ಅಧ್ಯಾತ್ಮಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಗಮನಾರ್ಹ ವಿಷಯ ಅಲ್ಲ

ಕಾರ್ಯಾಲಯದ ಆರಂಭ[ಬದಲಾಯಿಸಿ]

  • ಈ ಕರ್ನಾಟಕದ ಮಹತ್ವದ ಅಧ್ಯಾತ್ಮ ಚಿಂತನೆಗಳಿಗೆ ಪರಮೋಚ್ಚ ಸ್ಥಾನವಾದ ಕಾರ್ಯಾಲಯ ಹೊಳೆನರಸೀಪುರದಲ್ಲಿದೆ.ಅಧ್ಯಾತ್ಮಪ್ರಕಾಶ ಕಾರ್ಯಾಲಯವು ಅಧ್ಯಾತ್ಮ ವಿದ್ಯೆಯಲ್ಲಿ ಜನರಿಗೆ ಹೆಚ್ಚು ಆದರವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ೧೯೨೦ನೆಯ ಇಸವಿಯಲ್ಲಿ ಆರಂಬಿಸಲ್ಪತು. *ಇದು 1992 ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆಗಿ ನೋಂದಾಯಿಸಲ್ಪಟ್ಟ ಕಾರ್ಯಾಲಯವಾಗಿದೆ. ಕಾರ್ಯಾಲಯ ಬೆಂಗಳೂರು, ಮೈಸೂರು, ಮಾತುರ್ (ಶಿವಮೊಗ್ಗ) ಮತ್ತು ರಾಯದುರ್ಗ (ಎ.ಪಿ.) ಗಳಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದೆ.
  • ಇವುಗಳ ಉಸ್ತುವಾರಿಗಾಗಿ ಶ್ರೀಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ವಿಶ್ವಸ್ತಸಮಿತಿಗೆ, ನಡೆಸುವ ಹೊಣೆ. ಹೊಳೆನರಸೀಪುರದಲ್ಲಿ ಶ್ರೀ ತಾಂಡವೇಶ್ವರ್ ಮತ್ತು ಬೆಂಗಳೂರಿನಲ್ಲಿ ಹೆಚ್. ಎಸ್. ನರಸಿಂಹಮೂರ್ತಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ಸಮಿತಿಗಳಿವೆ. [೧]
  • ಟ್ರಸ್ಟ್ ಸಮಿತಿ:- ಕೆ. ಶ್ರೀನಿವಾಸ, ಹೋಲೆನರಾಸುಪುರ (ಅಧ್ಯಕ್ಷರು)

ಸಂಸ್ಥೆಯ ಸ್ಥಾಪಕರ ಪರಿಚಯ[ಬದಲಾಯಿಸಿ]

ಈ ಸಂಸ್ಥೆಯನ್ನು ಯಲ್ಲಂಬಳಸೆ ಸುಬ್ಬರಾವ್ ಅಥವಾ ಸುಬ್ರಹ್ಮಣ್ಯ ಶರ್ಮಾ, ಉಪಾಧ್ಯಾಯರು ತಮ್ಮ ಸ್ವಂತ ನಿವಾಸದಲ್ಲೇ ಈ ಕಾರ್ಯಾಲಯ ಆರಂಭಿಸಿದರು. ನಂತರ ಅವರು ಸಂನ್ಯಾಸ ದೀಕ್ಷೆಯನ್ನು ಪಡೆದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಯವರು (1880-1975) ಎಂಬ ಅಭಿಧಾನವನ್ನು ಪಡೆದರು. ಅವರು ಅಭಿನವ ಶಂಕರಾಚಾರ್ಯರೆಂದು ಪ್ರಸಿದ್ಧರಾಗಿರುವರು. ಮೊದಲು ಅವರು ಕರ್ನಾಟಕದ ಶಾಲಾ ಶಿಕ್ಷಕ; (ಅವರು ಯೆಲ್ಲಂಬಳಸೆ ಸುಬ್ರಹ್ಮಣ್ಯ ಶರ್ಮಾ ಎಂಬ ಹೆಸರನ್ನು ಆಧರಿಸಿ ಅವರು ಆಧ್ಯಾತ್ಮದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. (ಮತ್ತೊಂದು ಲೇಖಕ ಶ್ರೀ ಯೆಡತೊರೆ ಸುಬ್ಬರಾವ್ ಬೇರೆ ಲೇಖಕರು). ಶಿಕ್ಷಕ ವೃತ್ತಿಯ ನಿವೃತ್ತಿಯ ನಂತರ ಅವರು 1937 ರಲ್ಲಿ ಹೊಳೆನರಸಿಪುರಕ್ಕೆ ತೆರಳಿದರು ಮತ್ತು ಅಲ್ಲಿ ತಮ್ಮ ಸ್ವಂತ ಆವರಣದಲ್ಲಿ ಕರ್ಯಾಲಯವನ್ನು ಸ್ಥಾಪಿಸಿದರು. ಶ್ರೀ ಸುಬ್ಬರಾವ್/ಸುಬ್ರಹ್ಮಣ್ಯ ಶರ್ಮಾ 1948 ರಲ್ಲಿ ಸನ್ಯಾಸ ಸ್ವೀಕರಿಸಿ ಹೆಸರನ್ನು ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಯವರು ಎಂದು ಪ್ರಸಿದ್ಧರಾದರು.

ಸಂಸ್ಥೆಯ ಉದ್ದೇಶ ಮತ್ತು ಕಾರ್ಯ[ಬದಲಾಯಿಸಿ]

  • ಮೂರು ಪ್ರಮುಖ ಕ್ರಿಯಾಯೋಜನೆಗಳು - ಉಪನ್ಯಾಸಗಳು, ಪುಸ್ತಕಗಳು ಮತ್ತು ಮಾಸಿಕ ನಿಯತಕಾಲಿಕ ಮತ್ತು ವಿದ್ಯಾನಿಲಯವನ್ನು ಬಳಸಿ ಸ್ಥಾಪನೆಯಾದ ಉದ್ದೇಸ ಕೆಲಸವನ್ನು ಮುಂದುವರೆಸುವುದು. - ಈ ಉದ್ದೇಶಕ್ಕಾಗಿ ಈಗಲೂ ಕೆಲಸ ಮಾಡುತ್ತಿದೆ
  • ಈ ಉದ್ದೇಶಗಳಲ್ಲಿ ಕನ್ನಡ, ಸಂಸ್ಕೃತ, ಇಂಗ್ಲೀಷು ಭಾಷೆಗಳಲ್ಲಿ ಬರೆದಿರುವ ಅಧ್ಯಾತ್ಮಗ್ರಂಥಗಳನ್ನು ಪ್ರಕಟಿಸುವುದು. “ಅಧ್ಯಾತ್ಮಪ್ರಕಾಶ” ವೆಂಬ ಮಾಸಪತ್ರಿಕೆಯನ್ನು ಹೊರಡಿಸುವುದು; ಗ್ರಂಥಕಾಲಕ್ಷೇಪಗಳನ್ನು ಏರ್ಪಡಿಸುವದು; ಅಧ್ಯಾತ್ಮ ಸಂಬಂಧವಾದ ಉತ್ಸವಗಳನ್ನೂ ಉಪನ್ಯಾಸಗಳನ್ನೂ ಏರ್ಪಡಿಸುವುದು- ಈ ಬಗೆಯ ಸಾಧನಗಳಿಂದ ಅಧ್ಯಾತ್ಮವಿದ್ಯಾಪ್ರಸಾರವನ್ನು ಮಾಡುವುದು. ಈಗಲೂ ಈ ಸಂಸ್ಥೆಯು ಈ ಕಾರ್ಯಗಳನ್ನು ನೆಡೆಸುತ್ತಿದೆ. ಕನ್ನಡನಾಡಿನಲ್ಲಿಯೂ ಮತ್ತು ಇತರ ಪ್ರಾಂತಗಳಲ್ಲಿಯೂ ಅನೇಕರು ಇದರ ಪ್ರಯೋಜನ ಪಡೆದಿದ್ದಾರೆ. ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಅಂಗವಾಗಿರುವ ವಿದ್ಯಾಲಯದಲ್ಲಿ ಅಧ್ಯಾತ್ಮ ವಿದ್ಯಾ ಪ್ರಚಾರಕರನ್ನು ಸಜ್ಜುಗೊಳಿಸಲು ಮತತ್ರಯಗಳಿಗೆ ಒಪ್ಪುವಹಾಗೆ ಒಂದು ಅಭ್ಯಾಸ ಪದ್ಥತಿಯನ್ನೂ ಏರ್ಪಡಿಸಿರುತ್ತದೆ. ಈಗ ಶ್ರೀ ಶ್ರೀ ಪ್ರಕಾಶಾನಂದೇಂದ್ರಸರಸ್ವತೀಸ್ವಾಮಿಗಳ ನೇತೃತ್ವದಲ್ಲಿ ಈ ಅಭ್ಯಾಸ ಪದ್ಥತಿಯಲ್ಲಿ ಈ ವರ್ಷವೂ ಕೂಡ ಸಂಸ್ಕತ, ಇಂಗ್ಲೀಷು, ಕನ್ನಡ- ಈ ಮೂರು ಭಾಷೆಗಳಲ್ಲಿರುವ ಗ್ರಂಥಗಳ ಮೂಲಕ ತತ್ತ್ವವಿಚಾರವನ್ನೂ ಸಾಧನಕ್ರಮವನ್ನೂ ತಿಳಿಸಿಕೊಡಲಾಗುತ್ತಿದೆ. ವಿದ್ಯಾಲಯದ ವ್ಯಾಪ್ತಿಯು ಇಡಿ ಭಾರತ ದೇಶಕ್ಕೆ ಇರುವುದು. ಆದ್ದರಿಂದ ಬೋಧನಕ್ರಮದಲ್ಲಿ ಉಪಯೋಗಿಸುವ ಪ್ರಧಾನ ಭಾಷೆಗಳು ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಆಗಿರುವುದು.

ಅಭ್ಯಾಸದ ವಿಷಯಗಳು[ಬದಲಾಯಿಸಿ]

  • ಉಪನಿಷತ್ತುಗಳು, ಭಗವದ್ಗೀತೆ, ಬ್ರಹ್ಮಸೂತ್ರ-ಎಂಬ ಪ್ರಸ್ಥಾನತ್ರಯವನ್ನು ದಕ್ಷಿಣದೇಶದಲ್ಲಿ ಪ್ರಚಾರದಲ್ಲಿರುವ ಮತತ್ರಯದ ಪರಿಚಯದೊಡನೆ ಹೇಳಿಕೊಡಲಾಗುತ್ತದೆ. ಇದರ ಜೊತೆಗೆ ಹಿಂದೂ ಮತದ ಇತಿಹಾಸವನ್ನೂ ಭರತಖಂಡದಲ್ಲಿರುವ ವೀರಶೈವ; ಆರ್ಯಸಮಾಜ; ಬ್ರಹ್ಮಸಮಾಜ-ಮುಂತಾದ ಪಂಥಗಳ ಸಂಕ್ಷಿಪ್ತ ಪರಿಚಯವನ್ನೂ ಸೇರಿಸಿರುತ್ತದೆ.
  • ಅವೈದಿಕಮತಗಳ- ಎಂದರೆ ಜೈನ, ಬೌದ್ಧ, ಕ್ರಿಸ್ತಿಯನ್, ಇಸ್ಲಾಂ, ಪಾರ್ಸಿ, ಯಹೋದಿ ಮುಂತಾದವುಗಳ- ಸ್ಥಾಪಕರ ಜೀವನಚರಿತ್ರೆಯನ್ನೂ ಮುಖ್ಯೋಪದೇಶಗಳನ್ನೂ ಇಂಗ್ಲೀಷಿನಲ್ಲಿ ಅಥವಾ ಭಾಷಾಂತರದಲ್ಲಿ ಪ್ರಕಟವಾಗಿರುವ ಪುಸ್ತಕಗಳ ಸಹಾಯದಿಂದ ತಿಳಿಸಿಕೊಡಲಾಗುತ್ತದೆ.
  • ಜಪ, ಪೂಜೆ, ಧ್ಯಾನ-ಮುಂತಾದ ಸಾಧನಗಳ ಮರ್ಮವನ್ನು ವೈದಿಕ ಪದ್ಧತಿಗನುಗುಣವಾಗಿ ತಿಳಿಸಿಕೊಡಲಾಗುತ್ತದೆ.
  • ಪುರಾಣಪ್ರವಚನ, ಕೀರ್ತನ, ಉಪನ್ಯಾಸ- ಮುಂತಾದ ರೀತಿಯಿಂದ ಅಧ್ಯಾತ್ಮಜೀವನವನ್ನು ನಡೆಯಿಸಿಕೊಂಡು ಸತ್ಕಾಲಕ್ಷೇಪ ಮಾಡುವ ರೀತಿಯನ್ನೂ ಅ ಮೂಲಕ ಜನತಾಸೇವೆಯನ್ನು ಮಾಡುವ ಕ್ರಮವನ್ನೂ ತಿಳಿಸಿಕೊಡಲಾಗುತ್ತದೆ. ಈಗಿನ ಶ್ರೀ ಶ್ರೀ ಪ್ರಕಾಶನಂದೇಂದ್ರಸರಸ್ವತಿಸ್ವಾಮಿಗಳವರು ಮತ್ತು ಇತರ ಗೌರವಾನ್ವಿತ ವಿದ್ವಾಂಸರುಗಳು ಪಾಠಗಳನ್ನು ಅಭ್ಯಸ ಮಾಡಿಸುವರು.

ವಿದ್ಯಾರ್ಥಿಗಳಿಗಿರಬೇಕಾದ ಅರ್ಹತೆ[ಬದಲಾಯಿಸಿ]

  • ಈಗಿನ ಜನಜೀವನಕ್ರಮವನ್ನರಿತುಕೊಂಡು ವೈದಿಕ, ಅವೈದಿಕ ಬ್ರಾಹ್ಮಣ, ಅಬ್ರಾಹ್ಮಣ-ಮುಂತಾದ ಭೇದಭಾವನೆಗಳನ್ನು ಮುರಿದು ತಮ್ಮ ಅನುಷ್ಠಾನದಿಂದ ಜನರಿಗೆ ಮೇಲುಙ್ಕ್ತೆಯಾಗಿ ಪರಸ್ಪರ ಸೌಹಾರ್ದವನ್ನೂ ಸಹಾನುಭೂತಿಯನ್ನೂ ಬೆಳೆಯಿಸಬಲ್ಲ ಉದಾರದೃಷ್ಟಿಯ ವೈದಿಕ ಧರ್ಮೋಪದೇಶಕರನ್ನು ಸಜ್ಜುಗೊಳಿಸುವುದೇ ವಿದ್ಯಾಲಯದ ಹೆಗ್ಗುರಿಯು.
  • ಕಾವ್ಯ/ನಾಟಕದ ಮಟ್ಟದ ಸಂಸ್ಕೃತ ಪರಿಚಯವನ್ನು ಬಲ್ಲವರಾಗಲಿ, ಕಾಲೇಜು ಮಟ್ಟದ ಇಂಗ್ಲೀಷ್ ಪರಿಚಯವನ್ನು ಬಲ್ಲವರಾಗಲಿ ವಿದ್ಯಾಲಯಕ್ಕೆ ಸೇರಬಹುದು. ಇಂಗ್ಲೀಷ್ ಪರಿಚಯವಿಲ್ಲದ ಸಂಸ್ಕೃತ ವಿದ್ಯಾರ್ಥಿಗಳಿಗೂ, ಸಂಸ್ಕೃತ ಪರಿಚಯವಿಲ್ಲದ ಇಂಗ್ಲೀಷ್/ಕನ್ನಡ/ತೆಲುಗು ವಿದ್ಯಾರ್ಥಿಗಳಿಗೂ ಆಯಾ ಭಾಷೆಗಳನ್ನು ಕಲಿಸಿಕೊಡಲಾಗುವುದು.
  • ವಾಚಾಲತ್ವ, ಸಂಸ್ಕೃತಜ್ಞಾನ, ಗ್ರಹಣಶಕ್ತಿ-ಇವುಗಳು ಹೆಚ್ಚಾಗಿರುವವರನ್ನು ಮೊದಲು ಆರಿಸಿಕೊಳ್ಳಲಾಗುವುದು. ಒಂದೆರಡು ತಿಂಗಳು ಪರೀಕ್ಷೆಯನ್ನು ಮಾಡಿದ ಮೇಲೆಯೇ ನಿಯತವಿದ್ಯಾರ್ಥಿಗಳ ಗುಂಪಿಗೆ ಸೇರಿಸಿಕೊಳ್ಳಲಾಗುತ್ತದೆ.
  • ಇಲ್ಲಿ ಹತ್ತರಿಂದ ಹದಿನಾರು ವರ್ಷ ವಯೋಮಿತಿ ಇರುವ ಕಿರಿಯ ವಿದ್ಯಾರ್ಥಿಗಳಿಗೆ ಸಂಸ್ಕೃತಭಾಷಾಭ್ಯಾಸ, ಸೂಕ್ತ ವೇದಾಧ್ಯಯನ, ಪೂಜಾವಿಧಾನ ಇತ್ಯಾದಿಗಳನ್ನು ಹೇಳಿಕೊಡುವ ಏರ್ಪಾಡನ್ನೂ ಮಾಡಲಾಗಿದೆ. ಈ ಅಭ್ಯಾಸಕ್ರಮಕ್ಕೆ ಮೂರು ವರ್ಷಗಳ ಕಾಲ ಐದು ವಿದ್ಯಾರ್ಥಿಗಳಿಗೆ ನಿಗದಿ ಪಡಿಸಲಾಗಿದೆ. [೨]

ಪ್ರಕಟಿತ ಮುಖ್ಯಗ್ರಂಥಗಳು[ಬದಲಾಯಿಸಿ]

  • ಮುಖ್ಯವಾಗಿ:-
  • ಶಂಕರರು ಸಂಸ್ಕೃತದಲ್ಲಿ ಬರೆದ ಹತ್ತು ಉಪನಿಷತ್ ಭಾಷ್ಯಗಳಿಗೆ ಕನ್ನಡದಲ್ಲಿ ಪ್ರತಿಪದಕ್ಕೂ ಅರ್ಥ, ತಾತ್ಪರ್ಯ ವಿವರಣೆಯ ಟಿಪ್ಪಣಿ. (ಈಶ,ಕೇನ,ಕಠ, ಪ್ರಶ್ನ, ಮಂಡಕ,ಮಾಡೂಕ್ಯ, ಛಾಂದೊಗ್ಯ, ಬ್ರಹದಾರಣ್ಯಕ, ಐತರೇಯ ತೈತ್ಯರೀಯ,)
  • ಶಂಕರರು ಸಂಸ್ಕೃತದಲ್ಲಿ ಬರೆದ ಭಗವದ್ಗೀತಾ ಭಾಷ್ಯಕ್ಕೆ ಕನ್ನಡದಲ್ಲಿ ಪ್ರತಿಪದಕ್ಕೂ ಅರ್ಥ, ತಾತ್ಪರ್ಯ ವಿವರಣೆಯ ಟಿಪ್ಪಣಿ.
  • ಶಂಕರರು ಸಂಸ್ಕೃತದಲ್ಲಿ ಬರೆದ ಬ್ರಹ್ಮಸೂತ್ರ ಭಾಷ್ಯಕ್ಕೆ ಕನ್ನಡದಲ್ಲಿ ಪ್ರತಿಪದಕ್ಕೂ ಅರ್ಥ, ತಾತ್ಪರ್ಯ ವಿವರಣೆಯ ಟಿಪ್ಪಣಿ.
  • ವೇದಾಂತವನ್ನು ಹೊಸದಾಗಿ ಕಲಿಯುವವರಿಗಾಗಿ ವೇದಾಂತಬಾಲಬೋಧೆ ಮೊದಲಾದ ಗ್ರಂಥಗಳು.
  • ಸಂಸ್ಕೃತ ಕಲಿಯುವವರಿಗಾಗಿ ಕನ್ನಡದಲ್ಲಿ ವಿವರಣೆಸಹಿತ ಸಂಸ್ಕೃತ ಪಾಠಗಳು. ಭಕ್ತಿ ಮತ್ತು ಜ್ಞಾನಕ್ಕೆ ಸಂಬಂಧಪಟ್ಟ ಇನ್ನೂ ನೂರಾರು ಗ್ರಂಥಗಳು.
  • ಇಂಗ್ಲಿಷನಲ್ಲಿ ಪ್ರಕಟಿತವಾದ ಕೆಲವು- ಉದಾಹರಣೆಗೆ: ಎಲ್ಲವೂ ಪಿಡಿಎಫ್‍ನಲ್ಲಿ ಲಭ್ಯ:-
  • Broad Outline of Vedanta —Gangolly, D. B.
  • dhyatma Yoga—Swāmiji, Sri Sri Satchidānandendra Saraswati
  • Advaita Pancharatnam (An Introduction to the Spiritual Science of Advaita Vedanta in Five Verses)—Gangolly, D. B.
  • Avasthatraya or The Unique Method of Vedanta—Swāmiji, Sri Sri Satchidānandendra Saraswati
  • rahmavidya or Knowledge of The Ultimate Realit —Gangolly, D. B.
  • ಇನ್ನೂ ಅನೇಕ:[೩]

ಉಲ್ಲೇಖ[ಬದಲಾಯಿಸಿ]

  1. http://www.adhyatmaprakasha.org/Volumes/PDF/kannada/179/index.pdf
  2. http://www.adhyatmaprakasha.org/php/circulars/revised_price_list_2017.pdf
  3. Adhyatma Prakasha Karyalaya