ಅಕರ್ಮಕ

ವಿಕಿಪೀಡಿಯ ಇಂದ
Jump to navigation Jump to search

ಕೆಲವು ಕ್ರಿಯಾಪದಗಳನ್ನು ವಾಕ್ಯದಲ್ಲಿ ಬಳಸುವಾಗ ಕರ್ಮಪದವೊಂದನ್ನು ಸೇರಿಸಬೇಕಾಗುತ್ತದೆ. 'ರಹೀಮನು ತಿಂದನು' ಎನ್ನುವಾಗ 'ಏನನ್ನು?' ಎಂಬ ಪ್ರಶ್ನೆಯೇಳುತ್ತದೆ. ಅದಕ್ಕಾಗಿ 'ಹಣ್ಣನ್ನು', 'ತಿಂಡಿಯನ್ನು' ಎಂಬಂತಹ ಕರ್ಮಪದವೊಂದನ್ನು ಸೇರಿಸಬೆಕಾಗುತ್ತದೆ. ಆದ್ದರಿಂದ 'ತಿಂದನು' ಎಂಬ ಕ್ರಿಯಾಪದ ಸಕರ್ಮಕವಾಗಿದೆ. ಆದರೆ,'ರಹೀಮನು ಬಂದನು' ಎಂಬ ವಾಕ್ಯದಲ್ಲಿ ಬಂದನು ಎಂಬ ಕ್ರಿಯಾಪದಕ್ಕೆ ಯಾವ ಕರ್ಮಪದದ ಅವಶ್ಯಕತೆಯಿರುವುದಿಲ್ಲ. ಹೀಗೆ ವಾಕ್ಯದಲ್ಲಿ ಬಳಸಲಾಗುವ ಯಾವ ಧಾತು ಕರ್ಮಪದವನ್ನು ಅಪೇಕ್ಷಿಸುವುದಿಲ್ಲವೋ ಅದು ಅಕರ್ಮಕವೆನಿಸುತ್ತದೆ.

"https://kn.wikipedia.org/w/index.php?title=ಅಕರ್ಮಕ&oldid=614470" ಇಂದ ಪಡೆಯಲ್ಪಟ್ಟಿದೆ