ಪರಿಸರ ಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Environmental education


ಪರಿಸರ ಶಿಕ್ಷಣದ ಕಲ್ಪನೆ ಪ್ರಪ್ರಥಮವಾಗಿ ಮೂಡಿ ಬ೦ದದ್ದು ೧೯೭೨ರಲ್ಲಿ.[೧] ಮಾನವನು ಸಮಾಜಜೀವಿ ಎನ್ನುವ ಹಾಗೆ ಆತನು ಪರಿಸರ ಅಥವಾ ಪ್ರಕೃತಿಯ ಕೂಸು.ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗು ಇದೆ. ಅ೦ದರೆ ಆತನ ಸುತ್ತಮುತ್ತಲು ಹಲವಾರು ಮರಗಿಡಗಳಿವೆ.ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ.ಅಲ್ಲದೆ ವೈವಿಧ್ಯಮಯವಾದ ಕೀಟ ಪ್ರಪ೦ಚವಿದೆ.ಈ ಜೀವಿಗಳೇ ಅಲ್ಲದೆ ಹಲವಾರು ಮಹಾನದಿ,ಸಾಗರ ಸರೋವರಗಳಿವೆ;ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ;ಗಾಳಿ,ಬೆಳಕು ಹಾಗೂ ಖನಿಜ ಸ೦ಪತ್ತನ್ನೊಳಗೊ೦ಡ ಪ್ರಕೃತಿ ಮಾತೆ ಇದ್ದಾಳೆ.

ಪರಿಸರ ಶಿಕ್ಷಣ ನಮ್ಮ ಸುತ್ತಮುತ್ತಲಿನ ಪರಿಸರ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯವನ್ನು ಬಲಪಡಿಸುವ ಒಂದು ಕಲಿಕೆಯ ಸಾಧನವಾಗಿದೆ.

ಪರಿಸರಕ್ಕೆ ವೈಜ್ಞಾನಿಕ ನಿರೂಪಣೆಯನ್ನು ನೀಡುವುದಾದರೆ,ಜೀವಿಯ ಮೆಲೆ ಜೈವಿಕವಾಗಿ ಪರಿಣಾಮವನ್ನು ಬೀರುವ೦ತ ಎಲ್ಲಾ ಬಾಹ್ಯ ಕಾರಣಗಳನ್ನು ಒಟ್ಟಾರೆ ಪರಿಸರ ಎಂದು ಕರೆಯಬಹುದಾಗಿದೆ.ಪರಿಸರ ಎ೦ಬ ಪದವನ್ನು ಶಬ್ದಶಃವಾಗಿ ಅರ್ಥೈಸಿದಾಗ ಸುತ್ತುವರಿದ೦ಥದ್ದು ಅಥವಾ ಆವರಿಸಿರುವ೦ಥದ್ದು ಎ೦ದಾಗುತ್ತದೆ.ಅ೦ದರೆ ವಿವಧ ಬಾಹ್ಯ ವಸ್ತುಗಳಿ೦ದ ಕೂಡಿ ಆದ೦ತಹ ಮೊತ್ತವೇ ಪರಿಸರ.

ಪರಿಸರದ ಪ್ರಕಾರಗಳು[ಬದಲಾಯಿಸಿ]

ಭೌತಿಕ ಪರಿಸರ:ಇದು ನೆಲ, ಜಲ, ಗಾಳಿ, ಗುಡ್ಡ, ಹೊಳೆ, ಕಾಡು, ಸರೋವರ, ಖನಿಜ, ಗ್ರಹ, ನಕ್ಷತ್ರ ಮುಂತಾದವುಗಳನ್ನು ಒಳಗೊಂಡಿದೆ.

ಜೈವಿಕ ಪರಿಸರ[ಬದಲಾಯಿಸಿ]

ಜೀವಿಗಳನ್ನೊಳಗೊಂಡ ಪರಿಸರ ಇದಾಗಿದೆ. ಪ್ರಾಣಿಗಳು, ಸಸ್ಯಗಳು ಹಾಗು ಇತರೆ ಪ್ರತಿಯೊಂದು ಜೀವಿಯ ಉತ್ಪತ್ತಿಗೆ ನೆರವು ನೀಡುತ್ತದೆ.

ಆರ್ಥಿಕ ಪರಿಸರ[ಬದಲಾಯಿಸಿ]

ವಿವಿದ ವಸ್ತುಗಳು, ಒಡವೆಗಳು, ಮನೆ-ಮಾರು, ಸಂಚಾರ-ಸೌಲಭ್ಯಗಳು,ಸಂಪರ್ಕ-ಸಾಧನೆಗಳು ಹಾಗು ಲಾಭ ನೀಡಬಲ್ಲ ಸಾಕುಪ್ರಾಣಿಗಳು; ವ್ಯಾಪಾರ, ವ್ಯವಸಾಯ ಹೀಗೆ ಮುಂತಾದವುಗಳನ್ನು ಒಳಗೊ೦ಡಿದೆ.

ಸಾಮಾಜಿಕ ಪರಿಸರ[ಬದಲಾಯಿಸಿ]

ಇದೂ ಸಹ ಮಾನವನ ಬದುಕಿಗೆ ಅತ್ಯಾವಶ್ಯಕವಾದ ಪರಿಸರವಾಗಿದೆ.ಸಮಾಜದಲ್ಲಿ ಜಾರಿಯಲ್ಲಿರುವ ವಿವಿಧ ಆಚಾರ ವಿಚಾರಗಳು ಪಧ್ಧತಿಗಳು ಸಂಪ್ರದಾಯಗಳು,ಧರ್ಮ ಕಾನೂನು ಪರಂಪರೆ, ಲೋಕಾರೂಡಿ ನೈತಿಕ ನಿಯಮ, ನಂಬುಗೆ, ಸಾಹಿತ್ಯ , ಕಲೆ ಮುಂತಾದವುಗಳು ಸಾಮಾಜಿಕ ಪರಿಸರದ ಅಂಗಗಳಾಗಿವೆ.

ಪರಿಸರ ಮಾಲಿನ್ಯ[ಬದಲಾಯಿಸಿ]

ಪರಿಸರದಲ್ಲಿನ ಗಾಳಿ,ನೀರು,ಭೂಮಿ ಇವುಗಳ ಭೌತಿಕ,ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳಲ್ಲಿ ಅನಪೇಕ್ಷಿತ ಬದಲಾವಣೆಗಳಾಗುವುದನ್ನು ಪರಿಸರ ಮಾಲಿನ್ಯ ಎಂದು ಕರೆಯುತ್ತಾರೆ. .ಪ್ರಸ್ತುತ ದಿನಗಳಲ್ಲಿ ಮಾನವನಿಗೆ ಕೈಗಾರಿಕ ಚಟುವಟಿಕೆಗಳಲ್ಲಿ ಅತ್ಯುಪಯುಕ್ತವೆನಿಸಿದ ಸಾಮಾಗ್ರಿಗಳು ಅಪಾರ ಸಂಖ್ಯೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ .ಇದು ನಮಗೆ ಅಭಿವೃದ್ದಿಯ ಸಂಕೇತವಾಗಿ ಗೋಚರಿಸಿದರೆ ಈ ಚಟುವಟಿಕೆಗಳು ನಮಗೂ ಹಾಗೂ ನಮ್ಮ ಪರಿಸರಕ್ಕೆ ಹಾನಿಕರವಾಗಿ ಪರಿಣಮಿಸಿ ಅಪಾಯದ ಗಂಟೆಯನ್ನು ಬಾರಿಸುತ್ತಿದೆ.

ಪರಿಸರ ಮಾಲಿನ್ಯದ ವಿಧಗಳು[ಬದಲಾಯಿಸಿ]

ವಾಯು ಮಂಡಲದಲ್ಲಿ ಯಾವುದೇ ಘಟಕದ ಸಾರತೆ ಹೆಚ್ಚಿ ಅದರಿಂದ ಜೀವಿಗಳ ಪರಿಸರಕ್ಕೆ ಹಾನಿಯುಂಟಾದರೆ ಅಂತಹ ಪರಿಸ್ಥಿತಿಯನ್ನು ವಾಯುಮಾಲಿನ್ಯ ಎಂದು ಕರೆಯುತ್ತಾರೆ .ಜೀವನಾಧಾರವಾದ ಆಮ್ಲಜನಕದ ಆಗರ ವಾಯುಮಂಡಲದಲ್ಲಿನ ವಿವಿಧ ಅನಿಲಗಳ ಮಿಶ್ರಣವೇ ವಾಯುಮಾಲಿನ್ಯದ ಕಾರಕಗಳು ಅಂದರೆ ಉದಾಹರಣೆಗೆ ಧೂಳು.

ಜೀವ ಸಂಕುಲದ ರಕ್ಷಕ : ಓಝೋನ್ ವಲಯ[ಬದಲಾಯಿಸಿ]

ಓಝೋನ್ ಒಂದು ಅನಿಲವಾಗಿದ್ದು ,ಅದು ಸ್ವತಂತ್ರವಾಗಿ ಗಾಳಿಯಲ್ಲಿ ಚಿಕ್ಕ ಪ್ರಮಾಣದಲ್ಲಿ ಅಸ್ಥಿತ್ವದಲ್ಲಿರುವ ಹಾಗೂ ಮೂರು ಆಮ್ಲಜನಕದ ಪರಮಾಣುಗಳ ತ್ರಿಬಂಧ ಅಣುಗಳಿಂದ ಕೂಡಿರುತ್ತದೆ.ಭೂಮಿಯಿಂದ ಸುಮಾರು ೧೦-೩೦ಕಿ.ಮಿ ಎತ್ತರದಲ್ಲಿ ಸ್ಟ್ರೇಟೋಗೋಳದಲ್ಲಿ ಹೊರಹೊಮ್ಮುವ ಹಾನಿಕಾರಕ ,ಅತಿ ನೇರಳೆ ಕಿರಣಗಳಿಂದ ಜೀವ ಸಂಕುಲವನ್ನು ರಕ್ಷಿಸುವ ಅನಿಲ ಇದಾಗಿದೆ.ಅಂತೆಯೇ ಅದನ್ನು, "ನೈಸರ್ಗಿಕ ಭೂರಕ್ಷಕ ಕೊಡೆ" ಅಥವಾ "ಸೌರ ಕೊಡೆ" ಇತ್ಯಾದಿ ಎನ್ನುತ್ತಾರೆ.ಮಾನವನ ಆರೊಗ್ಯವನ್ನು ಆಮ್ಲಜನಕ ಎಂಬ ಅನಿಲ ನಿರ್ಣಯಿಸಿದರೆ,ಪೃಥ್ವಿಯ ಆರೋಗ್ಯ ವನ್ನು ಓಝೋನ್ ಎಂಬ ಅನಿಲ ನಿರ್ಣಯಿಸುತ್ತದೆ.

ಓಝೋನ್ ಪದರಿನ ನಾಶಗೊಳ್ಳುವಿಕೆ[ಬದಲಾಯಿಸಿ]

ಜೆಟ್ ವಿಮಾನಗಳಲ್ಲಿನ ಅಪೂರ್ಣ ದಹನಕ್ಕೊಳಗಾದ ಇಂಧನ:ಕ್ಲೋರೋಫ಼್ಲೂರೋ ಕಾರ್ಬನ್ ಗಳು,ಮೀತೇನ್ ಗಳೂ ಓಝಾನ್ ವಲಯಕ್ಕೆ ಅಪಾಯಕಾರಿಗಳೆಸಿದೆ.

ಓಝೋನ್ ವಲಯದ ಲಯದಿಂದಾಗುವ ದುಷ್ಪರಿಣಾಮಗಳು[ಬದಲಾಯಿಸಿ]

ಇದರ ನಾಶದಿಂದ ಅತೀ ನೇರಳೇ ಕಿರಣಗಳು ಭೂಮಿಯನ್ನು ಸುಲಭವಾಗಿ ತಲುಪುತ್ತವೆ. ವಿಜ್ಞಾನಿಯ ಪ್ರಕಾರ ಸ್ಟ್ರೇಟೋವಲಯದಲ್ಲಿರುವ ಓಝೋನ್ ಮೊತ್ತದಲ್ಲಿ ಶೇಕಡ ೧೦ರಷ್ಟು ಸೋರಿದರೂ ,ಶೇಕಡ ೨೫೦ರಿಂದ ೫೦೦ರಷ್ಟು ಅತೀ ನೇರಳೇ ಕಿರಣಗಳು ಮಾನವನ ಶರೀರವನ್ನು ಭೇದಿಸುತ್ತದೆ.ಅಗಾಧ ಪ್ರಮಾಣವು ಫೋಟಾನ್ ಕಿರಣಗಳನ್ನು ನಮ್ಮ ಚರ್ಮ ರಾಸಾಯನಿಕ ಬಂಧಕಗಳು ಹೀರಿಕೊಂಡಾಗ ಡೀ ಎನ್ ಎ ವಿಭಜನೆ ಪ್ರಚಂಡ ವೇಗದಲ್ಲಿ ಉಂಟಾಗಿ ಚರ್ಮದ ಕ್ಯಾನ್ಸರ್ ರೊಗಕ್ಕೆ ಬಲಿಯಾಗುವುದು ಶತಃಸಿದ್ದ.

ಭೂತಾಪ/ಹಸಿರು ಮನೆಯ ಪರಿಣಾಮ[ಬದಲಾಯಿಸಿ]

ಈ ಭೂಮಿಯು ಅಥವಾ ಭೂಮಿಯ ಮೇಲಿನ ಅನಿಲಗಳು ಸೂರ್ಯನ ವಿಕಿರಣಗಳನ್ನು ಹೀರಿಕೊಳ್ಳದ್ದಿದ್ದರೆ ಭೂಮಿಯು ಅತಿ ಹೆಚ್ಚಿನ ಶೀತಕ್ಕೊಳಗಾಗಿ ಜೀವಿಗಳ ಜೀವನ ಅಸಹನೀಯವಾಗುತ್ತದೆ. ಒಂದುವೇಳೆ ಈ ಭೂಮಿಯು ಅಥವಾ ಭೂಮಿಯ ಮೇಲಿನ ಅನಿಲಗಳು ಸೂರ್ಯನ ವಿಕಿರಣಗಳನ್ನು ಗರಿಷ್ಟ ಪ್ರಮಾಣದಲ್ಲಿ ಹೀರಿಕೊಂಡರೆ ಭೂಮಿಯು ಅತಿ ಹೆಚ್ಚಿನ ಶಾಖಕ್ಕೊಳಗಾಗಿ ಜೀವಿಗಳ ಜೀವನ ಅಸಹನೀಯವಾಗುತ್ತದೆ.

ಮಾನವನ ಪ್ರಕೃತಿಯ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ದ ಪ್ರಮಾಣ ವಿಪರೀತ ಹೆಚ್ಚಳಗೊಂಡು ವರ್ಷದಿಂದ ವರ್ಷಕ್ಕೆ ನಮ್ಮ ಭೂಮಿಯು ಕ್ರಮೇಣವಾಗಿ ಶಾಖದ ಕರಿನೆರಳಿಗೆ ತುತ್ತಾಗುತ್ತಿದೆ.

ಭೂತಾಪ ಹೆಚ್ಚಳಕ್ಕೆ ಕಾರಣಗಳು[ಬದಲಾಯಿಸಿ]

ವಿಶ್ವದಾದ್ಯಂತ ಕೈಗಾರಿಕೆಗಳ ಶಾಖೋತ್ಪನ್ನ ವಿದ್ಯುತ್ ಘಟಕಗಳ ಹಾಗೂ ವಾಹನಗಳ ಅನಪೇಕ್ಷಿತವಾಗಿ ವಾತಾವರಣದಲ್ಲಿ ಸಂಚಯನವಾಗುತ್ತಲಿದೆ.

ಹಸಿರುಮನೆಯ ಹೆಚ್ಚಳದಿಂದಾಗುವ ಪರಿಣಾಮಗಳು[ಬದಲಾಯಿಸಿ]

  • ಜೀವಿಗಳ ಮೇಲೆ ಗುರುತರ ಪರಿಣಾಮ ಉಂಟಾಗುತ್ತದೆ.
  • ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ಮಳೆಯ ಮಾದರಿಯಲ್ಲಿ ಬದಲಾವಣೆಯುಂಟಾಗುತ್ತದೆ.
  • ಸಮುದ್ರದ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ.
  • ಕೃಷಿ ಸಂಪತ್ತು ವಿನಾಶದ ಅಂಚಿಗೆ ಬಂದು ತಲುಪುತ್ತದೆ.

ಎಲ್ ನಿನೋ ಮತ್ತು ಲಾ ನಿನಾ[ಬದಲಾಯಿಸಿ]

ಸಾಗರದ ಮೇಲ್ಪದರನ್ನು ಬಿಸಿಗೊಳಿಸುವ ಪ್ರಕೃತಿಯ ಒಂದು ಬಿರುಗಾಳಿಯೇ-"ಎಲ್ ನಿ ನೋ". ಸಾಮನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳ ಅಂತರದಲ್ಲಿ ಸೃಷ್ಟಿಯಾಗುತ್ತಲೇಯಿರುವ ಇದು ಒಂದು ಕಡೆ ಭೀಕರೋಪಾದಿಯ ಕ್ಷಾಮವನ್ನು ಸೃಷ್ಟಿಸಿದರೆ ,ಮತ್ತೊಂದು ಕಡೇ ರುದ್ರ ಭಯಾನಕ ಜಲಾಪ್ರಳಯವನ್ನೇ ಹುಟ್ಟಿಸಿ ಪ್ರಕೃತಿಯನ್ನು ನಜ್ಜು ಗುಜ್ಜು ಮಾಡಿಬಿಡುತ್ತದೆ. ಸಾಮನ್ಯವಾಗಿ ಡಿಸ್ಸೆಂಬರ್ ತಿಂಗಳಿನಲ್ಲಿ ನಿಧಾನವಾಗಿ ತಲೆಯೆತ್ತುವ ಈ "ಎಲ್ ನಿ ನೋ" ಪ್ರಕ್ರಿಯೇ ಏಪ್ರಿಲ್ ತನಕ ಮುಂದುವರೆಯುತ್ತದೆ. ಶಾಂತ ಸಾಗರದ ಮೇಲ್ಬಾಗವನ್ನು ತಂಪು ಗೊಳಿಸುವ ಇದು ಭಾರತದ ಪಾಲಿಗಂತು ಉತ್ತಮ ಸಂಗತಿ-"ಲಾ ನಿನೋ". "ಎಲ್ ನಿ ನೋ" ಭೂಮಂಡಲಕ್ಕೆ ವಿಪತ್ಕಾರಿಯಾಗಿದ್ದರೆ,"ಲಾನಿನೋ" ಭೂಮಂಡಲಕ್ಕೆ ಒಂದು ದೃಷ್ಟಿಯಲ್ಲಿ ವರದಾನವಾಗಿ ಪರಿಣಮಿಸಿದೆ.ಅಂದರೆ ಕ್ಷಾಮಪೀಡಿತ ಪ್ರದೇಶಗಳಿಗೆ ನೆಮ್ಮದಿಯ ಭವವನ್ನುಂಟು ಮಾಡುತ್ತದೆ.ಆದ ಕಾರಣ ಎಲ್ ನಿ ನೋ" ಮತು "ಲಾ ನಿನೋ" ಗಳನ್ನು ಭೂಮಾತೆಯ ಗರ್ಬದಿಂದ ಜನ್ಮವೆತ್ತಿದ ಎರಡು "ವಿಭಿನ್ನ ಸ್ವಭಾವದ ಎರಡು ಕೂಸುಗಳು ಎಂದು ಕರೆಯಲಾಗಿದೆ

ಪರಿಸರ ಪ್ರಜ್ಞೆ[ಬದಲಾಯಿಸಿ]

ಪರಿಸರ ಪ್ರಜ್ಞೆ ಜೀವಜಾಲವನ್ನು ಸೃಜಿಸಿದವನು ಮಾನವನಲ್ಲ. ಅವನು ಆ ಜಾಲದಲ್ಲಿ ಒಂದು ಎಳೆ ಮಾತ್ರ

ಪರಿಸರ ಎಂಬ ಈ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವಿಸುತ್ತಿರಿತ್ತವೆ. ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನು ನಿಕಟಗೊಳಿಸಿ ಜೀವಜಾಲವನ್ನಾಗಿಸಿದೆ.

  • ಜೈವಿಕ ವೈವಿಧ್ಯತೆಯನ್ನು ಕಾಪಡುವುದು.
  • ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳ ಅನಧಿಕೃತ ಮಾರಾಟವನ್ನು ತಡೆಗಟ್ಟುವುದು ಪರಿಸರಕ್ಕೆ ಹಾನಿಯಾಗದ ಅಗ್ಗವಾದ ಶಕ್ತಿಮೂಲಗಳ ಅನ್ವೇಷಣೆ
  • ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣು ಗಳ,ಭದ್ರತೆಯನ್ನು ಸಂರಕ್ಷಿಸುವುದು
  • ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದು.

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/United_Nations_Environment_Program