ಆಧುನಿಕ ಜೀವಯುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂ ವಿಜ್ಞಾನದಲ್ಲಿ 63 ದಶಲಕ್ಷ ವರ್ಷಗಳಿಂದ ಈಚೆಗಿನ ಕಾಲ (ಸೀನೋeóÉೂೀಯಿಕ್ ಈರಾ). ಅದರ ಹಿಂದಿನ ಉರಗ ಯುಗದ (ಮೀಸೊeóÉೂೀಯಿಕ್ ಈರಾ) ಕೊನೆಯ ಭಾಗವಾದ ಕ್ರಿಟೇಷಿಯಸ್ ಕಲ್ಪದ (ಈಪಾಕ್) ಅನಂತರ ಮಹಾಪ್ರಳಯವಾಗಿ ಮಹತ್ತರ ಬದಲಾವಣೆಗಳಾದುವು. ಅದರ ಪ್ರಭಾವ ಜೀವಕೋಟಿಯಲ್ಲಿ ಅತಿಶಯವಾಗಿ ಎದ್ದು ಕಾಣುತ್ತದೆ. ಉರಗ ಯುಗದಲ್ಲಿ (ಮಧ್ಯಜೀವ ಯುಗ) ಭೂಸ್ವಾಮ್ಯ ಹೊಂದಿದ್ದ ಏಕೈಕ ಪ್ರಾಣಿವರ್ಗವಾದ ಸರೀಸೃಪಗಳ ಅನೇಕ ಶಾಖೆಗಳು ಸಂಪೂರ್ಣ ನಿರ್ವಂಶವಾದುವು. ಬೆನ್ನೆಲುಬಿಲ್ಲದ ಪ್ರಾಣಿವರ್ಗಗಳಲ್ಲಿ ಅಮ್ಮೊನೈಟ್ ಮತ್ತು ಬೆಲಿಮ್ನೈಟ್ ಎಂಬ ಪ್ರಾಣಿಗಳು ಅಂದಿನ ಸಾಗರಗಳಲ್ಲಿ ಅಸಂಖ್ಯಾತವಾಗಿದ್ದವು. ಅವೆಲ್ಲ ಗತಕಾಲದ ಕುರುಹಾದುವು. ಸಸ್ಯವರ್ಗಗಳಲ್ಲಿ ಎಲ್ಲೆಲ್ಲಿಯೂ ತಾನೇತಾನಾಗಿ ಬೀಡು ಬಿಟ್ಟಿದ್ದ ಸೈಕಾಡ್ ಮತ್ತು ಕೋನಿಫರ್ ಎಂಬ ಹೂಬಿಡದ ಆದರೆ ಬೀಜಗಳಿಂದ ಕೂಡಿದ್ದ ಜಿಮ್ನೊಸ್ಪರ್ಮ ಜಾತಿಯ ಸಸ್ಯವರ್ಗ ಅನೇಕ ಅತಿ ಮುಖ್ಯವಾದ ವಂಶಶಾಖೆಗಳನ್ನು ಕಳೆದುಕೊಂಡು ಹೇಗೋ ಉಳಿದುಕೊಂಡುವು. ಮೇಲೆ ಹೇಳಿದ ಸರೀಸೃಪಗಳ ಸ್ಥಾನವನ್ನು ಸಸ್ತನಿಗಳು ಆಕ್ರಮಿಸಿದವು. ಅವು ಆಧುನಿಕ ಜೀವಕಲ್ಪದ ಆದಿಯಲ್ಲಿ ಸಾಮಾನ್ಯ ಜಾತಿಯವು. ಆದರೆ ಅವು ವಿವಿಧ ವಾತಾವರಣಕ್ಕನುಸಾರವಾಗಿ ಸಿಕ್ಕಿದ ಆಹಾರ ಮತ್ತು ಅನುಕೂಲಗತಿಗಳ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಬಹು ಬೇಗನೆ ವೃದ್ಧಿಹೊಂದಿ ಅನೇಕ ವಿಧದ ಸಸ್ತನಿಗಳಾದುವು. ಸಾಗರದಲ್ಲಿ ಶಂಖಗಳು, ಕಪ್ಪೆಚಿಪ್ಪು ಮತ್ತು ಮುತ್ತಿನ ಚಿಪ್ಪಿನ ಪ್ರಾಣಿಗಳು ಅಮ್ಮೊನೈಟ್ ಸ್ಥಾನವನ್ನು ಪಡೆದುವು. ಹೂಬಿಡುವ ಸಸ್ಯವರ್ಗ ಮಧ್ಯ ಜೀವಕಲ್ಪದ ಅಂತ್ಯದಲ್ಲಿಯೇ ಕಾಣಿಸಿಕೊಂಡಿತಾದರೂ ಅದು ವೃದ್ಧಿಹೊಂದಿದುದು ಆಧುನಿಕ ಜೀವಯುಗದಲ್ಲಿ. ಆದ್ದರಿಂದ ಈ ಭೂತಕಾಲವನ್ನು ಆಧುನಿಕ ಜೀವಯುಗ ಎಂದು ಕರೆದಿರುವುದು ಸಮಂಜಸವಾಗಿದೆ.[೧]

ಇತಿಹಾಸ[ಬದಲಾಯಿಸಿ]

ಪ್ರಳಯಕಾಲದಲ್ಲಿ ಪ್ರಾರಂಭವಾದ ಅಗಾಧವಾದ ಭೂಚಲನೆಯ ಪರಿಣಾಮವಾಗಿ ಹೊಸ ಪರ್ವತಸ್ತೋಮಗಳು ಉದಯವಾಯಿತು. ಮೊದಲೇ ಇದ್ದ ಪರ್ವತಸ್ತೋಮಗಳು ಹೊಸ ರೂಪ ತಾಳಿದುವು. ಈಗಿನ ಮೇಲ್ಮೈಲಕ್ಷಣಗಳೆಲ್ಲ ಬಹುತೇಕ ಆಗ ಆದವುಗಳೇ. ಅದುವರೆಗೂ ಒಂದಾಗಿದ್ದ ಗೊಂಡವಾನ ಭೂಭಾಗ ಈಗಿನ ಇಂಡಿಯಾ ಪರ್ಯಾಯದ್ವೀಪಭಾಗ. ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅಂಟಾರ್ಕಟಿಕಾ ಎಂಬ ಖಂಡಗಳಾಗಿ ಬೇರ್ಪಟ್ಟಿತು. ಬೇರ್ಪಟ್ಟ ಭೂಭಾಗಗಳಲ್ಲೆಲ್ಲ ಹಿಂದೆಂದೂ ಕಂಡರಿಯದಷ್ಟು (ಆರ್ಷೇಯ ಯುಗವನ್ನುಳಿದು) ಶಿಲಾರಸ ಹೊರ ಹೊಮ್ಮಿತು. ಇಂಡಿಯಾದ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗ, ಆಫ್ರಿಕದ ಸ್ಟ್ರಾಂಬರ್ಗ್ ಮತ್ತು ದ. ಅಮೆರಿಕದ ಸೆರ್ರಾಗೆರಾಲ್ ಜ್ವಾಲಾಮುಖಜಶಿಲೆಗಳು ಆ ಕಾಲದಲ್ಲಿ ಹೊರಹೊಮ್ಮಿದ ಶಿಲಾರಸದಿಂದ ಆದುವು. ಈ ಖಂಡಗಳ ಮಧ್ಯೆ ಇದ್ದ ಅಲ್ಪಸ್ವಲ್ಪ ಭೂಭಾಗಗಳು ಸಮುದ್ರಗಳ ಅಡಿಯಲ್ಲಿ ಮುಳುಗಿರಲೂ ಸಾಧ್ಯ. ಮೆಡಗಾಸ್ಕರ್ ಮತ್ತು ಇಂಡಿಯಾಗಳ ನಡುವೆ ಸೇತುವೆಯಂತಿದ್ದ ಲೆಮೂರಿಯ ಮುಳುಗಿಹೋಗಿ ಈಗಿನ ಅರಬ್ಬೀ ಸಮುದ್ರ ರೂಪುಗೊಂಡಿತು. ಇಂಡಿಯಾ ಪರ್ಯಾಯದ್ವೀಪದ ತೀರಗಳು ಆ ಕಾಲದಲ್ಲಿಯೇ ರೂಪುಗೊಂಡುವು. ಹೀಗೆ ಬೇರ್ಪಟ್ಟ ಖಂಡಗಳ ಚಲನೆಯಿಂದ, ಆ ಕಾಲದ ಭೂಮಧ್ಯ ಪ್ರದೇಶದಲ್ಲಿ ಬಹುಕಾಲದಿಂದಲೂ ಇದ್ದ ಟೆತಿಸ್ ಎಂಬ ಸಾಗರ ಪ್ರದೇಶ ಮಾಯವಾಗಿ ಅದರಡಿಯಲ್ಲಿ ನಿಕ್ಷೇಪಗೊಂಡಿದ್ದ ಜಲಜಶಿಲಾರಾಶಿ ಭೂಚಲನೆಗಳ ಒತ್ತಡಕ್ಕೆ ಸಿಕ್ಕಿ ಅಟ್ಲಾಸ್, ಪಿರನೀಸ್, ಆಲ್ಪ್ಸ್ ಮತ್ತು ಹಿಮಾಲಯ ಪರ್ವತಸ್ತೋಮಗಳಾಗಿ ಮೇಲೊಗೆಯಲ್ಪಟ್ಟುವು. ಮಾರುತಗಳ ಬಡಿತಕ್ಕೆ ಸಿಕ್ಕಿ ಸವೆದಿದ್ದ ರಾಕೀಸ್ ಮತ್ತು ಆಂಡೀಸ್ ಪರ್ವತಸ್ತೋಮಗಳು ಸಹ ಈಗಿನ ಎತ್ತರಕ್ಕೆ ಮೇಲೊಗೆಯಲ್ಪಟ್ಟುವು.

ಇಂಡಿಯಾ ಪರ್ಯಾಯದ್ವೀಪ[ಬದಲಾಯಿಸಿ]

ಟಿಬೆಟ್ಟಿಗೂ ಇಂಡಿಯಾ ಪರ್ಯಾಯದ್ವೀಪಕ್ಕೂ ಮಧ್ಯೆ ಇದ್ದ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡ ಜಲಶಿಲೆಗಳು ಭೂಚಲನೆಗೊಳಪಟ್ಟು ಮೇಲೊಗೆಯಲ್ಪಟ್ಟುದು ಸರಿಯಷ್ಟೆ. ಈ ಕಾರ್ಯ ಕ್ರಿಟೇಷಿಯಸ್ ಕಾಲದಲ್ಲೇ ಪ್ರಾರಂಭವಾಗಿ ಸಾಗರಪ್ರದೇಶಗಳಲ್ಲೆಲ್ಲ ಆಳ ಕಡಿಮೆಯಾಗಿ ಅಲ್ಲಿ ಫ್ಲಿಷ್ ನಿಕ್ಷೇಪವಾಯಿತು. ಈ ಕಾಲದ ನಿಜವಾದ ಆರಂಭ ಇಯೊಸೀನ್ ಕಾಲದ ಅಂತ್ಯ ಭಾಗದಲ್ಲಿ ಆಯಿತು. ಇದೇ ಹಿಮಾಲಯ ಪರ್ವತಗಳ ಉದಯದ ಮೊದಲನೆಯ ಹಂತ. ಇದರ ಪರಿಣಾಮವಾಗಿ ಟೆತಿಸ್ ಸಾಗರದ ನೀರು ಮುಕ್ಕಾಲುಭಾಗ ಪ್ರದೇಶದಿಂದ ನಿರ್ಗಮಿಸಿ ಪಶ್ಚಿಮದಲ್ಲಿ ಸಿಂಧ್ ಮತ್ತು ಬಲೂಚಿಸ್ತಾನ್ ಕೊಲ್ಲಿಗಳ, ಪೂರ್ವದಲ್ಲಿ ಅಸ್ಸಾಂ ಮತ್ತು ಬರ್ಮ ಕೊಲ್ಲಿಗಳ ರೂಪದಲ್ಲಿಯೂ ಹಿಮಾಲಯ ಪ್ರದೇಶದಲ್ಲಿ ಕ್ಯಾಸ್ಪಿಯನ್ ಸಮುದ್ರದ ಹಾಗೆ ದೊಡ್ಡ ಸರೋವರಗಳಾಗಿಯೂ ಉಳಿದುಕೊಂಡಿತು. ಈ ಪ್ರದೇಶದ ಜಲಜಶಿಲಾನಿಕ್ಷೇಪ ಮೇಲ್ಭಾಗಕ್ಕೆ ಒಗೆಯಲ್ಪಟ್ಟಿತು. ಅನಂತರ ಪರಿಸ್ಥಿತಿ ಶಾಂತವಾಗಿತ್ತು. ಮತ್ತೆ ಮಿಯೊಸೀಸ್ ಕಾಲದ ಮಧ್ಯಭಾಗದಲ್ಲಿ ಈ ಚಲನೆ ಅತಿ ತೀವ್ರಗೊಂಡಿತು. ಹಿಮಾಲಯ ಪರ್ವತಗಳು ಹೆಚ್ಚು ಕಡಿಮೆ ಈಗಿನ ರೂಪಕ್ಕೆ ಬಂದುದು ಈ ಚಲನೆಯ ಅನಂತರವೇ. ಆಗಲೇ ಟೆತಿಸ್ ಸಾಗರದ ಪೂರ್ಣನಿರ್ಗಮನವೂ ಆಯಿತು. ಆದರೆ ಜಾಗದಲ್ಲಿ ಮಧ್ಯೆ ಮಧ್ಯೆ ನದೀಕಣಿವೆ ಮತ್ತು ಕೆಸರು ಪ್ರದೇಶಗಳಿಂದ ಕೂಡಿದ ಪರ್ವತಗಳ ಉದಯವಾಯಿತು. ಅಷ್ಟೇ ಅಲ್ಲದೆ, ಮೇಲೇಳುತ್ತಿರುವ ಹಿಮಾಲಯ ಪರ್ವತಗಳಿಗೂ ಪರ್ಯಾಯದ್ವೀಪಕ್ಕೂ ಮಧ್ಯೆ ಬಹು ಆಳವಾದ, ಅಗಲದಲ್ಲಿ ಕಿರಿದಾದ ತಗ್ಗು ಪ್ರದೇಶ ಉಂಟಾಯಿತು. ಇಂಥ ಪ್ರದೇಶ ಹಿಮಾಲಯ ಪರ್ವತಸ್ತೋಮದ ಉದ್ದಕ್ಕೂ ಇದೆ. ಈ ತಗ್ಗು ಪ್ರದೇಶದಲ್ಲಿ ಮುಖ್ಯವಾಗಿ, ಹಿಮಾಲಯ ಪರ್ವತದಿಂದ ಹರಿದು ಬರುವ ನದಿಗಳು ತಂದ ಮೆಕ್ಕಲು ಮಣ್ಣು ನಿಕ್ಷೇಪಗೊಳ್ಳುತ್ತ ಬಂತು. ಪರ್ಯಾಯದ್ವೀಪದ ಕಡೆಯಿಂದಲೂ ನದಿಗಳು ಮೆಕ್ಕಲು ಮಣ್ಣನ್ನು ತಂದು ಈ ತಗ್ಗನ್ನು ತುಂಬಿದುವು. ಪ್ಲಿಯೊಸೀನ್ ಕಾಲದ ಅಂತ್ಯ ಅಥವಾ ಪ್ಲಿಸ್ಟೊಸೀನ್ ಕಾಲದ ಆದಿಯಲ್ಲಿ ಮತ್ತೆ ಈ ಪ್ರದೇಶದಲ್ಲಿ ಭೂಚಲನೆ ಆಯಿತು. ಇದರ ಪರಿಣಾಮವಾಗಿ, ಹಿಮಾಲಯ ಪರ್ವತಗಳು ತಗ್ಗು ಪ್ರದೇಶದಲ್ಲಿ ನಿಕ್ಷೇಪಗೊಂಡ ನದಿ ಮೆಕ್ಕಲು ನಿಕ್ಷೇಪಕ್ಕೂ ತಗುಲಿತು. ಅವೂ ಮೇಲೊಗೆಯಲ್ಪಟ್ಟುವು. ಅಲ್ಲದೆ ಮಡಿಕೆ ಮಡಿಕೆಗಳಾಗಿ ಮಾರ್ಪಟ್ಟು ಸ್ತರಭಂಗಗಳನ್ನು ಹೊಂದಿ ಹಲವಾರು ಕಡೆ ಶಿಲಾಸ್ತರಗಳ ಕ್ರಮ ತಲೆಕೆಳಗಾಗಿ ಅದಲುಬದಲಾಯಿತು. ಈ ಶಿಲಾರಾಶಿಯನ್ನೇ ನಾವು ಶಿವಾಲಿಕ್ ಶಿಲಾಸಮುದಾಯವೆಂದು ಕರೆಯುವುದು. ಇವು ಖಂಡಾಂತರ ಜಲಜ ಮತ್ತು ಭೂನಿಕ್ಷೇಪಗಳು. ಇವಕ್ಕೂ ಮತ್ತು ಈಗಿನ ಸಿಂಧೂ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಬಯಲುಗಳಲ್ಲಿರುವ ಮೆಕ್ಕಲು ನಿಕ್ಷೇಪಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಶಿವಾಲಿಕ್‍ಶಿಲೆಗಳು ವಯಸ್ಸಿನಲ್ಲಿ ಹಿರಿದಾಗಿ, ಭೂ ಚಲನೆಯ ಪರಿಣಾಮವಾಗಿ ಮಡಿಕೆಗಾಗಿ ಅನೇಕ ರೀತಿಬದಲಾವಣೆಗಳನ್ನು ಹೊಂದಿ, ತಾವು ನಿಕ್ಷೇಪಗೊಂಡ ಮಟ್ಟಕ್ಕಿಂತ ಮೇಲ್ಮಟ್ಟಕ್ಕೆ ತಳ್ಳಲ್ಪಟ್ಟಿವೆ. ಆದರೆ ಗಂಗಾ ಬ್ರಹ್ಮಪುತ್ರ ನದಿಗಳ ಮೆಕ್ಕಲು ನಿಕ್ಷೇಪ ಹಾಗಾಗಿಲ್ಲ.

ವಾಯುಗುಣ[ಬದಲಾಯಿಸಿ]

ಈ ಬದಲಾವಣೆಯಾದ ಸ್ವಲ್ಪ ಕಾಲದಲ್ಲಿಯೇ ವಾಯುಗುಣದಲ್ಲಿ ಮಹತ್ತರ ವ್ಯತ್ಯಾಸ ಕಂಡುಬಂದಿತು. ತೀವ್ರ ಶೀತವಾಯುಗುಣ ಎಲ್ಲೆಲ್ಲಿಯೂ ಅದರಲ್ಲಿಯೂ, ಉತ್ತರಾರ್ಧ ಗೋಳದಲ್ಲಿ ಆವರಿಸಿಕೊಂಡಿತು. ಶಿವಾಲಿಕ್ ಕಾಲದಲ್ಲಿ ಹಿಮಾಲಯ ಪರ್ವತಗಳ ಕಾಡಿನಲ್ಲಿ ವಾಸವಾಗಿದ್ದ ಅಸಂಖ್ಯಾತ ಸಸ್ತನಿಗಳು ಈ ಶೀತ ವಾಯುಗುಣದ ಅತಿ ಶೈತ್ಯವನ್ನು ತಾಳಲಾರದೆ ಗತವಂಶಿಗಳಾದುವು. ಹಿಮಾಲಯ ಪರ್ವತಗಳ ಕೊನೆಯ ಮೇಲೇರಿಕೆಯನ್ನೂ ಶೀತವಾಯಗುಣವನ್ನೂ ಮಾನವ ಅವಲೋಕಿಸಿರುವುದು ಸಾಧ್ಯ. ಹೀಗೆ ಹಿಮಾಲಯ ಪರ್ವತಗಳೂ ದೀರ್ಘ ಪ್ರಶಾಂತ ಕಾಲಗಳಿಂದ ಬೇರ್ಪಡಿಸಲ್ಪಟ್ಟು ಮೂರು ಅಥವಾ ನಾಲ್ಕು ಹಂತಗಳಲ್ಲಿ ಮೇಲೆ ಬಂದಿವೆ.

ಆಧುನಿಕ ಜೀವಯು[ಬದಲಾಯಿಸಿ]

ಆಧುನಿಕ ಜೀವಯುಗವನ್ನು ಆರು ಭಾಗಗಳಾಗಿ ವಿಭಜಿಸುತ್ತಾರೆ. ವರ್ತಮಾನ ಕಾಲದಿಂದ ಭೂತಕಾಲದೆಡೆಗೆ (ಆವರಣದಲ್ಲಿರುವ ಸಂಖ್ಯೆ ದಶಲಕ್ಷ ವರ್ಷಗಳ ಕಾಲ ಸೂಚಿಸುವುದು) : ಪ್ಲಿಸ್ಟೊಸೀನ್ (1.0 ( 0.5); ಪ್ಲಿಯೊಸೀನ್ (13 ( 1); ಮಯೊಸೀನ್ (25 ( 1); ಆಲಿಗೊಸೀನ್(36 ( 2); ಇಯೊಸೀನ್ (58 ( 2); ಪೆಲಿಯೊಸೀನ್ (63 ( 2); (ನೋಡಿ- ಆರ್ಷೇಯ-ಯುಗ)

ಉಲ್ಲೇಖಗಳು[ಬದಲಾಯಿಸಿ]