ಆಂಡ್ ವ್ಹೂ ವಿಲ್ ಮೇಕ್ ಚಪಾತೀಸ್?
ಸಂಪಾದಕ | ಬಿಷಾಖಾ ದತ್ತಾ |
---|---|
ಲೇಖಕ | ಬಿಷಾಖಾ ದತ್ತಾ, ಮತ್ತು ಇತರರು |
ದೇಶ | ಯುನೈಟೆಡ್ ಸ್ಟೇಟ್ಸ್ |
ಭಾಷೆ | ಇಂಗ್ಲೀಷ್ |
ವಿಷಯ | ರಾಜಕೀಯದಲ್ಲಿ ಮಹಿಳೆಯರು-ಭಾರತ |
ಪ್ರಕಾರ | ಕಾಲ್ಪನಿಕವಲ್ಲದ |
ಪ್ರಕಾಶಕರು | ಸ್ಟ್ರೀ ಪಬ್ಲಿಕೇಷನ್ಸ್ |
ಪ್ರಕಟವಾದ ದಿನಾಂಕ | 1998 |
ಮಾಧ್ಯಮ ಪ್ರಕಾರ | ಮುದ್ರಣ (ಹಾರ್ಡ್ಕವರ್ ಮತ್ತು ಪೇಪರ್ಬ್ಯಾಕ್) |
ಪುಟಗಳು | 141 |
ಐಎಸ್‍ಬಿಎನ್ | 81-85604-24-X |
ಆಂಡ್ ವ್ಹೂ ವಿಲ್ ಮೇಕ್ ಚಪಾತೀಸ್?. ಕನ್ನಡದಲ್ಲಿ: ಮತ್ತು ಚಪಾತಿಗಳನ್ನು ಯಾರು ತಯಾರಿಸುತ್ತಾರೆ?, ಭಾರತದ ಮಹಾರಾಷ್ಟ್ರದಲ್ಲಿ ರೂಪುಗೊಂಡ ಸಂಪೂರ್ಣ ಮಹಿಳಾ ರಾಜಕೀಯ ಪಂಚಾಯತ್ ಗಳ ಅವಲೋಕನದ ಪುಸ್ತಕವಾಗಿದೆ. ಇದರಲ್ಲಿ 20 ನೇ ಶತಮಾನದ ಉತ್ತರಾರ್ಧದಲ್ಲಿ ನೀತಿ ಬದಲಾವಣೆಗಳು ಸ್ಥಳೀಯ, ಗ್ರಾಮೀಣ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಪಷ್ಟವಾದ ಜಾಗವನ್ನು ರಚಿಸಿ ಮತ್ತು ಅದರ ಆಡಳಿತ ಮಂಡಳಿಗಳಿಗೆ ನಿಧಿಗಳು ಮತ್ತು ಕೆಲವು ಸ್ಥಳೀಯ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಆದೇಶವನ್ನು ನೀಡಿತು. 1998 ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕವು ಮೀನಾಕ್ಷಿ ಶೆಡ್ಡೆ, ಸೋನಾಲಿ ಸಾಥಾಯೆ, ಶರ್ಮಿಳಾ ಜೋಶಿ ಮತ್ತು ಬಿಶಾಖಾ ದತ್ತ ಇವರೆಲ್ಲಾ ಕ್ಷೇತ್ರದ ವರದಿಗಳನ್ನು ಒಳಗೊಂಡಿದೆ ಮತ್ತು ಇದನ್ನು ದತ್ತ ಸಂಪಾದಿಸಿದ್ದಾರೆ. ಎರಡನೇ ಮುದ್ರಣವನ್ನು 2001 ರಲ್ಲಿ ಪ್ರಕಟಿಸಲಾಯಿತು. ಗ್ರಾಮೀಣ ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ವಿವರವಾದ ನೋಟವಾಗಿ ಈ ಪುಸ್ತಕವನ್ನು ನಿಯಮಿತವಾಗಿ ಉಲ್ಲೇಖಿಸಲಾಗುತ್ತದೆ.[೧] ರಾಜಕೀಯದಲ್ಲಿ ಪುರುಷರ ಪ್ರಾಬಲ್ಯ ಇನ್ನೂ ಮುಂದುವರಿದಿದ್ದರೂ, ಪುಸ್ತಕಕ್ಕಾಗಿ ಗುರುತಿಸಲಾದ ಪ್ರಕರಣ ಅಧ್ಯಯನಗಳು ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಸಕಾರಾತ್ಮಕ ಪ್ರವೃತ್ತಿಗಳನ್ನು ಈ ಪುಸ್ತಕವು ಸ್ಪಷ್ಟವಾಗಿ ಮುಂದಿಡುತ್ತವೆ.[೨]
