ಅಂಕೋಲೆ (ಸಸ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಕೋಲೆ ಇಂದ ಪುನರ್ನಿರ್ದೇಶಿತ)
ಅಂಕೋಲೆ
Illustration
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. salviifolium
Binomial name
Alangium salviifolium (L. f.) Wangerin
Synonyms
  • Alangium acuminatum Wight ex Steud., nom. inval.
  • Alangium decapetalum Lam.
  • Alangium lamarckii Thwaites
  • Alangium latifolium Miq. ex C.B.Clarke
  • Alangium mohillae Tul.
  • Alangium salviifolium subsp. decapetalum (Lam.) Wangerin
  • Alangium sundanum var. miqueliana Kurz
  • Alangium tomentosum Lam.
  • Karangolum mohillae (Tul.) Kuntze

ಅಂಕೋಲೆ ಒಂದು ಔಷಧ ಸಸ್ಯ. ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದ ಒಂದು ಹೂ ಬಿಡುವ ಸಸ್ಯ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಅಲಾಂಜಿಯಮ್ ಸಾಲ್ವಿಫೋಲಿಯಮ್ ಇದರ ವೈಜ್ಞಾನಿಕ ಹೆಸರು. ಇದಕ್ಕೆ ಅಂಕೋತವೆಂಬ ಹೆಸರೂ ಇದೆ.ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದ ಒಂದು ಹೂ ಬಿಡುವ ಸಸ್ಯ. ಅಂಕೋಲಮ್ ಎಂದು ಮಲೆಯಾಳಮ್ ಭಾಷೆಯಲ್ಲಿ,ಅಕೋಲ ಎಂದು ಹಿಂದಿಯಲ್ಲಿ,ಅಲಂಜಿ ಎಂದು ತಮಿಳು ಭಾಷೆಯಲ್ಲಿ ಕರೆಯಲ್ಪಡುತ್ತದೆ.[೧]

ಲಕ್ಷಣಗಳು[ಬದಲಾಯಿಸಿ]

Flower, Long anther, Longer stigma

ಗಿಡವು ಬೇಸಗೆಯಲ್ಲಿ ಎಲೆ ಉದುರುವ ಬಗೆಯದು (ಡೆಸಿಡ್ಯುವಸ್). ಆದರೆ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಎಲೆಗಳನ್ನು ಹೊಂದಿರುತ್ತದೆ. ಹಳೆ ಎಲೆಗಳು ಉದುರುವುದಕ್ಕಿಂತ ಮುಂಚಿತವಾಗಿಯೇ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ಅನೇಕ ವೇಳೆ ಎಲೆಗಳ ಕಕ್ಷಗಳಲ್ಲಿ ಮುಳ್ಳುಗಳಿರುತ್ತವೆ. ಇವು ಚೂಪು, ಮತ್ತು ಬಹು ಗಟ್ಟಿ. ಚಕ್ಕೆ ತುಂಬ ತೆಳು: ಕಾಂಡದಿಂದ ಸುಲಭವಾಗಿ ಬೇರ್ಪಡಿಸಬಹುದು. ಹೂಗಳು ಬಿಳ್ಳಿಬಣ್ಣದವು; ಸುವಾಸನಾಯುಕ್ತ, ಹಣ್ಣುಗಳು ಆಲದಹಣ್ಣಿನ ಗಾತ್ರದವಾಗಿದ್ದು ಕೆಂಪುಬಣ್ಣಕ್ಕಿರುತ್ತವೆ. ಚಳ್ಳೆಹಣ್ಣಿನಂತೆ ಒಳಗಡೆ ತಿರುಳು ಬಹು ನುಣುಪು. ಬೀಜ ಕಾಫಿ ಬೀಜದಂತೆ ಗಟ್ಟಿ.

ಬೆಳವಣಿಗೆ[ಬದಲಾಯಿಸಿ]

ಇದು ಒಂದು ಪೊದೆ ಸಸ್ಯ. ಎಲ್ಲ ಬಗೆಯ ಹವೆಯಲ್ಲೂ ಮಣ್ಣಿನಲ್ಲೂ ಬೆಳೆಯುತ್ತದೆ.

ಉಪಯೋಗಗಳು[ಬದಲಾಯಿಸಿ]

Simple Leaves, Alternate with characteristic galls
Stunted branches with sharp ends giving impression of a thorn
Bark

ಬೀಜದಿಂದ ಎಣ್ಣೆಯನ್ನು ತೆಗೆದು ಔಷಧಿಗೆ ಮತ್ತು ದೀಪ ಉರಿಸುವುದಕ್ಕೆ ಉಪಯೋಗಿಸುತ್ತಾರೆ. ಬೇರಿನಿಂದ ಬಟ್ಟಿ ಇಳಿಸಿ ಪಡೆಯುವ ಆಸವವನ್ನು ಔಷಧಿಗೆ ಉಪಯೋಗಿಸುವುದೂ ಉಂಟು. ಗಿಡಕ್ಕೆ ಮುಳ್ಳಿರುವುದರಿಂದ ಬೇಲಿಯಲ್ಲಿ ಬೆಳೆಸಲು ಉಪಯುಕ್ತ. ಮರ ವ್ಯವಸಾಯದ ಮುಟ್ಟುಗಳನ್ನು ತಯಾರಿಸಲು ಬರುತ್ತದೆ.

ಔಷಧೀಯ ಗುಣಗಳು[ಬದಲಾಯಿಸಿ]

ಈ ಸಸ್ಯವು ಆಯುರ್ವೇದ,ಸಿದ್ಧ ಮತ್ತು ಟೆಬೇಟಿಯನ್ ವೈದ್ಯ ಪದ್ಧತಿಗಳಲ್ಲಿ ಬಳಕೆಯಲ್ಲಿದೆ.[೨]

ನಂಬಿಕೆಗಳು[ಬದಲಾಯಿಸಿ]

ಅಂಕೋಲೆಯ ಕೋಲನ್ನು ಹಿಡಿದು ತಿರುಗಾಡಿದಲ್ಲಿ ಪೀಡೆ ಪಿಶಾಚಿಗಳ ಭಯವಿರುವುದಿಲ್ಲವೆಂಬುದು ಹಿಂದಿನಿಂದ ಕೆಲವು ವರ್ಗದ ಜನರಲ್ಲಿರುವ ಒಂದು ನಂಬಿಕೆ.

ಉಲ್ಲೇಖಗಳು[ಬದಲಾಯಿಸಿ]

  1. Umberto Quattrocchi. 2000. CRC World Dictionary of Plant Names volume I. CRC Press: Boca Raton; New York; Washington,DC;, USA. London, UK. ISBN 978-0-8493-2675-2 (vol. I). (see External links below).
  2. "Alangium salvifolium".[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: