ಅಪೋಲೋ ಆಸ್ಪತ್ರೆ ಸಮೂಹ
| ಸಂಸ್ಥೆಯ ಪ್ರಕಾರ | ಸಾರ್ವಜನಿಕ |
|---|---|
| ಪ್ರಮುಖ ವ್ಯಕ್ತಿ(ಗಳು) |
|
| ಉದ್ಯಮ | ಆರೋಗ್ಯ ಸೇವೆ |
| ಉತ್ಪನ್ನ | ಆಸ್ಪತ್ರೆಗಳು, ಔಷಧಾಲಯ, ರೋಗನಿರ್ಣಯ ಕೇಂದ್ರಗಳು, ಮನೆ ಆರೈಕೆ |
| ಆದಾಯ | |
| ಆದಾಯ(ಕರ/ತೆರಿಗೆಗೆ ಮುನ್ನ) | |
| ನಿವ್ವಳ ಆದಾಯ | |
| ಒಟ್ಟು ಆಸ್ತಿ | |
| ಒಟ್ಟು ಪಾಲು ಬಂಡವಾಳ | |
| ಉದ್ಯೋಗಿಗಳು | 62,939 (2020)[೨] |
| ಜಾಲತಾಣ | www |
ಅಪೋಲೋ ಆಸ್ಪತ್ರೆಗಳು (ಆಂಗ್ಲ-ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್) ಭಾರತ ಮೂಲದ ಬಹುರಾಷ್ಟ್ರೀಯ ಖಾಸಗಿ ಆರೋಗ್ಯ ಸಂಸ್ಥೆಗಳ ಸಮೂಹವಾಗಿದೆ. ಇದು ಭಾರತದಲ್ಲಿನ ಅತಿದೊಡ್ಡ ಖಾಸಗಿ ಆಸ್ಪತ್ರೆ ಜಾಲವಾಗಿದ್ದು, ೭೩ ಸ್ವಂತ ಮತ್ತು ನಿರ್ವಹಿಸುವ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. ಆಸ್ಪತ್ರೆಗಳ ಜಾಲ ಮಾತ್ರವಲ್ಲದೆ, ಅಪೋಲೋ ಫಾರ್ಮಸಿ ಹೆಸರಿನ ಔಷಧದ ಅಂಗಡಿಗಳು, ಪ್ರಾಥಮಿಕ ಆರೈಕೆ ಮತ್ತು ರೋಗನಿರ್ಣಯ ಕೇಂದ್ರಗಳು, ಟೆಲಿಮೆಡಿಸಿನ್ ಮತ್ತು ಡಿಜಿಟಲ್ ಆರೋಗ್ಯ ಸೇವೆಗಳನ್ನು ಸಹ ಅಪೋಲೊ ಸಮೂಹವು ನಿರ್ವಹಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಕಾರ್ಪೋರೇಟ್ ಶೈಲಿಯ ಆರೋಗ್ಯ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿ ಅಪೋಲೋ ಸಮೂಹವನ್ನು ಗುರುತಿಸಲಾಗುತ್ತದೆ.[೩] ಭಾರತದಲ್ಲಿ ಮೊತ್ತಮೊದಲ ಬಾರಿಗೆ ಟೆಲಿಮೆಡಿಸಿನ್ ಸೌಲಭ್ಯವನ್ನು ಪರಿಚಯಿಸಿದ ಕೀರ್ತಿ ಈ ಆಸ್ಪತ್ರೆ ಸಮೂಹಕ್ಕೆ ಸಲ್ಲುತ್ತದೆ.[೪][೫]
ಅಪೋಲೋ ಆಸ್ಪತ್ರೆಗಳ ಜಾಲವನ್ನು ಡಾ. ಪ್ರತಾಪ್ ಸಿ. ರೆಡ್ಡಿ ಅವರು ೧೯೮೩ರಲ್ಲಿ ಸ್ಥಾಪಿಸಿದರು. ಮೊದಲ ಆಸ್ಪತ್ರೆಯನ್ನು ಪ್ರತಾಪ್ ಅವರು ಮದರಾಸ್(ಈಗಿನ ಚೆನೈ)ನಲ್ಲಿ ಸ್ಥಾಪಿಸಿದರು.
ಇತಿಹಾಸ ಮತ್ತು ಸ್ವಾಧೀನ ಪ್ರಕ್ರಿಯೆಗಳು
[ಬದಲಾಯಿಸಿ]ಸೇವೆಗಳು
[ಬದಲಾಯಿಸಿ]ಆಸ್ಪತ್ರೆ ಸೇವೆಗಳು ಮತ್ತು ಜಾಲ
[ಬದಲಾಯಿಸಿ]ಏಷ್ಯಾದ ಪ್ರಮುಖ ಖಾಸಗಿ ಆರೋಗ್ಯ ಸೇವಾ ಗುಂಪುಗಳಲ್ಲಿ ಒಂದಾಗಿರುವ ಅಪೋಲೋ, ದೇಶದಾದ್ಯಂತ 69 ಆಸ್ಪತ್ರೆಗಳಲ್ಲಿ 9,834 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ.[೬] 3,250 ಔಷಧಾಲಯಗಳನ್ನು ಅಪೋಲೋ ಫಾರ್ಮಸಿ ಹೆಸರಿನಲ್ಲಿ ನಿರ್ವಹಿಸುತ್ತದೆ,[೭] ಇದು ಭಾರತದ ಅತಿದೊಡ್ಡ ಔಷಧಾಲಯ ಸರಪಳಿಗಳಲ್ಲಿ ಒಂದಾಗಿದೆ. ಕಂಪನಿಯು 200 ಕ್ಕೂ ಹೆಚ್ಚು ಪ್ರಾಥಮಿಕ ಆರೈಕೆ ಮತ್ತು ರೋಗನಿರ್ಣಯ ಚಿಕಿತ್ಸಾಲಯಗಳನ್ನು ನಿರ್ವಹಿಸುತ್ತದೆ.[೮] ಅಪೋಲೋ 150 ಕ್ಕೂ ಹೆಚ್ಚು ದೂರ ಚಿಕಿತ್ಸಾ ಕೇಂದ್ರಗಳು ಮತ್ತು ಶಾಖೆಗಳನ್ನು ದೇಶದಾದ್ಯಂತ ಹೊಂದಿದೆ.[೯] ಪ್ರತಿ ವರ್ಷ 75,000 ಕ್ಕೂ ಹೆಚ್ಚು ರೋಗಿಗಳು ಪೆರಿಟೋನಿಯಲ್ ಮತ್ತು ಹೀಮೋಡೈಲಿಸಿಸ್ ಚಿಕಿತ್ಸೆ ಪಡೆಯುತ್ತಾರೆ.[೧೦] 59 ಕ್ಕೂ ಹೆಚ್ಚು ವಿಭಾಗದ 11,000 ಕ್ಕೂ ಹೆಚ್ಚು ವೈದ್ಯರುಗಳು ಮೊದಲ ದರ್ಜೆಯ ಆರೈಕೆಯನ್ನು ನೀಡುತ್ತಾರೆ.[೧೧]
ಅಂಗಸಂಸ್ಥೆಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "Our Experienced Management Team - Apollo Hospitals Group". Archived from the original on 2 July 2023. Retrieved 22 December 2020.
- ↑ "Apollo Hospitals Enterprise Ltd. Financial Statements". moneycontrol.com. Archived from the original on 24 December 2020. Retrieved 21 December 2020.
- ↑ "The visionary who transformed private health care in India". ijmsweb.com. Indian Journal of Medical Sciences. Retrieved 29 July 2025.
- ↑ "Telemedicine in India: Where do we stand?". pmc.ncbi.nlm.nih.gov. U.S. National Institutes of Health's National Library of Medicine (NIH/NLM). Retrieved 29 July 2025.
- ↑ "Telemedicine Healing Touch Through Space" (PDF). televital.com. INDIAN SPACE RESEARCH ORGANISATION. Retrieved 29 July 2025.
- ↑ "Apollo Hospitals Enterprise". World Economic Forum. Retrieved 29 July 2025.
- ↑ "Apollo Hospitals Enterprise". World Economic Forum. Retrieved 29 July 2025.
- ↑ "Apollo Hospitals Enterprise". World Economic Forum. Retrieved 29 July 2025.
- ↑ "Apollo Hospitals Enterprise". World Economic Forum. Retrieved 29 July 2025.
- ↑ "Apollo Hospital India". My1Health. Retrieved 29 July 2025.
- ↑ "Apollo Hospital India". My1Health. Retrieved 29 July 2025.