಅಬೌಟ್ ಡಾನ್ಸ್ | ಆಶಿರಾ ಖುರೇಷಿ | ಹಿಂದಿ | ಗಾಯಕ ಕೂಡ |
| ೨೦೧೪ | ದಿ ಶೌಕೀಸ್ | ಹಿಂದಿ | "ಮೆಹರ್ಬಾನಿ" ಹಾಡಿನಲ್ಲಿ ವಿಶೇಷ ಪಾತ್ರ | |
| ೨೦೧೫ | ಆಂಗ್ರಿ ಇಂಡಿಯನ್ ಗಾಡೆಸಸ್ | 'ಜೋ' ಜೋನ್ನಾ | ಹಿಂದಿ | |
| ೨೦೧೫ | ಅಮರ್ ಅಕ್ಬರ್ & ಟೋನಿ | ಇಂಗ್ಲೀಷ್ | ಬ್ರಿಟಿಷ್-ಏಷ್ಯನ್ ಚಲನಚಿತ್ರ | |
| ೨೦೧೫–೨೦೧೭ | ಹೋಲಿಯೋಕ್ಸ್ | ನೀತಾ ಕೌರ್ | ಇಂಗ್ಲೀಷ್ | ಸರಣಿ ನಿಯಮಿತ |
| ೨೦೧೮ | ಕ್ಯಾಸುಯಾಲಿಟಿ (ಟಿವಿ ಸೀರೀಸ್) | ನಾಡಿಯಾ ಬಧೀರ್ | ಇಂಗ್ಲೀಷ್ | 1 ಸಂಚಿಕೆ |
| ೨೦೨೧ | ಸ್ಕೇಟರ್ ಗರ್ಲ್ | ಜೆಸ್ಸಿಕಾ | ಹಿಂದಿ ಮತ್ತು ಇಂಗ್ಲೀಷ್ | ಫೀಚರ್ ಫಿಲ್ಮ್ |
ಉಲ್ಲೇಖಗಳು
[ಬದಲಾಯಿಸಿ]- ↑ "Amrit Maghera". amritmaghera.com. Archived from the original on 22 July 2015. Retrieved 30 July 2015.
- ↑ "Pan Nalin Directs India's First Female Friendship Film, 'Angry Indian Goddesses'". India West. Archived from the original on 10 September 2015. Retrieved 30 July 2015.
- ↑ "Hollyoaks viewers shocked after evil Mac Nightingale drops Neeta Kaur to almost certain death". Daily Mirror. Retrieved 3 February 2021.
- ↑ "Coronation Street tops Inside Soap Awards 2018 shortlist with 18 nominations". Digital Spy. Retrieved 3 February 2021.
- ↑ Maghera, Amy (30 March 2021). "30 March 2021 at 19:40". Instagram. Archived from the original on 25 December 2021. Retrieved 1 November 2021.
ಬಾಹ್ಯ ಕೊಂಡಿ
[ಬದಲಾಯಿಸಿ]- ಆಮಿ ಮಘೇರಾ ಐ ಎಮ್ ಡಿ ಬಿನಲ್ಲಿ