ಆಂದ್ರ ಪ್ರದೇಶ ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂದ್ರ ಪ್ರದೇಶ ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ್

ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ ಇದು ಸಾರ್ವಜನಿಕ ಗ್ರಂಥಾಲಯ. ಈ ಕಟ್ಟಡವನ್ನು ೧೮೯೧ರಲ್ಲಿ ನವಾಬ್ ಇಮಾದ್-ಉಲ್-ಮುಲ್ಕ ಎಂಬುವರು ಕಟ್ಟಿಸಿದರು. ಇದನ್ನು ಮೊದಲು ಅಸಾಫಿಯ ಗ್ರಂಥಾಲಯವೆಂದು ಕರೆಯುತ್ತಿದ್ದರು. ಈ ಗ್ರಂಥಾಲಯವು ಅಫ್ಜಲ್ ಗಂಜಿನಲ್ಲಿ ಮೂಸಿ ನದಿಯ ದಡದಲ್ಲಿದೆ. ಇದರಲ್ಲಿ ೫೦೦,೦೦೦ ಪುಸ್ತಕಗಳು, ವೃತ್ತ ಪತ್ರಿಕೆಗಳು ಹಾಗು ವಿಶಿಷ್ಟವಾದ ತಾಳೆಗರಿಯ ಸಂಗ್ರಹ ಇದೆ.

ಪುಸ್ತಕಗಳ ಸಂಖ್ಯೆ[ಬದಲಾಯಿಸಿ]

೧ನೇ ಏಪ್ರಿಲ್ ೨೦೦೪ ರ ವರೆಗೆ ಇದ್ದ ೪,೪೧,೫೭೩ ಪುಸ್ತಕಗಳ ವಿವರಗಳು ಕೆಳಗಿನಂತಿವೆ.

ಭಾಷೆ ಸಂಖ್ಯೆ
ತೆಲುಗು ೧೪೦೧೯೮
ಆಂಗ್ಲ ೧೪೦೭೧೩
ಉರ್ದು ೬೮೬೨೬
ಹಿಂದಿ ೪೨೫೮೬
ಮರಾಠಿ ೧೭೧೩೪
ಕನ್ನಡ ೧೫೦೦೯
ಅರೆಬಿಕ್ ೬೪೫೯
ಪರ್ಷಿಯನ್ ೬೪೯೨
ಸಂಸ್ಕೃತ ೩೨೯೬
ತಮಿಳು ೧೦೬೦

೧೯೪೧ ರಲ್ಲಿ ಪ್ರಕಟವಾದ ಹೈದರಾಬಾದ ಸಮಾಚಾರ ಮಾಸ ಪತ್ರಿಕೆಯೂ ಇಲ್ಲಿ ಲಭ್ಯ.