ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ.ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ಲಿಂಗ ಎಂಬುದಾಗಿ ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಲಿಂಗವು ಸೃಷ್ಟಿಯ ಸಹಜ ಸ್ಥಿ ತಿ. ದೈಹಿಕ ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ. ಈ ರೀತಿ ಜೈವಿಕವಾಗಿ ಬಂದಿರುವ ಲಿಂಗವು ಪಕೃತಿದತ್ತವಾದ ಗುಣವಾಗಿದ್ದು ಜನಾಂಗದ ಬೆಳವಣಿಗೆ ಹಾಗೂ ಸಮಾಜ ಜೀವನಕ್ಕೆ ಬಹಳ ಮುಖ್ಯ. ಹೆಣ್ಣು ಗಂಡುಗಳಲ್ಲಿ ಕೆಲವೊಂದು ವಿಶೇ‍‍ಷ ಗುಣಲಕ್ಷಣಗಳು,ಕ್ರೋಮೋಸೋಮುಗಳು, ದೇಹ ರಚನೆ ಹಾಗೂ ಸಂತಾನೋತ್ಪತಿಯ ವಿಶೇಷತೆ ಇರುವುದು ಜೈವಿಕ ಗುಣ.ಆದರೆ ಸ್ತ್ರೀ- ಪುರು‍‍ಷರ ನಡುವೆ ಅಸಮಾನತೆ ಮತ್ತು ಭೇದ ಭಾವಗಳು ಜೈವಿಕ ಹುಟ್ಟಿನಿಂದ ಬಂದಿಲ್ಲ. ಆದರೆ ಅದು ಒಂದು ಸಾಮಾಜಿಕ ಸಂಸ್ಕ್ರತಿಯು ಆಚರಣೆಗೆ ತರುತ್ತದೆ.ಆದುದರಿಂದ ಲಿಂಗವೂ ಜೈವಿಕವಾದ ಮತ್ತು ಪ್ರಕೃತಿ ಸಹಜಗುಣವಾಗಿಯೂ,ಜಂಡರ್ ಎನ್ನುವುದು ಒಂದು ಆಚರಣೆಯಾಗಿದೆ ಎನ್ನಬಹುದು

ಪಡಿಯಚ್ಚು ರೀತಿಯಲ್ಲಿ ಬೆಳೆದಿರುವ ಅಸಮಾನ ಲಿಂಗ ಪಾತ್ರಗಳು

ತಾಯಿಯ ಗರ್ಭದಲ್ಲಿ ಮನುಜ ರೂಪುಗೊಂಡ ಹಂತದಲ್ಲಿಯೇ ಅದರ ಲಿಂಗವನ್ನು ಕಂಡುಹಿಡಿಯುವ ವೈಜ್ಱಾನಿಕ ಸಾಧನಗಳು ಇಂದು ಲಭ್ಯವಿದ್ದು, ಗರ್ಭದಲ್ಲಿರುವ ಜೀವಿ ಹೆಣ್ಣಾದರೆ ಅದು ಜನಿಸುವ ಮೊದಲೇ ಸಾಯಬಹುದು ಅಥವಾ ಈ ಹಂತದಿಂದಲೇ ಆ ಮಗುವಿನ ಬಗ್ಗೆ ಕೀಳು ಭಾವನೆ ಬೆಳೆಯುತ್ತದೆ.ಲಿಂಗ ಅಸಮಾನತೆಯ ಆಚರನಣೆ ಇಂದು ನೆನ್ನೆಯದಲ್ಲ ಪರಂಪರಾನುಗತವಾಗಿ ಹೆಣ್ಣು -ಗಂಡುಗಳ ನಡುವೆ ಭೇದ -ಭಾವ, ಮೇಲು-ಕೀಳು ಎಂಬ ಭಾವನೆಗಳು ಆಚರಣೆಯಲ್ಲಿದ್ದು,ಈ ರೀತಿಯ ಮೌಲ್ಯಗಳು ಎನ್ನುವ ರೀತಿ ಆಚರಣೆಯಲ್ಲಿವೆ. ಈ ರೀತಿ ಲಿಂಗ ಅಸಮಾನತೆಗೆ ಸಾಂಸ್ಕ್ರತಿಕ ಹಿನ್ನಲೆ ಇರುವುದರಿಂದ ಅವು ಬೇಗ ಅಳಿಸಿ ಹೋಗದೆ ಮುಂದುವರೆಯುತ್ತವೆ. ಕಾಲಕ್ರಮದಲ್ಲಿ ಅಲ್ಪ ಸ್ವಲ್ಪ ರೂಪಾಂತರ ಹೊಂದಿದಂತೆ ಕಂಡರೂ, ಅಸಮಾನತೆ ಉಳಿದುಕೊಂಡೇ ಹೋಗುತ್ತದೆ. ಈ ರೀತಿ ಲಿಂಗತ್ವದ ಪಾತ್ರಗಳು ಹೆಣ್ಣು ಮತ್ತು ಗಂಡು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಅದೇ ರೀತಿ ಪಡಿಯಚ್ಚು ಪಾತ್ರಗಳಾಗಿ ಮುಂದುವರೆದುಕೊಂಡೇ ಹೋಗುತ್ತವೆ.

