ಚರ್ಚೆಪುಟ:ಕೊಡವ ಭಾಷೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಕೊಡವ ತಕ್ಕ್ ಇಂದ ಪುನರ್ನಿರ್ದೇಶಿತ)

"ಕೊಡವ ತಕ್ಕ್" ಲೇಖನದ ಎರಡನೇ ವಾಕ್ಯದಲ್ಲಿ "ಇದನ್ನು ಸುಮಾರು ೫,೦೦,೦೦೦ ಜನರು ಮಾತನಾಡುವರು." ಎನ್ನುವದು ಪಕ್ಕದಲ್ಲೇ ಇರುವ ಕೋಷ್ಟಕದಲ್ಲಿ "ಒಟ್ಟು ಮಾತನಾಡುವವರು: ೧,೨೨,೦೦೦ (೧೯೯೭)" ಎನ್ನುವ ಮಾಹಿತಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಕನ್ನಡ ವಿಕಿಪೀಡಿಯದ "ಕೊಡವರು" ಲೇಖನದಲ್ಲಿ ೨೦೧೧ರ ಜನಗಣತಿಯಂತೆ ಕೊಡಗಿನ ಒಟ್ಟು ಜನಸಂಖ್ಯೆ ೫,೫೪,೭೬೨ ಎಂದು ಉಲ್ಲೇಖಿತವಾಗಿರುವಾಗ ಕೊಡವ ತಕ್ಕನ್ನು ಬಳಸುವವರು ಅದೇ ಪ್ರಮಾಣದಲ್ಲಿ ೧,೨೪,೦೦೦ ಇದ್ದಾರು.

ಅಥವಾ https://en.wikipedia.org/wiki/Kodava_takk ಲೇಖನದಲ್ಲಿರುವ ಕೋಷ್ಟಕವನ್ನು ತೆಗೆದುಕೊಂಡರೆ, ಅದರಲ್ಲಿ ೨೦೦೧ರ ಗಣತಿಯಂತೆ ಸುಮಾರು ೨,೦೦,೦೦೦ ಜನರಿದ್ದಾರೆ, ಎಂದಿದೆ. ಇದು ಹತ್ತು ವರ್ಷಗಳಲ್ಲಿ ಅಂದರೆ ೨೦೧೧ರಲ್ಲಿ ೨,೦೨,೦೦೦ ಆಗಿದೆಯೆನ್ನಬಹುದು. ಇದರ ಕುರಿತು ಪ್ರಮಾಣಪೂರ್ವಕ ನಿರ್ಧಾರವಾಗಬೇಕು.

Prabhu Iynanda (talk) ೧೦:೨೮, ೧೫ ಜನವರಿ ೨೦೧೪ (UTC)Prabhu Iynanda