ವಿಷಯ
[ಬದಲಾಯಿಸಿ]ಈ ಪುಸ್ತಕವು 9 ಹಳ್ಳಿಗಳ 12 ಪಂಚಾಯತ್‌ಗಳ ಸದಸ್ಯರಾಗಿದ್ದ ಮಹಿಳೆಯರೊಂದಿಗೆ ವೈಯಕ್ತಿಕ ಸಂದರ್ಶನಗಳು, ಅವರ ಪರಿಸ್ಥಿತಿಗಳ ಪರಿಚಯಗಳು (ಪ್ರತಿಯೊಂದು ಪಂಚಾಯತ್ ವಿಭಿನ್ನ ಯುಗದಲ್ಲಿ ಪ್ರಾರಂಭವಾಯಿತು; ಹೆಚ್ಚಿನವು ಮುಂದೆ ಸಕ್ರಿಯವಾಗಿರಲಿಲ್ಲ), ಮತ್ತು ರಾಜಕೀಯದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಮತ್ತು ಸ್ಥಳೀಯ ಆಡಳಿತ ಮತ್ತು ಜೀವನದ ಮೇಲೆ ಇದು ಮಾಡಿದ ವ್ಯತ್ಯಾಸದ ಪರಿಣಾಮಗಳ ವಿಶ್ಲೇಷಣೆಯನ್ನು ಒಳಗೊಂಡಿದೆ. ಸಮೀಕ್ಷೆ ಮಾಡಲಾದ ಪಂಚಾಯತ್‌ಗಳಲ್ಲಿ ದಾಖಲೆಯಲ್ಲಿರುವ ಅತ್ಯಂತ ಹಳೆಯದಾದ ಪುಣೆ ನಿಂಬಟ್ ಗ್ರಾಮದಲ್ಲಿ 1963 ರಿಂದ 1968 ರವರೆಗೆ, ಶಾಸನವು ಪ್ರದೇಶದಾದ್ಯಂತ ಪಂಚಾಯತ್‌ಗಳಿಗೆ ಮಹಿಳೆಯರಿಗೆ ಅಧಿಕಾರ ಮತ್ತು ಸ್ಥಾನಗಳನ್ನು ಖಾತರಿಪಡಿಸುವ ಮೊದಲು ಬ್ರಹ್ಮನಗರ ಮತ್ತು ಭೇಂಡೆ ಖುರ್ದ್ ನಲ್ಲಿನ ಪ್ರಸ್ತುತ ಪಂಚಾಯತ್‌ಗಳು ಸೇರಿವೆ, ಅವು ಪ್ರಕಟಣೆಯ ಸಮಯದಲ್ಲಿ ಬಹಳಷ್ಟು ಸಕ್ರಿಯವಾಗಿದ್ದವು.[೩]
ಪ್ರಶಸ್ತಿಗಳು
[ಬದಲಾಯಿಸಿ]- 2008ರಹಾಚ್‌ಸ್ಟಾಡ್ ಪ್ರಶಸ್ತಿ ಈ ಪುಸ್ತಕಕ್ಕೆ ದೊರಕಿರುತ್ತದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ Gender and Governance in Rural Services: Insights from India, Ghana and Ethiopia, World Bank report, 2009.
- ↑ "Book Review: And Who Will Make the Chapatis?". Newsline (in ಇಂಗ್ಲಿಷ್). Retrieved 2022-03-16.
- ↑ From a book review by Alaka Basu, South Asian Studies professor at Cornell University.
- ↑ "Hochstadt award". Archived from the original on 2009-06-21. Retrieved 2010-04-02.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Open Library record for the book