ಅಂಗಸ್ಥಲಗಳು

ವಿಕಿಪೀಡಿಯ ಇಂದ
Jump to navigation Jump to search

ಅಂಗಸ್ಥಲಗಳು ವೀರಶೈವ ಧರ್ಮದಲ್ಲಿ ಮೋಕ್ಷವನ್ನು ಬಯಸುವ ಜೀವನು ಅಥವಾ ಅಂಗನು ನೂರೊಂದು ಸ್ಥಳಗಳ ಆಚರಣೆಗಳನ್ನು ನಡೆಸಬೇಕಾಗುತ್ತದೆ. ಇದನ್ನು ಏಕೋತ್ತರಶತಸ್ಥಲ ಎಂದು ಕರೆಯಲಾಗಿದೆ. ಈ ವಿಷಯವನ್ನು ಸಿದ್ಧಾಂತ ಶಿಖಾಮಣಿ, ಗಣಭಾಷ್ಯರತ್ನಮಾಲೆ, ಮುಂತಾದ ಗ್ರಂಥಗಳಲ್ಲಿ ಹೇಳಲಾಗಿದೆ. ಅಂಗಸ್ಥಲಗಳು 44, ಲಿಂಗಸ್ಥಲಗಳು 57. ಅಂಗಸ್ಥಲಗಳ ವಿವರ ಹೀಗಿದೆ _ ಪಿಂಡ; ಪಿಂಡಜ್ಞಾನ; ಸಂಸಾರಹೇಯ; ಗುರುಕಾರುಣ್ಯ; ಲಿಂಗಧಾರಣ; ವಿಭೂತಿ; ರುದ್ರಾಕ್ಷ; ಮಂತ್ರ: ಭಕ್ತಮಾರ್ಗಕ್ರಿಯಾ; ಉಭಯ; ಗುರುಲಿಂಗಜಂಗಮ (ತ್ರಿವಿಧ ಸಂಪತ್ತಿ);ಗುರುಲಿಂಗಜಂಗಮ ಪ್ರಸಾದ (ಚತುರ್ವಿಧ ಸಾರಾಯ); ಉಪಾಧಿಮಾಟ; ನಿರುಪಾಧಿಮಾಟ; ಸಹಜಮಾಟ; ಮಾಹೇಶ್ವರ; ಲಿಂಗನಿಷ್ಠೆ; ಪುರ್ವಾಶ್ರಯನಿರಸನ; ವಾಗದ್ವೈತ ನಿರಸನ; ಆಹ್ವಾನನಿರಸನ: ಅಷ್ಟತನುಮೂರ್ತಿ ನಿರಸನ; ಸರ್ವಗತ ನಿರಸನ; ಶಿವಜಗನ್ಮಯ; ಭಕ್ತದೇಹಿಕಲಿಂಗ; ಪ್ರಸಾದಿ; ಗುರುಮಹಾತ್ಮೆ; ಪ್ರಸಾದಮಹಾತ್ಮೆ; ಪ್ರಾಣಲಿಂಗಿ; ಪ್ರಾಣಲಿಂಗಾರ್ಚನೆ; ಶಿವಯೋಗ ಸಮಾಧಿ; ಅಂಗ-ಲಿಂಗ; ಲಿಂಗನಿಜ; ಶರಣ; ತಾಮಸ; ನಿರಸನ; ನಿರ್ದೇಶ; ಶೀಲಸಂಪಾದನೆ; ಐಕ್ಯಸ್ಥಲ; ಏಕಭಾಜನ; ಸಹಭೋಜನ; ಸರ್ವಾಚಾರಸಂಪತ್ತಿ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: