ವಿಷಯಕ್ಕೆ ಹೋಗು

ಅಲೆಕೊ ಕಾನ್ಸ್ಟಾಂಟಿನೋವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aleko Konstantinov
ಜನನ(೧೮೬೩-೦೧-೦೧)೧ ಜನವರಿ ೧೮೬೩ O.S.
Svishtov, Ottoman Empire, now Bulgaria
ನಿಧನ11 May 1897(1897-05-11) (aged 34) O.S.
near Radilovo, Bulgaria
ವಿಶ್ರಾಂತಿ ಸ್ಥಳCentral Sofia Cemetery
42°42′47.3″N 023°20′02.5″E / 42.713139°N 23.334028°E / 42.713139; 23.334028
ಉದ್ಯೋಗWriter, Lawyer
ಪ್ರಮುಖ ಕೃತಿಗಳುTo Chicago and Back, Bay Ganyo, "Mirror"

ಅಲೆಕೊ ಕಾನ್ಸ್ಟಾಂಟಿನೋವ್1863-1897. ಬಲ್ಗೇರಿಯದ ಕಥೆಗಾರ. ರಷ್ಯದಲ್ಲಿಯೇ ವಿದ್ಯಾಭ್ಯಾಸ ಮಾಡಿದ. ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಸಾಹಿತ್ಯರಚನೆಯನ್ನು ಆರಂಭಿಸಿ ಹತ್ತು ವರ್ಷಗಳಲ್ಲೇ ಬಲ್ಗೇರಿಯದ ಅತಿಶ್ರೇಷ್ಠ ಕಥೆಗಾರನೆನಿಸಿದ. ಈತನ ವಿಡಂಬನೆ ತೀಕ್ಷ್ಣವಾದುದು. ಬಲ್ಗೇರಿಯದ ಸಾಮಾನ್ಯ ರೈತನನ್ನು ನಿರ್ದಯವಾಗಿ ವಿಡಂಬನೆ ಮಾಡಿದ್ದಾನೆ. ಕೆಲಕಾಲ ಪತ್ರಿಕೋದ್ಯಮಿಯಾಗಿದ್ದ. ಪ್ರವಾಸ ಸಾಹಿತ್ಯ ಬರೆದಿದ್ದಾನೆ. ರಾಜಕೀಯ ಪ್ರವಾಸ ಕೈಗೊಂಡಿದ್ದಾಗ ಈತ ಕೊಲೆಯಾದ.