ಅಕ್ಷಯ ತೃತೀಯ ಹಿನ್ನೆಲೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಅಕ್ಷಯ ತೃತೀಯಾ ಹೆಸರಿನ ಬರಹ ಆಗಲೇ ಅಸ್ತಿತ್ವದಲ್ಲಿದೆ. ಅಲ್ಲದೆ ಈ ಬರಹ ಅಪೂರ್ಣವಾಗಿದೆ

ತೀರ್ಥಂಕರ ವೃಷಭ ನಾಥ(ಆದಿನಾಥ)ರು ಸಂಸಾರದ ನಶ್ವರತೆಯನ್ನು ಅರಿತು ವೈರಾಗ್ಯವನ್ನು ಹೊಂದಿ ದೀಕ್ಷೆಯನ್ನು ಗ್ರಹಣೆ ಮಾಡಿ ತಪಸ್ಸಿಗೆ ಕಾಡಿಗೆ ತೆರಳುತ್ತಾರೆ.೬ ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಆಹಾರಕ್ಕೆಂದು ನಗರಕ್ಕೆ ವಿಧಿ ಪೂರ್ವಕ ಆಗಮಿಸುತ್ತಾರೆ.ಆದರೆ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರವನ್ನು ಕೊಡುವ ವಿಧಿಯನ್ನು ಶ್ರಾವಕ-ಶ್ರಾವಕಿಯರು ತಿಳಿದಿರುವುದಿಲ್ಲ.ಆ ಕಾರಣ ಜನರು ಮೊದಲೇ ಮಹಾರಾಜರಾಗಿದ್ದ ಅವರನ್ನು ಸತ್ಕರಿಸುವ ಭಾವನೆಯಿಂದ ವಿವಿಧ ಒಡವೆ,ವಸ್ತ್ರಗಳನ್ನು ಕೆಲವು ನೀಡಲು ಮುಂದಾಗುತ್ತಾರೆ,ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ.ಆದರೆ ಇದಾವುದನ್ನು ಬಯಸದ ಅವರು ಪುನಃ ಕಾಡಿಗೆ ತಪ್ಪಸ್ಸಿಗೆಂದು ಮರಳುತ್ತಾರೆ.ಇದಾಗಿ ೭ ತಿಂಗಳು ೯ ದಿನಗಳ ಉಪವಾಸದ ನಂತರ ಮತ್ತೆ ಹಸ್ತಿನಾಪುರ ಎಂಬ ನಗರಕ್ಕೆ ಆಹಾರಕ್ಕೆಂದು ಆಗಮಿಸುತ್ತಾರೆ.ಆವಾಗಲು ಪುನಃ ಅದೇ ಘಟನೆಗಳು ಮರುಕಳಿಸುತ್ತವೆ.ಆದರೆ ಅದೇ ನಗರದ ರಾಜಾ ಶ್ರೇಯಾಂಸನು ಇವರ ದರ್ಶನಕ್ಕೆಂದು ಪರಿವಾರ ಸಹಿತ ಆಗಮಿಸುತ್ತಾನೆ.ಆಗ ಅವನಿಗೆ ಹಿಂದಿನ ಜನ್ಮದ ಜಾತಿ ಸ್ಮರಣೆ ಆಗುತ್ತದೆ.ಹಿಂದಿನ ಭವ(೮ನೆ)ದಲ್ಲಿ ಇವರಿಬ್ಬರು(ಆದಿನಾಥರು) ಸೆರೀ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಆಗುತ್ತದೆ.ತಕ್ಷಣವೇ ರಾಜಾ ಸೋಮನು ಮತ್ತು ಶ್ರೆಯಾಂಸನು ಸೆರೀ ನವಧಾ ಭಕ್ತಿಯಿಂದ ಮೊದಲಿಗೆ ಇಕ್ಷು(ಕಬ್ಬಿನ ಹಾಲು)ರಸವನ್ನು ನೀಡುತ್ತಾರೆ.ಅಹಾರವಾದಾಕ್ಷಣ ದೇವತೆಗಳು ಪಂಚಾಶ್ಚರ್ಯ ವೃಷ್ಟಿ ಮಾಡುತ್ತಾರೆ.ಜನರು ಜಯ ಜಯಕಾರಗಳನ್ನು ಹಾಕಿ ಸಂತೋಷ ಪಡುತ್ತಾರೆ.ವೃಷಭ ನಾಥರಿಗೆ ಮೊದಲು ಆಹಾರ(ಪಾರಣಾ)ವಾದ ದಿವಸ ವೈಶಾಖ ಶುಕ್ಲ ತೃತೀಯ ತಿಥಿಯಿದ್ದ ಕಾರಣ ಆ ದಿನವನ್ನು “ಅಕ್ಷಯ ತೃತೀಯ“ವೆಂದು ಆಚರಿಸಲಾಗುತ್ತದೆ.ಜೈನ ಧರ್ಮದಲ್ಲಿ ಮುನಿಗಳಿಗೆ ಆಹಾರ ದಾನ ಮಾಡುವುದೆಂದರೆ ಅತ್ಯಂತ ಅತಿಶಯ,ಅಕ್ಷಯ ಪುಣ್ಯಕ್ಕೆ ಕಾರಣ ಎಂದು ಹೇಳಲಾಗಿದೆ.ಈ ದಿನ ಬಸದಿಗಳಲ್ಲಿ ವಿಶೇಷವಾಗೀ ಅಭಿಷೇಕ ಪೂಜೆ,ಉತ್ಸವಗಳನ್ನು ಆಚರಿಸಲಾಗುತ್ತದೆ.ಈ ದಿನ ದಿಗಂಬರ ಮುನಿಗಳಿಗೆ ,ವಿಶೇಷವಾಗಿ ಕಬ್ಬಿನ ಹಾಲನ್ನು ಆಹಾರ ದಾನದಲ್ಲಿ ನೀಡುವುದರಿಂದ ಧನ,ದಾನ್ಯಗಳು,ಮನೆಯಲ್ಲಿ ಸುಖ,ನೆಮ್ಮದಿ ಅಕ್ಷಯವಾಗಿ ವೃದ್ಧಿಯಾಗುತ್ತವೆ ಎಂಬ ನಂಬಿಕೆಯಿದೆ. ತೀರ್ಥಂಕರ ವೃಷಭ ನಾಥರ ಸಂಕ್ಷೇಪ ಜೀವನ ಪರಿಚಯ- ತಂದೆ-ರಾಜಾ ನಾಭೀರಾಯ(೧೪ ನೆ ಮನು) ತಾಯೀ-ರಾಣೀ ಮರುದೇವಿ ಜನ್ಮ ಸ್ಥಳ-ಅಯೋಧ್ಯ(ಉ.ಪ್ರ) ಗರ್ಭಕಲ್ಯಾಣ-ಆಷಾಡ ಕೃಷ್ಣ ೨ ಜನ್ಮ ಕಲ್ಯಾಣ-ಚೈತ್ರ ಕೃಷ್ಣ ೯ ದೀಕ್ಷಾ ಕಲ್ಯಾಣ-ಚೈತ್ರ ಕೃಷ್ಣ ೯ ಕೇವಲ ಜ್ಞಾನ-ಪಾಲ್ಗ್ಹುಣ ಕೃಷ್ಣ ೧೧ ಮೋಕ್ಷ(ನಿರ್ವಾಣ)ಕಲ್ಯಾಣ-ಮಾಘ ಕೃಷ್ಣ ೧೪ ಜನತೆಗೆ ಕಲಿಸಿದ 6 ವಿದ್ಯೆಗಳು-ಅಸಿ,ಮಸಿ,ಕೃಷಿ,ವಿಧ್ಯೆ,ವಾಣಿಜ್ಯ,ಮತ್ತು ಶಿಲ್ಪ ಕಲೆ. ಪಟ್ಟ ರಾಣೀಯರು-ನಂದಾ(ಯಶಸ್ವತೀ),ಸುನಂದಾ. ಪುತ್ರರು-೧೦೧(ಭಾರತ,ಬಾಹುಬಲೀ ಸೇರೀ) ಪುತ್ರೀಯರು-ಬ್ರಾಮ್ಹೀ,ಸುಂದರೀ.(ಬ್ರಾಮ್ಹಿಗೆ ಅಕ್ಷರ ವಿಧ್ಯೆ,ಸುಂದರೀಗೆ ಅಂಕ ವಿಧ್ಯೆ ಕಳಿಸಿದರು.) ದೀಕ್ಷೆ(ವೈರಾಗ್ಯ)ಗೆ ಕಾರಣ-ನೀಲಾಂಜನ ನೃತ್ಯ. ದೀಕ್ಷಾ ಸ್ಥಳ-ಪ್ರಯಾಗ,ಸಿದ್ದಾರ್ಥಕ ವನದಲ್ಲಿ,ವಟ ವೃಕ್ಷದ ಕೆಳಗೆ. ಪ್ರಮುಖ ಗಣಧರ-ವೃಷಭ ಸೇನ. ಪ್ರಮುಖ ಆರ್ಯಿಕಾ-ಬ್ರಾಮ್ಹೀ. ಪ್ರಮುಖ ಉಪಸ್ಥಿತಿ-ಭರತ ಚಕ್ರವರ್ತೀ.(ಈತನಿಂದಲೇ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ಬಂತು ಅನ್ನುವ ಉಲ್ಲೇಖಗಳು ಸಿಗುತ್ತವೆ) ಆಯು,ಎತ್ತರ-೮೪ ಲಕ್ಷ ಪೂರ್ವ ಮತ್ತು ೫೦೦ ಧನುಸ್ಸು ಎತ್ತರ. ಇತರೆ ಹಸರುಗಳು-ಆದಿನಾಥ,ಪುರುದೇವ,ಆದಿ ಬ್ರಮಂಹ,ಪ್ರಜಾಪತೀ.