ವಿಷಯಕ್ಕೆ ಹೋಗು

ಅಲೆಕ್ಸಾಂಡರ್ ಇವಾನೊವಿಚ್ ಕೂಪ್ರಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಕ್ಸಾಂಡರ್ ಇವಾನೊವಿಚ್ ಕೂಪ್ರಿನ್
Kuprin in 1910s
Kuprin in 1910s
ಜನನ7 September [O.S. 26 August] 1870[]
Narovchat, Penza Governorate, Russian Empire[]
ನಿಧನ25 August 1938(1938-08-25) (aged 67)[]
Leningrad, Russian SFSR, Soviet Union[]
ಉದ್ಯೋಗNovelist, short story writer, playwright, journalist
ಪೌರತ್ವರಷ್ಯಾ
ಸಾಹಿತ್ಯ ಚಳವಳಿNaturalism
ಪ್ರಮುಖ ಕೃತಿಗಳುOlesya (1898)
The Duel (1905)
The Garnet Bracelet (1911)
Yama: The Pit (1915)
ಪ್ರಶಸ್ತಿಗಳುPushkin Prize
ಸಂಗಾತಿMaria Karlovna Davydova (1902—1907)
Yelizaveta Geinrikh (1907—1938)
ಮಕ್ಕಳುLidia Kuprina (1903–1924)
Ksenia Kuprina (1908–1981)
ಸಹಿ

ಅಲೆಕ್ಸಾಂಡರ್ ಇವಾನೊವಿಚ್ ಕೂಪ್ರಿನ್ 1870-1938. ರಷ್ಯನ್ ಕಾದಂಬರಿಕಾರ, ಸಣ್ಣ ಕಥೆಗಳಿಗೆ ಹೆಸರಾದವ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಪೆಂಜ ಪ್ರದೇಶದ ನರೋವ್‍ಚಟ್‍ನಲ್ಲಿ ಬಡ ಸರ್ಕಾರಿ ನೌಕರನೊಬ್ಬನ ಕುಟುಂಬದಲ್ಲಿ ಜನಿಸಿದ. ವಿದ್ಯಾಭ್ಯಾಸ ಸೈನಿಕ ಶಾಲೆಗಳಲ್ಲಿ ನಡೆಯಿತು.

ನಾಲ್ಕು ವರ್ಷಗಳ ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ. 1894ರಲ್ಲಿ ಆ ಕೆಲಸಕ್ಕೆ ರಾಜಿನಾಮೆಯಿತ್ತು ನಾಟಕ, ಸರ್ಕಸ್ ಮುಂತಾದ ವಿವಿಧ ಕಾರ್ಯರಂಗಗಳಲ್ಲಿ ಕೆಲಸ ಮಾಡಿ ಕೊನೆಗೆ ಸಾಹಿತ್ಯ ಸೃಷ್ಟಿಗೆ ತೊಡಗಿದ. 1900ರಲ್ಲಿ ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ನಿಂತು ಪತ್ರಿಕೋದ್ಯಮಿಯಾಗಿ ಕೆಲಸ ಮಾಡತೊಡಗಿದ.

ಸಾಹಿತ್ಯ ಸೃಷ್ಟಿ

[ಬದಲಾಯಿಸಿ]

1903ರಲ್ಲಿ ಸಣ್ಣ ಕತೆಗಳ ಸಂಕಲನವೊಂದನ್ನು ಪ್ರಕಟಿಸಿದ. ಅದಾದ ಕೆಲವೇ ಸಮಯದಲ್ಲಿ (1905) ದಿ ಡ್ಯೂಯಲ್ ಎಂಬ ಕಾದಂಬರಿಯನ್ನು ಪ್ರಕಟಿಸಿದ. ಸೈನಿಕ ಜೀವನವನ್ನು ಒಳಗೊಂಡ ಆ ಕಾದಂಬರಿ ಬಹುಬೇಗ ಜನಪ್ರಿಯತೆಗಳಿಸಿತು. 1908 ರಿಂದ 1915ರ ವೇಳೆಗೆ ವೇಶ್ಯಾಜೀವನವನ್ನು ಕುರಿತಂಥ ಯಾಮ ಎಂಬ ಕಾದಂಬರಿಯನ್ನು ಮೂರು ಭಾಗಗಳಲ್ಲಿ ಪ್ರಕಟಿಸಿದ. ಇದು ಪ್ರಪಂಚದ ಹಲವು ಭಾಷೆಗಳಿಗೆ (ಕನ್ನಡದಲ್ಲಿ ಪಾಪಕೂಪ) ಭಾಷಾಂತರಗೊಂಡಿದೆ. 1917ರ ಕ್ರಾಂತಿಯ ಅನಂತರ ಈತ ರಷ್ಯವನ್ನು ಬಿಟ್ಟು ಪ್ಯಾರಿಸ್ ಮುಂತಾದ ಕಡೆ ಇದ್ದು 1937ರಲ್ಲಿ ರಷ್ಯಕ್ಕೆ ಹಿಂತಿರುಗಿ ಲೆನಿನ್‍ಗ್ರಾಡ್‍ ನಲ್ಲಿ ನಿಂತ.

ಪ್ರಭಾವಗಳು

[ಬದಲಾಯಿಸಿ]

ಮ್ಯಾಕ್ಸಿಂಗಾರ್ಕಿಯ ಜ್ಞಾನಪಂಥದಲ್ಲಿ ಈತ ಸಾಹಿತ್ಯ ರಚನೆಯನ್ನು ಆರಂಭಿಸಿದವ. ಬರವಣಿಗೆಯಲ್ಲಿ ಚೆಕಾಫ್ ಮತ್ತು ತುರ್ಗಿನೀಫ್‍ರನ್ನು ಅನುಸರಿಸಿದರೂ ಅಮೆರಿಕೆಯ ಜಾಕ್‍ಲಂಡನ್ನನ ಬರೆವಣಿಗೆಯ ವೈಶಿಷ್ಟ್ಯವನ್ನು ರಷ್ಯನ್ ಸಾಹಿತ್ಯಕ್ಕೆ ತರಲು ಈತ ಯತ್ನಿಸಿದ್ದಾನೆ. ಈತನಿಗೆ ಕಥೆ ಹೇಳುವ ಕಲೆ ಸೊಗಸಾಗಿ ಸಿದ್ಧಿಸಿತ್ತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Куприн Александр Иванович Archived 10 February 2022 ವೇಬ್ಯಾಕ್ ಮೆಷಿನ್ ನಲ್ಲಿ.. Great Soviet Encyclopedia