Silver tetradrachm of King Antialcidas. Obv: Bust of Antialcidas wearing aegis and holding a spear, with Greek legend BASILEOS NIKEPHOROU ANTIALKIDOU "Of Victorious King Antialcidas". Rev: Zeus with lotus-tipped sceptre, in front of an elephant with a bell (symbol of Taxila), surmouted by Nike holding a wreath, crowning the elephant. Kharoshti legend: MAHARAJASA JAYADHARASA ANTIALIKITASA "Victorious King Antialcidas". Pushkalavati mint.
ರಾಜ್ಯಭಾರ
130–120 BCE (R. C. Senior) 115–95 BCE (Boppearachchi)
ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಸು.ಪ್ರ..ಶ.ಪು 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜ ದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ ರಾಯಭಾರಿಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ ತಕ್ಷಶಿಲೆಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬರೆಹಗಳಿವೆ.