ವಿಷಯಕ್ಕೆ ಹೋಗು

ಆಟೋಮನ್ ಸಾಮ್ರಾಜ್ಯದ ನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೋಪ್‍ಕಾಪಿ ಅರಮನೆಯಲ್ಲಿ ದ ಟವರ್ ಆಫ಼್ ಜಸ್ಟಿಸ್

ಆಟೋಮನ್ ಚಕ್ರಾಧಿಪತ್ಯವು ಅಸ್ತಿತ್ವದಲ್ಲಿದ್ದಾಗ ಅದು ಕಾನೂನುಗಳ ವಿಭಿನ್ನ ಸಮೂಹದಿಂದ ಆಳಲ್ಪಡುತ್ತಿತ್ತು. ಸುಲ್ತಾನನ ನ್ಯಾಯವಾಗಿದ್ದ ಕಾನೂನ್ ಧಾರ್ಮಿಕ ನ್ಯಾಯದ (ಮುಖ್ಯವಾಗಿ ಫಿಖ್‍ನ ಹನಫ಼ಿ ಪಂಥ) ಜೊತೆಗೆ ಅಸ್ತಿತ್ವದಲ್ಲಿತ್ತು.[][][]

ಗ್ರೀಸ್ ಆಗ ಆಟೋಮನ್ ಸಾಮ್ರಾಜ್ಯದ ಭಾಗವಾಗಿತ್ತು.

ಗ್ರೀಸ್ - ಬಿಜ಼ಂಟೀನ್ ಅನಂತರದ ಯುಗ - 1453-1821

[ಬದಲಾಯಿಸಿ]

ಕಾನ್‍ಸ್ಟಾಂಟಿನೋಪಲಿನ ಪತನ (1453), ಬಿಜ಼ಂಟೀನ್ ಸಾಮ್ರಾಜ್ಯದ ಅಂತ್ಯ, ತುರ್ಕರ ವಿಜಯ ಇವು ಗ್ರೀಕ್ ನ್ಯಾಯದ ಇತಿಹಾಸದಲ್ಲಿ ನಾಲ್ಕನೆಯ ಘಟ್ಟಕ್ಕೆ ಎಡೆಮಾಡಿಕೊಟ್ಟವು. ತುರ್ಕರ ನ್ಯಾಯ ಅತಿ ಧಾರ್ಮಿಕ ಸ್ವರೂಪದ್ದಾದ ಕಾರಣ ಅವರು ಗ್ರೀಕರ ನ್ಯಾಯವನ್ನು ವ್ಯಕ್ತಿಗತ ನ್ಯಾಯವನ್ನಾಗಿ ಪರಿಗಣಿಸಿದರು. ಸ್ಥಳೀಯ ಆಂತರಿಕ ವ್ಯವಹಾರವನ್ನು ಗ್ರೀಕರಿಗೆ ಬಿಟ್ಟುಕೊಟ್ಟಿದ್ದ ಕಾರಣ ಗ್ರೀಕ್ ನ್ಯಾಯ ಬೆಳೆಯಲವಕಾಶವಾಯಿತು. ಕಾಜಿಗಳು ಮುಸ್ಲಿಂ ಪ್ರಜೆಗಳಿಗೆ ಇಸ್ಲಾಮೀ ನ್ಯಾಯವನ್ನು ಮತ್ತು ಗ್ರೀಕ್ ಪ್ರಜೆಗಳಿಗೆ ಅವರ ವೈಯಕ್ತಿಕ ನ್ಯಾಯವನ್ನು ಅನ್ವಯ ಮಾಡುತ್ತಿದ್ದರು. ಥೆಸಲೋನಿಕದ ಒಬ್ಬ ನ್ಯಾಯಮೂರ್ತಿಯಾಗಿದ್ದ ಹಾರ್ಮೆನೊಪ್ಯುಲಾಸ್ 1345ರಲ್ಲಿ ಗ್ರೀಕೊ-ರೋಮನ್ ಅಥವಾ ಬಿಜ಼ಂಟೀನ್ ನ್ಯಾಯವನ್ನು ಆರು ಪುಸ್ತಕಗಳಲ್ಲಿ ಸಂಗ್ರಹಿಸಿ ಬರೆದ ಹೆಕ್ಸಬಿಬ್ಲಾಸ್ (Hexabiblos) ಎಂಬುದು ಆಗ ಆಧಾರಗ್ರಂಥವಾಗಿತ್ತು. ಗ್ರೀಕರು ತಮ್ಮ ವಿವಾದಗಳನ್ನು ಕಾಜ಼ಿಗಳ ನ್ಯಾಯಾಲಯಗಳಿಗೆ ಸಾಮಾನ್ಯವಾಗಿ ತೆಗೆದುಕೊಂಡು ಹೋಗುತ್ತಿರಲಿಲ್ಲ. ಈ ಕಾರಣದಿಂದ ಸ್ಥಳೀಯ ಪ್ರಾಧಿಕಾರಕ್ಕೊಳಪಟ್ಟ ನ್ಯಾಯಾಲಯಗಳು, ಬಿಷಪ್ಪರ ನ್ಯಾಯಾಲಯಗಳು ಮತ್ತು ಕಾನ್‍ಸ್ಟಾಂಟಿನೋಪಲಿನ ಪೇಟ್ರಿಯಾರ್ಕ್ ನ್ಯಾಯಾಲಯ-ಇವು ಅಸ್ತಿತ್ವಕ್ಕೆ ಬಂದವು.

ಉಲ್ಲೇಖಗಳು

[ಬದಲಾಯಿಸಿ]
  1. Katz, Stanley Nider (2009). Ottoman Empire: Islamic Law in Asia Minor (Turkey) and the Ottoman Empire - Oxford Reference. Oxford University Press. ISBN 9780195134056. Retrieved 2017-11-18.
  2. "Balancing Sharia: The Ottoman Kanun". Turkish Forum English. Retrieved 26 April 2024.
  3. De Groot, A.H., 2010. 6. The Historical Development of the Capitulatory Regime in the Ottoman Middle East from the Fifteenth to the Nineteenth Century. In The Netherlands and Turkey (pp. 95-128). Gorgias Press.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: