ಅನ್ನಾ ಲಿಬರಾಟಾ ಡಿಸೋಜಾ

ವಿಕಿಪೀಡಿಯ ಇಂದ
Jump to navigation Jump to search
ಅನ್ನಾ ಲಿಬರಾಟಾ ಡಿಸೋಜಾ
Nationalityಭಾರತೀಯ
Occupationಮನೆಗೆಲಸ
Known forಜನಪದ ಕಥೆಗಾರ್ತಿ
Notable work
"ಓಲ್ಡ್ ಡೆಕ್ಕನ್ ಡೇಸ್"ನ ಕಥೆಗಳ ವಾಚಕಿ

ಅನ್ನಾ ಲಿಬರಾಟಾ ಡಿಸೋಜಾ (ಜನನ ಸುಮಾರು 1819-1823 [೧] ) ಆಂಗ್ಲೋ-ಇಂಡಿಯನ್ ಬರಹಗಾರ ಮೇರಿ ಫ್ರೀರೆ ಅವರ ಭಾರತೀಯ ಮನೆಗೆಲಸದವಳು. ಅವಳು ಹೇಳಿದ ಕಥೆಗಳು ಫ್ರೀರೆ ಅವರ ಓಲ್ಡ್ ಡೆಕ್ಕನ್ ಡೇಸ್, ಹಿಂದೂ ಫೇರಿ ಲೆಜೆಂಡ್ಸ್, ಕರೆಂಟ್ ಇನ್ ಸದರ್ನ್ ಇಂಡಿಯಾ, ಕಲೆಕ್ಟ್ ಫ್ರಮ್ ಓರಲ್ ಟ್ರೆಡಿಶನ್‌ಗೆ ಆಧಾರವಾಗಿವೆ. [೨]

ಆರಂಭಿಕ ಜೀವನ[ಬದಲಾಯಿಸಿ]

ಡಿಸೋಜಾ ಅವರ ಅಜ್ಜ ಕುಟುಂಬ ಲಿಂಗಾಯತ ಜಾತಿಗೆ ಸೇರಿದವರು. ಅವರು ಮೂಲತಃ ಕ್ಯಾಲಿಕಟ್ ಮೂಲದವರು (ಇಂದು ಇದನ್ನು ಕೊಝಿಕೋಡ್ ಎಂದೂ ಕರೆಯುತ್ತಾರೆ). ನಂತರ ಅವರು ಗೋವಾ ಬಳಿ ವಲಸೆಹೋದರು. ಈ ಸಮಯದಲ್ಲಿ ಅವಳ ಅಜ್ಜ, ಅವರ ಕುಟುಂಬದೊಂದಿಗೆ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಮತ್ತು ಇದರ ಪರಿಣಾಮವಾಗಿ, ಅವರ ತಂದೆ ಎಲ್ಲಾ ಸಂಬಂಧಗಳನ್ನು ಮುರಿದರು. ಬ್ರಿಟಿಷ್ ಸೈನ್ಯದಲ್ಲಿ, ಆಕೆಯ ಅಜ್ಜ ಹವಾಲ್ದಾರ್ ಮತ್ತು ತಂದೆ ಟೆಂಟ್ ಪಿಚರ್ (ಟೆಂಟ್ ಹಾಕುವವ). ಇಬ್ಬರೂ ತಮ್ಮ ಸೇವೆಗಳಿಗಾಗಿ ಪದಕಗಳನ್ನು ಗಳಿಸಿದ್ದಾರೆ. [೩]

ಡಿ ಸೋಜಾಗೆ ಏಳು ಸಹೋದರರು ಮತ್ತು ಒರ್ವ ಸಹೋದರಿ ಇದ್ದರು, ಅವರಲ್ಲಿ ಯಾರೂ ಶಾಲೆಗೆ ಹೋಗಲಿಲ್ಲ. ಅವರ ತಾಯಿ ಆಗಾಗ್ಗೆ ಕೂಲಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಆದ್ದರಿಂದ ಅವರ ಅಜ್ಜಿ ಅವರನ್ನು ನೋಡಿಕೊಳ್ಳುತ್ತಿದ್ದರು. ಅವಳು ಕ್ರಿಶ್ಚಿಯನ್ ಆದರೂ ಹಿಂದೂ ದೇವಾಲಯಗಳನ್ನು ಗೌರವಿಸುತ್ತಿದ್ದಳು. ಅವಳ ಅಜ್ಜಿ ಇಂದಲೇ ಡಿ ಸೋಜಾ ಮತ್ತು ಅವಳ ಒಡಹುಟ್ಟಿದವರು ಹಲವಾರು ಕಥೆ ಮತ್ತು ಹಿಂದೂ ಕಾಲ್ಪನಿಕ ದಂತಕಥೆಗಳನ್ನು ಕೇಳಿದರು. ನಂತರ, ಇದೇ ಕಥೆಗಳನ್ನು ಅವರು ಮೇರಿ ಫ್ರೀರಿಗೆ ನಿರೂಪಿಸಿದರು. [೪]

ಮೇರಿ ಫ್ರೀರೆಯವರ ಜೊತೆ[ಬದಲಾಯಿಸಿ]

1865-66ರಲ್ಲಿ, ಫ್ರೀರೆ ತನ್ನ ತಂದೆಯೊಂದಿಗೆ ಮೂರು ತಿಂಗಳ ಪ್ರವಾಸಕ್ಕೆ ಬಾಂಬೆ ಪ್ರೆಸಿಡೆನ್ಸಿ ಆಫ್ ಇಂಡಿಯಾ ಮೂಲಕ ಹಾದು ಹೋದರು, ಅಲ್ಲಿ ಅವರು ರಾಜ್ಯಪಾಲರಾಗಿದ್ದರು. ಫ್ರೀರೆಯ ತಾಯಿ ಇಂಗ್ಲೆಂಡಿನಲ್ಲಿದ್ದರು ಮತ್ತು ಅವರೊಂದಿಗೆ ಬಂದಿರಲಿಲ್ಲ. ಈ ಗುಂಪಿನಲ್ಲಿ ಫ್ರೀರೆ ಮತ್ತು ಡಿಸೋಜಾ ಮಾತ್ರ ಹೆಣ್ಣುಮಕ್ಕಳಾಗಿದ್ದರು. ಡಿಸೋಜಾ ಈ ಕಥೆಗಳನ್ನು ಫ್ರೀರಿಗೆ ಇಂಗ್ಲಿಷ್‌ನಲ್ಲಿ ನಿರೂಪಿಸಿದರು, ಮತ್ತು ನಂತರ ಫ್ರೀರೆ ಅವುಗಳನ್ನು ಬರೆದರು. ನಂತರ, ಅವಳು ಅವುಗಳನ್ನು ಡಿ ಸೋಜಾಗೆ ಓದಿ ನಿಖರತೆಯನ್ನು ಪರೀಕ್ಷಿಸಿದ್ದರು. [೫]

ಒಲ್ದ್ ಡೆಕ್ಕನ್ ಡೇಸ್[ಬದಲಾಯಿಸಿ]

ಓಲ್ಡ್ ಡೆಕ್ಕನ್ ಡೇಸ್ ಲಂಡನ್ನಲ್ಲಿ ಪ್ರಕಟವಾಗಿ, ನಂತರ ಇದನ್ನು ಅನೇಕ ಭಾಷೆಗಳಿಗೆ ಅನುವಾದಿಸಲಾಯಿತು. ಈ ಪುಸ್ತಕವನ್ನು ಮೇರಿ ಫ್ರೀರೆ ಅವರ ಸಹೋದರಿ, ಕ್ಯಾಥರೀನ್ ಫ್ರಾನ್ಸಿಸ್ ಫ್ರೆರೆ ಅವರು ಚಿತ್ರಿಸಿದ್ದಾರೆ. ಓರಿಯಂಟಲಿಸ್ಟ್ ಮ್ಯಾಕ್ಸ್ ಮುಲ್ಲರ್ ಅವರು ಈ ಪುಸ್ತಕದ ಕಥೆಗಳಲ್ಲಿ ಒಂದನ್ನು ಮೂಲ ಸಂಸ್ಕೃತದಿಂದ ನೇರವಾಗಿ ಅನುವಾದಿಸಿದಂತೆ ಧ್ವನಿಸುತ್ತದೆ ಎಂದು ಹೇಳಿದ್ದರು. [೨]

ಉಲ್ಲೇಖಗಳು[ಬದಲಾಯಿಸಿ]

  1. Prasad, Leela (2003). "The Authorial Other in Folktale Collections in Colonial India" (PDF). Cultural Dynamics. 15 (1): 33. Retrieved 3 July 2019.
  2. ೨.೦ ೨.೧ Dorson, Richard Mercer (1968). History of British Folklore. London: Primera Publication. p. 884.
  3. Naithani, Sadhana (2006). In Quest of Indian Folktales - andit Ram Gharib Chaube and William Crooke. Bloomington: Indiana University Press.
  4. Frere, Mary (1898). Old Deccan Days. London: John Murray.
  5. "Mary Frere (Overview)". Orlando: Women's Writing in the British Isles from the Beginnings to the Present. Susan Brown, Patricia Clements, and Isobel Grundy (editors). Cambridge: Cambridge University Press Online. 2006. Retrieved 31 July 2010.CS1 maint: others (link)