ವಿಷಯಕ್ಕೆ ಹೋಗು

ಅಮೃತಾ ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೃತಾ ರಾಮ್
ಜನನ
ಅಮೃತಾ
ವೃತ್ತಿಗಳುಉದ್ಯಮಿ, ಫ್ಯಾಷನ್ ವೇಷಭೂಷಣ ವಿನ್ಯಾಸಕ, ಪ್ರಸಿದ್ಧ ಸ್ಟೈಲಿಸ್ಟ್
ಪ್ರಸಿದ್ಧರಾಗಿರುವುದುಫ್ಯಾಷನ್ ವಿನ್ಯಾಸ
ಪತ್ನಿ/ಪತಿರಾಮ್‌ಜಿ

ಅಮೃತಾ ರಾಮ್ ಅವರು ಒಬ್ಬ ಭಾರತೀಯ ಫ್ಯಾಷನ್ ವೇಷಭೂಷಣ ವಿನ್ಯಾಸಕಿ, ದೂರದರ್ಶನ ನಿರೂಪಕಿ ಮತ್ತು ಉದ್ಯಮಿ. ಅಮೃತಾ ಅವರು ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಸಹ ಕೆಲಸ ಮಾಡಿದ್ದರು.[೧]

ವೃತ್ತಿ

[ಬದಲಾಯಿಸಿ]

೨೦೦೦ ರ ದಶಕದ ಆರಂಭದಲ್ಲಿ, ಅಮೃತಾ ಅವರು ಚೆನ್ನೈನಲ್ಲಿ ಸ್ಟೈಲಿಸ್ಟ್ ಮತ್ತು ಡಿಸೈನರ್ ಆಗಿ ಕೆಲಸ ಮಾಡಿದರು. ನಂತರ ಪಾಲಿಮರ್ ಟಿವಿಯಲ್ಲಿ ಎನ್ ಸ್ಟೈಲ್ ನಂತಹ ದೂರದರ್ಶನ ಕಾರ್ಯಕ್ರಮಗಳನ್ನು ನಿರ್ದೇಶಿಸಲು ಮತ್ತು ನಿರೂಪಣೆ ಮಾಡಿದರು.[೨][೩] ಅಮೃತಾ‌ರವರು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫ್ಯಾಷನ್ ಮತ್ತು ವಿನ್ಯಾಸವನ್ನು ಅಧ್ಯಯನ ಮಾಡಲು ಹೋದರು. ನಂತರ ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಲು ಬಂದರು. ನ್ಯೂಯಾರ್ಕ್‌ನಿಂದ ಮರಳಿದ ನಂತರ, ಮೈಸ್ಕಿನ್ ನಿರ್ದೇಶನದ ಸೂಪರ್‌ಹೀರೋ ನಾಟಕ ಚಿತ್ರ ಮುಗಮೂಡಿ (೨೦೧೨) ಅವರ ಮೊದಲ ಚಿತ್ರವಾಗಿತ್ತು. ಅವರು ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಅಮೃತಾ ಅವರು S/O ಸತ್ಯಮೂರ್ತಿ (೨೦೧೫) ಮತ್ತು ಸ್ಕೆಚ್ (೨೦೧೮) ನಲ್ಲಿ ಸಹ ಕೆಲಸ ಮಾಡಿದರು. ಅವರು ದೇವಿ ಶ್ರೀ ಪ್ರಸಾದ್ ಅವರ ಅಮೆರಿಕ ಪ್ರವಾಸ ಕಾರ್ಯಕ್ರಮಗಳಿಗಾಗಿ ವೇಷಭೂಷಣವನ್ನು ಕೂಡ ರೂಪಿಸಿದರು.[೪][೫]

೨೦೧೦ ರ ದಶಕದ ಅಂತ್ಯದ ವೇಳೆಗೆ, ಅವರು ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಕಮಲ್ ಹಾಸನ್ ಅವರ ವೇಷಭೂಷಣಗಳ ವಿನ್ಯಾಸದಲ್ಲಿ ಕೆಲಸ ಮಾಡಿದರು. ವಿಶೇಷವಾಗಿ, ವಿಶ್ವರೂಪಂ ೨ (೨೦೧೮)ರ ಚಿತ್ರದ ಪ್ರಚಾರಗಳಿಗಾಗಿ, ಬಿಗ್ ಬಾಸ್ ತಮಿಳು ದೂರದರ್ಶನ ಸರಣಿಗಾಗಿ ಹಾಗೂ ಇಂಡಿಯನ್ ೨ (೨೦೨೧)ರ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ನಟನ ವೇಷಭೂಷಣಗಳನ್ನು ಅವರು ವಿನ್ಯಾಸಗೊಳಿಸಿದರು.[೬][೭][೮][೯]

ವೈಯಕ್ತಿಕ ಜೀವನ

[ಬದಲಾಯಿಸಿ]

ಅಮೃತಾ ಅವರು ನಟ ಮತ್ತು ನೃತ್ಯ ನಿರ್ದೇಶಕರಾದ ರಾಮ್‌ಜಿ ಅವರನ್ನು ವಿವಾಹವಾದರು. ಅವರು ಅವರ ನೃತ್ಯ ಶಾಲೆಗಳನ್ನು ಸಹ-ನಿರ್ವಹಿಸುತ್ತಾರೆ.

೨೦೨೦ ರ ಫೆಬ್ರವರಿಯಲ್ಲಿ ಇಂಡಿಯನ್ ೨ ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ಸಂಭವಿಸಿದ ಪ್ರಾಣಘಾತಕ ಅಪಘಾತದಲ್ಲಿ ಅಮೃತಾ ಅವರು ಕೂದಲೆಳೆಯ ಅಂತರದಲ್ಲಿ ಗಾಯದಿಂದ ಪಾರಾದರು.[೧೦][೧೧][೧೨][೧೩]

ಚಿತ್ರಕಥೆ

[ಬದಲಾಯಿಸಿ]
  • ಮಹೇಶ್, ಸರಣ್ಯ ಮತ್ತು ಇತರರು (೨೦೦೮)
  • ಓಡಿಪೋಲಾಮಾ (೨೦೦೯)
  • ಮುಗಮೂಡಿ (೨೦೧೨)
  • ಪಿಸಾಸು(೨೦೧೪)
  • S/O ಸತ್ಯಮೂರ್ತಿ (೨೦೧೫)
  • ವೀರ ಶಿವಾಜಿ (೨೦೧೬)
  • ಶಿವಲಿಂಗ (೨೦೧೭)
  • ನೆರುಪ್ಪು ದಾ (೨೦೧೭)
  • ಖೈದಿ ನಂ. ೧೫೦ (೨೦೧೭)
  • ಸ್ಕೆಚ್ (೨೦೧೮)
  • ವಡ ಚೆನ್ನೈ (೨೦೧೮)
  • ನಮ್ಮ ವೀಟ್ಟು ಪಿಳ್ಳೈ (೨೦೧೯)
  • ಸಂಗತಮಿಳನ್ (೨೦೧೯)
  • ನಾಡೋಡಿಗಳು ೨ (೨೦೨೦)
  • ಪರಮಪದಂ ವಿಳಯಾಟ್ಟು (೨೦೨೧)
  • ಕಾ – ದ ಫಾರೆಸ್ಟ್ (೨೦೨೪)
  • ಇಂಡಿಯನ್ ೨ (೨೦೨೪)
  • ಅಮರನ್ (೨೦೨೪)
  • ಥಗ್ ಲೈಫ್ (೨೦೨೫)

ಉಲ್ಲೇಖಗಳು

[ಬದಲಾಯಿಸಿ]
  1. ↑ S, Srivatsan (May 27, 2020). "This Instagram page catalogues Kamal Haasan's movie looks with some help from the actor" – via www.thehindu.com.
  2. ↑ "The woman behind the star". The New Indian Express.
  3. ↑ "Learn the secrets of style divas". The New Indian Express.
  4. ↑ "Costume designer Amritha Ram to work in Vikram's next with Vijay Chander". Behindwoods. January 28, 2017.
  5. ↑ "Amrita Ram Interview: "I will be dressing up all the actors in Vada Chennai"". Only Kollywood. July 14, 2016.
  6. ↑ "Meet the stylist behind Kamal Haasan's stunning looks in Bigg Boss Tamil 3". The New Indian Express.
  7. ↑ "Stylist Spotlight: Meet Amritha Ram who curates looks for legendary Kamal Haasan for Bigg Boss 4 Tamil". Bollywood Hungama. October 14, 2020.
  8. ↑ "Stylist decodes Kamal Haasan's iconic looks from films". dtNext.in. June 11, 2020.
  9. ↑ "Amritha Ram on styling Kamal Haasan for 'Bigg Boss 4 Tamil': It was a collaborative, interactive process". Deccan Herald. October 5, 2020.
  10. ↑ "Indian 2: Costume designer Amritha Ram reveals how Kamal Haasan, Kajal Aggarwal and she had a 'providential escape'". Hindustan Times. February 20, 2020.
  11. ↑ Janani K. (February 20, 2020). "Costume designer Amritha Ram on Indian 2 accident: Kamal Haasan, Kajal and I had a narrow escape". India Today.
  12. ↑ "Costume designer Amritha, who was on 'Indian 2' sets, recalls narrow escape". The News Minute. February 20, 2020.
  13. ↑ "Khaddar varsity jackets? Yes, please". telegraphindia. Retrieved 18 April 2022.