ಆಂಜೂನ ಚಾರ್ಲ್ಸ್ I
ಗೋಚರ

ಆಂಜೂನ ಚಾರ್ಲ್ಸ್ I 1265-85ರಲ್ಲಿ ನೇಪಲ್ಸ್ ಮತ್ತು ಸಿಸಿಲಿಗಳ ದೊರೆಯಾಗಿದ್ದ. ಈತ ಫ್ರಾನ್ಸಿನ 8ನೆಯ ಲೂಯಿಯ ಮಗ; 9ನೆಯ ಲೂಯಿಯ ತಮ್ಮ. ಜನನ 1226ರಲ್ಲಿ. ಅಂಜುವಿನ ಕೌಂಟ್ ಆಗಿದ್ದ ಈತ 1248ರಲ್ಲಿ ತನ್ನ ಸೋದರನ ಜೊತೆ ಧರ್ಮಸಂಬಂಧಿ ಯುದ್ಧದಲ್ಲಿ ಭಾಗವಹಿಸಿ ಈಜಿಪ್ಟಿಗೆ ಹೋಗಿದ್ದ. ಅಲ್ಲಿ ಅಣ್ಣನೊಂದಿಗೆ ಇವನೂ ಬಂಧನಕ್ಕೊಳಗಾದ.[೧][೨] ಬಿಡುಗಡೆ ಹೊಂದಿದ ಮೇಲೆ 1257ರಲ್ಲಿ ಮರ್ಸಾಯನ್ನು ಗೆದ್ದಾಗ ಇವನಿಗೆ ಖ್ಯಾತಿ ಬಂತು. ಪೋಪ್ 4ನೆಯ ಕ್ಲೆಮೆಂಟನ ಆಮಂತ್ರಣದಂತೆ ಈತ ನೇಪಲ್ಸಿನ ಮೇಲೆ ದಂಡೆತ್ತಿ ಹೋಗಿ, ಹಾಹೆನ್‌ಸ್ಟಾಫೆನ್ ಮನೆತನದ ರಾಜರನ್ನು ಸೋಲಿಸಿ 1265ರಲ್ಲಿ ನೇಪಲ್ಸಿನ ದೊರೆಯಾದ. ಪೋಪನ ವಿಶ್ವಾಸ ಗಳಿಸಿದ್ದ ಯೂರೋಪಿನ ಆಗಿನ ಪ್ರಭಾವಿ ಅರಸರಲ್ಲಿ ಈತನೂ ಒಬ್ಬ. ಆದರೆ ಈತ ಕ್ರೂರಿ. 1282ರಲ್ಲಿ ಸಿಸಿಲಿಯಲ್ಲಿ ಬಂಡಾಯವಾಯಿತು;[೩][೪][೫] ಅದನ್ನು ಹತ್ತಿಕ್ಕುವ ಮೊದಲೇ ಈತ ತೀರಿಕೊಂಡ. ನೇಪಲ್ಸಿನಿಂದ ಸಿಸಿಲಿ ದೀರ್ಘಕಾಲ ಪ್ರತ್ಯೇಕವಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Dunbabin 1998, p. 194.
- ↑ Lock 2006, p. 108.
- ↑ Lock 2006, p. 120.
- ↑ Dunbabin 1998, p. 107.
- ↑ Runciman 1958, pp. 214–215.
ಗ್ರಂಥಸೂಚಿ
[ಬದಲಾಯಿಸಿ]- Dunbabin, Jean (1998). Charles I of Anjou: Power, Kingship and State-Making in Thirteenth-Century Europe. Bloomsbury. ISBN 978-1-13816-162-7.
- Lock, Peter (2006). The Routledge Companion to the Crusades. Routledge. ISBN 978-0-415-39312-6.
- Runciman, Steven (1958). The Sicilian Vespers: A History of the Mediterranean World in the Later Thirteenth Century. Cambridge University Press. ISBN 978-1-107-60474-2.
{{cite book}}: ISBN / Date incompatibility (help)

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: