ವಿಷಯಕ್ಕೆ ಹೋಗು

ಆಂಗ್ರೀ ಇಂಡಿಯನ್ ಗೊಡ್ಡೆಸ್ಸೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಗ್ರೀ ಇಂಡಿಯನ್ ಗೊಡ್ಡೆಸ್ಸೆಸ್
ನಿರ್ದೇಶನಪಾನ್ ನಲಿನ್
ನಿರ್ಮಾಪಕಗೌರವ್ ಧಿಂಗ್ರಾ
ಪಾನ್ ನಲಿನ್
ಲೇಖಕಪಾನ್ ನಲಿನ್, ಸುಭದ್ರಾ ಮಹಾಜನ್, ಅರ್ಸಲಾ ಖುರೇಶಿ
ಚಿತ್ರಕಥೆಪಾನ್ ನಲಿನ್
ಕಥೆಪಾನ್ ನಲಿನ್
ಪಾತ್ರವರ್ಗ
  • ಸಂಧ್ಯಾ ಮೃದುಲ್
  • ತನಿಷ್ಠ ಚಟರ್ಜಿ
  • ಸಾರಾ-ಜೇನ್ ಡಯಾಸ್
  • ಅನುಷ್ಕಾ ಮಂಚಂದಾ
  • ಅಮೃತ್ ಮಘೇರಾ
  • ರಾಜಶ್ರೀ ದೇಶಪಾಂಡೆ
ಛಾಯಾಗ್ರಹಣಸ್ವಪ್ನಿಲ್ ಎಸ್ ಸೋನವಾನೆ
ಸಂಕಲನಶ್ರೇಯಸ್ ಬೆಳ್ತಂಗಡಿ
ಬಿಡುಗಡೆಯಾಗಿದ್ದು
  • 18 September 2015 (2015-09-18) (2015 ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ)
  • Error: All values must be integers (help) (27)
  • Error: All values must be integers (help)
ಅವಧಿ115 ನಿಮಿಷಗಳು
ದೇಶಭಾರತ
ಭಾಷೆಹಿಂದಿ

ಆಂಗ್ರೀ ಇಂಡಿಯನ್ ಗೊಡ್ಡೆಸ್ಸೆಸ್ (Angry Indian Goddesses)

ಇದು 2015 ರ ಭಾರತೀಯ ಹಿಂದಿ ಭಾಷೆಯ ನಾಟಕ ಚಲನಚಿತ್ರವಾಗಿದ್ದು, ಪಾನ್ ನಳಿನ್ ನಿರ್ದೇಶಿಸಿದ್ದಾರೆ ಮತ್ತು ಜಂಗಲ್ ಬುಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಗೌರವ್ ಧಿಂಗ್ರಾ ಮತ್ತು ಪಾನ್ ನಳಿನ್ ನಿರ್ಮಿಸಿದ್ದಾರೆ. ಆದಿಲ್ ಹುಸೇನ್ ಅವರೊಂದಿಗೆ ಸಂಧ್ಯಾ ಮೃದುಲ್, ತನಿಷ್ಠ ಚಟರ್ಜಿ, ಸಾರಾ-ಜೇನ್ ಡಯಾಸ್, ಅನುಷ್ಕಾ ಮಂಚಂದಾ, ಅಮೃತ್ ಮಘೇರಾ, ರಾಜಶ್ರೀ ದೇಶಪಾಂಡೆ ಮತ್ತು ಪಾವ್ಲೀನ್ ಗುಜ್ರಾಲ್ ನಟಿಸಿದ್ದಾರೆ. ಇದು 2015 ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಸ್ತುತಿಗಳ ವಿಭಾಗದಲ್ಲಿ ಪ್ರದರ್ಶಿಸಲ್ಪಟ್ಟಿತು, ಅಲ್ಲಿ ಇದು ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳಲ್ಲಿ ಎರಡನೇ ಸ್ಥಾನವನ್ನು ಪಡೆಯಿತು.[][][]

ಕಥಾವಸ್ತು

[ಬದಲಾಯಿಸಿ]

ಫ್ರೀಡಾ ಫ್ಯಾಷನ್ ಛಾಯಾಗ್ರಾಹಕರಾಗಿದ್ದು, ತನ್ನ ಮದುವೆಯನ್ನು ಘೋಷಿಸಲು ಸ್ನೇಹಿತರ ಗುಂಪನ್ನು ತನ್ನ ಕುಟುಂಬದ ಮನೆಗೆ ಆಹ್ವಾನಿಸುತ್ತಾಳೆ. ಈ ಗುಂಪಿನಲ್ಲಿ ಬಾಲಿವುಡ್ ಗಾಯಕಿ ಮಧುರಿತಾ ಅಥವಾ ಮ್ಯಾಡ್, ಪಮೇಲಾ ಜಸ್ವಾಲ್ ಅಥವಾ ಪಮ್ಮಿ, ಉದ್ಯಮಿ ಸುರಂಜನಾ ಅಥವಾ ಸು ಮತ್ತು ಮಹತ್ವಾಕಾಂಕ್ಷೆಯ ನಟಿ ಜೊವಾನ್ನಾ ಅಥವಾ ಜೋ ಇರುತ್ತಾರೆ. ನರ್ಗಿಸ್ ಎಂಬ ಕಾರ್ಯಕರ್ತೆ ನಂತರ ಇವರ ಗುಂಪಿಗೆ ಸೇರುತ್ತಾರೆ. ಈ ಮದುವೆಯ ಪ್ರಕಟಣೆಯು ಪ್ರತಿಕ್ರಿಯೆಗಳ ಸರಪಳಿಯನ್ನು ಉಂಟು ಮಾಡುತ್ತದೆ, ಎಲ್ಲಾ ಹುಡುಗಿಯರಿಂದ ಗುಪ್ತವಾಗಿದ್ದ ರಹಸ್ಯಗಳನ್ನು ಹೊರಹಾಕುತ್ತದೆ. ತನ್ನ ತಂದೆ ಮದುವೆಗೆ ತನ್ನೊಂದಿಗೆ ಸೇರುವುದಿಲ್ಲ ಎಂದು ಫ್ರೀಡಾ ವಿವರಿಸುತ್ತಾಳೆ, ಮತ್ತು ಅವಳನ್ನು ಹುಡುಕಿಕೊಂಡು ಬರುವ ಮ್ಯಾಡ್ ನ ಗೆಳೆಯ, ಅವಳು ಖಿನ್ನತೆ ಮತ್ತು ಆತ್ಮಹತ್ಯೆ ಮಾಡುವ ಯೋಚನೆಯಲ್ಲಿ ಇದ್ದಾಳೆ ಎಂದು ವಿವರಿಸುತ್ತಾನೆ. ಪ್ರಕಟಣೆಯ ನಂತರ, ಭಾರತದಾದ್ಯಂತದ ಹುಡುಗಿಯರು ಗೋವಾಕ್ಕೆ ಬರುತ್ತಾರೆ. ಹೀಗೆ ಪೂರ್ವನಿಯೋಜಿತ ಬ್ಯಾಚುಲರ್ ಪಾರ್ಟಿ ಪ್ರಾರಂಭವಾಗುತ್ತದೆ, ಮತ್ತು ಹುಡುಗಿಯರು ತಮ್ಮತಮ್ಮಲ್ಲಿ ಬೆರೆಯಲು ಪ್ರಾರಂಭಿಸುತ್ತಾರೆ.

ರಾತ್ರಿಯ ಸಂಭ್ರಮಾಚರಣೆಗೆ ಎಲ್ಲವೂ ಸಿದ್ಧವಾಗಿರುತ್ತದೆ. ಆದರೆ ಒಂದೇ ಒಂದು ಸಮಸ್ಯೆ ಇದೆ: ಫ್ರೀಡಾ ತನ್ನ ಮದುವೆ ಆಗುವ ಹುಡುಗ ಯಾರೆಂದು ಹೇಳುವುದಿಲ್ಲ. ಅವರು ಸಂಭ್ರಮಾಚರಣೆಯ ಮೂಲಕ ತಮ್ಮ ದಾರಿಯನ್ನು ತಮಾಷೆ ಮಾಡುವಾಗ, ಅವರ ಸಂಭಾಷಣೆಯು ಸಂಪೂರ್ಣವಾಗಿ ನಟರ ನಡುವಿನ ಲೈಂಗಿಕತೆ, ಬೀದಿ ಕಿರುಕುಳದಿಂದ ಹಿಡಿದು ಪಕ್ಕದ ಮನೆಯ ಕಟ್ಟು ಮಸ್ತಾದ ಸುಂದರ ಹುಡುಗನವರೆಗೆ ಎಲ್ಲವನ್ನೂ ಒಳಗೊಂಡಿದೆ.

ಪ್ರವಾಸದ ಸಮಯದಲ್ಲಿ ಕೂಡಾ, ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತದೆ ಮತ್ತು ಅವರು ಅದನ್ನು ಧೈರ್ಯದಿಂದ ಪ್ರತಿಕ್ರಿಯಿಸುತ್ತಾರೆ. ಅವರಿಗೆ ಕಿರುಕುಳ ನೀಡುವವರು ಕೋಪಗೊಳ್ಳುತ್ತಾರೆ ಮತ್ತು ಅವರು ಹೆದರುತ್ತಾರೆ. ರಜಾದಿನಗಳ ಪ್ರವಾಸ ಮುಂದುವರೆದಂತೆ, ಮಹಿಳೆಯರ ಕನಸುಗಳು, ಆಸೆಗಳು, ಭಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪರಸ್ಪರರೊಂದಿಗಿನ ಅವರ ಅಚಲ ಬಂಧದ ಬಗ್ಗೆ ಅವರು ಪರಿಚಿತರಾಗುತ್ತೇವೆ.

ನಂತರ, ಫ್ರೀಡಾ ನರ್ಗಿಸ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಮಹಿಳೆಯರು ತಿಳಿದುಕೊಳ್ಳುತ್ತಾರೆ (ಇದು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ 6 ಸೆಪ್ಟೆಂಬರ್ 2018 ರವರೆಗೆ ಕಾನೂನುಬಾಹಿರವಾಗಿತ್ತು). ಮದುವೆಯ ಹಿಂದಿನ ರಾತ್ರಿ, ಗುಂಪು ಬೀಚ್ ನಲ್ಲಿ ಪಿಕ್ನಿಕ್ ಮಾಡಲು ನಿರ್ಧರಿಸುತ್ತದೆ. ಪಿಕ್ನಿಕ್ ನಲ್ಲಿ, ಜೋ ಮತ್ತು ಗುಂಪಿನ ಉಳಿದವರ ನಡುವೆ ಅವಳ ಉಚ್ಚಾರಣೆಗೆ ಸಂಬಂಧಿಸಿದಂತೆ ಜೋರಾದ ವಾಗ್ವಾದವು ಜೋ ಗುಂಪಿನಿಂದ ಹೊರನಡೆಯಲು ಕಾರಣವಾಗುತ್ತದೆ, ಆದರೆ ಪಾರ್ಟಿ ತಡರಾತ್ರಿಯವರೆಗೂ ಮುಂದುವರಿಯುತ್ತದೆ. ಅವರು ಮನೆಗೆ ಹೋಗಲು ನಿರ್ಧರಿಸಿದಾಗ, ಅವರು ಜೋ ವನ್ನು ಹುಡುಕುತ್ತಾರೆ. ಆಗ ಅವಳು ಕಡಲತೀರದಲ್ಲಿ ಶವವಾಗಿ ಪತ್ತೆಯಾಗುತ್ತಾಳೆ, ಸ್ಪಷ್ಟವಾಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂಬುದು ಅರ್ಥವಾಗುತ್ತದೆ. ಆಂಬ್ಯುಲೆನ್ಸ್ ನಲ್ಲಿ ಬಂದ ವೈದ್ಯರು, ಅವಳು ಈಗಾಗಲೇ ಸತ್ತಿರುವುದರಿಂದ ಪೊಲೀಸರು ಬರುವ ಮೊದಲೇ ಅವಳ ಶವ ತೆಗೆಯಲು ನಿರಾಕರಿಸುತ್ತಾರೆ. ಪೊಲೀಸರು ಶೀಘ್ರದಲ್ಲೇ ಆಗಮಿಸುತ್ತಾರೆ ಮತ್ತು ಉಸ್ತುವಾರಿ ಪೊಲೀಸ್ ಅಧಿಕಾರಿ ತನ್ನ ಪ್ರಾಥಮಿಕ ವಿಚಾರಣೆಗಳನ್ನು ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ನಡೆಸುತ್ತಾನೆ, ಮಹಿಳೆಯರನ್ನು ಕೀಳಾಗಿ ಕಾಣುವ ಪಿತೃಪ್ರಧಾನ ಸಮಾಜದಲ್ಲಿ ಅವರ ನಂಬಿಕೆಯ ಕೊರತೆಯನ್ನು ಪುನರುಚ್ಚರಿಸುತ್ತಾನೆ. ಅವರು ವಿಚಲಿತರಾಗಿ ಮತ್ತು ನಿರಾಶೆಯಿಂದ ಮನೆಗೆ ಮರಳುತ್ತಾರೆ. ಸು ನ ಮಗಳು ಮಾಯಾ ಪಾರ್ಟಿಯಿಂದ ಹೊರಟಾಗ ಜೋ ಅವರನ್ನು ಹಿಂಬಾಲಿಸಿದ್ದರು ಮತ್ತು ನಂತರ ಅವರ ಫೋಟೋಗಳನ್ನು ತೆಗೆದುಕೊಂಡಿದ್ದರು. ಈ ಹಿಂದೆ ಸ್ನೇಹಿತರಿಗೆ ಕಿರುಕುಳ ನೀಡಿದ ಆರು ಜನರ ಗುಂಪು ಜೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದಿದೆ ಎಂದು ಚಿತ್ರಗಳು ಬಹಿರಂಗಪಡಿಸುತ್ತವೆ. ಸು ಬಂದೂಕಿನಿಂದ ಬೀಚ್ ಗೆ ಹಿಂತಿರುಗುತ್ತಾಳೆ. ಗುಂಪಿನ ಉಳಿದವರು ಅವಳನ್ನು ಬೆನ್ನಟ್ಟುತ್ತಾರೆ. ನರ್ಗಿಸ್ ಅವಳನ್ನು ತಡೆಯುವ ಮೊದಲು ಸು ನಾಲ್ಕು ಮಂದಿ ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲುತ್ತಾಳೆ, ಮ್ಯಾಡ್ ಬಂದೂಕನ್ನು ತೆಗೆದುಕೊಂಡು ಉಳಿದ ಇಬ್ಬರನ್ನು ಕೊಲ್ಲುತ್ತಾಳೆ. ಜೋ ಅವರ ಅಂತ್ಯಕ್ರಿಯೆಯಲ್ಲಿ, ಗುಂಪು ಭಾವನಾತ್ಮಕ ಭಾಷಣಗಳ ಸರಣಿಯನ್ನು ಮಾಡುತ್ತದೆ, ನರ್ಗಿಸ್ ಅವರ ಭಾಷಣವು ಮಹಿಳೆಯ ಮೌಲ್ಯವನ್ನು ಸಂಕ್ಷಿಪ್ತಗೊಳಿಸುತ್ತದೆ ಮತ್ತು ಮಹಿಳೆಯರ ಮುಂದಿನ ಜನ್ಮದಲ್ಲಿ, ಅವರು ತಮ್ಮದೇ ಆದ ಕಥೆಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತಾರೆ. ಪೊಲೀಸ್ ಅಧಿಕಾರಿ ಸಮಾರಂಭಕ್ಕೆ ಅಡ್ಡಿಪಡಿಸಿ, ಮಹಿಳೆಯರಿಗೆ ಎದ್ದು ನಿಂತು ತಪ್ಪೊಪ್ಪಿಗೆಯನ್ನು ಕೊಡಿ ಎಂದು ಕೇಳುತ್ತಾನೆ. ಈ ಕಥೆಯು ಮುಕ್ತವಾದ ಮುಕ್ತಾಯವನ್ನು ಹೊಂದಿದೆ, ಚರ್ಚ್ ನ ಇಡೀ ಸಭೆ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ.

ಪಾತ್ರ ಪರಿಚಯ

[ಬದಲಾಯಿಸಿ]
  • ಫ್ಯಾಷನ್ ಛಾಯಾಗ್ರಾಹಕ ಮತ್ತು ವಧುವಾದ ಫ್ರೀಡಾ ಡಿ ಸಿಲ್ವಾ ಪಾತ್ರದಲ್ಲಿ ಸಾರಾ-ಜೇನ್ ಡಯಾಸ್.
  • ನರ್ಗಿಸ್ ನಸ್ರೀನ್ ಪಾತ್ರದಲ್ಲಿ ತನಿಷ್ಠ ಚಟರ್ಜಿ, ಸು ಅವರೊಂದಿಗೆ ವಿರೋಧಿಯಾಗಿರುವ ಕ್ರಾಂತಿಕಾರಿ
  • ಬಾಲಿವುಡ್ ಗಾಯಕಿ ಮತ್ತು ಫ್ರೀಡಾ ಅವರ ಸ್ನೇಹಿತೆ ಮಧುರಿತಾ ಅಕಾ "ಮ್ಯಾಡ್" ಪಾತ್ರದಲ್ಲಿ ಅನುಷ್ಕಾ ಮಂಚಂದಾ
  • ಉದ್ಯಮಿ ಮತ್ತು 6 ವರ್ಷದ ಮಾಯಾ ಅವರ ತಾಯಿ ಸುರಂಜನಾ ಅಲಿಯಾಸ್ "ಸು" ಪಾತ್ರದಲ್ಲಿ ಸಂಧ್ಯಾ ಮೃದುಲ್
  • ಜೊವಾನ್ನಾ ಮೆಂಡೆಸ್ ಅಕಾ "ಜೋ" ಪಾತ್ರದಲ್ಲಿ ಅಮೃತ್ ಮಘೇರಾ, ಮಹತ್ವಾಕಾಂಕ್ಷೆಯ ನಟಿ ಮತ್ತು ಫ್ರೀಡಾ ಅವರ ಸೋದರಸಂಬಂಧಿ
  • ಲಕ್ಷ್ಮಿಯಾಗಿ ರಾಜಶ್ರೀ ದೇಶಪಾಂಡೆ, ಫ್ರೀಡಾ ಮನೆಕೆಲಸದಾಳು
  • ಪಮೇಲಾ ಜೈಸ್ವಾಲ್ ಅಲಿಯಾಸ್ 'ಪಮ್ಮಿ' ಪಾತ್ರದಲ್ಲಿ ಪಾವ್ಲೀನ್ ಗುಜ್ರಾಲ್, ಚಿನ್ನದ ಪದಕ ವಿಜೇತೆ ಗೃಹಿಣಿಯಾಗಿ ಮಾರ್ಪಟ್ಟಿದ್ದಾರೆ
  • ಜೈನ್ ಪಾತ್ರದಲ್ಲಿ ಅರ್ಜುನ್ ಮಾಥುರ್, ಮಧುರಿತಾ ಗೆಳೆಯ
  • ಗೋವಾ ಪೊಲೀಸ್ ಅಧೀಕ್ಷಕರಾಗಿ ಆದಿಲ್ ಹುಸೇನ್
  • ಕ್ರಿಸ್ ಪಾತ್ರದಲ್ಲಿ ಜೆಫ್ರಿ ಗೋಲ್ಡ್ ಬರ್ಗ್
  • ಏಜೆಂಟ್ ಆಗಿ ವಿಕ್ರಮ್ ಕೊಚ್ಚರ್
  • ನೆರೆಹೊರೆಯವರಾಗಿ ಅನುಜ್ ಚೌಧರಿ.
  • ಟೋನಿ ಪಾತ್ರದಲ್ಲಿ ರಾಜೇಶ್ ಕರೇಕರ್
  • ವೈದ್ಯರಾಗಿ ಡಾ.ಸ್ವಪ್ನಿಲ್ ಸಾಲ್ಕರ್
  • ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕುನಾಲ್ ಶಿಂಧೆ.

ಸಂಗೀತ-ಸಾಹಿತ್ಯ

[ಬದಲಾಯಿಸಿ]

ಚಿತ್ರದ ಸಂಗೀತವನ್ನು ಸಿರಿಲ್ ಮೋರಿನ್ ಸಂಯೋಜಿಸಿದ್ದಾರೆ ಮತ್ತು ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಿಸಿದೆ. ಹಾಡಿನ ಸಾಹಿತ್ಯವನ್ನು ರಮಣ್ ನೇಗಿ, ಅನುಷ್ಕಾ ಮಂಚಂದಾ ಮತ್ತು ಡಾ.ಸ್ವಪ್ನಿಲ್ ಸಾಲ್ಕರ್ ಬರೆದಿದ್ದಾರೆ.

ಸಂ.ಹಾಡುसंगीतकारಗಾಯಕ(ರು)ಸಮಯ
1."ದಿಲ್ ಡೋಲಾ ರೆ"ಪ್ರತಿಚಿ ಮೊಹಾಪಾತ್ರಪ್ರತಿಚಿ ಮೊಹಾಪಾತ್ರ3:28
2."ಆವೋಗೆ ತುಮ್ ಕಭಿ"ದಿ ಲೋಕಲ್ ಟ್ರನ್ರಾಮನ್ ನೆಗಿ5:13
3."ಝಿಂದಗಿ"ಅನುಷ್ಕಾ ಮಂಚಂದಾಅನುಷ್ಕಾ ಮಂಚಂದಾ4:20
4."ಟಿಂಕೊ ಕೆ ಸಹಾರೆ"ಕರಿ ಅರೋರಾಕರಿ ಅರೋರಾ3:47
5."ದಿಲ್ ಡೋಲಾ ರೆ (ರಿಮಿಕ್ಸ್)"ಪ್ರತಿಚಿ ಮೊಹಾಪಾತ್ರಪ್ರತಿಚಿ ಮೊಹಾಪಾತ್ರ3:45
ಒಟ್ಟು ಸಮಯ:20:53

ಶೀರ್ಷಿಕೆ ಅನುಕ್ರಮ

[ಬದಲಾಯಿಸಿ]

ಚಿತ್ರದ ಆರಂಭಿಕ ಶೀರ್ಷಿಕೆ ಅನುಕ್ರಮವನ್ನು ಮುಂಬೈ ಮೂಲದ ವಿಎಫ್ಎಕ್ಸ್ ಮತ್ತು ಅನಿಮೇಷನ್ ಸ್ಟುಡಿಯೋ ಪ್ಲೆಕ್ಸಸ್ ವಿನ್ಯಾಸಗೊಳಿಸಿದೆ. ಶೀರ್ಷಿಕೆ ಅನುಕ್ರಮವನ್ನು Artofthetitle.com ೨೦೧೫ ರ ಅಗ್ರ ಹತ್ತು ಶೀರ್ಷಿಕೆ ಅನುಕ್ರಮಗಳಲ್ಲಿ ಒಂದಾಗಿದೆ ಎಂದು ಹೆಸರಿಸಿದೆ.[] ಸ್ಟುಡಿಯೋದ ಸ್ಥಾಪಕರು ಮತ್ತು ಮೋಷನ್ ಗ್ರಾಫಿಕ್ಸ್ ಕಲಾವಿದರಾದ ವಿಜೇಶ್ ರಾಜನ್ ಮತ್ತು ಯಶೋದಾ ಪಾರ್ಥಸಾರಥಿ ಅವರನ್ನು Artofthetitle.com ಸಿಬ್ಬಂದಿ ಶೀರ್ಷಿಕೆ ಅನುಕ್ರಮವನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಯ ಬಗ್ಗೆ ಸಂದರ್ಶಿಸಿದರು.[] ಭಾರತೀಯ ಬಿಡುಗಡೆಗಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಶೀರ್ಷಿಕೆ ಅನುಕ್ರಮವನ್ನು ಸೆನ್ಸಾರ್ ಮಾಡಲು ಮತ್ತು ಸಂಪೂರ್ಣವಾಗಿ ಮಸುಕಾಗಿಸಲು ಕೇಳಿಕೊಂಡಿತು.[][]

ಬಿಡುಗಡೆ

[ಬದಲಾಯಿಸಿ]

ಈ ಚಿತ್ರವು ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಯಿತು: ಅಂತರರಾಷ್ಟ್ರೀಯ ಆವೃತ್ತಿ ಮತ್ತು ಭಾರತೀಯ ಆವೃತ್ತಿ. ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶಿಸಲಾದ ಅಂತರರಾಷ್ಟ್ರೀಯ ಆವೃತ್ತಿಯು ಸೆನ್ಸಾರ್ ಆಗಿಲ್ಲ ಮತ್ತು ಭಾರತೀಯ ಆವೃತ್ತಿಯಂತೆ ಮಧ್ಯಂತರವನ್ನು ಹೊಂದಿಲ್ಲ.[]

ಅನಿಸಿಕೆಗಳು

[ಬದಲಾಯಿಸಿ]

ವಿಮರ್ಶೆ ಅಗ್ರಿಗೇಟರ್ ವೆಬ್ಸೈಟ್ ರಾಟನ್ ಟೊಮ್ಯಾಟೋಸ್ ನಲ್ಲಿ, ಈ ಚಲನಚಿತ್ರವು 18 ವಿಮರ್ಶಕರ ಆಧಾರದ ಮೇಲೆ 61% ಅನುಮೋದನೆ ರೇಟಿಂಗ್ ಅನ್ನು ಹೊಂದಿದೆ, ಸರಾಸರಿ ರೇಟಿಂಗ್ 5.9/10 ಆಗಿದೆ.[]

'ದಿ ಹಿಂದೂ'ದ ನಮ್ರತಾ ಜೋಶಿಯವರು ಹೀಗೆ ಬರೆದಿದ್ದಾರೆ: "ಪಾವ್ಲೀನ್ ಗುಜ್ರಾಲ್" ಒಂದು ಪ್ರಕಟನೆಯಾಗಿದೆ ಮತ್ತು ಸಾರಾ-ಜೇನ್ ಡಯಾಸ್ ಪ್ರಶಂಸನೀಯ ಸಮತೋಲನವನ್ನು ತೋರಿಸುತ್ತದೆ".[೧೦]

'ದಿ ಹಿಂದೂ'ದ ನಮ್ರತಾ ಜೋಶಿಯವರು ಹೀಗೆ ಬರೆದಿದ್ದಾರೆ: "ಪಾವ್ಲೀನ್ ಗುಜ್ರಾಲ್ ಒಂದು ಪ್ರಕಟನೆಯಾಗಿದೆ ಮತ್ತು ಸಾರಾ-ಜೇನ್ ಡಯಾಸ್ ಪ್ರಶಂಸನೀಯ ಸಮತೋಲನವನ್ನು ತೋರಿಸುತ್ತದೆ".[೧೧]

ಹಿಂದೂಸ್ತಾನ್ ಟೈಮ್ಸ್ನ ಶ್ವೇತಾ ಕೌಶಲ್ ಅವರ ಅಭಿಪ್ರಾಯವೇ ಬೇರೆ, "ಅಂತಿಮವಾಗಿ, ಆಂಗ್ರೀ ಇಂಡಿಯನ್ ಗೊಡ್ಡೆಸ್ಸೆಸ್ ಮೋಜು ಇರುವವರೆಗೆ ಯೋಗ್ಯವಾದ ವೀಕ್ಷಣೆಯಾಗಿದೆ ಆದರೆ 'ಕೋಪ' ಪ್ರಾರಂಭವಾಗುತ್ತಿದ್ದಂತೆ ವೇಗವನ್ನು ಹೆಚ್ಚಿಸುತ್ತಾ ಕೆಳಗಿಳಿಯತ್ತದೆ" ಎಂದು ಅವರು ಹೇಳುತ್ತಾರೆ.[೧೨]

ಪಶ್ಚಿಮದಲ್ಲಿ ಈ ಚಿತ್ರವು ವಿಮರ್ಶಕರಿಂದ ಕಳಪೆಯಾಗಿ ಸ್ವೀಕರಿಸಲ್ಪಟ್ಟಿತು. "ವೆರೈಟಿ (ನಿಯತಕಾಲಿಕ) ಜೇ ವೈಸ್ಬರ್ಗ್ ಅವರು ನಿರ್ದೇಶಕರನ್ನು ಪಾನ್ ನಳಿನ್ "ಕ್ಷಣಾರ್ಧದ ಭಾರವಾದ ವಿಷಯಗಳೊಂದಿಗೆ ಓವರ್ಲೋಡ್ ಮಾಡಿದ್ದಕ್ಕಾಗಿ ಅದನ್ನು ಡಜನ್ಗಟ್ಟಲೆ ತುಂಡುಗಳಾಗಿ ವಿಭಜಿಸಿದ್ದಾರೆ" ಎಂದು ಟೀಕಿಸಿದರು.[೧೩]

ದಿ ಹಾಲಿವುಡ್ ರಿಪೋರ್ಟರ್ ನ ಜಸ್ಟಿನ್ ಲೋವೆ ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದರು, "ವಿವಿಧ ತಾರತಮ್ಯದ ಸಂದರ್ಭಗಳಿಗೆ ಮಹಿಳೆಯರ ಪ್ರತಿಕ್ರಿಯೆಗಳ ಮೇಲೆ ಚಲನಚಿತ್ರದ ಒತ್ತು ಚೆಕ್ ಲಿಸ್ಟ್ ವಿಧಾನವನ್ನು ಹೋಲಲು ಪ್ರಾರಂಭಿಸುತ್ತದೆ, ಇದು ವೃತ್ತಿಜೀವನದ ಸವಾಲುಗಳು, ವಿವಾಹದ ಸಂದಿಗ್ಧತೆಗಳು ಮತ್ತು ವೈಯಕ್ತಿಕ ಸಂಬಂಧಗಳನ್ನು ಒಳಗೊಂಡಿರುವ ಸಂದರ್ಭಗಳನ್ನು ಸೂಚಿಸುತ್ತದೆ" ಎಂದು ಅವರು ಬರೆದಿದ್ದಾರೆ.[೧೪]

ಆದಾಗ್ಯೂ, ಚಿತ್ರಕ್ಕೆ 4 ಸ್ಟಾರ್ ಗಳಲ್ಲಿ 2.5 ಅಂಕಗಳನ್ನು ನೀಡಿದ ಟೊರೊಂಟೊ ಸ್ಟಾರ್ ನ ಲಿಂಡಾ ಬರ್ನಾರ್ಡ್, ನಟಿಯರನ್ನು "ಪ್ರೇಕ್ಷಕರನ್ನು ಮೆಚ್ಚಿಸುವವರು" ಎಂದು ಕರೆದಿದ್ದಾರೆ.[೧೫]

"ಸಂಗೀತ, ಹಾಸ್ಯ ಮತ್ತು ದುರಂತವನ್ನು ಒಳಗೊಂಡ ಮಹಾಕಾವ್ಯಗಳಿಗೆ ಒಗ್ಗಿಕೊಂಡಿರುವ ಭಾರತೀಯ ಚಿತ್ರರಂಗವು ವಿಶಾಲವಾದ ಸಂವೇದನೆಯನ್ನು ಹೊಂದಿರುವುದರಿಂದ ಮತ್ತು ಭಾಗಶಃ ಚಿತ್ರಕಥೆಯು ಅದರ ಎಲ್ಲಾ ಸೂರ್ಯಬೆಳಕು ಮತ್ತು ಭಾವನೆಗಳ ಹೊರತಾಗಿಯೂ, ಅದರ ಆಶ್ಚರ್ಯಕರ ತೀರ್ಮಾನಕ್ಕೆ ಬಂದಿದೆ" ಎಂದು ಬರೆಯಲು ಹಿಂಜರಿಯದ ಕೇಟ್ ಟೇಲರ್ ಕೂಡ ಈ ಚಿತ್ರವನ್ನು ಆನಂದಿಸಿದ್ದರು.[೧೬]

ಉಲ್ಲೇಖಗಳು

[ಬದಲಾಯಿಸಿ]
  1. Punter, Jennie (18 ಆಗಸ್ಟ್ 2015). "Sandra Bullock's 'Our Brand Is Crisis,' Robert Redford's 'Truth' to Premiere at Toronto". Variety.
  2. "Toronto International Film Festival Announces 2015 Award Winners" (PDF) (Press release). TIFF. 20 ಸೆಪ್ಟೆಂಬರ್ 2015. Archived from the original (PDF) on 1 ಅಕ್ಟೋಬರ್ 2015. Retrieved 18 ಅಕ್ಟೋಬರ್ 2021.
  3. "'Angry Indian Goddesses' will release in late November". DNA India. 7 ನವೆಂಬರ್ 2015. Retrieved 18 ಅಕ್ಟೋಬರ್ 2021.
  4. Landekic, Lola; Perkins, Will. "Top 10 Title Sequences of 2015". Art Of The Title. Retrieved 18 ಅಕ್ಟೋಬರ್ 2021.
  5. Landekic, Lola; Perkins, Will (12 ಜನವರಿ 2016). "Angry Indian Goddesses". Art of the Title. Retrieved 18 ಅಕ್ಟೋಬರ್ 2021.
  6. "WATCH: Title Sequence of 'Angry Indian Goddesses' Which Censor Board Didn't Want You To See". F.I.G.H.T C.L.U.B. 30 ಡಿಸೆಂಬರ್ 2015. Retrieved 18 ಅಕ್ಟೋಬರ್ 2021.
  7. "Watch video: All the portions of Angry Indian Goddesses that the Censor Board cut out". TheNewsMinute. 8 ಡಿಸೆಂಬರ್ 2015. Retrieved 18 ಅಕ್ಟೋಬರ್ 2021.
  8. "Angry Indian Goddesses (2015)". Plexus. Retrieved 18 ಅಕ್ಟೋಬರ್ 2021.
  9. "Angry Indian Goddesses (2015)". Rotten Tomatoes. Fandango Media. Retrieved 18 ಅಕ್ಟೋಬರ್ 2021.
  10. Joshi, Namrata (6 ಡಿಸೆಂಬರ್ 2015). "Girls' night out". The Hindu. Retrieved 18 ಅಕ್ಟೋಬರ್ 2021.
  11. Basu, Mohar (15 ಡಿಸೆಂಬರ್ 2015). "Angry Indian Goddesses". The Times of India. Retrieved 18 ಅಕ್ಟೋಬರ್ 2021.
  12. Kaushal, Sweta (5 ಡಿಸೆಂಬರ್ 2015). "Angry Indian Goddesses review: Nothing angry about this film". Entertainment. Hindustan Times. New Delhi. Retrieved 18 ಅಕ್ಟೋಬರ್ 2021.
  13. Weissberg, Jay (26 ಅಕ್ಟೋಬರ್ 2015). "Film Review: 'Angry Indian Goddesses'". Variety.
  14. Lowe, Justin (20 ಏಪ್ರಿಲ್ 2016). "'Angry Indian Goddesses': IFFLA Review". The Hollywood Reporter. Retrieved 18 ಅಕ್ಟೋಬರ್ 2021.
  15. Barnard, Linda (25 ಆಗಸ್ಟ್ 2016). "Reel Brief: Mini reviews of Southside With You, A Tale of Love and Darkness, Angry Indian Goddesses, In Order of Disappearance and The Jungle Book (DVD)". Toronto Star. Retrieved 18 ಅಕ್ಟೋಬರ್ 2021.
  16. Taylor, Kate (12 ಆಗಸ್ಟ್ 2016). "Women break the rules in Equity and Angry Indian Goddesses". The Globe and Mail. Retrieved 18 ಅಕ್ಟೋಬರ್ 2021.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Inside Out Audience Award, Feature