ಅಲ್ಯೂಷಿಯನ್ ದ್ವೀಪಗಳು
Geography | |
---|---|
Location | ಪೆಸಿಫಿಕ್ ಸಾಗರ, ಬೇರಿಂಗ್ ಸಮುದ್ರ |
Total islands | >300 |
Major islands | ಉನಲಾಸ್ಕ ದ್ವೀಪ |
ವಿಸ್ತೀರ್ಣ | ೬,೮೨೧[೧] sq mi (ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"". km೨) |
ಉದ್ದ | ೧,೨೦೦ mi (೧,೯೦೦ km) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | 10,000 |
Country | |
State | ಅಲಾಸ್ಕ |
Largest city | ಉನಲಾಸ್ಕ (pop. 4,283) |
Demographics | |
Population | 8,163 (as of 2000) |
Ethnic groups | Aleut |
ಅಲ್ಯೂಷಿಯನ್ ದ್ವೀಪಗಳು ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600.
ಭೌಗೋಳಿಕ
[ಬದಲಾಯಿಸಿ]ಪ್ರಮುಖ ದ್ವೀಪ ಸಮೂಹಗಳೆಂದರೆ; ಪಾಕ್ಸ್ ದ್ವೀಪಗಳು, ಫೋರ್ ಮೌಂಟೇನ್ಸ್ ದ್ವೀಪಗಳು, ಆಂಡ್ರಿಯನ್ ಆಫ್ ದ್ವೀಪಗಳು ಮತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು - ಇವು ಜ್ವಾಲಾಮುಖಿ ಕಾರ್ಯದಿಂದ ಆದುವು. ಅನೇಕ ಲುಪ್ತ ಹಾಗೂ ಜ್ವಲಂತ ಜ್ವಾಲಾಮುಖಿಗಳಿವೆ.
ಹವಾಮಾನ
[ಬದಲಾಯಿಸಿ]ಸಾಗರಿಕ ವಾಯುಗುಣವಿದ್ದು ವರ್ಷವೆಲ್ಲ ಮಳೆ ಬೀಳುತ್ತದೆ. ವರ್ಷದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು, ಸರಾಸರಿ 380 ಸೆಂ. ಉಷ್ಣತೆಯಿರುತ್ತದೆ. ಪೈರು ಬೆಳೆಯುವ ಅವಧಿ ಸುಮಾರು 135 ದಿವಸಗಳು.
ವಾಣಿಜ್ಯ
[ಬದಲಾಯಿಸಿ]ಇಲ್ಲಿಯ ನಿತ್ಯಹರಿದ್ವರ್ಣದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ. ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು. ಪ್ರಮುಖ ರೇವು ಹಾಗೂ ವ್ಯಾಪಾರ ಕೇಂದ್ರವಾದ ಯುನಲಾಸ್ಕ ಅತಿ ದೊಡ್ಡ ಪಟ್ಟಣ. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾ ನೆಲೆ ಇದೆ.
ರಾಜಕೀಯ
[ಬದಲಾಯಿಸಿ]ಈ ದ್ವೀಪ ಸ್ತೋಮಗಳನ್ನು ಮೊದಲಿಗೆ ಕಂಡು ಹಿಡಿದವರು. ರಷ್ಯನ್ನರು (1741) ಆ ಮುಂಚೆ ಅಲ್ಲಿ ಮೂಲ ನಿವಾಸಿಗಳಿದ್ದರು. ಈಗ ಅವರ ಸಂತತಿ ನಶಿಸಿದೆ. 1867 ರಲ್ಲಿ ರಷ್ಯ ಈ ದ್ವೀಪಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿತು.
ಉಲ್ಲೇಖಗಳು
[ಬದಲಾಯಿಸಿ]- U.S. Coast Pilot 9, Chapter 7, Aleutian Islands Archived 2015-01-09 ವೇಬ್ಯಾಕ್ ಮೆಷಿನ್ ನಲ್ಲಿ.
- U.S. Geological Survey Geographic Names Information System: ಅಲ್ಯೂಷಿಯನ್ ದ್ವೀಪಗಳು
- Seattle to Aleutian Island Expedition