ಅಳಿವಿಲ್ಲದ ಸ್ಥಾವರ

ವಿಕಿಪೀಡಿಯ ಇಂದ
Jump to navigation Jump to search

ಸಿ.ಆರ್.ಸತ್ಯ ಅವರ ಅಳಿವಿಲ್ಲದ ಸ್ಥಾವರ ಪುಸ್ತಕದ ಇಂಗ್ಲಿಷ್ ಆವೃತ್ತಿಗೆ ಮುನ್ನುಡಿ ಬರೆಯುತ್ತಾ ಅಬ್ದುಲ್ ಕಲಾಮ್ ಹೀಗೆ ಹೇಳುತ್ತಾರೆ. ಈ ಪುಸ್ತಕದಲ್ಲಿ ಕಾಣುವ ನಿರೂಪಣೆಗೆ ನಾಂದಿಯಾದದ್ದು ಸಿ.ಆರ್.ಸತ್ಯ ಅವರು ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ನೀಡಿದ ಪ್ರಥಮ ಭೇಟಿ. ಆಗ ಅವರ ಮನಸ್ಸು ದೇಗುಲದ ನಿರ್ಮಾಣದಲ್ಲಿ ಉಪಯೋಗಿಸಿದ ಕಲ್ಲುಗಳ ಕಡೆ ವಾಲುತ್ತದೆ. ಈ ಕಲ್ಲುಗಳು ಎಲ್ಲಿಂದ ಬದವು? ಯಾರು ಇವನ್ನು ಇಲ್ಲಿಗೆ ತಂದರು? ಯಾವ ರೀತಿಯಲ್ಲಿ ಅವನ್ನು ಸಾಗಿಸಿದರು? ... ಉತ್ತರಗಳನ್ನು ಪಡೆಯಲು ಸತ್ಯ ಅವರು ಒಂದು ಚಾರಿತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗೇ ಇಳಿಯುತ್ತಾರೆ. ಈ ಕಾರ್ಯಕ್ಕೆ ಅವರ ಅನ್ವೇಷಣೆಯಲ್ಲಿ ಅವರೊಂದಿಗೆ ಸಹಾಯಕ್ಕೆ ನಿಂತವರು: ತಿರುವಾಂಕೂರಿನ ರಾಜರು; ಕೇರಳದ ಅನೇಕ ವಿಜ್ಞಾನಿಗಳು; ವಿದ್ವಾಂಸರು; ಧಾರ್ಮಿಕ ಗುರುಗಳು; ಕಲ್ಲು ಕೆತ್ತನೆಯವರು ... ಹೀಗೆ, ಒಬ್ಬ ಕುತೂಹಲಕಾರಿ ಹಾಗೂ ಸಂಶೋಧನಾ ಮನೋಭಾವವುಳ್ಳ ಎಂಜಿನಿಯರ್ ಇಂತಹ ಕ್ಲಿಷ್ಟವಾದ ವಿಷಯಕ್ಕೆ ಕೈ ಹಾಕಿ ಪೂರ್ಣವಾಗಿ ಸಾಫಲ್ಯತೆ ಹೊಂದಿದ್ದಾರೆ ಎಂಬುದಕ್ಕೆ ಈ ಪುಸ್ತಕವು ಒಂದು ಅತ್ಯುತ್ತಮ ಉದಾಹರಣೆ.... ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪ್ರಾಚೀನ ಶಾಸ್ತ್ರಜ್ಞರು, ವಿದ್ವಾಂಸರು, ಓದಲೇ ಬೇಕಾದ ಪುಸ್ತಕವಿದು.