ವಿಷಯಕ್ಕೆ ಹೋಗು

ಅಪನಂಬಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪನಂಬಿಕೆಯು ಗಂಭೀರ ಅಪಾಯ ಅಥವಾ ಆಳವಾದ ಸಂದೇಹದ ಪರಿಸ್ಥಿತಿಯಲ್ಲಿ ಯಾವುದೇ ಒಂದು ಪಕ್ಷವನ್ನು ನಂಬದಿರುವ ಒಂದು ಔಪಚಾರಿಕ ರೀತಿ. ಪೌರನೀತಿಯಲ್ಲಿ ಅದನ್ನು ಸಾಮಾನ್ಯವಾಗಿ ಅಧಿಕಾರಗಳ ವಿಭಜನೆ ಅಥವಾ ಸಮತೋಲನವಾಗಿ, ಅಥವಾ ರಾಜಕೀಯದಲ್ಲಿ ಒಪ್ಪಂದದ ನಿಯಮಗಳನ್ನು ಮೌಲ್ಯೀಕರಿಸುವ ವಿಧಾನವಾಗಿ ವ್ಯಕ್ತಪಡಿಸಲಾಗುತ್ತದೆ. ಅಪನಂಬಿಕೆಯನ್ನು ಆಧರಿಸಿದ ವ್ಯವಸ್ಥೆಗಳು ನಿಯಂತ್ರಣಗಳು ಮತ್ತು ಸಮತೋಲನಗಳು ಕಾರ್ಯನಿರ್ವಹಿಸುವಂತೆ ಸರಳವಾಗಿ ಹೊಣೆಗಾರಿಕೆಯನ್ನು ವಿಭಜಿಸುತ್ತವೆ.

ಒಂದು ಚುನಾವಣಾ ವ್ಯವಸ್ಥೆ ಅಥವಾ ವ್ಯತಿರಿಕ್ತ ಪ್ರಕ್ರಿಯೆಯು ಅನಿವಾರ್ಯವಾಗಿ ಅಪನಂಬಿಕೆಯನ್ನು ಆಧರಿಸಿರುತ್ತದೆ. ಪಕ್ಷಗಳು ವ್ಯವಸ್ಥೆಯಲ್ಲಿ ಸ್ಪರ್ಧಿಸುತ್ತವೆ, ಆದರೆ ಅವು ವ್ಯವಸ್ಥೆಯನ್ನೇ ಅಸ್ಥಿರಗೊಳಿಸಲು, ಅಥವಾ ಅದರ ಮೂಲಕ ಕೆಟ್ಟ ನಂಬಿಕೆ ಪ್ರಯೋಜನವನ್ನು ಗಳಿಸಲು ಸ್ಪರ್ಧಿಸುವುದಿಲ್ಲ - ಹಾಗೆ ಮಾಡಿದರೆ ಅವು ಇತರರಿಂದ ಸುಲಭವಾಗಿ ಸಿಕ್ಕಿಬೀಳುತ್ತವೆ. ಖಂಡಿತವಾಗಿ, ಪಕ್ಷಗಳ ನಡುವೆ ಸಾಕಷ್ಟು ಅಪನಂಬಿಕೆಯಿರುತ್ತದೆ, ಮತ್ತು ನಿಖರವಾಗಿ ಇದುವೇ ಅಪನಂಬಿಕೆಯ ಒಂದು ಔಪಚಾರಿಕ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರೇರೇಪಿಸುತ್ತದೆ. ಉದಾಹರಣೆಗೆ, ದೇಶಗಳ ನಡುವೆ ಅನ್ವಯವಾಗುವ ರಾಜತಾಂತ್ರಿಕ ಶಿಷ್ಟಾಚಾರವು ಔಪಚಾರಿಕ ಅಸಮ್ಮತಿಯಂತಹ ವಿಧಾನಗಳನ್ನು ಅವಲಂಬಿಸಿರುತ್ತದೆ. ಇವು ವಾಸ್ತವದಲ್ಲಿ "ನಾವು ಆ ವ್ಯಕ್ತಿಯನ್ನು ನಂಬುವುದಿಲ್ಲ" ಎಂದು ಹೇಳುತ್ತವೆ. ಅದು ಕಟ್ಟುನಿಟ್ಟಾದ ಶಿಷ್ಟಾಚಾರದ ಮೇಲೆ ಅವಲಂಬಿಸಲೂ ಪ್ರವೃತ್ತವಾಗಿರುತ್ತದೆ - ತಮ್ಮ ಉದ್ದೇಶವನ್ನು ಸಂಕೇತಿಸಲು ಪ್ರತಿ ವ್ಯಕ್ತಿಯ ರೂಢಿಗಳನ್ನು ನಂಬದಿರುವುದು, ಬದಲಾಗಿ ಸೂಕ್ಷ್ಮ ಸಾಮಾಜಿಕ ಸನ್ನಿವೇಶಗಳಲ್ಲಿ ಒಂದು ಜಾಗತಿಕ ಮಾನದಂಡವನ್ನು ಅವಲಂಬಿಸಿರುವುದು.

ಗಣಕ ವಿಜ್ಞಾನದಲ್ಲಿ ವ್ಯಾಖ್ಯಾನಿಸಲಾದ ನಿಯಮಾವಳಿಯು ಅಪನಂಬಿಕೆಯ ಹೆಚ್ಚು ಔಪಚಾರಿಕ ಕಲ್ಪನೆಯನ್ನು ಬಳಸುತ್ತದೆ. ಒಂದು ವ್ಯವಸ್ಥೆಯ ಭಿನ್ನ ಭಾಗಗಳು ಒಂದು ಇನ್ನೊಂದನ್ನು ನಂಬಬಾರದು, ಬದಲಾಗಿ ನಿರ್ದಿಷ್ಟ ನಿರ್ಧಾರಗಳು, ವಿನಂತಿಗಳು ಮತ್ತು ಪ್ರಮಾಣೀಕರಣಗಳನ್ನು ಮಾಡಬೇಕು. ಒಮ್ಮೆ ಇವನ್ನು ಅಂಗೀಕರಿಸಲಾದಾಗ, ದೋಷಗಳ ಹೊಣೆಗಾರಿಕೆ ಕಟ್ಟುನಿಟ್ಟಾಗಿ ವ್ಯವಸ್ಥೆಯ ಸ್ವೀಕರಿಸುವ ಭಾಗದ್ದಾಗಿರುತ್ತದೆ, ಮೂಲ ಮಾಹಿತಿಯನ್ನು ಕಳಿಸಿದ ಭಾಗದ್ದಲ್ಲ. ಈ ತತ್ವವನ್ನು ಒಂದು ಕ್ರಮವಿಧಿಯೊಳಗೆ ಅನ್ವಯಿಸುವುದಕ್ಕೆ ಕರಾರು ಆಧಾರಿತ ವಿನ್ಯಾಸವೆಂದು ಕರೆಯಲಾಗುತ್ತದೆ.

ಸಾಂಸ್ಥಿಕ ಆಡಳಿತವು ಅಪನಂಬಿಕೆ ಮೇಲೆ ಅವಲಂಬಿಸುತ್ತದೆ ಎಷ್ಟರಮಟ್ಟಿಗೆ ಅಂದರೆ ಮಂಡಳಿಯು ಆಡಳಿತದಿಂದ ಪಡೆದ ವರದಿಗಳನ್ನು ನಂಬಬಾರದು, ಆದರೆ ಅವನ್ನು ತನಿಖೆಮಾಡಲು, ಅವಕ್ಕೆ ಸವಾಲೊಡ್ಡಲು ಅದಕ್ಕೆ ಅಧಿಕಾರವಿದೆ, ಮತ್ತು ಷೇರುದಾರರ ಪರವಾಗಿ ಕಾರ್ಯನಿರ್ವಹಿಸುವ ಅಧಿಕಾರವಿದೆ.