ಅನ್ನಾ ಮಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ನಾ ಮಾಣಿ
അന്ന മാണി
ಜನನ೨೩ ಅಗಸ್ಟ್ ೧೯೧೮
ಪಿರುಮೇಡು, ಕೇರಳ
ಮರಣತಿರುವನಂತಪುರಮ್, ಕೇರಳ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಪವನ ವಿಜ್ಞಾನ, ಭೌತಶಾಸ್ತ್ರ
ಸಂಸ್ಥೆಗಳುಭಾರತೀಯ ಪವನ ವಿಜ್ಞಾನ ಇಲಾಖೆ, ಪುಣೆ

ಅನ್ನಾಮಣಿ ಯವರು (೨೩ ಆಗಸ್ಟ್ ೧೯೧೮- ೧೬ ಆಗಸ್ಟ್ ೨೦೦೧) ಒಬ್ಬ ಭಾರತೀಯ ಮಹಿಳಾ ಭೌತವಿಜ್ಞಾನಿ ಹಾಗು ಪವನಶಾಸ್ತ್ರ ವಿಜ್ಞಾನಿ. [೧] ಇವರು ಭಾರತೀಯ ಪವನ ವಿಜ್ಞಾನದ ಸಂಶೋಧನೆಯಲ್ಲಿ ಮಹತ್ವದ ಕಾಣಿಕೆಯನ್ನ ಸಲ್ಲಿಸಿದ್ದಾರೆ. ಅನ್ನಾ ಮಣಿಯವರು ಒಝೊನ್, ಪವನ ಶಕ್ತಿಯ ಕುರಿತಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. [೨]

ಜೀವನ[ಬದಲಾಯಿಸಿ]

ಅನ್ನಾ ಮಣಿಯವರು ಕೇರಳ ಪೀರುಮೆಡು ಎಂಬಲ್ಲಿ ಜನಿಸಿದರು. [೩] ಇವರ ತಂದೆ ಸಿವಿಲ್ ಇಂಜಿನೀಯರ್. ಒಟ್ಟು ಎಂಟು ಜನ ಮಕ್ಕಳಲ್ಲಿ ಅನ್ನಾ ಮಣಿಯವರು ಏಳನೇಯವರು. ಚಿಕ್ಕಂದಿನಿಂದಲೂ ಅವರು ತೀವ್ರ ತರದ ಓದುಗರಾಗಿದ್ದರು. ಮಹಾತ್ಮಾ ಗಾಂಧೀಜಿಯವರಿಂದ ತುಂಬಾ ಪ್ರಭಾವಿತರಾಗಿದ್ದ ಇವರು, ಬರೀ ಖಾದಿಯನ್ನೇ ತೊಡುತ್ತಿದ್ದರು. ಇವರಿಗೆ ವೈದ್ಯ ವಿಜ್ಞಾನ ಓದುವ ಹಂಬಲವಿತ್ತು, ಆದರೆ ತದನಂತರ ಅವರ ಮನಸ್ಸು ಭೌತವಿಜ್ಞಾನದತ್ತ ಹರಿಯಿತು. ೧೯೩೯ ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜ್‌ನಿಂದ ಬಿ.ಎಸ್ಸಿ ಭೌತ ಹಾಗು ರಸಾಯನ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು.[೩]

ಶಿಕ್ಷಣ[ಬದಲಾಯಿಸಿ]

ಅನ್ನಾಮಣಿ ನೃತ್ಯವನ್ನು ಮತ್ತು ಭೌತಶಾಸ್ತ್ರ ಅಧ್ಯಯನಕ್ಕೆ ನಿರ್ಧರಿಸಿ, ೧೯೩೯ ರಲ್ಲಿ, ಅವರು ಮದ್ರಾಸ್‌ನ ಪಚೈಯಪ್ಪಾಸ್ ಕಾಲೇಜಿನಿಂದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ ಆನರ್ಸ್ ಪದವಿ ಪಡೆದರು. ೧೯೪೦ ರಲ್ಲಿ, ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನೆಗಾಗಿ ವಿದ್ಯಾರ್ಥಿವೇತನವನ್ನು ಪಡೆದರು. ೧೯೪೫ ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಅಧ್ಯಯನಕ್ಕಾಗಿ ಲಂಡನ್‌ನ ಇಂಪೀರಿಯಲ್ ಕಾಲೇಜಿಗೆ ತೆರಳಿ, ಹವಾಮಾನ ಸಾಧನಗಳಲ್ಲಿ ಪರಿಣತಿಯನ್ನು ಪಡೆದರು.

ವೃತ್ತಿಜೀವನ[ಬದಲಾಯಿಸಿ]

ಪಚೈ ಕಾಲೇಜಿನಿಂದ ಪದವಿ ಪಡೆದ ನಂತರ, ಅವರು ಪ್ರೊ. ಸೊಲೊಮನ್ ಪಪ್ಪಯ್ಯ ಅವರ ಅಡಿಯಲ್ಲಿ ಕೆಲಸ ಮಾಡಿದರು, ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್ ಗುಣಲಕ್ಷಣಗಳನ್ನು ಸಂಶೋಧಿಸಿದರು.[೪] ಪದವಿ ಪಡೆದ ನಂತರ ಅವರು ಪ್ರೋ. ಸಿ.ವಿ.ರಾಮನ್ ರವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು.ಇವರು ವಜ್ರ ಮತ್ತು ಮಾಣಿಕ್ಯಗಳ ಬೆಳಕನ್ನು ಚದುರಿಸುವ ಗುಣಗಳ ಬಗ್ಗೆ ಅಧ್ಯಯನ ನಡೆಸಿದರು.[೨] ಐದು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು ಇವರಿಗೆ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಿಲ್ಲದ ಕಾರಣ ಪಿಎಚ್ಡಿ ದೊರೆಯಲಿಲ್ಲ. ಮುಂದೆ ಭೌತಶಾಸ್ತ್ರದ ಅಧ್ಯಯನಕ್ಕಾಗಿ ಬ್ರಿಟನ್ ತೆರಳಿದರು, ಆದರೆ ಅಲ್ಲಿ ಅವರು ಇಂಪೀರಿಯಲ್ ಕಾಲೇಜ್ ಲಂಡನ್ನಲ್ಲಿ ಪವನಶಸ್ತ್ರವನ್ನು ಅಭ್ಯಾಸ ಮಾಡಿದರು. [೩] ೧೯೪೮ ರಲ್ಲಿ ಭಾರತಕ್ಕೆ ವಾಪಸ್ಸಾದ ನಂತರ ಅವರು ಪುಣೆಯ ಪವನಶಾಸ್ತ್ರ ಇಲಾಖೆಯಲ್ಲಿ ಕೆಲಸ ಮಾಡತೊಡಗಿದರು. ಇವರು ಪವನ ಶಾಸ್ತ್ರದ ಬಗ್ಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. [೨] ಇವರ ಪ್ರತಿಭೆಯ ಸಂಕೇತವಾಗಿ ೧೯೮೭ ರಲ್ಲಿ ಕೆ. ಆರ್. ರಾಮನಾಥನ್ ಮೆಡಲನ್ನು ತಮ್ಮದಾಗಿಸಿಕೊಂಡಿದ್ದಾರೆ. [೩] ೧೯೯೪ ರಲ್ಲಿ ಹೃದಯ ಬೇನೆಯಿಂದ ಬಳಿದ ಇವರು ೨೦೦೧ ಆಗಸ್ಟ್ ೧೬ ರಂದು ತಿರುವನಂತಪುರಂನಲ್ಲಿ ಕೊನೆಯುಸಿರೆಳೆದರು. [೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Sur, Abha (14 October 2001). "The Life and Times of a Pioneer". The Hindu. Archived from the original on 13 ಏಪ್ರಿಲ್ 2014. Retrieved 7 October 2012.
  2. ೨.೦ ೨.೧ ೨.೨ Sur, Abha (2007). Lilavati's daughters: The women scientists of India. Indian Academy of Science. pp. 23–25.
  3. ೩.೦ ೩.೧ ೩.೨ ೩.೩ Gupta, Aravind. "Anna Mani" (PDF). Platinum Jubilee Publishing of INSA. Indian National science academy. Retrieved 7 October 2012.
  4. "Women in Science | Initiatives | Indian Academy of Sciences". www.ias.ac.in. Retrieved 20 March 2020.