ವಿಷಯಕ್ಕೆ ಹೋಗು

ಅಮ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮ್ರಿ ಪಶ್ಚಿಮ ಪಾಕಿಸ್ಥಾನಸಿಂಧ್ ಬಳಿ, ಮೊಹೆಂಜೊದಾರೊವಿನಿಂದ ದಕ್ಷಿಣಕ್ಕಿರುವ ಈ ಗ್ರಾಮದ ಬಳಿ ಪುರಾತನ ದಿಬ್ಬಗಳಿವೆ. ಇವುಗಳನ್ನು ಅಗೆದಾಗ ದಿಬ್ಬದ ಮೇಲ್ಭಾಗದ ಪದರಗಳಲ್ಲಿ ಹರಪ್ಪ ಸಂಸ್ಕೃತಿಯ ಅವಶೇಷಗಳೂ ಕೆಳಗಿನ ಪದರಗಳಲ್ಲಿ ಅದಕ್ಕೂ ಹಿಂದಿನ ಬೇರೊಂದು ಸಂಸ್ಕೃತಿಯ ಕುರುಹುಗಳೂ ಕಂಡುಬಂದಿವೆ. ಇದನ್ನು ಅಮ್ರಿ ಸಂಸ್ಕೃತಿ ಎಂದು ಪುರಾತತ್ತ್ವಜ್ಞರು ಹೆಸರಿಸಿದ್ದಾರೆ. ಕಾಲ ಕ್ರಿ. ಪೂ. ಸುಮಾರು 2,500ಕ್ಕೂ ಹಿಂದೆ. ಈ ಸಂಸ್ಕೃತಿಗೆ ಸಂಬಂಧಪಟ್ಟಂತೆ ಕೇವಲ ಮಡಕೆಗಳ ವಿಷಯ ಮಾತ್ರ ಇದುವರೆಗೆ ದೊರಕಿದೆ. ಇವುಗಳಲ್ಲಿ ಹೆಚ್ಚಿನವು ಕಂದು ಬಣ್ಣದ ಪೀಠವುಳ್ಳ ಲೋಟಗಳು. ಇವುಗಳ ಮೇಲೆ ಕಪ್ಪು ಮತ್ತು ಕೆಂಪುಬಣ್ಣದಿಂದ ಸಾಲು ಸಾಲಾಗಿ ತಿದ್ದಿದ ಆಯಾಕೃತಿ, ವಜ್ರಾಕೃತಿ, ಚೌಕಳಿ ಮುಂತಾದ ಜ್ಯಾಮಿತಿಕ ನಮೂನೆಗಳ ಚಿತ್ರಣವಿದೆ. ಅಮ್ರಿ ಸಂಸ್ಕೃತಿ ವಿಶೇಷವಾಗಿ ಸಿಂಧೂ ನದಿಯ ಪಶ್ಚಿಮಕ್ಕೆ ಸಿಂಧ್‍ನ ಬಯಲುಪ್ರದೇಶದಲ್ಲಿ ಹರಡಿತ್ತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Excavations at Mohenjo Daro, Pakistan: The Pottery, With an Account of the Pottery from the 1950 Excavations of Sir Mortimer Wheeler. UPenn Museum of Archaeology. 1 January 1986. pp. 7–. ISBN 978-0-934718-52-3. {{cite book}}: |first1= missing |last1= (help); |first2= missing |last2= (help); |first3= missing |last3= (help)
  • Ancient History
  • J.M. Casal: Fouilles d’Amri, Paris 1964
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮ್ರಿ&oldid=1052973" ಇಂದ ಪಡೆಯಲ್ಪಟ್ಟಿದೆ