ಅರೆಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Arenga
Aren pinna 070612 042 stgd.jpg
Arenga pinnata
Egg fossil classification
Kingdom:
(unranked):
(unranked):
(unranked):
Order:
Family:
Subfamily:
Tribe:
Genus:
Arenga

Synonym (taxonomy)[೧]

ಅರೆಂಗ : ಅರಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಉದ್ಯಾನ ಸಸ್ಯ .ದಕ್ಷಿಣ ಪೂರ್ವ ಏಷಿಯಾದ ಮೂಲವಾದರೂ ದಕ್ಷಿಣ ಚೀನಾ,ನ್ಯೂ ಗಿನಿಯ,ಉತ್ತರ ಆಸ್ಟ್ರೇಲಿಯಾದಲ್ಲು ಕಂಡು ಬರುತ್ತದೆ.[೧][೨] ಸಾಲುಮರ ವಾಗಿ ನೆಡುವ ವಾಡಿಕೆ ಇದೆ. ಕಾಂಡದ ಆಕಾರ, ನಾರು, ಗರಿ, ಹೂಗೊಂಚಲು ಮತ್ತು ಕಾಯಿಗಳು ಚಿತ್ರ ವಿಚಿತ್ರವಾಗಿದ್ದು ಗಿಡ ನೋಡಲು ಭವ್ಯ ವಾಗಿ ಕಾಣುತ್ತದೆ. ಹಡಗುಗಳಲ್ಲಿ ಸೋಸುವುದಕ್ಕೂ ಹಲಗೆಗಳ ಮಧ್ಯ ದ ರಂಧ್ರ ಮುಚ್ಚುವುದಕ್ಕೂ ಇದರ ನಾರನ್ನು ಬಳಸುತ್ತಾರೆ. ಈ ಜಾತಿಯ ಕೆಲವು ಪ್ರಬೇದಗಳ ಸಸ್ಯ ರಸದಿಂದ ಅರೆಂಗ ಸಕ್ಕ ರೆ ತಯಾರು ಮಾಡುತ್ತಾರೆ. ಗಿಡ ಉದ್ದವಾಗಿ ಬೆಳೆಯುತ್ತದೆ. ಮುಳ್ಳಿಲ್ಲ. ಗರಿ ತೊಟ್ಟುಗಳ ಅಕ್ಕಪಕ್ಕದಲ್ಲಿ ನಾರಿರುತ್ತದೆ. ಎಲೆ ಸಂಯುಕ್ತ ಮಾದರಿಯದು. ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು. ಹೂ ಏಕಲಿಂಗಿ, ತೊಟ್ಟಿಲ್ಲ. ಉಪದಳಗಳು ಎರಡು.

ಅರೆಂಗ ಪಿನೇಟ[ಬದಲಾಯಿಸಿ]

ಈ ಪ್ರಭೇದದ ಮೂಲ ಮಲಯ, 12 ಮೀ ಎತ್ತರ ಬೆಳೆಯುತ್ತದೆ. ಕಾಂಡ ಕಪ್ಪು; ಇದರ ಮೇಲುಭಾಗದಲ್ಲಿ ನಾರು ಹೆಣೆದುಕೊಂಡಿದ್ದು, ಇದರಿಂದ ಗರಿಗಳು ತೂರಿಕೊಂಡು ಹೊರಬಂದಿರುತ್ತದೆ. ಗರಿಗಳ ಬಣ್ಣ ಅತೀ ಕಪ್ಪು; ತಳಬಾಗದಲ್ಲಿ ಬಿಳಿಯ ನಯವಾದ ಧೂಳು ತುಂಬಿರುತ್ತದೆ. ಗಿಡ ಹೂ ಬಿಡಬೇಕಾದರೆ 10-12 ವರ್ಷಗಳು ಬೇಕು. ಹೂಗೊಂಚಲಲ್ಲಿ ಮೇಲುಭಾಗದಲ್ಲಿ ಗಂಡು ಹೂಗಳೂ ಕೆಳಭಾಗದಲ್ಲಿ ಹೆಣ್ಣು ಹೂಗಳೂ ಇರುತ್ತವೆ. ಗಂಡು ಹೂಗಳ ವಾಸನೆ ಮಧುರವಲ್ಲ, ಅನ್ಯಪರಾಗದಿಂದ ಗರ್ಭಧಾರಣೆ, ಕಾಯಿಗಳು ಗೊಂಚಲಾಗಿ ನೇತಾಡುತ್ತಿರುತ್ತ್ತವೆ. ಹಣ್ಣಾಗಲು ಸುಮಾರು 2-3 ವರ್ಷ ಬೇಕು. ಒಂದು ಮರದಲ್ಲಿ ಹಲವಾರು ಹೂಗೊಂಚಲು ಕಾಯಿ ಮತ್ತು ಹಣ್ಣುಗೊಂಚಲು ಇರುತ್ತವೆ. ಬಣ್ಣ ಕಂದು.

ಅರೆಂಗ ಎಂಗೆರಿ[ಬದಲಾಯಿಸಿ]

ಪಾರ್‍ಪೋಸ್ ದ್ವೀಪದ ಮೂಲದ್ದು. ಅನೇಕ ವಿಧಗಳಲ್ಲಿ ಅರೆಂಗ ಪಿನೇಟ ಸಸ್ಯ ವನ್ನು ಹೋಲುತ್ತದೆ. ಗಿಡ ಸುಮಾರು 3 ಮೀ ಎತgಕ್ಕೆ ಬೆಳೆಯುತ್ತದೆ. ಎಲೆ ಗರಿಯ ರೂಪದ ಸಂಯುಕ್ತ ಪ್ರ. ಕಾಂಡದ ಪಕ್ಕದಲ್ಲಿ ಅನೇಕ ಮೋಸುಗಳು ಇದ್ದು ಗುಂಪಾಗಿ ಕಾಣುತ್ತವೆ. ಗರಿಯ ಉದ್ದ ಸುಮಾರು 1.3 ಮೀ. ಬೀಜಗಳಿಂದ ಮಾತ್ರ

ವೃದ್ಧಿ ಮಾಡಬಹುದು. ಬೇಸಾಯ ಅಡಕೆ ತೆಂಗುಗಳಂತೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರೆಂಗ&oldid=907732" ಇಂದ ಪಡೆಯಲ್ಪಟ್ಟಿದೆ