అసమీయా ಭಾಷೆ
Assamese | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
India and Bangladesh | |||
ಪ್ರದೇಶ: | Assam, Arunachal Pradesh and Nagaland[೧] | |||
ಒಟ್ಟು ಮಾತನಾಡುವವರು: |
೧೫ million | |||
ಭಾಷಾ ಕುಟುಂಬ: | Indo-European Indo-Iranian Indo-Aryan Eastern Bengali–Assamese Assamese | |||
ಬರವಣಿಗೆ: | Assamese alphabet Assamese Braille | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ಭಾರತ (Assam) | |||
ನಿಯಂತ್ರಿಸುವ ಪ್ರಾಧಿಕಾರ: |
Asam Sahitya Sabha (literature/rhetorical congress of Assam) | |||
ಭಾಷೆಯ ಸಂಕೇತಗಳು | ||||
ISO 639-1: | as
| |||
ISO 639-2: | asm
| |||
ISO/FDIS 639-3: | asm
| |||
|
ಅಸ್ಸಾಂ ರಾಜ್ಯದ ಅಧಿಕೃತ ಭಾಷೆ. ಈ ಭಾಷೆಯನ್ನು ಸ್ವಭಾಷೆಯಲ್ಲಿ అసమీయా ಎಂದು ಕರೆಯುತ್ತಾರೆ.
ಪೀಠಿಕೆ
[ಬದಲಾಯಿಸಿ]ಭವ್ಯ ಇತಿಹಾಸವನ್ನುಳ್ಳ ಭಾಷೆಗಳಲ್ಲೊಂದು. ಅಸ್ಸಾಮೀ ಎಂಬುದು ಅಸಮೀಯ ಎಂಬುದರ ಆಂಗ್ಲ ರೂಪ; axamia ಎಂಬುದು ಅಸಮೀಯ ಎಂಬುದರ ಉಚ್ಚಾರಣೆ. ಈ ಹೆಸರಿಂದಲೇ ಆ ಪ್ರಾಂತ್ಯದ ಜನರಲ್ಲಿ ಅದು ರೂಢಿಯಾಗಿದೆ. ಭಾರತದ ಸಂವಿಧಾನದಲ್ಲಿ ಅಧಿಕೃತವಾಗಿ ಅಂಗೀಕೃತವಾಗಿರುವ ಇಪ್ಪತ್ತೆರಡು ರಾಷ್ಟ್ರೀಯ ಭಾಷೆಗಳಲ್ಲಿ ಇದು ಕೂಡ ಒಂದಾಗಿದೆ. ಇದು ಅತ್ಯಂತ ಪೂರ್ವದಿಕ್ಕಿಗಿರುವ ಅಸ್ಸಾಂ ಪ್ರಾಂತ್ಯದಲ್ಲಿ, ಮುಖ್ಯವಾಗಿ ಪೂರ್ವದಿಕ್ಕಿಗೆ ಉತ್ತರ ಲಖಿಮ್‍ಪುರ್, ಪಶ್ಚಿಮ ದಿಕ್ಕಿಗೆ ಗೋಯಲ್‍ಪಾರ ಇವನ್ನೊಳಗೊಂಡ ವಿಸ್ತಾರವಾದ ಪ್ರದೇಶವನ್ನು ವ್ಯಾಪಿಸಿದ ಬ್ರಹ್ಮಪುತ್ರ ಕಣಿವೆಯ ಜಿಲ್ಲೆಗಳಲ್ಲಿ, ಇದು ಜನರ ಆಡುಮಾತಾಗಿದೆ. ಸುಮಾರು ೧೩೦ ಲಕ್ಷ ಜನರ ಆಡುಭಾಷೆ[೨]. ಅಲ್ಲದೆ ಹೆಚ್ಚು ಸಂಖ್ಯೆಯ ಇತರ ಪ್ರಾಂತ್ಯವಾಸಿಗಳು ದ್ವಿತೀಯ ಭಾಷೆಯಾಗಿ ಇದನ್ನು ಮಾತನ್ನಾಡುತ್ತಾರೆ; ಅರ್ಥಮಾಡಿಕೊಳ್ಳುತ್ತಾರೆ[೩]. ಅಸ್ಸಾಮೀಭಾಷೆ ಸುತ್ತಲೂ ಪ್ರಸಿದ್ಧವಾದ ಸೈನೋ ಟಿಬೆಟನ್ ಮತ್ತು ಥಾಯ್-ಕಡೆ ಭಾಷಾ ಪರಿವಾರದಿಂದ ಆವೃತವಾಗಿದ್ದು ನಡುವೆ ಆಸ್ಟ್ರಿಕ್ ಭಾಷೆಯಾದ ಖಾಸಿ ಭಾಷಿಕವಾಗಿ ಒಂದು ಸಣ್ಣ ದ್ವೀಪವನ್ನು ರಚಿಸಿಕೊಂಡಿದೆ. ಅದು ಮಾಗಧಿ, ಪ್ರಾಕೃತ ಮತ್ತು ಅದರ ಅಪಭ್ರಂಶ ಉಪಭಾಷೆಗಳಿಂದ-ಭಾರತದ ಈಶಾನ್ಯ ದಿಕ್ಕಿನ ಎಲ್ಲ ಪ್ರಮುಖ ಆರ್ಯನ್ ಭಾಷೆಗಳಿಗೆ (ಎಂದರೆ, ಅಸ್ಸಾಮಿ, ಬಂಗಾಳಿ, ಒರಿಯ ಮತ್ತು ಬೆಹರಿ ಉಪಭಾಷೆಗಳು) ನಿಕಟತಮ ಮೂಲವಾಗಿದ್ದವುಗಳಿಂದ-ಉತ್ಪನ್ನವಾದ ಇಂಡೋ ಆರ್ಯನ್ ಭಾಷೆ[೪]. ಡಾ. ಎಸ್. ಕೆ. ಚಟರ್ಜಿಯವರ ಪ್ರಕಾರ, ಮಾಗಧೀ ಪ್ರಾಕೃತ ರಾಧಾ, ವಂಗ, ವಾರೇಂದ್ರ, ಮತ್ತು ಕಾಮರೂಪ-ಎಂಬ ನಾಲ್ಕು ಅಪಭ್ರಂಶ ಉಪಭಾಷಾವರ್ಗಗಳಿಗೆ ಜನ್ಮ ಕೊಟ್ಟಿದೆ ಹಾಗೂ ಕಾಮರೂಪ ಉಪಭಾಷಾ ವರ್ಗದಿಂದ ಉತ್ತರ ಬಂಗಾಳದ ಮತ್ತು ಅಸ್ಸಾಮಿನ ಭಾಷೆ ರೂಪಗೊಂಡಿದೆಯೆಂಬದಾಗಿ ತಿಳಿಯುವುದು[೫] . ಪ್ರಾಚೀನ ಕಾಲದಲ್ಲಿ ಉತ್ತರ ಬಂಗಾಳ ಮತ್ತು ಅಸ್ಸಾಮಿನ ಭಾಷೆ ಏಕ ಉಪಭಾಷಾವರ್ಗವಾಗಿತ್ತು. ಈಗ ಉತ್ತರ ಬಂಗಾಳದಲ್ಲಿರುವ ಕೂಛ್‍ಬಿಹಾರಿನ ಕೂಛ ದೊರೆಗಳು ಅಸ್ಸಾಮೀ ಭಾಷೆ ಸಾಹಿತ್ಯಗಳನ್ನು ಘೋಷಿಸಿದರು. ವಾಸ್ತವವಾಗಿ ಅಸ್ಸಾಮೀ ಸಾಹಿತ್ಯ ಕ್ರಿ.ಶ. 15-16ನೆಯ ಶತಮಾನಗಳಲ್ಲಿ, ಮಹಾರಾಜ ನರನಾರಾಯಣ ಮತ್ತು ಚಿಲಾರಾಯರ ಆಶ್ರಯದಲ್ಲಿ, ತನ್ನ ಉಚ್ಛ್ರಾಯ ದೆಸೆಯನ್ನು ಮುಟ್ಟಿತು. ಕಳೆದ ಶತಮಾನದಲ್ಲಿ ಉತ್ತರ ಬಂಗಾಳದ ಭಾಷೆ ಅದರ ಪ್ರಬಲ ನೆರೆಭಾಷೆಯಾದ ಬಂಗಾಳಿಯಿಂದ ಬಲುಮಟ್ಟಿಗೆ ಪ್ರಭಾವಿತವಾಯಿತು. ಆ ಪ್ರದೇಶ ರಾಜಕೀಯವಾಗಿ ಬಂಗಾಳದೊಡನೆ ಬೆರೆತುಹೋದ ಮೇಲೆ ಬದಲಾವಣೆಯ ಕಾರ್ಯ ತ್ವರೆಗೊಂಡಿತು.
ಪ್ರಾಚೀನ ಉಲ್ಲೇಖಗಳು ಮತ್ತು ಉದಾಹರಣೆಗಳು
[ಬದಲಾಯಿಸಿ]ಪ್ರಸಿದ್ಧ ಚೀನಾಯಾತ್ರಿಕನಾದ ಹುಯೆನ್‍ತ್ಸಾಂಗ್ ಕ್ರಿ.ಶ. 643ರಲ್ಲಿ, ಕುಮಾರ ಭಾಸ್ಕರವರ್ಮನ ಆಡಳಿತಕಾಲದಲ್ಲಿ, ಇಂದಿನ ಅಸ್ಸಾಮಿಗೆ ಪ್ರಾಚೀನ ಕಾಲದ ಹೆಸರಾಗಿರುವ ಕಾಮರೂಪಕ್ಕೆ ಭೇಟಿ ಕೊಟ್ಟಿದ್ದ. ಆತ ಆ ನಾಡಿನ ಭಾಷೆ ಮಧ್ಯಭಾರತದ ಭಾಷೆಗಿಂತ ಸ್ವಲ್ಪಮಟ್ಟಿಗೆ ಬೇರೆಯೆಂಬುದಾಗಿ ಉಲ್ಲೇಖಿಸಿರುತ್ತಾರೆ[೬]. ಕಾಮರೂಪ ಕ್ರಿ.ಪೂ. 200ರಿಂದ ಕ್ರಿ.ಶ. 200ರ ಅವಧಿಯಲ್ಲಿ ಆರ್ಯೀಕೃತವಾಗಿತ್ತು. ಕುಮಾರ ಭಾಸ್ಕರವರ್ಮ ಸಂಸ್ಕೃತವಿದ್ಯೆ ಮತ್ತು ಸಂಸ್ಕೃತಿಗಳಿಗೆ ಪೋಷಣೆಯಿತ್ತ ಹಿಂದೂ ದೊರೆ. ಆದ್ದರಿಂದ, ಕ್ರಿ.ಶ. 7ನೆಯ ಶತಮಾನದ ಹೊತ್ತಿಗೆ ಬಂಗಾಳದವರೆಗೆ ವಿಸ್ತರಿಸಿದ್ದ ಕುಮಾರನ ರಾಜ್ಯ ಆರ್ಯಜನರಿಂದ ತುಂಬಿದ್ದುದಾಗಿರಬೇಕು ಮತ್ತು ಅವರು ತಮ್ಮ ಹೆಚ್ಚುಗಾರಿಕೆಯಿಂದಾಗಿ ಆರ್ಯನ್ ಭಾಷೆಯನ್ನು ಬೆಳೆಸಿರಬೇಕು ಎಂದು ಹೇಳಬಹುದು[೭][೮][೯]. ಚೀನಾ ಯಾತ್ರಿಕ ಮಧ್ಯಭಾರತದಲ್ಲಿರುವುದಕ್ಕಿಂತ ಸ್ವಲ್ಪ ಮಟ್ಟಿಗೆ ಬೇರೆಯಾದ-ಎಂಬುದಾಗಿ ಹೇಳಿರುವುದನ್ನು ನೋಡಿದರೆ ಆತ ಪೂರ್ವದ ಅಪಭ್ರಂಶ ಉಪಭಾಷೆಯ ಸ್ವತಂತ್ರವಾದ ಬೆಳೆವಣಿಗೆಯನ್ನು ಗಮನಿಸಿರಬೇಕು. ಇದೇ ಅಸ್ಸಾಮಿಯಾಗಿ ಮುಂದೆ ರೂಪುಗೊಂಡಿತು. ಅಸ್ಸಾಮಿ ಭಾಷೆ ದೇಶದ ಇತರ ಎಲ್ಲ ಸೋದರಿ ಭಾಷೆಗಳಿಂದ ತೀರ ಪ್ರತ್ಯೇಕವಾದ ವಿಶಿಷ್ಟ ರೂಪರಚನೆಗಳಿಂದ ಕಂಡು ಬರುವ ಹಾಗೆ ಧ್ವನ್ಯಾತ್ಮಕ ರೂಪಾತ್ಮಕ ಮತ್ತು ಪದಕೋಶಾತ್ಮಕ ಶಾಖೆಗಳೆಲ್ಲದರಲ್ಲೂ ಬೇಕಾದಷ್ಟು ಬದಲಾವಣೆಗಳನ್ನು ಅಂಗೀಕರಿಸಿದೆ. ಈ ಹೊಸ ಬದಲಾವಣೆ ಅಥವಾ ವೈಲಕ್ಷಣ್ಯಗಳು ಆರ್ಯ ಮತ್ತು ಆರ್ಯೇತರ ಭಾಷಾಜನ ಒಂದೇ ಒಕ್ಕೂಟದ ಒಂದೇ ಭಾಷಾಮಾಧ್ಯಮದ (ಎಂದರೆ ಅಸ್ಸಾಮೀ) ದೆಸೆಯಿಂದಾಗಿ ಬೆರೆತು ಹೋದುದರ ಫಲವೆನ್ನಬಹುದು. ಈ ಬೆಸುಗೆ ಬಹಳ ಹಿಂದಯೇ ಆಯಿತೆಂಬುದಕ್ಕೆ ಹುಯೆನ್‍ತ್ಸಾಂಗ್ ಈ ಭಾಷೆಯ ಬಗೆಗೆ ಆಡಿರುವ ಮಾತುಗಳು ಸಾಕ್ಷ್ಯವಾಗಿವೆ. ಆರ್ಯನ್ ಭಾಷೆ ಆರ್ಯೇತರ ಜನರ ಮೇಲೆ ಹೇರಲ್ಪಟ್ಟಿತು. ಅವರು ಅದನ್ನು ಅತಿ ಹಿಂದಿನ ಕಾಲದಿಂದಲೂ ಬಹುಭಾಷೀಯ ಪೂರ್ವಭಾರತವೆಲ್ಲಕ್ಕೂ ಒಂದು ರಾಷ್ಟ್ರಭಾಷೆಯಾಗಿ ಒಪ್ಪಿಕೊಂಡರು. ಅದಕ್ಕೆ ಅನುಗುಣವಾದ ಸಂಗತಿಗಳಿಂದಲೂ ವೈಶಿಷ್ಟ್ಯದಿಂದಲೂ ಅದನ್ನು ಹಾಗೆ ರೂಪಿಸಿದರು. ಅಹೋಂ ದೊರೆಗಳ ಮೂಲಕವಾಗಿ 15-16ನೆಯ ಶತಮಾನಗಳ ಅವಧಿಯಲ್ಲಿ ಗುಡ್ಡಗಾಡಿನ ಪ್ರದೇಶದಲ್ಲಿ ಬಹುಭಾಗವನ್ನು ವ್ಯಾಪಿಸಿದ್ದ ಅಹೋಂ ರಾಜ್ಯ ಒಗ್ಗಟ್ಟಿಗಾಗಿ ಅಸ್ಸಾಮೀಯನ್ನು ಪ್ರಾಂತ್ಯಭಾಷೆಯನ್ನಾಗಿ ಒಪ್ಪಿಕೊಂಡಿದ್ದು, ಷಾನ್ ವಿಜೇತರು 300 ವರ್ಷಗಳ ಕಾಲದ ಆಡಳಿತದ ಅನುಭವದಿಂದ ಇಂದಿನ ಹೆಸರಾದ ಅಸ್ಸಾಂ ಎಂಬುದನ್ನು ರಾಜ್ಯಕ್ಕೆ ಕೊಟ್ಟದ್ದು - ಮೇಲಿನ ಮಾತಿಗೆ ಪೋಷಕವಾದ ಪ್ರಬಲ ಆಧಾರವಾಗಿದೆ. ಕ್ರಿ.ಶ. 5ನೆಯ ಶತಮಾನದಿಂದೀಚೆಗೆ ಲಿಖಿತವಾಗಿರುವ ಪ್ರಾಚೀನ ಅಸ್ಸಾಂ ದೊರೆಗಳ ತಾಮ್ರ ಶಾಸನಗಳು ಸಂಸ್ಕೃತದಲ್ಲಿ ಬರೆಯಲಾಗಿದ್ದರೂ ಆ ಕಾಲದ ಅಸ್ಸಾಮೀ ಭಾಷೆಯ ಕೆಲವು ಧ್ವನ್ಯಾತ್ಮಕ ಲಕ್ಷಣಗಳ ಬಗೆಗೆ ಸ್ಪಷ್ಟವಾದ ಸೂಚನೆಗಳನ್ನು ಕೊಡುತ್ತವೆ. ಆ ಲಕ್ಷಣಗಳು ಇಂದಿನ ಭಾಷೆಯವರೆಗೆ ಉಳಿದುಕೊಂಡು ಬಂದಿವೆ. ಆ ತಾಮ್ರ ಶಾಸನಗಳಲ್ಲಿ ಲಿಪಿಕಾರರ ಅಕ್ಷರ ವಿನ್ಯಾಸದ (ಕಾಗುಣಿತದ) ತಪ್ಪುಗಳಿಗೆ ಆಡುಮಾತಿನ ಸ್ವರಮೈತ್ರಿ ಕಾರಣವಾಗಿ, ಅದು ಸಂಸ್ಕೃತ ಭಾಷೆಯನ್ನು ಕೂಡ ವಿಕೃತಗೊಳಿಸಿದೆ. ಈಗ ಸಂಸ್ಕೃತದ ಎಲ್ಲ ಊಷ್ಮಗಳನ್ನು ಕಂಠ್ಯಗಳಾಗಿ ಉಚ್ಛರಿಸುವುದಕ್ಕೆ ಶ-ಷ-ಸ ಗಳನ್ನು ತೋರಿದಂತೆ ಬರೆಯುವ ಅಕ್ಷರವಿನ್ಯಾಸ ಭ್ರಾಂತಿಯ ನಿದರ್ಶನವೇ ಸಾಕು. ಹೀಗೆಯೇ ಸಂಸ್ಕೃತ ದಂತ್ಯ ಮತ್ತು ಮೂರ್ಧನ್ಯ ಸ್ಪರ್ಶಗಳ ವತ್ಸ್ರ್ಯಕರಣ ಮತ್ತು ತಾಲವ್ಯ ಮತ್ತು ಅನುಘರ್ಷಶ್ರೇಣಿಗಳ ವತ್ಸ್ರ್ಯಕರಣ ಮತ್ತು ಊಷ್ಮಿಕರಣ-ಇವುಗಳ ವಿಚಾರದಲ್ಲೂ ಇದು ಕಂಡುಬರುತ್ತದೆ. ಇದು ಏನೇ ಇರಲಿ, ಅಸ್ಸಾಮೀಯ ಪ್ರಾಚೀನತಮ ಉದಾಹರಣೆ ಚಾರ್ಯ ಎನ್ನುವ ಹೆಸರಿಂದ ಸುಪರಿಚಿತರಾಗಿರುವ ಬೌದ್ಧಮತೀಯ ಸಿದ್ಧಾಚಾರ್ಯರು ರಚಿಸಿರುವಂಥ ಅನುಭಾವೀ ದೋಹಾಗಳನ್ನು ಮೊದಲು ಕಂಡುಹಿಡಿದು ನೇಪಾಳದಿಂದ ಭಾರತಕ್ಕೆ ತಂದವರು ಮಹಾಮಹೋಪಧ್ಯಾಯ ಹರಪ್ರಸಾದ ಶಾಸ್ತ್ರಿಗಳು. ಇವನ್ನು ರಚಿಸಿದವರು ಪೂರ್ವಭಾರತದ ಬೇರೆ ಬೇರೆ ಭಾಗಗಳಿಗೆ ಸೇರಿದ 84 ಜನ ಸಿದ್ಧರು. ಇವರಲ್ಲಿ ಕೆಲವರು ಕಾಮರೂಪಕ್ಕೆ ಸೇರಿದವರೆಂಬುದಾಗಿ ಡಾ|| ಜಿ. ತುಚ್ಚಿ ಮೊದಲಾದ ತಜ್ಞರು ನಿಶ್ಚಿತವಾಗಿ ಗುರುತಿಸಿದ್ದಾರೆ. ಡಾ|| ಪಿ. ಸಿ. ಬಾಗ್ಚಿಯವರ ಪ್ರಕಾರ ಈ ದೋಹಾಗಳು ಕ್ರಿ. ಶ. 8 ರಿಂದ 10ನೆಯ ಶತಮಾನದ ನಡುವೆ ರಚಿತವಾದವು. ದೋಹಾಗಳ ಭಾಷೆ ಈಚಿನ ಅಪಭ್ರಂಶ. ಆದ್ದರಿಂದ ನವೀನ ಇಂಡೋ-ಆರ್ಯನ್ ಭಾಷೆಗಳ ಬೆಳವಣಿಗೆಯ ಕಾಲವನ್ನು ಅದು ತೋರಿಸುತ್ತದೆ. ಅಲ್ಲಿಯ ಕೆಲವು ಧ್ವನ್ಯಾತ್ಮಕ ಮತ್ತು ರೂಪಾತ್ಮಕ ಲಕ್ಷಣಗಳು ಒಂದು ಮಾದರಿಯ ಅಸ್ಸಾಮೀ ಭಾಷೆಯವೆಂದೇ ಗುರುತಿಸಲ್ಪಟ್ಟಿವೆ. ಅವು ಶತಮಾನಗಳ ಕಾಲ ಸಾಗಿ ಇಂದಿನ ಜನಭಾಷೆಯವರೆಗೆ ಉಳಿದುಕೊಂಡು ಬಂದಿವೆ. ಕೆಲವು ನುಡಿಗಟ್ಟಿನಂಥ ಮಾತುಗಳು ಅಸ್ಸಾಮೀಯರಲ್ಲಿ ಇಂದಿಗೂ ತುಂಬಾ ಬಳಕೆಯವಾಗಿವೆ. ಭಾಷಿಕವಾದ ಲಕ್ಷಣಗಳಿರಲಿ, ದೋಹಾ ಎಂಬ ಸಾಹಿತ್ಯ ಪ್ರಕಾರ ಕೂಡ, ಆರಂಭ ಕಾಲದ ವೈಷ್ಣವ ಕವಿಗಳ ರಚನೆಯಾದ ಬಾರ್‍ಗೀತ್ ಎಂಬ ದಿವ್ಯಗೀತೆಗೆ ಪೂರ್ವಭಾವಿರೂಪವೇ ಆಗಿದೆ. ಆದರೆ ನಿಶ್ಚಿತವಾಗಿ ಅಸ್ಸಾಮೀ ಭಾಷೆಯದೆಂದು ಹೇಳಬಹುದಾದ ಪ್ರಾಚೀನತಮ ಸಾಹಿತ್ಯ ಕೃತಿಯೆಂದರೆ, ಕ್ರಿ. ಶ 13ನೆಯ ಶತಮಾನದ ಉತ್ತರಾರ್ಧದಲ್ಲಿ ರಚಿತವಾದ ಹೇಮಾ ಸರಸ್ವತಿಯ ಪ್ರಹ್ಲಾದ ಚರಿತ. ಈ ಲಘುಕಾವ್ಯದ ಭಾಷೆ ಇನ್ನೂ ಅದರ ಅಪಭ್ರಂಶ ಮಾತೆಯ ಪೋಷಣೆಯಲ್ಲೇ ಬೆಳೆದು ಬಂದಿರುವ ಹಾಗೆ ತೋರುತ್ತದೆ. ಕ್ರಿ. ಶ. 14ನೆಯ ಶತಮಾನದಿಂದೀಚೆಗೆ ಆಧುನಿಕ ಕಾಲದವರೆಗೆ ಅಸ್ಸಾಮೀ ಸಾಹಿತ್ಯ ನಿರಂತರವಾಗಿ ಹರಿದುಕೊಂಡು ಬಂದಿದೆ. ಗದ್ಯರಚನೆ 16ನೆಯ ಶತಮಾನದಲ್ಲಿ ಪ್ರಸಿದ್ಧ ವೈಷ್ಣವಸುಧಾರಕನಾದ ಶ್ರಿ ಶಂಕರದೇವನ ಏಕಾಂಕ ನಾಟಕಗಳಲ್ಲಿ ಮೊದಲ ಬಾರಿಗೆ ಬಳಕೆಗೆ ಬಂತು. ಅದರ ಮುಂದಿನ ಶತಮಾನದಲ್ಲಿ ವೈಕುಂಠನಾಥ ಭಟ್ಟಾಚಾರ್ಯ ಕವಿರತ್ನನ ಕೈಯಲ್ಲಿ, ಆತನ ಉತ್ಕøಷ್ಟ ಗದ್ಯಶೈಲಿಯ ಸಮಗ್ರ ಭಾಗವತ ಪುರಾಣಾನುವಾದ ಮತ್ತು ಗೀತಾನುವಾದಗಳಲ್ಲಿ ಅದು ಅಭಿವೃದ್ಧಿಗೆ ಬಂತು. 17ನೆಯ ಶತಮಾನದಲ್ಲಿದ್ದ ವೈಷ್ಣವಗುರುಗಳ ಗದ್ಯಾತ್ಮಕ ಜೀವನ ಚರಿತ್ರೆಯಾಗಿರುವ ಕಥಾ ಗುರುಚರಿತ ಮತ್ತು ಬುರಂಜಿಗಳೆಂಬ ಹೆಸರಿನಿಂದ ಹೆಚ್ಚು ಪರಿಚಿತವಾಗಿರುವ ಚಾರಿತ್ರಿಕ ರಚನೆಗಳು ಪ್ರಾಚೀನ ಅಸ್ಸಾಮೀ ಗದ್ಯಕೃತಿಗಳ ಹೆಮ್ಮೆಯ ಭಂಡಾರಕ್ಕೆ ನಿದರ್ಶನಗಳಾಗಿವೆ.
ಉಪಭಾಷೆಗಳು ಮತ್ತು ಉಪಭಾಷಾ ವಿಭೇದಗಳು
[ಬದಲಾಯಿಸಿ]ಅಸ್ಸಾಮಿನ ಭಾಷಿಕ ನಕ್ಷೆಯಲ್ಲಿ ಉಪಭಾಷಿಕವಾಗಿ ಎರಡು ವಿಭಾಗಗಳನ್ನು ಗುರುತಿಸಬಹುದು. ಒಂದು, ನೌಗಾಂಗ್ ಜಿಲ್ಲೆಯ ತನಕ ಪೂರ್ವ ದಿಕ್ಕಿನ ಜಿಲ್ಲೆಗಳನ್ನೆಲ್ಲ ವ್ಯಾಪಿಸಿದ ಪೂರ್ವ ಅಸ್ಸಾಮಿ, ಇನ್ನೊಂದು ನೌಗಾಂಗಿನ ಪಶ್ಚಿಮಾರ್ಧದಿಂದ ಆರಂಭವಾಗಿ ಗೋಯಲ್‍ಪುರ ಜಿಲ್ಲೆಯತನಕ ವ್ಯಾಪಿಸಿರುವ ಪಶ್ಚಿಮ ಅಸ್ಸಾಮಿ. ತನ್ನ ಪ್ರದೇಶದಲ್ಲಿ ಹೆಚ್ಚಿನ ಏಕರೂಪತೆಯನ್ನು ಹೊಂದಿರುವ ಪೂರ್ವ ಅಸ್ಸಾಮಿ ಶಿಷ್ಟಭಾಷೆಯಾಗಿ ಪರಿಗಣಿತವಾಗಿದೆ; ಆಧುನಿಕ ಸಾಹಿತ್ಯದ ಮಾಧ್ಯಮವಾಗಿದೆ. ಪಶ್ಚಿಮ ಅಸ್ಸಾಮಿನ ಇನ್ನೂ ಹಲವು ಉಪಭಾಷೆಗಳಾಗಿ ವಿಭಜನೆಗೊಂಡಿದೆ; ಬ್ರಹ್ಮಪುತ್ರಾ ನದಿಯ ದಕ್ಷಿಣ ದಡದ ಜನ ಆಡುವ ಉಪಭಾಷೆಯಾದ ದಕ್ಷಿಣ ಕಾಮರೂಪಿ ಕೆಲಮಟ್ಟಿಗೆ ಏಕರೂಪತೆಯನ್ನುಳ್ಳದ್ದಾಗಿದೆ. ಆದರೆ ಉತ್ತರ ಕಾಮರೂಪಿ ಎರಡು ಉಪವಿಭಾಗಗಳಿಂದ ಕೂಡಿದ್ದಾಗಿದೆ. ಒಂದು ಪೂರ್ವ ಕಾಮರೂಪಿ ಉಪಭಾಷೆ, ಇನ್ನೊಂದು ಪಶ್ಚಿಮ ಕಾಮರೂಪಿ ಉಪಭಾಷೆ. ಮೊದಲನೆಯದು ಸಮಗ್ರ ಈಶಾನ್ಯ ಕಾಮರೂಪ ಮತ್ತು ದರ್ರಾಂಗ್ ನೌಗಾಂಗ್ ಜಿಲ್ಲೆಗಳ ಪಶ್ಚಿಮದ ಸೆರಗು_ಇವುಗಳ ಉಪಭಾಷೆಯನ್ನು ಒಳಗೊಳ್ಳುತ್ತದೆ. ಎರಡನೆಯದು, ಬರ್‍ಪೇಟ ಕೇಂದ್ರವಾಗಿರುವ ವಾಯುವ್ಯ ಕಾಮರೂಪದ ಉಪಭಾಷೆ. ಇದೇ ರೀತಿಯಲ್ಲಿ, ಅತ್ಯಂತ ಪಶ್ಚಿಮಕ್ಕಿರುವ ಗೋಯಲ್‍ಪಾರ ಜಿಲ್ಲೆಯ ಉಪಭಾಷೆ ಕೂಡ ಏಕರೂಪವಾಗಿಲ್ಲ. ಆ ಜಿಲ್ಲೆಯ ಪೂರ್ವಭಾಗಗಳಲ್ಲಿರುವ ಉಪಭಾಷೆ ಕಾಮರೂಪಿಯೊಡನೆ ಸ್ವಲ್ಪಮಟ್ಟಿಗೆ ಸಂಬಂಧವನ್ನು ತೋರುತ್ತದೆ. ಆದರೆ ಪಶ್ಚಿಮ ಗೋಯಲ್‍ಪಾರದ ಉಪಭಾಷೆಗಳು ತಮ್ಮ ಸುತ್ತುಮುತ್ತಿನ ಬಂಗಾಳಿ ರಾಜ್‍ಬಂಶೀ ಮತ್ತು ಗಾರೋ ಉಪಭಾಷೆಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ಬಲುಮಟ್ಟಿಗೆ ಬೇರೆಯಾಗಿ ತೋರುತ್ತವೆ. ಪ್ರಾಚೀನ ಅಸ್ಸಾಮೀಯಲ್ಲಿ ಇಡೀ ಪ್ರಾಂತ್ಯದಲ್ಲಿ ಒಂದೇ ಒಂದು ಉಪಭಾಷೆ-ಪಶ್ಚಿಮ ಅಸ್ಸಾಮಿ ಉಪಭಾಷೆ-ಪ್ರಚಲಿತವಾಗಿದ್ದಂತೆ ತೋರುತ್ತದೆ. ಸಮಗ್ರ ಪ್ರಾಚೀನ ಸಾಹಿತ್ಯ, ಪದ್ಯಾತ್ಮಕವಾಗಿರಲಿ, ಗದ್ಯಾತ್ಮಕವಾಗಿರಲಿ, ವೈಷ್ಣವ ಕವಿಗಳ ರಚನೆಗಳಾಗಿರಲಿ, ಚಾರಿತ್ರಿಕ ರಚನೆಗಳಾಗಿರಲಿ, ಅವೆಲ್ಲ ಈ ಉಪಭಾಷೆಯಲ್ಲೇ ಇವೆ. ಇಂದಿನ ಶಿಷ್ಟಸಾಹಿತ್ಯಿಕ ಭಾಷೆ 19ನೆಯ ಶತಮಾನದ ಮಧ್ಯ ಭಾಗದಲ್ಲಿ ವಿಕಾಸಗೊಂಡಿತೆಂದು ಹೇಳಬಹುದು. ಇದು ಆದದ್ದು ಅಮೇರಿಕಾದ ಬ್ಯಾಪ್ಟಿಸ್ಟ್ ಮಿಷನ್. ಪ್ರಥಮವಾಗಿ ಮುದ್ರಣಾಲಯವನ್ನು ಸ್ಥಾಪಿಸಿದುದು (1836), ಪತ್ರಿಕೆಯೊಂದನ್ನು ಪ್ರಕಟಿಸಲು ಆರಂಭಿಸಿದುದು (1846), ಎರಡನೆಯ ಅಸ್ಸಾಮೀ ವ್ಯಾಕರಣವನ್ನು ಮತ್ತು ಮೊದಲನೆಯ ಅಸ್ಸಾಮೀ ನಿಘಂಟನ್ನು ಮುದ್ರಿಸುದುದು (1846 ಮತ್ತು 1867), ಹೊಸ ಅಸ್ಸಾಮೀ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹಕ ವಾತಾವರಣವನ್ನು ನಿರ್ಮಿಸಿದುದು-ಈ ಪ್ರಯತ್ನಗಳಿಂದ. ಇವನ್ನೆಲ್ಲಾ ಅವರು ಪೂರ್ವ ಅಸ್ಸಾಮ್‍ನಲ್ಲಿ, ಅಸ್ಸಾಮ್ ಪ್ರಾಂತ್ಯದಲ್ಲಿಯ ತಮ್ಮ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡ ಶಿಬಸಾಗರ್ ಜಿಲ್ಲೆಯ ಉಪಭಾಷೆಯಲ್ಲಿ ಮಾಡಿದರು. ಹೀಗೆ ಅವರು ಅಸ್ಸಾಮ್‍ನಲ್ಲಿ ಈಗ ಶಿಷ್ಟರೂಪವಾಗಿ ಅಂಗಿಕೃತವಾಗಿರುವ ಆಧುನಿಕ ಅಸ್ಸಾಮೀ ಸಾಹಿತ್ಯಿಕ ಭಾಷೆಗೆ ಅಡಿಪಾಯ ಹಾಕಿದರು. ಜನರಲ್ಲಿ ವಿದ್ಯಾಭ್ಯಾಸದ ವ್ಯಾಪಕತೆ, ಪಶ್ಚಿಮ ಅಸ್ಸಾಂ ಜಿಲ್ಲೆಗಳಲ್ಲಿ ವಿದ್ಯಾವಂತ ಜನರ ಸಂಖ್ಯೆ ಬೆಳದದ್ದು-ಇವು ಕಾರಣವಾಗಿ ಪಶ್ಚಿಮ ಅಸ್ಸಾಮೀ ರೂಪಗಳು ಕೂಡ ಶಿಷ್ಟಸಾಹಿತ್ಯಕ ಶೈಲಿಯಲ್ಲಿ ನುಸುಳಿಕೊಂಡು ಬಂದಿವೆ. ಆದ್ದರಿಂದ ಅಸ್ಸಾಮೀಯ ಅಧಿಕೃತ ವ್ಯಾಕರಣಗಳಲ್ಲಿ ಜೊತೆಜೊತೆಗೆ ಎರಡೂ ಉಪಭಾಷೆಗಳನ್ನು ತೋರಿಸಿದೆ. ಪ್ರಮುಖ ಉಪಭಾಷಾವರ್ಗಗಳಾದ ಪೂರ್ವ ಮತ್ತು ಪಶ್ಚಿಮ ಅಸ್ಸಾಮಿಗಳೆರಡೂ ಬಲುಮಟ್ಟಿಗೆ ಧ್ವನ್ಯಾತ್ಮಕ ರೂಪಾತ್ಮಕ ಮತ್ತು ಪದಕೋಶಾತ್ಮಕ-ಈ ಎಲ್ಲ ಕ್ಷೇತ್ರಗಳಲ್ಲೂ ಖಚಿತವಾದ ವಿಭಿನ್ನತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ಎರಡು ಭಾಷಾವರ್ಗಗಳ ಜನ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದೇ ಕಷ್ಟ. ಆದರೆ ಪಶ್ಚಿಮ ಅಸ್ಸಾಮಿನ ಉಪಭಾಷೆಗಳಲ್ಲಿಯ ವಿಭಿನ್ನತೆ ಮುಖ್ಯವಾಗಿ ಧ್ವನಿಮಾ ಶಾಸ್ತ್ರ(ನಿರ್ದಿಷ್ಟವಾಗಿ ಹೇಳುವುದಾದರೆ ಸ್ವರಲಹರಿ) ಮತ್ತು ವಿರಳವಾಗಿ ಪದಕೋಶ ಇವುಗಳಿಗೆ ಸಂಬಂಧಪಟ್ಟಿರುತ್ತದೆ.
ಧ್ವನ್ಯಾತ್ಮಕ
[ಬದಲಾಯಿಸಿ](1) ಪೂರ್ವ ಅಸ್ಸಾಮೀಯಲ್ಲಿ ಮಧ್ಯ ಬಲಾಘಾತವಿರುತ್ತಿದ್ದರೆ, ಪಶ್ಚಿಮ ಅಸ್ಸಾಮೀಯಲ್ಲಿ ಪ್ರಬಲವಾದ ಆದ್ಯ ಬಲಾಘಾತ ಇರುತ್ತದೆ. ಇದರ ಪರಿಣಾಮವಾಗಿ ಎರಡನೆಯದರಲ್ಲಿ ಪದಗಳು ವಿರೂಪಗೊಳ್ಳುತ್ತವೆ. (ಅ) ಬಲಾಘಾತಯುಕ್ತ ವರ್ಣದ ಪರದಲ್ಲಿ ಬರುವ ಸ್ವರ ಹೋಗಿ ವ್ಯಂಜನಗುಚ್ಛಗಳು ರೂಪುಗೊಳ್ಳುತ್ತವೆ. ಉದಾ : ನೀನು (ಮರ್ಯಾದಾಪುರ) ಮಾಡುವೆ-ಕರಿಬ ಲ ಕ್ರಬ; ಕುಂಬಳ-ಕೊಮೊರಲಕುಮ್ರ, ಇತ್ಯಾದಿ; ಅಥವಾ ಸಂಯುಕ್ತ ಸ್ವರಗಳೊ ತ್ರಿಸಂಯುಕ್ತ ಸ್ವರಗಳೊ ಆಗಿ ಉಳಿದುಕೊಳ್ಳುತ್ತವೆ. ಉದಾ : ಉಳುವವನು-ಹಲೋವಲಹೌಲ; ಒಂದು ಅಂಕಿತನಾಮ-ರತಿಯ ಲರೈತ; ಸಾಧು-ಕೆವಲಿಯಲಕೆಉಇಲ, ಇತ್ಯಾದಿ. (ಆ) ಅಂತ್ಯ ಸಂಯುಕ್ತ ಸ್ವರಗಳು ಮೂಲಸ್ವರಗಳಾಗುತ್ತವೆ. ಉದಾ : ರಾಣಿ-ಮದೈಲಮದೆ; ಬೇಡಿಕೆ-ಕಬೌಲಕಬೆ, ಇತ್ಯಾದಿ. (2) ಪೂರ್ವ ಅಸ್ಸಾಮೀಯಲ್ಲಿರುವ ಉಚ್ಚತರ ಮಧ್ಯಸ್ವರಗಳಿಗೆ ಪ್ರತಿಯಾಗಿ ಪಶ್ಚಿಮ ಅಸ್ಸಾಮಿಯಲ್ಲಿ ಉಚ್ಚಸ್ವರಗಳೇ ವಿಶೇಷ. ಹಾಗೆಯೇ ಅಲ್ಲಿಯ ನಿಮ್ನತರ-ಮಧ್ಯಸ್ವರಗಳಿಗೆ ಪ್ರತಿಯಾಗಿ ಇಲ್ಲಿ ನಿಮ್ನ ಸ್ವರಗಳಿರುತ್ತವೆ. ಉದಾ : ಬಟ್ಟೆ-ಕಪೊರ್‍ಲಕಪುರ್; ಬೆಲೆ-ಮೊಲ್‍ಲಮುಲ್; ನಿಂಬೆ -ನೆಮುಲನಿಮು; ಅವನು ಮಾಡಿದ್ದಾನೆ-ಕರಿಸೆ ಲಕರಿಸಿ. (3) ಪೂರ್ವ ಅಸ್ಸಾಮೀಯ ನಿಮ್ನತರ-ಮಧ್ಯಾಗ್ರ /e/ ದ ಸ್ಥಾನದಲ್ಲಿ ಪಶ್ಚಿಮ ಅಸ್ಸಾಮಿಯಲ್ಲಿ ಉಚ್ಚತರ ನಿಮ್ನಾಗ್ರ /ಛಿ/ ( ಇಂಗ್ಲೀಷಿನ ` ಬ್ಯಾಂಕ್` ನಲ್ಲಿರುವಂತೆ ) ಬರುತ್ತದೆ. (4) ಪೂರ್ವ ಅಸ್ಸಾಮೀ ಮಹಾಪ್ರಾಣಗಳನ್ನು ತೇಲಿಸುವುದರ ಕಡೆಗೆ ಒಲಿದರೆ, ಪಶ್ಚಿಮ ಅಸ್ಸಾಮೀ ಉಪಭಾಷೆಗಳಲ್ಲಿ ಮಹಾಪ್ರಾಣಗಳೇ ಅತಿ ಪ್ರಬಲ. ಅಕ್ಕ ಪಕ್ಕದ ವರ್ಣಗಳೊಡನೆ ಎರಡು ಮಹಾಪ್ರಾಣ ಸ್ಪರ್ಶಗಳು ಬರುವುದು ಪೂರ್ವ ಅಸ್ಸಾಮಿಯಲ್ಲಿ ತೀರ ವಿರಳ. (ಇದುವರೆಗೆ ಅಂಥ ಒಂದೇ ಒಂದು ತದ್ಭವ ಶಬ್ಧವನ್ನು ಗುರುತಿಸಲು ಸಾಧ್ಯವಾಗಿದೆ) . ಆದರೆ ಪಶ್ಚಿಮ ಅಸ್ಸಾಮಿಯಲ್ಲಿ ಅದು ತೀರ ಸಾಮಾನ್ಯ. ಉದಾ : ನೀರಿನ ಮಡಕೆ-ಘಗರಿ ಲಘಘ್ರಿ ; ಟೊಳ್ಳು-ಫೊಪೊಲ ಲ ಫಪ್ಲ. (5) ಎರಡೂ ಉಪಭಾಷಾವರ್ಗಗಳ ಸ್ವರಲಹರಿಯ ವಿನ್ಯಾಸಗಳು ಬೇರೆಬೇರೆ. (6) ಪೂರ್ವದ ಉಪಭಾಷೆಯ ಮಾತಿನ ವೇಗ ನಿಧಾನವಾದದ್ದು, ಪಶ್ಚಿಮದ ಉಪಭಾಷೆಗಳದು ತೀವ್ರ ಮತ್ತು ರಭಸವಾದದ್ದು.
ಆಕೃತಿಮಾತ್ಮಕ
[ಬದಲಾಯಿಸಿ](1) ನಾಮವಾಚಕಗಳ ವಿಭಕ್ತಿರೂಪದಲ್ಲಿ ದ್ವಿತೀಯ ಮತ್ತು ಚತುರ್ಥಿ ವಿಭಕ್ತಿಗಳು ಪಶ್ಚಿಮ ಅಸ್ಸಾಮಿಯಲ್ಲಿ ಒಂದಾಗಿರುತ್ತವೆ. (2) ಕಾಲ ಮತ್ತು ಸ್ಥಾನಗಳ ಸರ್ವನಾಮ ಸಾಧಿತಗಳು ಎರಡು ಭಾಷಾವರ್ಗಗಳಲ್ಲೂ ಬೇರೆ ಬೇರೆಯೇ ಆಗಿವೆ. ಉದಾ : ಪೂರ್ವ ಅಸ್ಸಾಮಿ ಎಲ್ಲಿ-ಕತ್, ಎಲ್ಲಿ (ಸಂಬಂಧಸೂಚಕ)-ಜûತ್, ಅಲ್ಲಿ-ತತ್; ಇಲ್ಲಿ-ಅತ್ ಇವುಗಳಿಗೆ ಪಶ್ಚಿಮ ಅಸ್ಸಾಮಿಯಲ್ಲಿ ಕ್ರಮವಾಗಿ ಕಹೇಂ~ಕಹಾಂಯ್, ಜûಹೇಂ~ಜಹಾಂಯ್ ಇತ್ಯಾದಿ ಮಾತುಗಳಿವೆ. (3) ಬಹುವಚನ ಅಕೃತಿಮಾಗಳು ಕೂಡ ಬೇರೆ ಬೇರೆಯೇ. ಉದಾ: ಪೂರ್ವ ಅಸ್ಸಾಮೀಯ- ಬೊರ್, -ಬಿಲಕ್ ಎಂಬುವುಗಳಿಗೆ ಪಶ್ಚಿಮ ಅಸ್ಸಾಮೀಯ ಉಪಭಾಷಾವರ್ಗ-ಗಿಲ, -ಗಿಲನ್, -ಗಿಲಕ್ ಇತ್ಯಾದಿಗಳನ್ನು ಬಳಸುತ್ತದೆ. (4) ಕ್ರಿಯಾಪದಗಳ ಕ್ರಿಯಾರೂಪದಲ್ಲಿ ವರ್ತಮಾನಕಾಲಕ್ಕೆ ಮಧ್ಯಮ ಪುರುಷ ಸಾಮಾನ್ಯದ ಅಂತ್ಯ ಪ್ರತ್ಯಯ ಪೂರ್ವ ಅಸ್ಸಾಮೀಯಲ್ಲಿ -ಅ ಮತ್ತು ಪಶ್ಚಿಮ ಅಸ್ಸಾಮೀಯಲ್ಲಿ -ಅಹ್. ಉದಾ : ನೀನು (ಸಾಮಾನ್ಯ) ತಿನ್ನುತ್ತಿದ್ದೀಯೆ-ತಯ್‍ಖಇಸ ಲ ತಂಯ್ ಖಇಹಸ್, ಇತ್ಯಾದಿ. ಭೂತಕಾಲಕ್ಕೆ ಪ್ರಥಮಪುರುಷದ ಅಂತ್ಯಪ್ರತ್ಯಯ ಪೂರ್ವ ಅಸ್ಸಾಮೀಯಲ್ಲಿ -ಎ ಮತ್ತು ಪಶ್ಚಿಮ ಅಸ್ಸಾಮೀಯಲ್ಲಿ -ಅ ಅಥವಾ ಅಕ್ ಉದಾ : ಅವನು ಮಾಡಿದನು-ಕರಿಲೆಲಕರಿಲ ಅಥವಾ ಕರಿಲಕ್ ಅಥವಾ ಕಲ್ಲಕ್ ಇತ್ಯಾದಿ.
(5) ಕ್ರಿಯಾರ್ಥಕ ಪರಸರ್ಗಗಳು ಕೂಡ ಎರಡು ಭಾಷಾವರ್ಗಗಳಿಗೂ ಬೇರೆ ಬೇರೆಯೇ. ಪದಕೋಶ: ಎರಡು ಭಾಷಾವರ್ಗಗಳ ಉಪಭಾಷೆಗಳೂ ಸಮಗ್ರ ನಾಮಪದಗಳ ರಾಶಿಯಲ್ಲಿ ಶೇಕಡ ಸ್ವಲ್ಪಭಾಗ ಹೊರತಾಗಿ, ಸಮಾನ ಸಂದರ್ಭಗಳಲ್ಲಿ ತೀರ ವಿಭಿನ್ನವಾದ ಪದಗಳನ್ನು ಬಳಸುತ್ತವೆ. ನಿದರ್ಶನಾರ್ಥವಾಗಿ ಕೆಲವು ಉದಾಹರಣೆಗಳನ್ನು ಹೇಳಬಹುದಾದರೆ, ಪೂರ್ವ ಅಸ್ಸಾಮೀಯ ಬಾವಿ - ಕುವ, ಟವೆಲ್ -ಗಮೊಸ, ಬಾರುಕೊಲು -ಅಸರಿ, ತಂಬಾಕು -ಧಪತ್ ಇವುಗಳಿಗೆ ಪಶ್ಚಿಮ ಅಸ್ಸಾಮೀಯಲ್ಲಿ ಕ್ರಮವಾಗಿ ಲಹಣ್ಣ, ಪಲಿ, ಲರು, ತಙ್ಖು ಎಂಬ ಶಬ್ಧಗಳು ಕಂಡುಬರುತ್ತವೆ.
ವ್ಯಂಜನಗಳು
[ಬದಲಾಯಿಸಿ]ಧ್ವನಿಮಾಗಳ ವಿತರಣೆ. /ಙ ವ ಯ/ ಹೊರತಾಗಿ ಉಳಿದ ಎಲ್ಲ ವ್ಯಂಜನಗಳೂ ಪದಾದಿಯಲ್ಲಿ ಸ್ವರ ಪೂರ್ವವಾಗಿ, ಮತ್ತು /ಪ ಟ ಕ ಬ ದ ಗ ಭ ಧ ಖ ಮ ನ ಸ ಜû ಹ/ ಇವು ಪದದಾದಿಯಲ್ಲಿ ವ್ಯಂಜನಪೂರ್ವವಾಗಿ ಬರುತ್ತವೆ. ಎಲ್ಲ ವ್ಯಂಜನಗಳೂ ಪದ ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಸ್ವರಗಳ ಬಳಿಕ ಬರುತ್ತವೆ. / ಪ ಟ ದ ಧ ಸ ಜû ಹ/ ಧ್ವನಿಮಾಗಲು ಪದದ ಕೊನೆಯಲ್ಲಿ ಸಂಸ್ವನಿತವ್ಯಂಜನಗಳ ಬಳಿಕ ಬರುತ್ತವೆ. ಮಹಾಪ್ರಾಣ ಸ್ಪರ್ಶಗಳು ಅಂತಿಮವಾಗಿ ಬರುವುದು ಹೆಚ್ಚಾಗಿಲ್ಲ. ಅಘೋಷ ಧ್ವನಿಗಳು ಘೋಷಧ್ವನಿಗಳಿಗಿಂತ ಕಡಿಮೆ ಕಾಣಿಸಿಕೊಳ್ಳುತ್ತವೆ. ಎರಡು ಮಹಾಪ್ರಾಣ ಸ್ಪರ್ಶಗಳು ಒಂದೇ ಪದದಲ್ಲಿ-ವಿಶೇಷವಾಗಿ ತದ್ಭವಗಳಲ್ಲಿ-ಪರಸ್ಪರವಾಗಿ ಒಂದರ ಬಳಿಕ ಒಂದು ಬರುವುದು. ಅಥವಾ ಸ್ವರ-ವ್ಯಂಜನ ಕೂಡಿ ಬರುವುದು (ಸ್ವರ ಎಂದರೆ ಸ್ವರ ಮತ್ತು ಸ್ವರಗುಚ್ಛಗಳು, ವ್ಯಂಜನ ಎಂದರೆ ವ್ಯಂಜನ ಮತ್ತು ವ್ಯಂಜನಗುಚ್ಛಗಳು -ಎರಡೂ ಆಗಬಹುದು) ಶಿಷ್ಟವ್ಯವಹಾರಿಕದಲ್ಲಿ ತೀರ ವಿರಳ.
ಮುಖ್ಯ ಪರಿಸರಣಾತ್ಮಕ ವಿಭಿನ್ನ ರೂಪಗಳು
[ಬದಲಾಯಿಸಿ](1) ಸ್ವರಪೂರ್ವವಾಗಿ ಮತ್ತು /ಯ/ ಪರವಾಗಿ ಬಂದಾಗ; ಈ ಪರಿಸರದಲ್ಲಿ ಬರೆದಿರುವ /ಜ್ಞ್ ವ್ x ಹ್/ ಇವುಗಳ ಹೊರತಾಗಿ ಉಳಿದೆಲ್ಲ ವ್ಯಂಜನಗಳೂ ಅರ್ಧ ದೀರ್ಘ ಸಂಸ್ವನಗಳನ್ನು, ಮಹಾಪ್ರಾಣಗಳು ಅವುಗಳ ಸ್ಪರ್ಶಾಂಶವನ್ನು ಸ್ವಲ್ಪ ದೀರ್ಘ ಮಾಡಿಕೊಳ್ಳುತ್ತವೆ. (2) ಸ್ವರಪೂರ್ವವೂ /ರ್/ ಕಾರ ಪೂರ್ವದಲ್ಲೂ ಸ್ವರ ಪರದಲ್ಲಿಯೂ ಇದ್ದಾಗ.
(3) /ರ್/ ಕಾರ ಪೂರ್ವದಲ್ಲು ಸ್ವರ ಪರದಲ್ಲಿಯೂ ಇದ್ದಾಗ. (2) ಮತ್ತು (3) ಎರಡರ ವ್ಯಂಜನಗಳಲ್ಲಿ ಅರ್ಧ ದೀರ್ಘಸಂಸ್ವಗಳು ದೀರ್ಘರಹಿತ ಸಮಸ್ವನಗಳೊಡನೆ ಸ್ವಚ್ಛಂದ ಪರಿವರ್ತನೆಯಲ್ಲಿರುತ್ತವೆ. (2) ನೆಯ ಪರಿಸರದಲ್ಲಿ /ತ್ ಥ್ ದ್ ಧ್ ನ್ ಲ್/ ಧ್ವನಿಮಾಗಳು ಸ್ವಲ್ಪಮಟ್ಟಿಗೆ ಮೂರ್ಧನ್ಯಗಳಾಗಿರುತ್ತವೆ. (4) ಅಂತಿಮವಾಗಿ. (ಅ) ಊಷ್ಮಧ್ವನಿಗಳು ಹೆಚ್ಚು ಕಡಿಮೆ ದೀರ್ಘತರವಾಗಿರುತ್ತದೆ. (ಆ) ಮಹಾಪ್ರಾಣಗಳು/ಫ್ ಭ್/ದ್ವಯೋಷ್ಠ್ಯವಾದ /ø/ ಮತ್ತು ಘೋಷಿತವಾದ [ß] ಗಳಾಗಿ ಊಷ್ಮೀಕೃತವಾಗುತ್ತದೆ. ಕೆಲವು ಉಪಭಾಷೆಗಳಲ್ಲಿ/ಖ್/ಕೂಡ ಕಂಠ್ಯ-ಅಘೋಷ-ಊಷ್ಮಧ್ವನಿ [x] ಆಗಿ ಎಚ್ಚರವಾಗುವ ಪ್ರವೃತ್ತಿ ತೋರುತ್ತದೆ.
ಸ್ವರಗಳು
[ಬದಲಾಯಿಸಿ]ಎಂಟು ಸ್ವರಗಳಲ್ಲಿ ಎಲ್ಲವೂ ಅನುನಾಸಿಕತ್ವದ ಧ್ವನಿಮಾಗಳೊಡನೆ ಅನುನಾಸಿಕೀಯವಾಗಬಹುದು. ದೀರ್ಘತೆ ಧ್ವನಿಮೀಯವಲ್ಲ. ಪಶ್ಚಿಮ ಅಸ್ಸಾಮೀಯ ಉಪಭಾಷೆಗಳಲ್ಲಿ ಉಚ್ಚತರ ನಿಮ್ನಾಗ್ರವಾದ (x) ಶಿಷ್ಟ ವ್ಯವಹಾರಿಕದ ನಿಮ್ನತರಾಗ್ರ /e/ ವನ್ನು ಬದಲಿಸಿ ತಾನು ಬರುತ್ತದೆ.
ವಿತರಣೆ
[ಬದಲಾಯಿಸಿ]ಸ್ವರಗಳ ವಿತರಣೆ ಕೆಲಮಟ್ಟಿಗೆ ವಿಲಕ್ಷಣವಾದುದು. ಎಂಟು ಸ್ವರಗಳು ಈ ರೀತಿಯ ವಿತರಣೆಯನ್ನು ತೋರಿಸುತ್ತವೆ : (1) /ಇ ಉ / ಸ್ವರಗಳು ಪರವರ್ಣದ ಆದಿಯಲ್ಲಿ ಬರದೆ ಇದ್ದಾಗ, ಸಂವೃತವರ್ಣಗಳಲ್ಲೂ ವಿವೃತವರ್ಣಗಳಲ್ಲೂ ಎಂಟು ರೀತಿಯ ವಿರೋಧಗಳು (ಕಾಂಟ್ರಾಸ್ಟ್) ಕಾಣಬಹುದು. (2) ಅನುನಾಸಿಕಗಳು ಅಥವಾ ಅನುನಾಸಿಕೀಯವಲ್ಲದ ಯಾವುದೇ ಒಂದು ವ್ಯಂಜನ ನಡುವೆ ಬರುವ /ಇ/ಕಾರಾದಿಯಾದ ವರ್ಣ ಪರದಲ್ಲಿದ್ದಾಗ ವಿವೃತವರ್ಣಗಳಲ್ಲಿ ಆರು ರೀತಿಯ ವಿರೋಧಗಳು ಕಾಣಬಹುದು. (3) ಯಾವುದಾದರೂ ವ್ಯಂಜನ /ಉ/ಕಾರ ಸಹಿತವಾಗಿ ಬಂದರೂ ರಹಿತವಾಗಿದ್ದರೂ ವಿವೃತವರ್ಣಗಳಲ್ಲಿ ಐದು ರೀತಿಯ ವಿರೋಧಗಳನ್ನು ಕಾಣಬಹುದು.
ಮುಖ್ಯ ಪರಿಸರಣಾತ್ಮಕ ವಿಭಿನ್ನರೂಪಗಳು
[ಬದಲಾಯಿಸಿ](1) ಎಲ್ಲ ಸ್ವರಗಳು ವರ್ಗೀಯ ಅನುನಾಸಿಕಗಳಾದ /ಮ ನ್ ಙï/ಗಳಿಗೆ ಅಥವಾ ಪೂರ್ವದಲ್ಲಿಯ ಅನುನಾಸಿಕೀಕೃತ ಸ್ವರದೊಡಗೂಡಿದ /ಹ್/ಗೆ ಪೂರ್ವದಲ್ಲಿ ಬಂದಾಗ ಅನುನಾಸಿಕಗಳಾಗಿತ್ತವೆ. ಮತ್ತು ಸ್ವರಗುಚ್ಛಗಳಲ್ಲಿ ಅನುನಾಸಿಕೀಕೃತ (ಧ್ವನಿಮೀಯ) ಸ್ವರಗಳು ಪೂರ್ವದಲ್ಲಿಯೋ ಪರದಲ್ಲಿಯೋ ಬಂದಾಗ ಕೂಡ ಅವು ಅನುನಾಸಿಕಗಳಾಗುತ್ತವೆ. (2) /ಇ/ ಹೊರತಾಗಿ ಎಲ್ಲ ಸ್ವರಗಳೂ /ಯ್/ ಸ್ವರಶ್ರುತಿಯನ್ನು ಅನುಸರಿಸುತ್ತವೆ ; ಪರದಲ್ಲಿಯ ವ್ಯಂಜನಗುಚ್ಛದ ಕೊನೆಯ ಧ್ವನಿ /ಯ/ ಆಗಿದ್ದರೆ ಹಾಗೆ ಆಗುತ್ತದೆ. (3) ವ್ಯಂಜನಗುಚ್ಛವೊಂದರಲ್ಲಿ /ರ್/ಕಾರಪೂರ್ವವಾಗಿ ಬಂದಾಗ, ಅಗ್ರ ಮತ್ತು ಪಶ್ಚ ಸ್ವರಗಳು ಸ್ವಲ್ಪಮಟ್ಟಿಗೆ ಕೇಂದ್ರೀಯವಾಗಿರುತ್ತವೆ ; ನಿಮ್ನ ಕೇಂದ್ರೀಯಸ್ವರ/ಅ/ ಸ್ವಲ್ಪಮಟ್ಟಿಗೆ ಉದಾತ್ತಸ್ವರವಾಗಿರುತ್ತದೆ. (4) ಉದ್ಗಾರದ ಆದಿಸ್ವರಗಳು ಕೆಲವೊಮ್ಮೆ ಸ್ವಲ್ಪಮಟ್ಟಿಗೆ ಕಾಕಲ್ಯೀಕೃತವಾಗಿರುತ್ತವೆ. (5) ಎಲ್ಲ ಸ್ವರಗಳೂ ಒಂದು ಪದದಲ್ಲಿ ಎಲ್ಲೆಲ್ಲಿ ಬರುತ್ತವೆ ಎಂಬ ಸ್ಥಾನಕ್ಕೆ ಅನುಗುಣವಾಗಿ ಸಂಸ್ವನೀಯಗಳಾದ ಬೇರೆ ಬೇರೆ ಪ್ರಮಾಣದ ದೀರ್ಘತೆಗಳನ್ನು ಪಡೆದಿರುತ್ತವೆ.
ಧ್ವನಿಮಾ ಶಾಸ್ತ್ರವನ್ನು ಕುರಿತು ಒಂದು ಚಾರಿತ್ರಿಕ ಟಿಪ್ಪಣಿ
[ಬದಲಾಯಿಸಿ]ಅಸ್ಸಾಮೀ ವ್ಯಂಜನಾತ್ಮಕ ಬೆಳವಣಿಗೆಯ ಚರಿತ್ರೆ ಪ್ರಾಚೀನ ಇಂಡೋ ಆರ್ಯನ್ ಪದ್ಧತಿಯ ಧ್ವನಿಮೀಯ ಐಕ್ಯದ ಚರಿತ್ರೆಯೇ ಆಗಿದೆ. ಇದು ಅಸ್ಸಾಮೀ ಭಾಷೆಯಲ್ಲಿ, ದೇಶದ ಸಮಾನ ಉತ್ಪತ್ತಿ ಮೂಲಸಂಬಂಧಿಗಳಾದ ಭಾಷೆಗಳನ್ನೇ ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣವಾಗಿದೆ. ಧ್ವನಿಮಾ ಪಟ್ಟಿಕೆಯಿಂದ, ಪ್ರಾಚಿನ ಇಂಡೋ ಆರ್ಯನ್ ಭಾಷೆಯ ಮೂರು ಮುಖ್ಯ ಶ್ರೇಣಿಗಳಲ್ಲಿ-ದಂತ್ಯ ಮೂರ್ಧನ್ಯ ಮತ್ತು ತಾಲವ್ಯಗಳು-ಈ ಭಾಷೆಯ ಕೊರತೆಯಿರುವುದು ಸ್ಪಷ್ಟವಾಗಿ ಕಾಣುತ್ತದೆ. ದಂತ್ಯ ಮತ್ತು ಮೂರ್ಧನ್ಯ ಸ್ಪರ್ಶಗಳು ಅಸ್ಸಾಮೀಯ ವತ್ಸ್ರ್ಯ ಸ್ಪರ್ಶಗಳಲ್ಲಿ ಐಕ್ಯಗೊಂಡಿವೆ. ತಾಲವ್ಯ ಅನುಘರ್ಷಗಳು /ಚ್, ಛ್/ ಮತ್ತು ಜ್, ಝ್/ಗಳು ಕ್ರಮವಾಗಿ ವತ್ಸ್ರ್ಯ /ಸ್/ ಮತ್ತು /ಜ್/ಗಳಾಗಿ ಐಕ್ಯವಾಗಿವೆ. ಮತ್ತು ಊಷ್ಮೀಕೃತವಾಗಿವೆ. /ಶ್, ಷ್/ ಮತ್ತು /ಸ್/ ಈ ಮೂರು ಊಷ್ಮಗಳು ತಮ್ಮ ಉಚಿತವಾದ ಉಚ್ಛಾರಣೆಯನ್ನು ಕಳೆದುಕೊಂಡು ಆದ್ಯತವಾಗಿ ಕಂಠ್ಯ-ಅಘೋಷ /ಛಿ/ವಾಗಿಯೂ ಅನ್ಯತ್ರ ಘೊಷಕಾಕಲ್ಯ /ಹ್/ವೂ ಆಗಿದೆ. ಸ್ವರಗಳ ವಿಚಾರದಲ್ಲಿ ಧ್ವನಿಮೀಯ ವಿಚ್ಛೇದನವಿದೆ. ಉದಾಹರಣೆಗೆ, ಪ್ರಾಚೀನ ಇಂಡೋ- ಆರ್ಯನ್ ಎ ಮತ್ತು ಅ ಇವು ಕ್ರಮವಾಗಿ /ee/ ಮತ್ತು /ಛಿಡಿ/ ಇವನ್ನು ಉಂಟುಮಾಡಿವೆ. ದಂತ್ಯ ಮತ್ತು ಮೂರ್ಧನ್ಯ ಧ್ವನಿಮಾಗಳು ಬಿದ್ದು ಹೋಗುವಿಕೆ, ಮತ್ತು ವತ್ಸ್ರ್ಯಗಳೊಡನೆ ಬೆರೆತು ಹೋಗುವಿಕೆ-ಈ ವೈಲಕ್ಷಣ್ಯಕ್ಕೆ ಇಡೀ ಅಸ್ಸಾಮೀಭಾಷಾಪ್ರದೇಶವನ್ನು ಸುತ್ತುವರಿದಿರುವ ಟಿಬೆಟೋ-ಬರ್ಮನ್ ಭಾಷೆಗಳ ಮತ್ತು ಉಪಭಾಷೆಗಳ ಪ್ರಭಾವವೇ ಕಾರಣವೆಂದು ತಿಳಿಯಲಾಗಿದೆ.
ಆಕೃತಿಮಾ ವಿಜ್ಞಾನ
[ಬದಲಾಯಿಸಿ]ಅಸ್ಸಾಮಿಯಲ್ಲಿ ಆಕೃತಿಮಾತ್ಮಕ ರೂಪಗಳ ಮೂರು ವರ್ಗಗಳಿವೆ. (i) ನಾಮಪದಗಳೂ ಸೇರಿದ ನಾಮವಾಚಕಗಳು, ಸರ್ವನಾಮಗಳು ಮತ್ತು ಗುಣವಾಚಕಗಳು. (ii) ಕ್ರಿಯಾರ್ಥಕಗಳು. (iii) ಅವ್ಯಯಗಳು.
ನಾಮವಾಚಕಗಳು
[ಬದಲಾಯಿಸಿ]ಗುಣವಾಚಕಗಳು ಮತ್ತು ಸರ್ವನಾಮಗಳು ನಾಮವಾಚಕಗಳ ಉಪವರ್ಗಗಳು. ಅನುಬಂಧಗಳಂತೆ ಗುಣವಾಚಕಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರುವುದಿಲ್ಲ. ಹೋಲಿಕೆಯಲ್ಲೂ ವಿಭಕ್ತಿ ರೂಪವಿಲ್ಲ. ಅದನ್ನು ಕೆಲವು ವರ್ಣನಾತ್ಮಕ ಶಬ್ಧಗಳಿಂದ ವ್ಯಕ್ತಗೊಳಿಸುವುದಾಗುತ್ತದೆ. ಸರ್ವನಾಮಗಳು ಐದು ವಿಭಕ್ತಿ ಪ್ರತ್ಯಗಳಲ್ಲಿ ನಡೆಯುತ್ತವೆ : ಪ್ರಥಮಾ, ದ್ವಿತೀಯಾ, ಚತುರ್ಥಿ, ಷಷ್ಠೀ ಮತ್ತು ಸಪ್ತಮೀ ವಿಭಕ್ತಿಗಳು. ತೃತಿಯ, ಮತ್ತು ಪಂಚಮೀ ವಿಭಕ್ತಿಗಳು ಕ್ರಮವಾಗಿ [ಎ] ಮತ್ತು [ಪರ] ಎಂಬ ವಾಕ್ಯಾತ್ಮಕ ಪಶ್ಚಸರ್ಗಗಳಿಂದ ವ್ಯಕ್ತವಾಗುತ್ತಿದ್ದು, ಅವು ಷಷ್ಠೀ ವಿಭಕ್ತಿರೂಪಗಳನ್ನು ಅನುಸರಿಸುತ್ತವೆ. ನಾಮ ಪದಗಳು ಇನ್ನೂ ಎರಡು ಉಪವರ್ಗಗಳಾಗಿ ವಿಭಜಿತವಾಗುತ್ತವೆ. ಸಂಬಂಧ ನಾಮಪದಗಳು ಮತ್ತು ಸಾಧಾರಣನಾಮಪದಗಳು. ಸಂಬಂಧ ನಾಮಪದಗಳು ಎರಡು ವಿಭಕ್ತಿ ರೂಪಗಳನ್ನುಳ್ಳ ಪದಗಳ ಒಂದು ಚಿಕ್ಕ ವರ್ಗ: (i) ಪುರುಷವಾಚಕ ಸಂಬಂಧ ವಿಭಕ್ತಿ ಪ್ರತ್ಯಯಗಳು (ii) ವಿಭಕ್ತಿ ಪ್ರತ್ಯಯಗಳು. ಪುರುಷವಾಚಕ ಸಂಬಂಧಗಳನ್ನು ಹೇಳುವ ಪೂರ್ತಿವರ್ಗ (ಮಿತ್ರರನ್ನು ಉದ್ದೇಶಸಿ ಹೇಳುವ x ಛಿಞhi, ಮಿತ ಇತ್ಯಾದಿ ಪದಗಳೂ ಸೇರಿ) ಈ ಪದಗಳ ವರ್ಗವನ್ನು ರೂಪಿಸುತ್ತದೆ. ಸಂಬಂಧವಾಚಕ ನಾಮಪದಗಳಲ್ಲಿ, ನಾಲ್ಕು ಪುರುಷಗಳಿಗೆ ವಿಭಕ್ತಿ ಕಾರ್ಯಗಳು ನಡೆಯುತ್ತವೆ. (1) ಉತ್ತಮ ಪುರುಷ : [ಅ ಇ ~ಜಿ] (2) ಮಧ್ಯಮ ಪುರಷ (ಮರ್ಯಾದಾಪುರ) [ಅರ್] (3) ಮಧ್ಯಮ ಪುರುಷ (ಸಾಧಾರಣ) : [ಅರ್] (4) ಪ್ರಥಮ ಪುರುಷ: [ಅಕ್]
ಉದಾಹರಣೆಗಳು : ಮೊಮಯ್, ನನ್ನ ಸೋದರಮಾವ. ಮೊಮಯರ, ನಿನ್ನ (ಮರ್ಯಾದಾಪರ) ಸೋದರಮಾವ. ಮೊಮಯರ್, ನಿನ್ನ (ಸಾಧಾರಣ) ಸೋದರಮಾವ. ಮೊಮಯಕ್, ಅವನ ಸೊದರಮಾವ, ಇತ್ಯಾದಿ. ಪುರುಷವಾಚಕ ಸಂಬಂಧಗಳಿಗೆ ಈ ವಿಭಕ್ತಿ ಪ್ರತ್ಯಯಗಳು ಸೇರುವುದು ಆರ್ಯಭಾಷೆಗಳ ಮಟ್ಟಿಗೆ ಹೇಳುವುದಾದರೆ ಒಂದು ವಿಲಕ್ಷಣವಾದ ವ್ಶೆಚಿತ್ರ್ಯ. ಆರ್ಯೇತರ ಆಸ್ಟ್ರಿಕ್ ಮೂಲಗಳಿಂದ ಅದು ಬಂದಿದೆ. ಈ ನಾಮಪದಗಳ ವರ್ಗಗಳಿಗೆ ಸಾಧಾರಣ ವರ್ಗದ ನಾಮಪದಗಳಲ್ಲಿ ಯಾವುದೇ ಆಗಿರಲಿ ಹೇಗೆ ವಿಭಕ್ತಿ ಪ್ರತ್ಯಯಗಳು ಹತ್ತುತ್ತವೆಯೋ ಇವಕ್ಕೂ ಹತ್ತುತ್ತವೆ.
ವಿಭಕ್ತಿಗಳು
[ಬದಲಾಯಿಸಿ]ನಾಮಪದಗಳಿಗೆ ಆರು ವಿಭಕ್ತಿಗಳಿವೆ : (i) ನಿರಪೇಕ್ಷ (ii) ಪ್ರಥಮಾ ವಿಭಕ್ತಿ [ಎ] (iii)ದ್ವಿತೀಯಾವಿಭಕ್ತಿ [ak] (iv) ಚತುರ್ಥೀ ವಿಭಕ್ತಿ [abi] (v) ಷಷ್ಠೀ ವಿಭಕ್ತಿ [ar] (vi) ಸಪ್ತಮೀ ವಿಭಕ್ತಿ [at] ನಿರಪೇಕ್ಷ ವಿಭಕ್ತಿಗೆ ಆಕೃತಿಮಾ ಇಲ್ಲ; ಅದು ಕರ್ತೃವಾಗಿಯೋ ಇಲ್ಲ ಕರ್ಮವಾಗಿಯೋ ವಾಕ್ಯಾತ್ಮಕವಾಗಿ ಬಳಸಲ್ಪಡುತ್ತದೆ. ದ್ವಿತೀಯ, ಚತುರ್ಥೀ ಮತ್ತು ಷಷ್ಠೀ, ಸಪ್ತಮೀ ಆಕೃತಿಮಾಗಳು ಸ್ವರಾಂತ್ಯವಾಗಿರುವ ನಾಮಪದಗಳಿಗೆ ಸೇರಿದಾಗ ತಮ್ಮ ಸ್ವರಗಳನ್ನು ಕಳೆದುಕೊಳ್ಳುತ್ತವೆ. ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು ಸರ್ವನಾಮಗಳಂತೆ ಇದೇ ವಾಕ್ಯಾತ್ಮಕ ಪಶ್ಚಸರ್ಗಗಳಿಂದ ವ್ಯಕ್ತವಾಗುತ್ತವೆ.
ವಚನ ಮತ್ತು ಲಿಂಗ
[ಬದಲಾಯಿಸಿ]ಅಸ್ಸಾಮೀಯಲ್ಲಿ ವ್ಯಾಕರಣಾತ್ಮಕ ವಚನಗಳಾಗಲಿ ಲಿಂಗಗಳಾಗಲಿ ಇಲ್ಲ. ಶಿಷ್ಟ ವ್ಯಾವಹಾರಿಕದಲ್ಲಿ—ಬೊರ್,--ಬಿಲಕ್ ಮತ್ತು ಹಂತ್ ಎಂಬ ಅಂತ್ಯ ಪ್ರತ್ಯಯಗಳನ್ನು ಸೇರಿಸುವುದರಿಂದ ಬಹುವಚನತ್ವ ವ್ಯಕ್ತವಾಗುತ್ತದೆ. ನಪುಂಸಕಲಿಂಗ --ಅ,--ಇ,--ಅನಿ, ಮತ್ತು--ರಿ ಇಂಥ ಸಾಧಿತರೂಪಗಳಿಂದ ಇಲ್ಲವೆ m x ಣ ಚಿ (ಪುಂ.,) ಮತ್ತು ಮಯ್‍ಕಿ ಅಥವಾ ಮತಿ (ಸ್ತ್ರೀ) ಎಂಬ ವರ್ಣನಾತ್ಮಕ ಶಬ್ದಗಳಿಂದ ವ್ಯಕ್ತವಾಗುತ್ತದೆ.
ಪಶ್ರ್ಚಾಶ್ರಯಿ ಮತ್ತು ಸಂಖ್ಯಾವಾಚಿ ನಿಶ್ಚಿತಾರ್ಥಗಳು
[ಬದಲಾಯಿಸಿ]ಅಸ್ಸಾಮೀ ಭಾಷೆಯ ಇನ್ನೊಂದು ಬಹು ಮುಖ್ಯವಾದ ಪ್ರತ್ಯೇಕವಾದ ವೈಲಕ್ಷಣ್ಯವೆಂದರೆ, ಪಶ್ಚಾಶ್ರಯಿ ಮತ್ತು ಸಂಖ್ಯಾವಾಚಿ ನಿಶ್ಚಿತಾರ್ಥಗಳ ಬಳಕೆ. ಪಶ್ಚಾಶ್ರಯಿಗಳು ತಾವು ಸೇರುವ ನಾಮವಾಚಕಗಳ ಸ್ವರೂಪ ಆಕೃತಿ ಮತ್ತು ರಚನೆ ಇವುಗಳನ್ನು ವ್ಯಕ್ತಪಡಿಸುವ ರೂಪಗಳು. ಅಸ್ಸಾಮೀಯಲ್ಲಿ ಅವುಗಳನ್ನು ವರ್ಗವಿಭಜಕಗಳೆಂಬುದಾಗಿ ಕರೆಯಲಾಗದು; ಏಕೆಂದರೆ ಅವು ನಾಮಪದಗಳನ್ನು ನಿರ್ದಿಷ್ಟ ಗುಂಪುಗಳಾಗಿಯೊ ವರ್ಗಗಳಾಗಿಯೊ ವರ್ಗೀಕರಣ ಮಾಡುವುದಿಲ್ಲ. ಸಂಖ್ಯಾವಾಚಿ ನಿಶ್ಚಿತಾರ್ಥಕಗಳು ಸಂಖ್ಯಾಪೂರ್ವವಾಗಿ ಬರುವ ಪಶ್ಚಾಶ್ರಯಿಗಳು. ಸಂಖ್ಯಾವಾಚಿ ನಿಶ್ಚಿತಾರ್ಥಗಳು ಸ್ವತಂತ್ರರೂಪಗಳು, ಆದರೆ ಪಶ್ಚಾಶ್ರಯಿಗಳು ಹಾಗಲ್ಲ. ಈ ರೂಪಗಳು ಮನುಷ್ಯರಲ್ಲಿ ಮತ್ತು ವಸ್ತುಗಳಲ್ಲಿ ನಿಶ್ಚಿತತೆಯನ್ನು ವ್ಯಕ್ತಪಡಿಸುತ್ತವೆ. ಆದ್ದರಿಂದ ಇಂಗ್ಲಿಷಿನ ಉಪಪದಗಳಂತೆ ಇವುಗಳನ್ನು ಗಣಿಸಬೇಕು. ಬಹುಮುಖ್ಯ ನಿಶ್ಚಿತಾರ್ಥಕಗಳಿಗೆ ಕೆಲವು ಉದಾಹರಣೆಗಳನ್ನು ಈ ಕೆಳಗೆ ಕೊಟ್ಟಿದೆ : (i)--ತೊ : ಮನುಷ್ಯನನ್ನು (ಸಾಧಾರಣ) ಸೇರಿಸಿಕೊಂಡು ಪುಂ ವಾಚಕಗಳಿಗೆ ಪರದಲ್ಲಿ ಸೇರಿಸುವುದು ಉದಾ : ಮನುಷ್ಯ -ಮನುಹ್‍ತೊ; ನಾಯಿ-ಕುಕುರ್‍ತೊ; ಹಾಗೆಯೇ ವೃತ್ತ ಮತ್ತು ಊಧ್ರ್ವಾಕೃತಿಯ ವಸ್ತುಗಳಿಗೂ-ತೊ ಸೇರಿಸಲಾಗುತ್ತದೆ. ಉದಾ : ಮನೆ-ಘರ್‍ತೊ; ಬೆಟ್ಟ-ಪಹರ್‍ತೊ ಇತ್ಯಾದಿ. (ii)--ಖನ್ : ಚಪ್ಪಟೆಯಾಗಿರುವ, ಅಗಲ ಮತ್ತು ಉದ್ದವಾಗಿರುವ ವಸ್ತುಗಳಿಗೆ ಸೇರಿಸುವುದು. ಉದಾ: ಬಟ್ಟೆಯ ಚೂರು--ಕಪೊರ್‍ಖನ್ ; ಹೊಳೆ-ನಯಿಖನ್ ; ಪುಸ್ತಕ -ಕಿತಪ್ ಖನ್ ; ಹಾಗೂ ಸಂಸಾರ-ಘರ್‍ಖನ್ ; ಇತ್ಯಾದಿ. (iii) --ದಲ್ : ಉರುಟಾದುದು ಮತ್ತು ಉದ್ದವಾದುದು ಆಗಿರುವುದಕ್ಕೆ ಸೇರಿಸುವುದು. ಉದಾ: ಪೆನ್ಸಿಲ್ಲು-ಪೆನ್ಸಿಲ್‍ದಲ್ ; ಹಗ್ಗ-z,ಜಡಿiಜಚಿಟ ; ಮರದ ದಿಮ್ಮಿ—ಕಥ್‍ದಲ್.
ಸಂಖ್ಯಾವಾಚಿ ನಿಶ್ಚಿತಾರ್ಥಕಗಳಿಗೆ ಉದಾಹರಣೆಗಳು
[ಬದಲಾಯಿಸಿ]ಒಂದು ಪುಸ್ತಕ (ಅನಿಶ್ಚಿತ) ಎಖನ್ ಕಿತಪ್ ಅಥವಾ ಕಿತಪ್ ಎಖನ್; ಇಬ್ಬರು ಹೆಂಗಸರು ಅಥವಾ ಆ ಇಬ್ಬರು ಹೆಂಗಸರು-ದುಗರಕಿ ತಿರೊತ ದುಗರಕಿ; (ಎರಡು ಸಾವಿರ ರೂಪಾಯಿಗಳು ಅಥವಾ ಆ ಎರಡು ಸಾವಿರ ರೂಪಾಯಿಗಳು -ದುಹಜûರ್ ತಕ ಅಥವಾ ತಕದುಹಜûರ್), ಇತ್ಯಾದಿ. ಈ ಮೇಲಿನ ಉದಾಹರಣೆಗಳಿಂದ ಸಂಖ್ಯಾವಾಚಿ ನಿಶ್ಚಿತಾರ್ಥಕ ನಾಮಪದಕ್ಕೆ ಪೂರ್ವವಾಗಿ ಬಂದಾಗ ಉಕ್ತವಾದ ಸಂಖ್ಯೆ ಅಥವಾ ಪರಿಮಾಣದ ನಿಶ್ಚಿತತೆಯನ್ನು ಹೇಳುತ್ತದೆ.
ಕ್ರಿಯಾರ್ಥಕ ರೂಪಗಳು
[ಬದಲಾಯಿಸಿ]ಕ್ರಿಯಾರ್ಥಕಗಳಲ್ಲಿ ಸಮಾಪಕ ಮತ್ತು ಅಸಮಾಪಕ ಕ್ರಿಯಾಪದಗಳಿಗೆ ಪ್ರತ್ಯಯಗಳು ಹತ್ತುತ್ತವೆ. ಎಲ್ಲ ಸಮಾಪಕ ಕ್ರಿಯಾಪದಗಳಿಗೂ ನಾಲ್ಕು ಪುರುಷಗಳಲ್ಲೂ ಪ್ರತ್ಯಯಗಳುಂಟು; ಅಸಮಾಪಕ ಕ್ರಿಯಾಪದಗಳಿಗೆ ಪುರುಷವಾಚಕ ಪ್ರತ್ಯಯಗಳಿಲ್ಲ. ಸಮಾಪಕ ಕ್ರಿಯಾಪದಗಳು : ಪುರುಷಗಳು : ಉತ್ತಮ ಪುರುಷದ ಅಕೃತಿಮಾ [ಒo]ಇದಕ್ಕೆ ಭಿನ್ನರೂಪವಾಗಿ [ಮ] ಇದು ಕೂಡ ಬರುತ್ತದೆ. ಎರಡು ಮಧ್ಯಮ ಪುರುಷಗಳಿವೆ. ಮರ್ಯಾದಾಪರ [ಅ] ಮತ್ತು ಸಾಧಾರಣ. [ಚಿ] ಇವು ಆಕೃತಿಮಾತ್ಮಕವಾಗಿ [Φ] ಮತ್ತು [ಇ] ಎಂಬ ಭಿನ್ನರೂಪಗಳನ್ನು ಪಡೆದಿವೆ. ಪ್ರಥಮ ಪುರುಷದ ಆಕೃತಿಮಾ [ಎ] ಇದಕ್ಕೆ ಭಿನ್ನರೂಪಗಳು [Φ] ಮತ್ತು [ಚಿ].
ಕಾಲಗಳು ಮತ್ತು ಕ್ರಿಯಾಭಾವಗಳು
[ಬದಲಾಯಿಸಿ][ಇಸ್] ಅಪೂರ್ಣಕಾಲಕ್ಕೆ, [ಇಲ್] ಭೂತಕಾಲಕ್ಕೆ [ಇಬ್] ಭವಿಷ್ಯತ್ ಕಾಲಕ್ಕೆ-ಹೀಗೆ ಮೂರು ಕಾಲವಾಚಕ ಆಕೃತಿಮಾಗಳಿವೆ. ಕೊನೆಯೆರಡು ಆಕೃತಿಮಾಗಳು ಸ್ವರಾಂತ್ಯವಾದ ಮೂಲರೂಪಗಳಿಗೆ ತಮ್ಮ ಸ್ವರಗಳನ್ನು ಕಳೆದುಕೊಳ್ಳುತ್ತವೆ. ಪುರುಷವಾಚಕ ಪ್ರತ್ಯಯಾತ್ಮಕ ಆಕೃತಿಮಾಗಳು ಮೂಲಕ್ರಿಯಾರೂಪ ಮತ್ತು ಕಾಲವಾಚಕ ಆಕೃತಿಮಾಗಳಿಂದಾದ ಧಾತುಗಳಿಗೆ ಸೇರುತ್ತವೆ. ಮೂಲಕ್ರಿಯಾರೂಪವೇ ವರ್ತಮಾನಕಾಲದ ಧಾತು. ಉದಾ : ಮಾಡು - ಕರ್; ನಾನು ಮಾಡುತ್ತೇನೆ-ಕರೊಂ; ನೀನು (ಮರ್ಯಾದಾಪರ) ಮಾಡುತ್ತೀಯೆ- ಕರ; (ಅವನು, ಇತ್ಯಾದಿ) ಮಾಡುತ್ತಾನೆ-ಕರೆ ಇತ್ಯಾದಿ. ಮೂಲರೂಪ ಮತ್ತು [ಇಸ್] ವರ್ತಮಾನಕಾಲದ ಅಪೂರ್ಣಧಾತುವನ್ನು ಹೇಳುತ್ತದೆ. ಉದಾ : ನಾನು ಮಾಡುತ್ತಿದ್ದೇನೆ ಅಥವಾ ನಾನು ಮಾಡುತ್ತಾ ಇದ್ದೇನೆ-ಕರಿಸೊಂ; ನೀನು (ಮರ್ಯಾದಾಪರ) ಮಾಡುತ್ತಿರುವೆ ಅಥವಾ ನೀನು ಮಾಡುತ್ತಾ ಇದ್ದೀಯೆ-ಕರಿಲ, ಇತ್ಯಾದಿ. ಭೂತಕಾಲದ ಧಾತು [ಇಲ್] ಇಂದ ಆಗುತ್ತದೆ. ಉದಾ : ನಾನು ಮಾಡಿದೆನು-ಕರಿಲೊಂ; ನೀನು (ಮರ್ಯಾದಾಪರ) ಮಾಡಿದೆ-ಕರಿಲ ಇತ್ಯಾದಿ. ಭೂತಕಾಲದ ಅಪೂರ್ಣ ಧಾತುವಿನಲ್ಲಿ [ಇಸ್] ಎಂಬುದು [ಇಲ್] ಗೆ ಪೂರ್ವದಲ್ಲಿ ಬರುತ್ತದೆ. ಉದಾ : ನಾನು ಮಾಡುತ್ತಿದ್ದೆ ಅಥವಾ ಮಾಡುತ್ತಾ ಇದ್ದೆ- ಕರಿಸಿಲೋಂ ; ನೀನು (ಮರ್ಯಾದಾಪರ) ಮಾಡುತ್ತಿದ್ದೆ ಅಥವಾ ನೀನು ಮಾಡುತ್ತಾ ಇದ್ದೆ, ಇತ್ಯಾದಿ. ಭವಿಷ್ಯತ್ ಕಾಲದ ಧಾತು ಮೂಲರೂಪ ಮತ್ತು [ಇಬ್] ಕೂಡಿ ಆಗುತ್ತದೆ. ಉದಾ : ನಾನು ಮಾಡುವೆನು- ಕರಿಮ್ ; ನೀನು (ಮುರ್ಯಾದಾಪರ) ಮಾಡುವೆ ಕರಿಬ, ಇತ್ಯಾದಿ. ಭವಿಷ್ಯತ್‍ಕಾಲದ ಅಪೂರ್ವ ಪ್ರತ್ಯಯಗಳಿಲ್ಲ. ವರ್ತಮಾನಕಾಲಿಕಧಾತು ಆಜ್ಞಾಸೂಚಕ (ವಿಧ್ಯರ್ಥ) ಧಾತುವಿನ ಕೆಲಸವನ್ನೂ ಮಾಡುತ್ತದೆ. ಆಜ್ಞಾಸೂಚಕ ಮಧ್ಯಮಪುರುಷ ಸಾಧಾರಣಕ್ಕೆ ಆಕೃತಿಯಾ ಇಲ್ಲ. ಉದಾ : ನೀನು (ಸಾಧಾರಣ) ಮಾಡು-ತರ್ ಕರ್; ನೀನು (ಮರ್ಯಾದಾಪರ) ಮಾಡು-ತುಮಿ ಕರ. ಇಂಗ್ಲಿಷಿನಲ್ಲಿರುವ ಹಾಗಲ್ಲದೆ, ಅಸ್ಸಾಮಿಯಲ್ಲಿ ಕರ್ತೃವೂ ಐಚ್ಛಿಕವಾಗಿ ಆಜ್ಞಾವಾಚಕದಲ್ಲಿ ವ್ಯಕ್ತವಾಗುತ್ತದೆ. ಅಸಮಾಪಕ ಕ್ರಿಯಾಪದಗಳು. ಈ ಕೆಳಗಿನವು ಅಸಮಾಪಕ ಕ್ರಿಯಾಪದಗಳು. (i) [ಇ] ಮತ್ತು [ಎ] ಗಳಲ್ಲಿ ಸಮುಚ್ಚಯಗಳು.
(ii) [o]ನಲ್ಲಿ ಅಸಮಾಪಕ ಕ್ರಿಯಾಪದಗಳು. (iii) [ಅ] ನಲ್ಲಿ ಭೂತಕಾಲಿಕ ಕೃದಂತಗಳು. ಅರ್ಥಕ್ಕೆ ಅನುಗುಣವಾಗಿ ಬರುವ [ಇ] ರುಪದಲ್ಲಿ ಸಮುಚ್ಚಯ ಮತ್ತು [ಅ] ರೂಪದ ಭೂತಕೃದಂತ ಇವು ವರ್ತಮಾನ ಕಾಲದ ಧಾತುವಿಗೆ (ಎಂದರೆ ಮೂಲಧಾತುವಿಗೆ) ಅಂತ್ಯಪ್ರತ್ಯಯವಾಗಿ ಬರುತ್ತದೆ. ಉದಾ : ಮಾಡು -ಕರ್ ; ಮಾಡಿದ ಮತ್ತು ಮಾಡುತ್ತ-ಕರಿ, ಮಾಡಿದ್ದು ಅಥವಾ ಮಾಡುತ್ತಿದ್ದುದು ಕರ, ಇತ್ಯಾದಿ. ಸಮುಚ್ಚಯದ [ಎ] ಯನ್ನು ಭೂತಕಾಲಿಕ ಧಾತುರೂಪ [ಇಲ್]ಗೆ ಮತ್ತು ವರ್ತಮಾನ ಕಾಲಿಕ ಕೃದಂತ ಧಾತುರೂಪಗೆ ಸೇರಿಸಬಹುದು. ಉದಾ : (ಅದು) ಮಾಡಿದ್ದಾರೆ-ಕರಿಲೆ; ಮಾಡುತ್ತಿರುವಾಗ -ಕರೊಂತೆ, ಇತ್ಯಾದಿ. ಅಸಮಾಪಕ [o] ಪ್ರತ್ಯಯ ಭವಿಷ್ಯತ್ ಧಾತುರುಪಗಳನ್ನು ತೆಗೆದುಕೊಳ್ಳುತ್ತದೆ; ಪರಿಣಾಮವಾಗಿ ಬಂದ ರೂಪಕ್ಕೆ ನಿರಪೇಕ್ಷ ಚತುರ್ಥೀ ಪಂಚಮೀ ಮತ್ತು ಷಷ್ಠೀ ವಿಭಕ್ತಿಗಳು ಹತ್ತಬಹುದು. ನಿಷೇದಾತ್ಮಕ : ನಿಷೇಧಾತ್ಮಕ ಪ್ರತ್ಯಯಗಳು ನಿಷೇಧಾತ್ಮಕ ಆಕೃತಿಮಾ [ನೆ] ಯನ್ನು ಈಗಾಗಲೇ ಪ್ರತ್ಯಯ ಹಚ್ಚಿದ ರೂಪಗಳಿಗೆ ಮೊದಲು ಸೇರಿಸುವುದರಿಂದ ಬರುತ್ತವೆ. ಆಕೃತಿಮಾ [ನೆ] ಯಲ್ಲಿಯ ಸ್ವರ ಸ್ವರಾದಿಯಾದ ರೂಪದ ಮೊದಲಲ್ಲಿಯೇ ನಷ್ಟವಾಗುತ್ತದೆ. ಮತ್ತು ಕ್ರಿಯಾರೂಪದ ವ್ಯಂಜನದ ಆದಿಯ ಮೊದಲ ಸ್ವರದೊಡನೆ ಸ್ವರಮೈತ್ರಿಯನ್ನು ಪಡೆಯುತ್ತದೆ; ಆದರೆ ಆ ಸ್ಥಾನದಲ್ಲಿ ವ್ಯಂಜನ [ಅ] ಸ್ವರವನ್ನು ಆದಿಯಲ್ಲಿ ಪಡಿದಿದ್ದರೆ ಈ ಸ್ವರಮೈತ್ರಿ ಉಂಟಾಗದೆ ಹಾಗೆಯೇ ಉಳಿಯುತ್ತದೆ. ಉದಾ : ನಾನು ಮಾಡೆನು-ಟಿoಞoಡಿo ~; ನಾನು ಮಾಡಲಿಲ್ಲ—ನಕರಿಲೊಂ; ನಾನು ನೋಡೆನು-ನದಖೋಂ; (ಅದು) ಕೇಳಲ್ಪಡದಿದ್ದರೆ-ನುಕುನಿಲೆ; ನೀನು (ಮರ್ಯಾದಾಪರ) ಕೊಡೆ-ನಿಡಿಲ; ಆದರೆ ಸ್ವರಮೈತ್ರಿಯಿಲ್ಲದುದು. ನಾನು ತಿಂದೆನಿಲ್ಲ-ನಖಲೊಂ ಅಥವಾ ನೆಖಲೊಂ ಇತ್ಯಾದಿ. ಮಧ್ಯಮ ಪರುಷಗಳಲ್ಲಿಯ ಭವಿಷ್ಯತ್‍ಕಾಲದ ನಿಷೇಧಾತ್ಮಕ ವಿಧ್ಯರ್ಥಕ ನಿಷೇಧಾತ್ಮಕವನ್ನು ವ್ಯಕ್ತಪಡಿಸುತ್ತದೆ. ಕರ್ಮಣಿ ಪ್ರಯೋಗ : ವಿಶ್ಲೇಷಣಾತ್ಮಕವಾಗಿ ಇದನ್ನು ವ್ಯಕ್ತಪಡಿಸಲಾಗುತ್ತದೆ. ಆದಾಗ್ಯೂ ಪ್ರತ್ಯಯ ಹಚ್ಚಿದ ಕರ್ಮಣಿ ಪ್ರಯೋಗಗಳ ಅವಶೇಷಗಳು ಕೆಲವು ನುಡಿ ಕಟ್ಟಿನ ಉಕ್ತಿಗಳಲ್ಲಿ [ಇ] ಮತ್ತು [ಎ] ಎಂಬ ರೂಪಗಳಲ್ಲಿ ಕಾಣುತ್ತವೆ. ಕಾರಾಣಾರ್ಥಕಗಳು ಪ್ರಾತಿಪದಿಕಗಳು ಇತ್ಯಾದಿಗಳು ನಿಷ್ಪನ್ನ ಮೂಲಕ್ರಿಯಾರೂಪಗಳು ಮತ್ತು ಮೇಲ್ಕಂಡ ಪ್ರತ್ಯಯಗಳು ಕ್ರಮವಾಗಿ ಅವುಗಳಿಗೆ ಹತ್ತಬಹುದು. ಪದಕ್ರಮ : ಸಾಮಾನ್ಯವಾಗಿ ಒಂದು ಉಚ್ಚರಿತ ಪದಕ್ರಮ ಕರ್ತೃಪದದಿಂದ ಆರಂಭವಾಗುತ್ತದೆ. ಇದಾದ ಮೇಲೆ ಕರ್ಮಪದವಿದ್ದು, ಅಸಮಾಪಕ ಕ್ರಿಯಾಪದದಿಂದ ಕೊನೆಯಾಗುತ್ತದೆ. ಕರ್ತೃ, ಕರ್ಮ ಮತ್ತು ಅಸಮಾಪಕ ಕ್ರಿಯಾಪದಗಳಿಗೆ ಪೂರ್ವದಲ್ಲಿ ಅವುಗಳ ಅನುಬಂಧಗಳು ಬಂದಿರುತ್ತವೆ. ಈ ಸಾಮಾನ್ಯ ಪದಕ್ರಮ ಅವಧಾರಣಾತ್ಮಕ ಉಕ್ತಿಗಳಲ್ಲಿ ಅವಧಾರಣೆಯ ಸ್ವರೂಪಕ್ಕೆ ಅನುಗುಣವಾಗಿ ಬದಲಾಗುವುದು ಉಂಟು.
ಪದಕೋಶ
[ಬದಲಾಯಿಸಿ]ಅಸ್ಸಾಮಿ ಪದಗಳಲ್ಲಿ ಸೇಕಡಾ ಅತಿ ಹೆಚ್ಚಿನ ಪಾಲು ತದ್ಭವಗಳಾಗಿರುತ್ತವೆ. ಈ ತದ್ಭವಗಳು ಸಂಸ್ಕøತದಿಂದ ಪ್ರಾಕೃತ ಮತ್ತು ಅಪಭ್ರಂಶ ಘಟ್ಟಗಳ ಮೂಲಕವಾಗಿ ನಿಷ್ಪನ್ನವಾದವಾಗಿವೆ. ಇವಲ್ಲದೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲೇ ತತ್ಸಮಗಳೂ ಅರ್ಧತತ್ಸಮಗಳೂ ದೇಶ್ಯಶಬ್ದಗಳೂ ಕಂಡು ಬರುತ್ತವೆ. ಅಸ್ಸಾಮೀ ಒಂದು ಸ್ವೀಕರಣ ಭಾಷೆ. ಅದು ತನ್ನ ಪದಕೋಶವನ್ನು ಅಸ್ಸಾಮಿನಲ್ಲಿ ಅದರ ಸುತ್ತಮುತ್ತಲೂ ಮಾತನಾಡುವ ಎಲ್ಲ ಆರ್ಯೇತರ ಗುಡ್ಡಗಾಡಿನ ಭಾಷೆಗಳಿಂದಲೂ ಉಪಭಾಷೆಗಳಿಂದಲೂ ಸಾಮಾನ್ಯವಾಗಿ ಪದಗಳನ್ನು ಸೇರಿಸಿಕೊಳ್ಳುವುದರಿಂದ ಬೆಳೆಸಿಕೊಂಡಿದೆ. ಬೇರೆ ನವೀನ ಇಂಡೋ ಆರ್ಯನ್ ಭಾಷೆಗಳು, ಅದರಲ್ಲೂ ಹಿಂದಿ ಮತ್ತು ಹಿಂದಿಯ ಮೂಲಕವಾಗಿ ಪರ್ಶಿಯನ್ ಅರಬ್ಬೀ ಮೊದಲಾದ ಇನ್ನಿತರ ಎಷ್ಟೂೀ ಭಾಷೆಗಳು ಕೂಡ ಈ ಕೆಲಸದಲ್ಲಿ ಕೆಲಮಟ್ಟಿಗೆ ನೆರವಾಗಿವೆ. ಇನ್ನು ಇಂಗ್ಲಿಷ್ ಪೋರ್ಚುಗೀಸ್ ಮೊದಲಾದ ಯೂರೋಪಿಯನ್ ಭಾಷೆಗಳೂ ಹೀಗೆಯೇ ನೆರವಾಗಿವೆ. ಕೆಲವು ಸ್ವೀಕೃತ ಪದಗಳು ಗುರುತು ಸಿಗದ ಮಟ್ಟಿಗೆ ಭಾಷೆಗೆ ಸಹಜವಾಗಿ ಹೊಂದಿಕೊಂಡು ಬಿಟ್ಟಿವೆ. ಜ್ಞಾನಪ್ರಸಾರ ಮತ್ತು ಅನ್ಯದೇಶಗಳ ಸಂಬಂಧದಿಂದಾಗಿ ಪದಗಳು ಅನ್ಯಭಾಷೆಗಳಿಂದ ಸಾಮಾನ್ಯವಾಗಿ ಪ್ರತಿದಿನವೂ ಭಾಷೆಯೊಳಗೆ ನುಸುಳಿಕೊಳ್ಳುತ್ತಿವೆ, ಭಾಷೆಯ ಸತ್ತ್ವವನ್ನು ಬೆಳೆಸುತ್ತಿವೆ.
ಅನುಲೇಖನದ (ಆರ್ತೊಗ್ರಫಿ) ಮೇಲೆ ಒಂದು ಟಿಪ್ಪಣೆ
[ಬದಲಾಯಿಸಿ]ಇಂದಿನ ಅಸ್ಸಾಮಿ ಅನುಲೇಖನ (ಅಕ್ಷರ ಸಂಯೋಜನ) ಎರಡು ಅಕ್ಷರಗಳ ಹೊರತು ಬಂಗಾಳಿ ಭಾಷೆಗೆ ಸಮಾನವಾಗಿದೆ. ಅಸ್ಸಾಮೀ/ರ/ಕಾರದ ಸಂಕೇತ ಬಂಗಾಳಿಯ ಹಾಗಲ್ಲದೆ, ಮಧ್ಯದಲ್ಲಿ ಒಂದು ರೇಖೆಯನ್ನೊಳಗೊಂಡಿದೆ. /ವ/ಕಾರಕ್ಕೆ ಆದರೆ ಸಂಕೇತದ ಕೆಳಗೆ ರೇಖೆ ಬರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ LIS India
- ↑ 2001 Indian Census report
- ↑ "Asamiya is the major language spoken in Assam, and serves almost as a lingua franca among the different speech communities in the whole area." (Goswami 2003:394)
- ↑ "Asamiya has historically originated in Old Indo-Aryan dialects, but the exact nature of its origin and growth is not very clear as yet." (Goswami 2003:394)
- ↑ "Dr S. K. Chatterji basing his conclusion on the materials of accumulated by LSI Vol 1 and other monographs on the Bangali dialects divides eastern Mag. Pkt. and Ap. into four dialect groups. (1) Radha dialects which comprehend Western Bengali which gives standard Bangali dialect and Oriya in the South West. (2) Varendra dialects of North Central Bengal. (3) Kamarupa dialects which comprehend Assamese and the dialects of North Bengal. (4) Vanga dialects which comprehend the dialects of East Bengal (ODBL Vol. I. p140)" (Kakati 1941, p. 6)
- ↑ "It is curious to find that according to (Hiuen Tsang) the language of Kamarupa 'differed a little' from that of mid-India. Hiuen Tsang is silent about the language of Pundra-vardhana or Karna-Suvarna; it can be presumed that the language of these tracts were identical with that of Magadha." (Chatterji 1926, p. 78)
- ↑ "Perhaps this 'differing a little' of the Kamarupa speech refers to those modifications of Aryan sounds which now characterise Assamese as well as North- and East-Bengali dialects." (Chatterji 1926, pp. 78–89)
- ↑ "When [the Tibeto-Burman speakers] adopted that language they also enriched it with their vocabularies, expressions, affixes etc." (Saikia 1997, p. 4)
- ↑ Moral 1997, pp. 43–53.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- [೧] Axamiyaa Bhaaxaar Moulik Bisar by Mr Devananda Bharali
- [೨] Tonkori (Affinities of the Ainu language of Japan with Assamese and some other languages) by Dr Satyakam Phukan
- [೩] Archived 2016-10-19 ವೇಬ್ಯಾಕ್ ಮೆಷಿನ್ ನಲ್ಲಿ. Roots and Strings of the Assamese language, article by Dr Satyakam Phukan
- Candrakānta abhidhāna : Asamiyi sabdara butpatti aru udaharanere Asamiya-Ingraji dui bhashara artha thaka abhidhana. second ed. Guwahati : Guwahati Bisbabidyalaya, 1962.
- A Dictionary in Assamese and English (1867) First Assamese dictionary by Miles Bronson from (books.google.com)
- Assamese computing resources at TDIL
- Basic Assamese words and phrases
- Assamese proverbs, published 1896