ಅಗ್ನಿಯ ರೆಕ್ಕೆಗಳು

ವಿಕಿಪೀಡಿಯ ಇಂದ
Jump to navigation Jump to search

ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆ ಎಲ್ಲಾತರದ ಓದುಗರ ಮನಸೆಳೆಯುತ್ತದ. ಓದುಗರು ಸಾಮಾನ್ಯರು, ಯುವಕರು, ವಯಸ್ಕರು, ನಿರ್ವಹಣೆ ಪಂಡಿತರು , ವೃತ್ತಿಪರರು, ತಾಂತ್ರಿಕ ವರ್ಗದವರು ಯಾರಾದರೂ ಆಗಿರಬಹುದು. ಚಕ್ಕವರಾದ ಯುವಪೀಳಿಗೆಗೆ ಮಾತ್ರ "ರೆಸೊನೆನ್ಸ್" ಮನದಟ್ಟವಾಗದೆ ಇರಬಹುದು. ಎಲ್ಲರೂ ಈ ಪುಸ್ತಕದಿಂದ ಏನಾದರೂ ಕಲಿಯಬಹುದು. ಬರವಣಿಗೆಯ ಶೈಲಿಯ ಸರಳತೆಯಿಂದ ನಮ್ಮ ದೇಶದ ಕ್ಷಿಪಣಿ ತಂತ್ರ ಜ್ಞಾನದ ರಂಗದಲ್ಲಿ ಒಂದು ಸಂಕ್ಷಿಪ್ತ ಪಕ್ಷಿ ನೋಟ ಒದಗಿಸಿದ್ದಾರೆ. ನಮ್ಮ ದೇಶದಲ್ಲಿ ಈ ರೀತಿಯ ಪುಸ್ತಕ ಅತಿವಿರಳ. ಅತಿ ಉತ್ತಮ ಮಟ್ಟದ ವಿಜ್ಞಾನಿಗಳನ್ನು ಮತ್ತು ಇತರ ವ್ಯಕ್ತಿಗಳನ್ನು ಪ್ರಶಂಶಿಸುವರು. ಈ ಪುಸ್ತಕದಲ್ಲಿ ಅಡಗಿರುವ ಸಾರಾಂಶವನ್ನು ತೀಕ್ಣ ತಂತ್ರ ಜ್ಞಾನದ ಬಗ್ಗೆ ಹುಡುಕುವ ಭಾವದಲ್ಲಿದೆ. ಸರ್ವತೊ ಮುಖ ದರ್ಶನ ,ಬಾಹ್ಯಾಕಾಶ ಮತ್ತು ತಂತ್ರ ಜ್ಞಾನದ ಬಗ್ಗೆ ಮಹಿತಿ ಕೊಟ್ಟಿದ್ದಾರೆ. ಆಸಕ್ತಿಯಿಂದ ಸತ್ಯ ದಾಖಲಿಸುವಲ್ಲಿ ಹಿಂಜರಿಯುತಿರಲಿಲ್ಲ. ಈ ಸಾಹಿತ್ಯದಲ್ಲಿ ಒಂದು ವ್ಯಕ್ತಿಯ ಕಥೆ ನಿರೂಪಿಸಲಗಿದೆ.ಈ ವ್ಯಕ್ತಿಯ ಜೀವನದಲ್ಲಿ ಶಕ್ತಿ ಪಡೆಯಲು ಶೈಕ್ಷ್ಕನಿಕ ಹಾದಿಯನ್ನು ತುಳಿಯದೆ ತನ್ನದೇ ಆದ ಅಭಿರುಚಿಯಿಂದ, ತನ್ನದೆ ಆದ ಪವಿತ್ರ ಗರ್ಭಗುಡಿಯನ್ನು ಸತತವಾದ ಪರಿಶ್ರಮದಿಂದ ಸಾಧಿಸಿದ್ದಾರೆ.ಅವರು ಜನರ ಗುಂಪುಗಳನ್ನು ಒಟ್ಟಿಗೆ ಹೆಣೆದರು, ಹಾಗು ಅವರೆಲ್ಲರನ್ನು ಅಸಾಧ್ಯವದದ್ದನ್ನು ಮುಟ್ಟಲು ಹುರಿದುಂಬಿಸಿದರು.ಹೀಗೆ ಗುರಿ ಮುಟ್ಟಿದವರೆಲ್ಲರೂ ಆತ್ಮಗೌರವವನ್ನು ಬಹಳಷ್ಟು ಹೆಚ್ಛಿಸಿಕೊಂಡರು.

ಎ.ಪಿ.ಜೆ ಅಬ್ದುಲ್ ಕಲಾಂ

ಅಧ್ಯಾಯಗಳು[ಬದಲಾಯಿಸಿ]

ಈ ಪುಸ್ತಕದ ಹೆಸರಿನಂತೆ ಅವರಲ್ಲಿರುವ ಅಧ್ಯಾಯಗಳು ಮನಮುಟ್ಟುತ್ತವೆ.

ಅಧ್ಯಾಯ ಒಂದು " ಓರಿಯೆಂಟೀಶನ್"[ಬದಲಾಯಿಸಿ]

ಅವರ ಮೂವತ್ತೆಂಟು ವರ್ಷಗಳ ಕಥೆ ಹೇಳುತ್ತದೆ. ಅವರ ಬಾಲ್ಯ ,ವಯಸ್ಕರಾದದ್ದು ಹಾಗು ರಾಕೆಟರಿಯನ್ನು ಸೇರಿದ್ದರ ಬಗ್ಗೆ ಹೇಳುತ್ತದೆ.ಅವರ ಜೀವನವನ್ನು ರೂಪಿಸಿದ್ದ ಜನರ ಬಗ್ಗೆ ಬರೆಯುತ್ತಾರೆ. ಯಾರೂ ಅವರು ಬರೆದ ಈ ಕಥೆಯನ್ನು ಓದದೆ ಇರಬಾರದು.ಓದಬೆಕಾದರೆ ರ್. ಕೆ ನಾರಾಯಣರವರ ಬರವಣಿಗೆ ನೆನಪಾಗುತ್ತದೆ.ಹೀಗೆ ಶಿಕ್ಷಣ ವಿಧ್ಯಾಭ್ಯಾಸ ಹಾಗೂ ಧರ್ಮ ಒಟ್ಟೂಟ್ಟಿಗೆ ಪ್ರಭಾವ ಬೀರಿದೆ ಯೆಂದು ಹೇಳಿದ್ದಾರೆ.ಆಗಿನ ಕಾಲದಲ್ಲಿ ಹಳ್ಳಿಗಳಲ್ಲಿ ವಿಧ್ಯಾಭ್ಯಾಸ ಎಷ್ಟು ಕಷ್ಟ ಎಂದು ವಿವರಿಸಿದ್ದಾರೆ.ಈಗಿನ ಕಾಲದವರಿಗೆ ಆಗ ಎಷ್ಟು ತೊಂದರೆಗಳನ್ನು ಜನರು ಎದುರಿಸುತಿದ್ದರು ಎಂದು ಊಹಿಸಲು ಅಸಾಧ್ಯ..ಈ ಮೊದಲನೆಯ ಅದ್ಯಾಯ ಇದನ್ನು ಚೆನ್ನಾಗಿ ವಿವರಿಸಿದೆ.ಕೆಳ ಹಾಗು ಮಧ್ಯಮ ವರ್ಗದ ಜನರು ಶಿಕ್ಷಣಕ್ಕಾಗಿ ನಗರಗಳಲ್ಲಿರುವ ಮೂಲಸೌಕರ್ಯ ಮತ್ತು ಆರ್ಥಿಕ ಬೆಂಬಲವನ್ನು ಪಡೆಯಲು ಪಟ್ಟ ಆಘಾತಗಳನ್ನು ದ್ರುಶ್ರೀಕರಿಸುವುದಕ್ಕೆ ಸಾಧ್ಯವಿಲ್ಲ.

ಅಧ್ಯಾಯ ಎರಡು "ಸೃಷ್ಟಿ"[ಬದಲಾಯಿಸಿ]

ಅವರ ಮುಂದಿನ ಹದಿನೇಳು ವರ್ಷಗಳನ್ನು ಪ್ರತಿಭಿಂಭಿಸುತ್ತದೆ.೧೯೮೦ ವರಗೆ ಹೇಗೆ ಅವರು ಎಲ್ಲರೊಂದಿಗೆ ಒಬ್ಬರಾದ ಇಂಜೀನೀಯರಿಂದ ಪ್ರೊಜೆಕ್ಟ್ ಡೈರೆಕ್ಟರ್ ಆಗಿ, ಯಶಸ್ವಿಯಾಗಿ SLV ಸಾಟೆಲೈಟ್ ಅನ್ನು ಹಾರಿಸಿ, ದೇಶಕ್ಕೆ ಹೆಮ್ಮೆ ತಂದು ಕೊಟ್ಟರು ಎಂದು ವಿವರಿಸಲಾಗಿದೆ.ಅವರ ತಂಡದಲ್ಲಿದ್ದ ಎಲ್ಲರೂ ಅವರು ಮಾಡಿದ ಕೆಲಸಗಳನ್ನು ನೆನಪಿಸಿ ಕೊಳ್ಳುತ್ಥಾರೆ. ಉನ್ನತ ಹುದ್ದೆಗಳಲ್ಲಿದ್ದವರು ಹಾಗೂ ಕೆಚ್ಛೆದೆಯ ಬ್ಯಾಕ್ರ ರೂಮ್ ಹುಡುಗರು .ಇಲ್ಲಿ ಹಲವಾರು ತಾಂತ್ರಿಕ ವಿಷಯಗಳನ್ನು ಚರ್ಚಿಸಲಾಗಿದೆ ಮತ್ತು ಇವುಗಳು ತಾಂತ್ರಿಕ ಮನಸ್ಸುಳ್ಳವರ ಆಸಕ್ತಿಯನ್ನು ಗೆದ್ದಿದೆ.ಸಾರಾಭಾಯ್ ಅವರ ವಿವರಣೆ ಬಾಹ್ಯಾಕಶ ತಂತ್ರಜ್ಞಾನ ಆರಂಭವದ ಸಮಯದಿಂದ ಇದ್ದರೂ, ಐತಿಹಸಿಕವಾಗಿ ಅವರ ಕೆಲಸದ ವೈಖರಿ ಹಾಗೂ ದ್ರುಷ್ಟಿಕೋನ ಮುಖ್ಯವಾಗಿದೆ. ಕಲಾಂ ಅವರು ನಿರ್ದೇಶಕರಾಗಿದ್ದಾಗ ಧವನ್ ಅವಂನ್ನು ಇಸ್ರೊದ ಚೇರ್ಮನ್ ಆಗಿ ಹಾಗೂ ಭ್ರಮ್ ಪ್ರಕಾಶ್ ಅವರನ್ನು ಡೈರೆಕ್ಟರ್ ಆಗಿ ಆರಿಸಿದರೆಂದು ವಿವರಿಸಿಲ್ಲ, ಇದರ ಅವಶ್ಯಕತೆ ಇಲ್ಲದಿರಬಹುದು. ಅವರಲ್ಲಿ ಇತರರನ್ನು ಕೆಲಸಕ್ಕೊಸ್ಕರ ಒಟ್ಟಿಗೆ ತರುವ ಗುಣಗಳು ಹಾಗೂ ಕನಿಷ್ಟ ಪರಸ್ಪರ ನೋವು ಉಂಟು ಮಾಡುವ ಸಂಭವವಿಲ್ಲದ ಹಾಗೆ ಕೆಲಸ ಮಾಡಿಸುವ ಹುಣಗಳಿದ್ದವು. ಅವರ ಗಮನ ಹಾಗೆಯೇ ಸಂಭವನೀಯ ಸಮಸ್ಯೆ ಇರುವ ಪ್ರದೇಶಗಳತ್ತ ಎಲ್ಲಾ ಸಮಯ ಅಗತ್ಯವಾಗಿ ಹರಿಯುತ್ತಿತು. ಮೊದಲ SLV ಹಾರಾಟ ಕಕ್ಷೆ ತಲುಪಲು ವಿಫಲವದಾಗ ಅವರ ಸಂಕಟ ಹಾಗೂ ನಿರ್ವಾಹಕರು ಹೇಗೆ ಅವರನ್ನು ಅದೇ ಸ್ಥನದಲ್ಲಿ ಉಳಿಸಿಕೊಳ್ಳುತ್ತರೆ ಎಂದು ಹೇಳಲಾಗುತ್ತದೆ. ಆಕರ್ಶಕವದ ಅನಿಸಿಕೆಗಳು ಕವನಗಳು ಮತ್ತು ವೈಯಕ್ತಿಕ ಕುಟುಂಬದ ವಿವರಗಳು ಹಾಗೂ ಹಾರ್ಡ್ ತಾಂತ್ರಿಕ ವಿವರಣೆಗಳನ್ನು ನಡುನಡುವೆ ಎರಚಿ ಓದುಹರ ಮನಸ್ಸನ್ನು ಸೂರೆಗೊಂಡಿದ್ದಾರೆ. ಈ ಅಧ್ಯಾಯವು ಕೊನೆಗೆ ಅವರ ISRO ಇಂದ DRDOಗೆ ನಿರ್ದೇಶಕರಾಗಿ ಪರಿವರ್ತನೆ ಹೊಂದಿದ್ದನ್ನು ರೂಪಿಸಿತ್ತದೆ.

ಅಧ್ಯಾಯ ಮೂರು "ಪ್ರೊಪಿಟಿಯೇಶನ್"[ಬದಲಾಯಿಸಿ]

ಮುಂದಿನ ಹತ್ತು ವರ್ಶಗಳ ಅನುಭವಗಳನ್ನು ಅಧ್ಯಾಯ ಮೂರರಲ್ಲಿ ಹೇಳಲಾಗಿದೆ .DRDL ನಲ್ಲಿ ಅವರು ಮಾಡಿದ ಅತ್ಯುತ್ತಮ ಸಾಧನೆಗಳನ್ನು ಒಳಗೊಂಡಿದೆ.ಈ ಅಧ್ಯಾಯ ,ಅವರು ಹೇಗೆ ಪ್ರಯೋಗಾಲಯವನ್ನು ದುರ್ಬಲ ಹೃದಯ ಹೊಂದಿದ್ದ ಹಾಗು ಕಡಿಮೆ ಆತ್ಮವಿಶ್ವಾಸದಿಂದ ಕೂಡಿದ್ದವರಿಂದ ರೂಪಾಂತರಗೊಳಿಸಿ ,ಹೆಮ್ಮೆಯಿಂದ ಹಾಗು ಪ್ರಭಲ ಸ್ವಾಭಿಮಾನದಿಂದ ಕ್ಷಿಪಣಿ ಸೇವೆಗಳ ಕೊಡಿಗೆ ಮಾಡುವ ಹಾಗೆ ಸಿದ್ದ ಪಡಿಸಿದರು.ಇದು ಒಂದು ಗಮನಾರ್ಹ ಸಾಹಸ ಆಗಿದೆ.ಮೂರು ವಿಧಾನಗಳ ಮೂಲಕ ಸಾಧಿಸಿದ್ಧಾರೆ. ಮೊದಲಯೆನದ್ದಾಗಿ- ಅತ್ಯುತ್ತಮವಾದ ಟೆಕ್ನೋತಾರ್ಕಿಕವಾದ ಸಮಕಾಲೀನ ಯೋಜನೆಗಳನ್ನು ತಯಾರಿಸಿ ಅವುಗಳನ್ನು ತಾಂತ್ತಿಕ ಕಮ್ಯುನಿಟಿಗೆ ಒಂದು ಸವಾಲಾಗಿ ತೋರಿಸುವುದು. ಎರಡನೆಯದಾಗಿ ಶೈಕ್ಷಣಿಕರು ಹಾಗೂ R and D ಸಂಸ್ದೆಯ ವಿಜ್ಞಾನಿಗಳನ್ನು ವಿಮರ್ಶೆಗೆ ಒಟ್ಟಿಗೆ ತಂದರು. ಆಗಿನ ಕಾಲದಲ್ಲಿ ಅದು ಸಾಂಪ್ರದಾಯಿಕವಾದ ರಕ್ಷಣಾ ಪ್ರಯೋಗಾಲಯಗಳಿಂದ ಹೊರಬಂದು ಸ್ಕಾಂಡಲೈಸಿಂಗ್ ಆಗಿತ್ತು.ಮೂರನೆಯೆದಾಗಿ ಬೇರೆ ಬೇರೆ ಯೊಜನೆಗಳ ಹಾಗೂ ಶಿಷ್ಟಾಚಾರಗಳ ಸದಸ್ಯರನ್ನು ಒಟ್ಟಿಗೆ ತಂದು ಆಂತರಿಕ ಸಭೆಯಲ್ಲಿ ಪರಸ್ಪರ ಕಲಿಕೆ ಸಂಭವಿಸಿತು.ಇಸ್ರೊದಲ್ಲಿನ ತನ್ನ ಹಿಂದಿನ ಅನುಭವದಿಂದ ಸೆಳೆದಿದ್ದ ವಿಧಾನವನ್ನು ಇಲ್ಲಿ ಅಳವಡಿಸಿಕೊಂಡರು.ಈ ಅಧ್ಯಾಯದ ಪುಟ ೧೨೨ ರಲ್ಲಿ,ಅವರು ಹೇಗೆ ಐದು ಸಮರ್ಗ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆಗಳ ನಿರ್ದೆಶಕರ ಆಯ್ಕೆಗೆ ಉಪಯೊಗಿಸಿದ ತರ್ಕವನ್ನು ಚರ್ಚಿಸಿದ್ದಾರೆ. ಈ ಮೂರು ಪ್ಯಾರಗಳು ಒಬ್ಬ ಯಶಸ್ವಿ ನಾಯಕನ ಬಗ್ಗೆ ಒಂದು ಒಳ ನೊಟವನ್ನು ಒದಗಿಸುತ್ತದೆ..ಮುಂದಿನ ಪೀಳಿಗೆಯ ನಿರ್ವಹಣವ್ಯಕ್ತಿ ಸಹ ಇದರಿಂದ ಜ್ಞಾನ ಪಡೆಯ ಬಹುದು. ಅವರು ಟಿ.ಎಸ್ ಶೇಶನ್ ಮೇಲೆ ಮಾಡಿದ ರಿಮಾರ್ಕ್ಸ್ ಅನ್ನು ಎಲ್ಲರೂ ಒಪ್ಪುತ್ತಾರೆ. ವಾಸ್ತವವಾಗಿ ಈ ಪುಸ್ತಕ ಅನೇಕ ತಿಳಿದಿರುವ ವ್ಯಕ್ತಿಗಳ ಬಗ್ಗೆ ಸತ್ಯವಾದ ಮಾತುಗಳು , ಪುಸ್ತಕವನ್ನು ವಿಶ್ವಾಸಾರ್ಹ ಮತ್ತು ಓದುವುದಕ್ಕೆ ಯೋಗ್ಯವಾಗಿ ಮಾಡುತ್ತದೆ. ಕಲಾಂ ಅವರಿಗೆ ಇಷ್ಟವಾದ ವಿಷಯಗಳು ಇದರಲ್ಲಿ ಒಂದು ಸೂಪರ್ ದೇಶ ಎಂದು ಯಾರೂ ನಮ್ಮನ್ನು ಗೌರವಿಸುವುದಿಲ್ಲ. ಅವರು "ಶಕ್ತಿ ಗೌರವಿಸುತ್ತದ ಶಕ್ತಿಯನ್ನು" ಎಂಬ ನುಡಿಗಟ್ಟನ್ನು ಬಹಳ ಸಲ ಉಪನ್ಯಾಸಗಳಲ್ಲಿ ಉಪಯೋಗಿಸಿದ್ದಾರೆ. ಈ ಮೌಲ್ಯಮಾಪನ ನಿಜಕ್ಕೂ ಸರಿಯಾಗಿದೆ.ಎರಡನೆಯದಾಗಿ-ಭಾರತ ಒಂದು ಅಭಿವೃದ್ದಿ ಹೊಂದಿದ ದೇಶವಾಗಿ ಮಾರ್ಪಡಬೇಕು ಎಂಬುದು ಅವರ ಯೋಜನೆ ಏನೆಂದರೆ ಭಾರತ ಆರ್ಥಿಕವಾಗಿ ಪ್ರಭಲವಾಗಿ, ಸೂಪರ್ ಪವರ್ ಶಕ್ತಿಗಳ ಜೊತೆ ಉತ್ತಮವಾಗಿ ರೇಟ್ ಆಗಬೇಕು.ಈ ಎಲ್ಲಾ ಸಂಭವಿಸಲು ಸಮಾಜದ ಉನ್ನತ ಮಟ್ಟದಲ್ಲಿರುವವರ ಅಗಾಧ ನೈತಿಕ ಪತನ ,ಸಾಮಾನ್ಯ ಮನುಷ್ಯನ ಜೀವನದಲ್ಲಿ ಪರಿಣಾಮ ಬೀರಲು ತಡೆಯಲು ಸಾಧ್ಯವಾಗದೇ ಇರುವುದು.ಹಳ್ಳಿಯಲ್ಲಿ ಇರುವ ಶೇಕಡ ೨೦% ಸಾಮಾನ್ಯ ಜನರ ಜೀವನದಲ್ಲಿ ಸುಧಾರಣೆ ತರುವಲ್ಲಿ ಅಸಮರ್ಥ್ಯತೆ ನಾಗರಿಕರಣದ ವೇಗ ತಗ್ಗಿಸುವಲ್ಲಿ ಅಸಮರ್ಥತೆ .ಶ್ರ್ರೀಮಂತರ ಹಾಗೂ ಬಡವರ ನಡುವೆ ಇರುವ ಅಸಮತೆಯನ್ನು ತಗ್ಗಿಸಲಾಗದೆ ಇರುವುದರ ಬಗ್ಗೆ ವಿವರಣೆ.ಇದನ್ನು ಮೀರಿ ಒಂದು ಯೋಗ್ಯ ಪ್ರಜೆಯ ಜೀವನದ ಪಯಣದ ಮುನ್ನೊಟ ಈ ಪುಸ್ತಕದಲ್ಲಿದೆ.

ಅಧ್ಯಾಯ ನಾಲ್ಕು "ಕಾಂಟೆಂಪ್ಲೇಷನ್"[ಬದಲಾಯಿಸಿ]

ಎಂಬ ಕೊನೆಯ ಅಧ್ಯಾಯ ಕಲ್ಪನೆಗಳು ಹಾಗು ಅಭಿಪ್ರಾಯಗಳ ಒಂದು ಸಾಂದ್ರಿಕರಣ ಹೊಂದಿದೆ.ಅವರ ವರ್ಣರಂಜಿತ ಜೀವನ ,ಅವರು ಗಳಿಸಿದ ಪ್ರಶಿಸ್ಥಿಗಳು (ಭಾರತದ ಅತ್ಯನ್ನುತ ಗೌರವ ,ಭಾರತ ರತ್ನ ಈ ಪುಸ್ತಕದಲ್ಲಿ ನಮೂದಿತವಾಗಿಲ್ಲ )ಹಾಗು ಮುಂದಿನ ಪೀಳಿಗೆಗೆ ಸಂದೇಶಗಳು. ಈ ಪುಸ್ತಕವನ್ನು ಪ್ರತಿಯೊಬ್ಭ ಓದಲು ಬರುವ ಭಾರತೀಯ ಓದಲೇ ಬೇಕು.