ಅಗರ

ವಿಕಿಪೀಡಿಯ ಇಂದ
Jump to navigation Jump to search

ಅಗರವು ತೀರ್ಥಹಳ್ಳಿ ತಾಲೂಕಿನ ಒಂದು ಊರು.


ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ ಎ.ವಿ. ನಾವಡ, ವೀರಣ್ಣ ರಾಜೂರ ಮತ್ತು ಅರಳುಮಲ್ಲಿಗೆ ಪಾರ್ಥಸಾರಥಿ ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು.

ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಅಗರ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಅಗರವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ. [೧]


"https://kn.wikipedia.org/w/index.php?title=ಅಗರ&oldid=968615" ಇಂದ ಪಡೆಯಲ್ಪಟ್ಟಿದೆ