ಅರ್ಚಿ (ಹಿಂದೂ ದೇವತೆ)

ಆರ್ಚಿ (ಸಂಸ್ಕೃತ: अर्ची, ಆರ್ಚಿ, ಬೆಳಗುವ ಪ್ರೀತಿಪಾತ್ರರು) ಈಕೆ ಒಬ್ಬ ರಾಣಿ, ಮತ್ತು ಹಿಂದೂ ಪುರಾಣ ದಲ್ಲಿ ಲಕ್ಷ್ಮಿ ಯ ಭೂಮಂಡಲದಲ್ಲಿನ ಅವತಾರ.[೧] ಭಾಗವತ ಪುರಾಣ ಪ್ರಕಾರ,[೨] ಅರ್ಚಿಯು ತನ್ನ ಪತಿ ರಾಜ ಪೃಥು ಜೊತೆಗೆ ಹಿಂದೂ ರಾಜವೇನನ ದೇಹದಿಂದ ಹೊರಹೊಮ್ಮುತ್ತಾರೆ ಮತ್ತು ಇವರು ಇಬ್ಬರೂ ಕ್ರಮವಾಗಿ ಲಕ್ಷ್ಮಿ ಮತ್ತು ವಿಷ್ಣುವಿನ ಅವತಾರವಾಗಿದ್ದಾರೆ.[೩] ಪತ್ನಿಯಾಗಿ, ಅವಳು ತನ್ನ ಗಂಡನನ್ನು ಸನ್ಯಾಸಕ್ಕಾಗಿ ಕಾಡಿಗೆ ಕಳುಹಿಸಿದಳು. ಅವನು ಸತ್ತಾಗ, ಅವಳು ವಿಧಿಪೂರ್ವಕವಾಗಿ ಅವನ ಅಂತ್ಯಕ್ರಿಯೆಯ ಚಿತೆಯ ಮೇಲೆ ಸತಿ ಸಹಗಮನ ಮಾಡಿಕೊಳ್ಳುತ್ತಾರೆ :
ರಾಣಿ ಅಗತ್ಯವಾದ ಅಂತ್ಯಕ್ರಿಯೆಯ ಕಾರ್ಯಗಳನ್ನು ನಿರ್ವಹಿಸಿದಳು ಮತ್ತು ನದಿಗೆ ಪೂಜೆಯನ್ನು ಮಾಡಿದಳು. ಬಳಿಕ ನದಿಯಲ್ಲಿ ಸ್ನಾನ ಮಾಡಿದ ನಂತರ, ಅವಳು ವಿವಿಧ ಗ್ರಹ ವ್ಯವಸ್ಥೆಗಳಲ್ಲಿ ಆಕಾಶದಲ್ಲಿ ನೆಲೆಗೊಂಡಿರುವ ವಿವಿಧ ದೇವತೆಗಳಿಗೆ ನಮನ ಸಲ್ಲಿಸಿದಳು. ನಂತರ ಅವಳು ಅಗ್ನಿಗೆ ಪ್ರದಕ್ಷಿಣೆ ಹಾಕಿದಳು ಮತ್ತು ತನ್ನ ಪತಿಯ ಪಾದಕಮಲಗಳ ಬಗ್ಗೆ ಯೋಚಿಸುತ್ತಾ, ಅಗ್ನಿಯ ಜ್ವಾಲೆಯನ್ನು ಪ್ರವೇಶಿಸಿದಳು.
— ಶ್ರೀಮದ್-ಭಾಗವತ (ಭಾಗವತ ಪುರಾಣ) ( 4, ಅಧ್ಯಾಯ 23, ಪದ್ಯ 22)
ಪುರಾಣ
[ಬದಲಾಯಿಸಿ]ಹಿಂದೂ ರಾಜನಾಗಿದ್ದ ಧ್ರುವನ ವಂಶಸ್ಥ ವೇನ , ಅವನ ಕರ್ಮ, ಧಾರ್ಮಿಕ ಬೋಧನೆಗಳಿಂದ ವಿಚಲಿತನಾಗಿ ಮತ್ತು ರಾಜನಾಗಲು ಅನರ್ಹತೆಯಿಂದಾಗಿ ಋಷಿಗಳಿಂದ ಕೊಲ್ಲಲ್ಪಟ್ಟರು ಎಂದು ಭಾಗವತ ಪುರಾಣ ಹೇಳುತ್ತದೆ. ಮಕ್ಕಳಿಲ್ಲದೆ ಸತ್ತ ಕಾರಣದಿಂದಾಗಿ ಋಷಿಗಳು ವೇನನ ಶವವನ್ನು ತೆಗೆದುಕೊಂಡು ವಿಶೇಷ ಆಚರಣೆಯಲ್ಲಿ ಅಂತ್ಯಕ್ರೀಯೆ ಮಾಡುತ್ತಾರೆ. ಆವಾಗ ವೇನನ ದೇಹದಿಂದ ಕುಬ್ಜ ಜೀವಿ ಹೊರಹೊಮ್ಮುತ್ತದೆ. ಅವರೇ ಪೃಥು ಮತ್ತು ಆರ್ಚಿ. ಅನುಕ್ರಮವಾಗಿ ವಿಷ್ಣುವಿನ (ವಿಶ್ವದ ರಕ್ಷಕ ದೇವತೆ) ಮತ್ತು ಲಕ್ಷ್ಮಿ (ಐಶ್ವರ್ಯ ಮತ್ತು ಸಮೃದ್ಧಿಯ ದೇವತೆ) ಅವತಾರಗಳು ಕಾಣಿಸಿಕೊಳ್ಳುತ್ತವೆ. [೪] ಪೃಥು ಅರ್ಚಿಯನ್ನು ಮದುವೆಯಾಗುವ ಮೂಲಕ, ಅವರು ಈ ಪ್ರಪಂಚದ ರಾಜ ಮತ್ತು ರಾಣಿಯಾರಾಗುತ್ತಾರೆ. ಅವರಿಗೆ ವಿಜಿತಾಸ್ವಾನ್, ಹರ್ಯಕ್ಷ, ತುಮ್ರಾಕೇಶ್, ವಿರುಗ ಮತ್ತು ತಿರನ ಎಂಬ ಐದು ಗಂಡು ಮಕ್ಕಳು ಜನಿಸಿದರು. ತಮ್ಮ ತಪಸ್ಸನ್ನು ಮುಗಿಸಿದ ನಂತರ, ಪೃಥು ರಾಜ್ಯವನ್ನು ತ್ಯಜಿಸಿ ಕಾಡಿನಲ್ಲಿ ತಪಸ್ಸು ಆರಂಭಿಸಿದರು. ಆರ್ಚಿ ಅವನನ್ನು ನಿಷ್ಠೆಯಿಂದ ಅನುಸರಿಸುತ್ತಾರೆ ಮತ್ತು ಸಾವಿನಲ್ಲೂ ಒಂದಾಗುತ್ತಾರೆ.[೪][೫]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Srikrishna Prapnnachari. The Crest Jewel: Srimadbhagwata Mahapuran with Mahabharata. Srikrishna Prapnnachari. pp. 94–100. ISBN 9788175258556.
- ↑ "Śrīmad-Bhāgavatam (Bhāgavata Purāṇa)". Trans. by A. C. Bhaktivedanta Swami Prabhupada: 4, 15, 1—6; 4, 23, 19—29
- ↑ Tapasyananda, Swami. Srimad Bhagavata – Volume 1 (in ಇಂಗ್ಲಿಷ್). Sri Ramakrishna Math(vedantaebooks.org).
- ↑ ೪.೦ ೪.೧ Dharmakshetra. "THE BHAGAVATA PURANA". Archived from the original on 2010-10-28. Retrieved 2010-11-01.
- ↑ Bhaktivedanta VedaBase. "Srimad Bhagavatam 4.15.6". Archived from the original on 2008-11-22. Retrieved 2010-11-01.