ಲಿಂಗ ಸಮಾನತೆಯ ಪ್ರಾಮುಖ್ಯತೆ

೧. ಮನುಷ್ಯ ಜೀವಿಗಳ ನಡುವೆ ಅಸಮಾನತೆ, ಅಗರವಗಳನ್ನು ತಪ್ಪಿಸಿ ಸಮಾನತೆ ಸಹಬಾಳ್ವವೆ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ ಹಾಗೂ ಮಾನವ ಘನತೆಯನ್ನು ಎತ್ತಿ ಹಿಡಿಯುವುದು ೨. ಹೆಣ್ಣು ಮಕ್ಕಳ ಬಗ್ಗೆ ಆಚರಣೆಯಲ್ಲಿರುವ ಕೀಳರಿಮೆಯನ್ನು ಅಳಿಸಿಹಾಕಿ ಹೆಣ್ಣು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣವನ್ನು ಸೃಷಿಸುವುದು. ೩. ಮಹಿಳೆಯರು ಪುರು‍‍‍‍‍‍‍‍‍‌‍ಷರಿಗಿಂತ ಎಲ್ಲ ಕ್ಷೇತ್ರಗಳಲ್ಲು,ಕೀಳು, ಅಶಕ್ತರು ಎಂಬ ರೂಡಿಗತ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಲು. ೪. ತಾಯಿ ತಂದೆಯರು ಹಾಗು ಕುಟುಂಬದ ಸದಸ್ಯರು ಗಂಡು ಮಗುವೆ ಬೇಕೆಂಬ ಭಾವನೆಯಿಂದ ಜನಿಸುವ ಹೆಣ್ಣು ಮಗುವನ್ನು ಹಡೆದು ಸಾಕಿ ಬೆಳೆಸುಸುವ ಭಾವನೆ ಬೆಳೆಸುವ ಮನಸ್ಥಿತಿ ಬೆಳೆಸಲು. ೫. ಮಹಿಳೆಯ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲು. ೬. ಮಹಿಳೆಯರಲ್ಲಿ ಇರುವ ಅಪೂರ್ವ ಶಕ್ತಿ ಸಾಮರ್ಥ್ಯ,ಸೃಜನಶೀಲ ಯೋಚನೆಗಳನ್ನು ಅಭಿವೃದ್ದಿಗೊಳಿಸುವ ಮತ್ತು ಅವು ಇಡೀ ಸಮಾಜಕ್ಕೆ ಬಳಕೆಯಾಗುವಂತೆ ವ್ಯವಸ್ಥೆಗೊಳಿಸಲು. ೭. ಸ್ತ್ರೀ ಪುರುಷರನ್ನು ಜವಾಬ್ದಾರಿಯುತ ಪಾಲಕತ್ವಕ್ಕೆ ತರಬೇತಿಗಗೊಳಿಸಲು.. ೮. ಮಹಿಳೆಯರ ಕಾರ್ಯ‍‍ಕ್ಷೇತ್ರ ಹಾಗು ಒಟ್ಟು ಜೀವನ ಕ್ರಮದಲ್ಲಿ ಪುರು‍ಷರ ಸಹಬಾಗಿತನವನ್ನು ಬೆಳೆಸಲು. ೯. ಹೆಣ್ಣು ಮಕ್ಕಳ ವಿವಾಹದ ವಯಸ್ಸು, ಆರೋಗ್ಯ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ೧೦.ಹದಿಹರೆಯದ ಬಾಲಕ ಬಾಲಕಿಯರಲ್ಲಿ ಸ್ವಸ್ಥವಾದ ಲಿಂಗತ್ವ ಪಾತ್ರಗಳನ್ನು ಬೆಳೆಸಲು.ಇರಬಹ ೧೧.ಮಹಿಳೆಯಲ್ಲಿ ಅಭಿವೃದ್ದಿಯ ಕೌಶಲಗಳು ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು. ೧೨.ಕೌಟುಂಬಿಕ ಆರೋಗ್ಯ, ಮಿತ ಪರಿವಾರ ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು. ೧೩.ಮಹಿಳೆಯ ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಗಳನ್ನು ಉನ್ನತ್ತಿಗೊಳಿಸಿ ಅವರನ್ನು ಆತ್ಮವಿಸ್ವಾಸದೊಂದಿಗೆ ಸ್ವಾವಲಂಬಿಗಳನ್ನಾಗಿ ರೂಪಿಸಲು. ೧೪.ಮಹಿಳೆಯರ ಸಾಮಾಜಿಕ ಚಾಲನೆ,ಬೌದ್ದಿಕ ಉನ್ನತ್ತಿ ಮತ್ತು ಸಬಲತೆಯತೆಯನ್ನು ಬೆಳೆಸಲು.

ಲಿಂಗ ಅಸಮಾನತೆಗೆ ಕಾರಣಗಳು

ಲಿಂಗ ಅಸಮಾನತೆ ಇಂದು ನೆನ್ನೆಯ ಸಮಸ್ಯೆಯಲ್ಲ. ಇದಕ್ಕೆ ದೀರ್ಘ ಇತಿಹಾಸವಿದ್ದು ಇದರ ಬೇರುಗಳು ಅತ್ಯಂತ ಆಳವಾಗಿವೆ. ಲಿಂಗ ಅಸಮಾನತೆಗಳು ಆಯಾ ಸಮಾಜದ ಸಂಸ್ಕೃತಿಯ ಒಂದು ಭಾಗವೆಂಬಂತೆ ಸಹಜವಾಗಿ ಬೆಳೆದಿದ್ದು ಒಪ್ಪಲ್ಪಟ್ಟ ಸಾಮಾಜಿಕ ಮೌಲ್ಯಗಳಾಗಿವೆ. ಲಿಂಗ ಅಸಮಾನತೆಯ ವಿರುದ್ದ ನಡೆದಿರುವ ಚಿಂತನೆಗಳು ಕಡಿಮೆ. ಅಲ್ಲಿ ಇಲ್ಲಿ ಇಂತಹ ಚಿಂತನೆಗಳು ಹುಟ್ಟಿದ್ದರೂ ಸಾಮಾಜಿಕ ಬೆಂಬಲವಿಲ್ಲದೆ ಜನಮದಲ್ಲಿ ಮೂಡಲಿಲ್ಲ. ವಿವಿಧ ದೇಶಗಳು,ಸಮಾಜ,ಸಂಸ್ಕೃತಿ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಲಿಂಗ ಅಸಮಾನತೆಯ ರೀತಿ ನೀತಿಗಳಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಜಗತ್ತಿನ ಎಲ್ಲ ಸಮಾಗಜಗಳಲ್ಲು ಅಸಮಾನತೆ ಇರುವುದು ಸತ್ಯ. ಈ ರೀತಿಯ ಲಿಂಗ ಅಸಮಾನತೆಗೆ ಯಾವುದೇ ಒಂದು ಕಾಲದ,ಒಂದು ಅಂಶ ಕಾರಣವಲ್ಲ. ಕೌಟುಂಬಿಕ,ಸಾಮಾಜಿಕ,ಸಾಂಸ್ಕ್ರತಿಕ,ಆರ್ಥಿಕ,ಆಡಳಿತಾತ್ಮಕ,ಧಾರ್ಮಿಕ,ಆಧ್ಯಾತ್ಮಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಅಸಮಾನತೆ ವ್ಯಾಪಕವಾಗಿ ಆಚರಣೆಯಲ್ಲಿದೆ.ಧಾರ್ಮಿಕ ಆಚರಣೆಗಲ್ಲಿ ;ರೂಡಿಗತವಾಗಿ ಬೆಳೆದು ಬಂದಿರುವ ಆಚರಣೆಗಳು ಮತ್ತು ನಂಬಿಕೆಗಳಿಂದ,ಪುರು‌‍‍‍ಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಿಂದ,ಧರ್ಮ,ಸಾಹಿತ್ಯ,ಸಂಸ್ಕ್ರತಿಗಳ ಮೂಲಕ ಅಸಮಾನತೆಗಳು ಬೆಳೆದಿವೆ.ಸಮಾಜದಲ್ಲಿದ್ದ ಅಜ್ಞಾನ,ಮೂಢನಂಭಿಕೆಗಳಿಂದ,ಲಿಂಗ ಅಸನಮಾನತೆಗಳಿಂದ ಆಗುವ ನಷ್ಟಗಳ ಬಗ್ಗೆ ವೈಜ್ಞಾನಿಕ ಚಿಂತನೆಯ ಕೊರತೆಯಿಂದ,ಮೊದಲಿನಿಂದಲೂ ಸ್ತ್ರೀಯು ಪುರುಷನಿಗೆ ಅಧೀನಳಾಗಿರುವದರಿಂದ ಹಾಗೂ ಮಹಿಳೆಯ ಸಂತಾನೋತ್ಪತ್ತಿ ಹಾಗೂ ಮಕ್ಕಳ ಪಾಲನೆಯ ವಿಶಿಷ್ಟ ಗುಣವನ್ನು ಆಕೆಯ ದುರ್ಬಲತೆ ಎಂದು ತಪ್ಪಾಗಿ ಭಾವಿಸುವುದು ಲಿಂಗ ಅಸಮಾನತೆಗೆ ಕಾರಣಗಳಾಗಿವೆ. ಆ

ಲಿಂಗ ಅಸಮಾನತೆ ಕೆಲವು ಆಚರಣೆಗಳು, ಸಂದರ್ಭಗಳು

೧. ಹೆಣ್ಣು ಮಗು ಜನಿಸುವ ಮುಂಚೆಯೆ ಅದರ ಬಗ್ಗೆ ಕೀಳು ಭಾವನೆ ಹೊಂದುವುದು ಮತ್ತು ನಿರ್ಲಕ್ಷಿಸುವುದು. ೨. ಹೆಣ್ಣು ಮಗುವನ್ನು ಹಡೆದ ತಾಯಿಯನ್ನು ನಿರ್ಲಕ್ಷ್ಯಕ್ಕೆ ಗುರಿಯಗಿಸುವುದು. ೩. ಜನಿಸುವ ಹೆಣ್ಣು ಮಗುವಿನ ಲಾಲನೆ, ಪಾಲನೆ,ಪೋಷಣೆ, ಆರೋಗ್ಯ, ಶಿಕ್ಷಣದಲ್ಲಿ ನಿರ್ಲಕ್ಷ್ಯ ತೋರಿಸುವುದು. ೪. ಜನಿಸುವ ಹೆಣ್ಣು ಮಗುವನ್ನು ಸ್ವಾಗತಿಸುವ ರೀತಿಯಲ್ಲಿ ಭೇದ ತೋರಿಸುವುದು. ೫. ಹೆಣ್ಣಿಗೆ ಮನೆಯೊಳಗೆ ಹಾಗೂ ದುಡಿಮೆಯ ಕ್ಷೇತ್ರದಲ್ಲಿ ಅಸಮಾನತೆ ತೋರುವುದು. ೬. ಸ್ತ್ರೀಗೆ ಹೆಚ್ಚು ಕೆಲಸದ ಹೊರೆ ಹೊರಿಸುವುದು,ಆದರೆ ಆಕೆ ಮಾಡುವ ಕೆಲಸವನ್ನು ಗೌರವದಿಂದ ನೋಡದಿರುವುದು. ೭. ಚಿಕ್ಕ ವಯಸ್ಸಿನ ವಿವಾಹಗಳಿಂದ ಆಗುವ ತೊಂದರೆಗಳು ಹಾಗೂ ಸಂತಾನೊತ್ಪತಿಯ ಹೊರೆ. ೮. ಹೆಣ್ಣಿಗೆ ಜೀವನ ಸಂಗಾತಿಯ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡದಿರುವುದು. ೯. ಸ್ತೀಯು ಮಕ್ಕಳಿಗೆ ಜನ್ಮ ನೀಡಲೇ ಬೇಕೆಂಬ ಸಾಮಾಜಿಕ ಒತ್ತಡ. ೧೦.ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು ನಿರ್ಲಕ್ಷ್ಯಕ್ಕೆ ಒಳಗಾಗುವುದು. ೧೧.ಗಂಡು ಮಕ್ಕಳನ್ನು ಹಡೆದ ತಾಯಂದಿರು ಗೌರವಕ್ಕೆ ಪಾತ್ರರಾಗುವುದು.

ಬಡತನಕ್ಕೆ ಮಹಿಳೆಯರನ್ನು ಗುರಿಮಾಡುವುದು

ಪ್ರಪಂಚದಲ್ಲಿ ಪುರುಷರಿಗೆ ಹೋಲಿಸಿದರೆ ಹೆಚ್ಚು ಪ್ರಮಾಣದ ಮಹಿಳೆಯರ ಬಡತನ, ಅನಕ್ಷರತೆ ಹಾಗೂ ಅನಾರೋಗ್ಯದಲ್ಲಿದ್ದರೆ. ಹಸಿವು, ಅಸಮಾನತೆ, ಶೋಷಣೆಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಮೇಲೆಯೇ ಇವೆ. ಇಂತಹ ಕಳವಳದ ಸ್ಥ್ಹಿತಿಯಲ್ಲಿದ್ದರೂ ಮಹಿಳೆಯರ ದುಡಿಮೆ ಹೆಚ್ಚು ಪ್ರಮಾಣದಲ್ಲಿಯೆ ಇದೆ. ಗರ್ಭಧಾರಣೆ ,ಶಿಶುಜನನ ಶಿಶು ಪಾಲನೆ ಹಾಗೂ ಕುಟುಂಬ ನಿರ್ವಹಣೆಯ ದೊಡ್ದಭಾರ ಮಹಿಳೆಯರ ಮೇಲೆಯೇ ಇದೆ. ಆದರೆ ಕುಟುಂಬ ಮತ್ತು ಸಮುದಾಯದ ಬಡತನ ,ಅನಾರೋಗ್ಯ ಹಾಗೂ ಜನಸಂಖ್ಯಾ ಸ್ಪೋಟಕ್ಕೆ ಮಹಿಳೆಯೇ ಕಾರಣ ಎಂಬಂತೆ ಬಿಂಬಿಂಸಲಾಗಿದೆ. ಮಹಿಳೆಯರು ಬಡತನ ಮತ್ತು ಅನಾರೋಗ್ಯಕ್ಕೆ ಕಾರಣರಾಗಿದ್ದಾರೆ ಎಂಬುದು ಅವೈಜ್ಞಾನಿಕ.ಮಾನವಾಬಿವೃದ್ದಿಯ ಸೂಚ್ಯಂಕಗಳಾದ ಶಿಕ್ಷಣ,ಆರೋಗ್ಯ,ಪೌಷ್ಟಿಕಾಂಶಗಳ ಲಭ್ಯತೆ, ಆರೋಗ್ಯ ಸೌಲಭ್ಯಗಳು, ಸಂಪನ್ಮೂಲಗಳ ಬಳಕೆಗೆ ಅವಕಾಶಗಳು,ವೃತ್ತಿ ಕೌಶಲ, ಉದ್ಯೋಗ ಇತ್ಯಾದಿ ಅಂಶಗಳಲ್ಲಿ ಸ್ತೀ ಪುರುಷರ ನಡುವೆ ವ್ಯತ್ಯಾಸ ಇದ್ದು ಈ ಅಂಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ಪ್ರಮಾಣದ ಸೌಲಭ್ಯಗಳನ್ನು ಪಡಯುತೆದ್ದಾರೆ.ಇದರ ಜೊತೆಗೆ ಲಿಂಗ ಅಸಮಾನತೆ ಹಾಗೂ ಸಾಮಾಜಿಕ ತಾರತಮ್ಯಗಳು ಆಚರಣೆಯಲ್ಲಿದ್ದು ಮಹಿಳೆಯರು ಅಭಿವೃದ್ದಿ ಹೊಂದಲು ಹಲವಾರು ಅಡೆತಡೆಗಳು ಇವೆ. ಸಾಮಾಜಿಕ ,ಕೌಟುಂಬಿಕ,ಸಾಂಸ್ಕೃತಿಕ ,ಆರ್ಥಿಕ ಹಾಗೂ ನೈತಿಕ ಹಿನ್ನಲೆಯಿಂದ ಮಹಿಳೆಯರ ಕೊಡುಗೆಗಳನ್ನು ವಿಶ್ಲೇಷಿಸಿದಾಗ ಬಡತನ ,ಅನಾರೋಗ್ಯ ,ಜನಸಂಖ್ಯೆಯ ಹೆಚ್ಚಳಕ್ಕೆ ಹಾಗೂ ಆರ್ಥಿಕಾಭಿವೃದ್ದಿಯ ಹಿನ್ನೆಡೆಗೆ ಮಹಿಳೆಯರು ಮಾತ್ರ ಕಾರಣರಾಗುವುದಿಲ್ಲ .ಮಹಿಳೆಯರ ಆರ್ಥಿಕ ಕ್ಷೇತ್ರಗಳ ದುಡಿಮೆ ಕೃಷಿ ಕೆಲಸ ,ಮನೆಯ ಕೆಲಸ,ಮಕ್ಕಳು ಹಾಗೂ ಮನೆಯ ನಿರ್ವಹಣೆ,ಭೌದ್ದಿಕ ಹಾಗೂ ಸೃಜನಶೀಲ ಕಾರ್ಯಗಳು ಮತ್ತು ನೀತಿಶಿಕ್ಷಣ ನೀಡಿ ಜನಾಂಗವನ್ನು ನಿರ್ಮಾಣ ಮಾಡುವಲ್ಲಿ ಮಹಿಳೆಯರು ಮಹತ್ವದ ಕೊಡುಗೆ ನಿಡುತ್ತಿದ್ದಾರೆ. ಮಹಿಳೆಯರ ಈ ರೀತಿ ದುಡಿಮೆ ಹಾಗು ಕೌಟುಂಬಿಕ ನಿರ್ವಹಣಾ ಕಾರ್ಯಗಳಲ್ಲಿ ಪುರುಷರ ಭಾಗೀದಾರಿಕೆ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸುವುದು ,ಲಿಂಗ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಗಳನ್ನು ದೂರಮಾಡಿ ಮಹಿಳೆಯರ ಸಬಲೀಕರಣ ಹಾಗೂ ಅಭಿವೃದ್ದಿಗೆ ಅಗತ್ಯವಾದ ಸಾಮಾಜಿಕ ಆರ್ಥಿಕ ,ಶೈಕ್ಷಣಿಕ,ಸಾಂಸ್ಕೃತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ವೃದ್ದಿಸಿ ಮಹಿಳೆಯರಿಗೆ ಒದಗಿಸುವ ಮೂಲಕ ಮಹಿಳಾ ಅಭಿವೃದ್ದಿಯನ್ನು ಸಾಧಿಸಬಹುದು.

ಮಹಿಳಾ ಸಬಲತೆ

ಸಬಲತೆ ಅಥವಾ ಸಶಕ್ತತೆ ಎಂಬ ಪರಿಕಲ್ಪನೆಯು ಅಧಿಕಾರ ಹೊಂದುವುದು ಮತ್ತು ಶಕ್ತಿಯುತರಾಗುವುದುನ್ನು ಸೂಚಿಸುತ್ತದೆ. ಸಬಲತೆ ಎನ್ನುವುದು ಸ್ತ್ರೀ-ಪುರು‍ಷ ರಿಬ್ಬರಿಗೊ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿ. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಸ್ವಾವಲಂಬಿಯಾಗಿ ಬಾಳುವ ಸ್ಥಿತಿಯನ್ನು ಸಾಮಾನ್ಯ ಅದನ್ನು ಸಬಲತೆ ಎನ್ನಬಹುದು. ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೂರ್ಣ ಜ್ಞಾನವನ್ನು ಹೊಂದುವುದು, ತನ್ನ ಜೀವನದ ಬಗ್ಗೆ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಹೊಂದುವುದು, ಅದಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಹೊಂದುವುದು. ಯಾವುದೇ ರೀತಿಯ ಅಸಮಾನತೆ,ಶೋಷಣೆಗಳಿಗೆ ಒಳಗಾಗದೆ ಶಿಕಣ, ಉದ್ಯೋಗ, ವಿವಾಹ, ಜೀವನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ಹೊಂದುವುದು. ಸಾಮಾಜಿಕ ಚಾಲನೆ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೋಳ್ಳುವಿಕೆ ಇಂತಹ ಅಂಶಗಳ ಬಗ್ಗೆ ಸ್ವತಂತ್ರ್ಯ ಹೊಂದಿದ್ದ ಸ್ವಾಭಿಮಾನಿಯಾಗಿ ಅತ್ಮ ವಿಸ್ವಾಸದಿಂದ ಬಾಳುವ ಶಕ್ತಿಯೇ ಮಹಿಳಾ ಸಬಲತೆ. ಮಹಿಳಾ ಸಬಲತೆಯು ಮೂಲಭೂತವಾಗಿ ಮಹಿಳೆಯರ ಮಾನಸಿಕ ಸಬಲತೆಯಾಗಿದ್ದು ಅವರು ಪ್ರಜ್ನಾಪೂರ್ವಕವಾಗಿ ಶಕ್ತಿ ವಂತರಾಗುವ ಸ್ಥಿತಿ. ಮಹಿಳೆಯರ ಯೋಚನೆ, ಶಕ್ತಿ,ಸಾಮರ್ಥ್ಯ, ಅರಿವು, ಅಭಿವ್ಯಕ್ತಿ, ಆರೋಗ್ಯ, ನಿರ್ಣಯ, ಆತ್ಮವಿಶ್ವಾಸ,ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಚಾಲನೆಗಳಿಂದ ಹಂತ ಹಂತವಾಗಿ ಶಕ್ತಿವಂತಳಾಗಿ, ಸ್ವಾಲಂಬಿಯಾಗಿ ವಿಕಾಸವಾಗುವ ಕ್ರಿಯೆಯೇ ಸಬಲತೆ.

ಮಹಿಳಾ ಸಬಲತೆಯು ಬಹು ಆಯಾಮಗಳ ಪ್ರಕ್ರಿಯೆಯಾಗಿದ್ದು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಮೂಡಿಬರುವಂತಹದ್ದು. ವ್ಯಕ್ತಿತ್ವದೂದಿಂಗೆ ಮಹಿಳೆಯು ತನ್ನನ್ನು ಗುರುತಿಸಿಕೂಳ್ಳುವುದು, ತನ್ನ ಜೀವನದ ಬಗ್ಗೆ ಪೂರ್ಣ ಅಧಿಕಾರಹೂಂದುವ ಸ್ಥಿತಿ. ಪುರುಷರಿಗೆ ಸರಿಸಮಾನವಾಗಿ ಸ್ಥಾನ ಮಾನ, ವ್ಯಕ್ತಿಗೌರವ ಮತ್ತು ಘನತೆ ಹೊಂದುವುದು. ಸಾಮಾಜಿಕ ಚಾಲನೆ,ಆರ್ಥಿಕ ಸ್ವಾವಲಂಬನೆ, ಹಕ್ಕುಗಳ್ ಬಗ್ಗೆ ಅರಿವು, ಆರೋಗ್ಯಸೆವೆಗಳು ಮತ್ತು ಸಂಪನ್ಮೂಲಗಳ ಮೇಲಿನ ಒಡತನ, ಆರ್ಥಿಕ ಚಟುವಟಿಕೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆತ್ಮವಿಶ್ವಾಸದಿದ ಸಶಕ್ತಳಾಗಿ ಬಾಳುವ ಸ್ಥಿತಿಯೇ ಸಬಲೀಕರಣ

ಸಬಲತೆಯತೆಯ ಸೂಚ್ಯಂಕಗಳು

೧. ಉದ್ಯೋಗ: ತನ್ನ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ಸರ್ಕಾರಿ ಹಾಗೂ ಖಾಸಗೀ ಕ್ಷೇತ್ರಗಳ ಉದ್ಯೋಗಗಳು ಹಾಗೂ ಸ್ವಂತ ಉದ್ಯೋಗಗಳಿಗೆ ಅವಕಾಶಗಳು ಇರಬೇಕು. ೨. ಆರೋಗ್ಯ : ಸಂತಾನೋತ್ಪತ್ತಿ ಹಾಗೂ ಶಿಶು ಆರೋಗ್ಯ ಸೇವೆಗಳ ಸಬಲತೆ ಮತ್ತು ಒಳ್ಳೆಯ ಆಹಾರಾಂಶಗಳ ಲಭ್ಯತೆ. ೩. ಸಂಪನ್ಮೂಲಗಳ ಬಳಕೆ ಅವಖಕಾಶಗಳು : ಮನೆಯ ಸಮಾಜದ ಹಾಗೂ ವೃತ್ತಿ ಕ್ಷೇತ್ರ ಸಂಪನ್ಮೂಲಗಳ ಬಳಕೆ ಅವಕಾಶಗಳಿರಬೇಕು. ೪. ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವಿಕೆ :ಸಾಮಾಜಿಕ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದುವುದು, ರಾಜಕೀಯ ಆಡಳಿತಗಳಲ್ಲಿ ಪಾಲ್ಗೊಂಡು ತಿರ್ಮಾನ ಕೈಗೊಳ್ಳುವ ಅವಕಾಶಗಳ ಲಭ್ಯತೆ. ೫. ಆರ್ಥಿಕ ಸ್ವಾವಳಲಂಬನೆ:ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವಿಕೆ, ಆಸ್ಥಿ,ಉದ್ಯೋಗ ಹಾಗು ಹಣ ಸಂಪಾದನೆ ಮತ್ತು ಖರ್ಚಿನ ಬಗ್ಗೆ ಸ್ವಾತಂತ್ರ್ಯ ಹೊಂದುವುದು. ೬. ಇವುಗಳನ್ನು ಬೆಳಸಿಕೊಳ್ಳಬೇಕು :ವೃತ್ತಿಕೌಶಲ್ಯಗಳು, ಸಂವಹನ, ಸಂಘಟನಾ ಕೌಶಲ್ಯಗಳು, ಆತ್ಮಗೌರವ, ಅಭಿವ್ಯಕ್ತಿ ಹಾಗೂ ಆತ್ಮವಿಶ್ವಾಸ.

ಮಹಿಳಾ ಸಬಲೀಕರಣದ ಉದ್ದೇಶಗಳು

೧. ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಿಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದು. ೨. ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು. ೩. ಮಹಿಳೆಯರು ತಮ್ಮ್ ಅಭಿವೃದ್ಧಿಗೆ ಅವಕಾಶಗಳನ್ನು ಗುರುತಿಸಿಕೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು. ೪. ಮನೆ ಹಾಗು ಸಮುದಾಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಸಂಪನ್ಮೂಲಗಳ ಮೇಲೆ ಅಧಿಕರ ಹೊಂದುವುದು ಹಾಗೂ ಅವುಗಳನ್ನು ಬಳಸಿಕೊಳ್ಳು ತಿಳಿವಳಿಕೆಮತ್ತು ತಂತ್ರಗಳನ್ನ್ನು ಬೆಳೆಸುವುದು. ೫. ಮಹಿಳೆಯರ ಸಂತಾನೋತ್ಪತಿ ಆರೋಗ್ಯ, ಶಿಶು ಜನನ ಮತ್ತು ಮಕ್ಕಳ ಪಾಲನೆಗಳ ಬಗ್ಗೆ ಅರಿವು ನೀಡುವುದು. ೬. ಅಸಮಾನತೆ, ಹಸಿವು, ಶೋಷಣೆ, ಹಿಂಸೆ ಹಾಗೂ ನಿಂದನೆಗಳ ವಿರುದ್ದ ಜಾಗೃತರಾಗಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿನ್ ಸಂಗಟನಾತ್ಮಕ ಹೋರಾಟ ಮಾಡುವ ಆತ್ಮವಿಶ್ವಾಸ ಬೆಳೆಸುವುಸುವುದು. ೭. ಹಕ್ಕುಗಳು ಹಾಗೂ ಅಭಿವೃದ್ಧಿಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು. ೮. ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು. ೯. ಮಹಿಳೆಯರಲ್ಲಿ ತನ್ನ ಹಾಗೂ ಕುಟುಂಬದ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಶಯಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ಜವಬ್ದಾರಿ ಹೊರುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುವುದು.

ಸಬಲರಾದ ಮಹಿಳೆಯರಲ್ಲಿ ಕಂಡು ಬರುವ ಗುಣಲಕ್ಷಣಗಳು

೧. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ. ೨. ಆತ್ಮ ಗೌರವ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೊಂದಿದ್ದು ಸ್ವಾವಲಂಬಿಗಳಗಿರುತ್ತಾರೆ. ೩. ಸ್ವತಮ್ತ್ರವಾದ ಯೋಚನೆ ಹಾಗೂ ಅಭಿವ್ಯಕ್ತಿ ಸ್ವತಂತ್ರ್ಯ ಹೊಂದಿರುತ್ತಾರೆ. ೪. ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಪಡೆದುಕೊಂಡಿರುತ್ತಾರೆ. ೫. ಆರ್ಥಿಕಸ್ವಾವಲಂಬನೆ ಹೊಂದಿದ್ದು ಸಂಪನ್ಮೂಲಗಳ ಒಡೆತನ ಹಾಗೂ ಬಳಕೆಗೆ ಅಧಿಕಾರ ಹೊಂದಿರುತ್ತಾರೆ. ೬. ಸಾಮಾಜಿಕ ಸ್ವಾವಲಂಬನೆ ಹೊಂದಿದ್ದು ಆರ್ಥಿಕ, ಸಾಮಾಜಿಕ ,ರಾಜಕೀಯ ಹಾಗೂ ಅಡಳಿತ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಾರೆ. ೭. ಸಂವಹನ ಕೌಶಲ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿದ್ದು ಸಮಾಜದ ಸಂಘ ಸಂಸ್ಥೆಗಳ ಜೊತೆ ಭಾಗಿಗಳಾಗುತ್ತಾರೆ ೮. ಆಡಳಿತ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುತ್ತಾರೆ. ೯. ಎಲ್ಲಾ ಸೌಲಭ್ಯಗಳನ್ನು, ಅವಕಾಶಗಳನ್ನು ಪಡೆದುಕೊಳ್ಳುವ ಮಾರ್ಗ ತಿಳಿದಿರುತ್ತಾರೆ. ೧೦. ಶೋಷಣೆಗೆ ಒಳಗಾಗದಿರುವ ಹಾಗೂ ನ್ಯಾಯ ಪಡೆದಿರುವ ಶಕ್ತಿ ಹೊಂದಿರುತ್ತಾರೆ. ೧೧. ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಹೊಂದಿರುತ್ತಾರೆ. ೧೨.ತನ್ನ ದೇಹ, ಮನಸ್ಸು, ಯೋಚನೆಗಳನ್ನೊಳಗೊಂಡಂತೆ ಜೀವನದ ವಿವಿಧ ಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತಾರೆ. ೧೩. ವಿವಾಹದ ವಯಸ್ಸು, ಸಂತಾನೋತ್ಪತಿ, ಆರೋಗ್ಯ, ಮಕ್ಕಳ ಸಂಖ್ಯೆ ಮತ್ತ್ತು ಸರಕ್ಷಿತಾಯ್ತತನದ ಬಗ್ಗೆ ತಿಳಿವಳಿಕೆಹಾಗೂ ಅಗತ್ಯ ಕೌಶಲಗಳನ್ನು ಹೊಂದಿರುತ್ತಾರೆ. ೧೪. ಸಾಮಾಜಿಕ ನ್ಯಾಯ, ಶೋಷಣೆಯ ವಿರುದ್ದ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ.

ಮಹಿಳೆಯರನ್ನು ಸಬಲಗೊಳಿಸುವಲ್ಲಿ ಶಿಕ್ಷಣದ ಪಾತ್ರ

ಶಿಕ್ಷಣವು ಬಂಧವಿಮೋಚನ ಮತ್ತು ಅಭಿವೃದ್ಧಿಯ ಒಂದು ಪ್ರಮುಖ ಸಾಧನವಾಗಿದ್ದು ಮಹಿಳೆಯರ ಜೀವನದಲ್ಲಿ ಸಬಲತೆ ಮೂಡಿಸಲು ಶಕ್ತವಾಗಿದೆ.ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ಆಡಳಿತತ್ಮಕ ಚಾಲನೆ, ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಮುಂತದ ಅಂಶಗಳು ಮಹಿಳೆಯರ ಸಬಲತೆಗೆ ನೆರವಾಗುತ್ತದೆ. ಇವುಗಳಲ್ಲಿ ಶಿಕ್ಷಣವು ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು ಮಹಿಳೆಯರ ಸಮಗ್ರ ಜೀವನ ವಿಧಾನದಲ್ಲಿ ಹಲವು ಬಗೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಬಲತೆ ಮೂಡಿಸುವ ಶಕ್ತಿ ಹೊಂದಿದೆ.

೧. ಸಬಲತೆಗೆ ಅಗತ್ಯ ಮಾಹಿತಿ, ಜ್ಞಾನ ಒದಗಿಸುವ ಮೂಲಕ. ೨. ಹದಿಹರೆಯದ ಬಾಲಕ ಬಾಲಕೀಯರಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ, ವಿವಾಹದ ವಯಸ್ಸು, ಮಕ್ಕಳ ಸಂಖ್ಯೆ, ಸುರಕ್ಷಿತ ತಾಯ್ತನದ ಬಗ್ಗೆ ತಿಳಿವಳಿಕೆಮೂಡಿಸುವ ಮೂಲಕ. ೩. ಹದಿಹರೆಯದ ಬಾಲಕ ಬಾಲಕೀಯರಲ್ಲಿ ಲಿಂಗ ಅಸಮಾನತೆ ತಪ್ಪಿಸಿ ಸ್ವಸ್ಥವಾದ ಲಿಂಗತ್ವ ಪಾತ್ರಗಳನ್ನು ಬೆಳೆಸುವ ಮೂಲಕ. ೪. ಮಾತೃ ಮತ್ತು ಶಿಶು ಮರಣಗಳಲ್ಲಿ ಇಳಿಕೆ ತರಲು. ೫. ಹದಿಹರೆಯದ ಬಾಲಕ ಬಾಲಕೀಯರನ್ನು ಜವಾಬ್ದಾರಿಯುತ ಪಾಲಕತ್ವಕ್ಕೆ ತರಬೇತಿಗೊಳಿಸುವ ಮೂಲಕ. ೬. ಸಮಾಜಿಕರಣ, ಸಮಾಜಿಕ ಚಾಲನೆ ಹಾಗೂ ಮಹಿಳೆಯರ ಸ್ಥಾನಮಾನಗಳನ್ನು ಉನ್ನತಿಗೊಳಿಸುವ ಮೂಲಕ. ೭. ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ಆತ್ಮವಿಶ್ವಾಸ,ಆತ್ಮಗೌರವಗಳನ್ನು ಬೆಳೆಸುವ ಮೂಲಕ. ೮ ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ. ೯. ಜೀವನ ಗುಣಮಟ್ಟದ ಉನ್ನತಿಗೊಳಿಸುವ ಮೂಲಕ. ೧೦. ಮಹಿಳೆಯರಲ್ಲಿ ವೃತ್ತಿ ಕೌಶಲ್ಯ ಹಾಗೂ ಸಂಘಟನಾತ್ಮಕ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ. ೧೧.ಮಹಿಳೆಯರಲ್ಲಿ ತಮ್ಮ ಹಕ್ಕುಗಳು, ಅವಕಾಶಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ ಮೂಡೆಸುವ ಮೂಲಕ. ೧೨. ಕಾನೂನಿನ ಬಗ್ಗೆ ತಿಳಿವಳಿಕೆಹಾಗೂ ಜಾಗೃತಿ ಮೂಡಿಸುವ ಮೂಲಕ. ೧೩. ಸಂಪನ್ಮೂಲಗಳನ್ನು ವೃದ್ಧಿಗೊಳಿಸಲು ಹಾಗೂ ಸಂಪನ್ಮೂಲಗಳನ್ನು ಪಡೆದುಕೂಳ್ಳುವ ಅವಕಾಶಗಳ ಬಗ್ಗೆ ತಿಳಿವಳಿಕೆಮೂಡಿಸುವ ಮೂಲಕ.