ವಿಷಯಕ್ಕೆ ಹೋಗು

ಅಂತರ್‌ಚತುರ್ಥಕ ವ್ಯಾಪ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವರಣಾತ್ಮಕ ಸಂಖ್ಯಾಶಾಸ್ತ್ರದಲ್ಲಿ, ಅಂತರ್‌ಚತುರ್ಥಕ ವ್ಯಾಪ್ತಿ ಎಂದರೆ ಸಂಖ್ಯಾಶಾಸ್ತ್ರೀಯ ಚೆದರಿಕೆಯ ಮಾನ, ಅಂದರೆ ದತ್ತಾಂಶದ ಹರಡಿಕೆ.[]

ಚತುರ್ಥಕ ವಿಚಲನೆ ಅಥವಾ ಅರೆ ಅಂತರ್‌ಚತುರ್ಥಕ ವ್ಯಾಪ್ತಿಯನ್ನು ಅಂತರ್‌ಚತುರ್ಥಕ ವ್ಯಾಪ್ತಿಯ ಅರ್ಧವೆಂದು ವ್ಯಾಖ್ಯಾನಿಸಲಾಗುತ್ತದೆ.[]

ಚತುರ್ಥಕ ವಿಚಲನೆಯು ಹಲವಾರು ಅಪೇಕ್ಷಿತ ಬೆಲೆಗಳ ಮಧ್ಯಮವನ್ನು (ಮೀನ್) ಕುರಿತಂತೆ ವೈಯಕ್ತಿಕ ಬೆಲೆಗಳ ಚದರಿಕೆಯನ್ನು (ಡಿಸ್ಪರ್ಶನ್) ಅಳತೆ ಮಾಡಲು ಬಳಸುವ ಮಾನಗಳ ಪೈಕಿ ಒಂದು (ಕ್ವಾರ್ಟೈಲ್ ಡೀವಿಯೇಷನ್).

ಉದಾಹರಣೆ

[ಬದಲಾಯಿಸಿ]

ಉದಾಹರಣೆಗೆ A ಮತ್ತು B ಎನ್ನುವ ಇಬ್ಬರು ಆಟಗಾರರು 10 ಕ್ರಿಕೆಟ್ ಆಟಗಳಲ್ಲಿ ಈ ರೀತಿ ಓಟಗಳನ್ನು ಗಳಿಸಿದರೆಂದು ಭಾವಿಸೋಣ:

A 40 14 77 55 69 73 62 42 38 30
B 29 32 1 60 71 109 96 83 4 15

ಪ್ರತಿಯೊಬ್ಬನ ಸರಾಸರಿ ಓಟ 50. ಆದರೆ A ಯ ಗಳಿಕೆ ಹೆಚ್ಚು ಸುಸಂಗತ; B ಯದಾದರೋ ಅಡ್ಡೇಟು ಹೊಡೆದಂತೆ ಯದ್ವಾತದ್ವಾ.  A ಗಳಿಸಿದ ಓಟಗಳ ವ್ಯಾಪ್ತಿ 30 ರಿಂದ 77 ರ ವರೆಗಿದೆ: B ಯ ವ್ಯಾಪ್ತಿ 1 ರಿಂದ 109 ರ ವರೆಗಿದೆ. ಇವುಗಳಿಂದ ಕನಿಷ್ಠತಮ ಬೆಲೆಗಳನ್ನೂ, ಗರಿಷ್ಠತಮ ಬೆಲೆಗಳನ್ನೂ ತೆಗೆದುಹಾಕಿ ಉಳಿಯುವ ಭಾಗದ ವ್ಯಾಪ್ತಿಯನ್ನು ಪರಿಗಣಿಸುವುದು ಉತ್ತಮ. ಇದರ ಮೇಲೆ ಎರಡು ತುದಿಗಳಲ್ಲೂ ಕಾಲಂಶದಷ್ಟನ್ನು ತೆಗೆದುಹಾಕೋಣ. ಅಂದರೆ ಕನಿಷ್ಠತಮ ಎರಡು ಬೆಲೆಗಳನ್ನೂ, ಗರಿಷ್ಠತಮ ಎರಡು ಬೆಲೆಗಳನ್ನೂ ತೆಗೆದುಹಾಕಲಾಗಿದೆ. ಆಗ A ಯ ಓಟಗಳ ವ್ಯಾಪ್ತಿ 38 ರಿಂದ 60 ರವರೆಗೂ, B ಯ ಓಟಗಳ ವ್ಯಾಪ್ತಿ 15 ರಿಂದ 83 ರವರೆಗೂ ಇರುವುದು. ಹೀಗೆ ವ್ಯಾಪ್ತಿಯನ್ನು ಅಳತೆಗೋಲಾಗಿ ಇಟ್ಟುಕೊಳ್ಳುವುದು ಕಚ್ಚಾ ಪದ್ಧತಿ. ಇದನ್ನು ಸಂಸ್ಕರಿಸಿ ಚತುರ್ಥಕ ವಿಚಲನೆಯನ್ನು ಬಳಸುತ್ತೇವೆ.

ಉಲ್ಲೇಖಗಳು

[ಬದಲಾಯಿಸಿ]
  1. Dekking, Frederik Michel; Kraaikamp, Cornelis; Lopuhaä, Hen Paul; Meester, Ludolf Erwin (2005). A Modern Introduction to Probability and Statistics. Springer Texts in Statistics. London: Springer London. doi:10.1007/1-84628-168-7. ISBN 978-1-85233-896-1.
  2. Yule, G. Udny (1911). An Introduction to the Theory of Statistics. Charles Griffin and Company. pp. 147–148.