ವಿದ್ಯಾರಂಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯಾರಂಭ ಮುಖ್ಯವಾಗಿ ಕೇರಳ ಹಾಗು ಕರ್ನಾಟಕದಲ್ಲಿ ವಿಜಯ ದಶಮಿಯಂದು ಆಚರಿಸಲಾಗುವ ಒಂದು ಹಿಂದೂ ಸಂಪ್ರದಾಯ, ಇದರಲ್ಲಿ ಮಕ್ಕಳನ್ನು ವಿಧ್ಯುಕ್ತವಾಗಿ ಸಂಗೀತ, ನೃತ್ಯ, ಭಾಷೆಗಳು, ಮತ್ತು ಇತರ ಜಾನಪದ ಕಲೆಗಳಿಗೆ ಪರಿಚಯಿಸಲಾಗುತ್ತದೆ. ಅದು ಮಾತ್ರಾಕ್ಷರಮಾಲೆಯ ಅಕ್ಷರಗಳಲ್ಲಿ ಉಪಕ್ರಮಣ ಸಮಾರಂಭವನ್ನು ಒಳಗೊಳ್ಳುತ್ತದೆ. ವಿಜಯದಶಮಿಯನ್ನು ಯಾವುದೇ ಕ್ಷೇತ್ರದಲ್ಲಿ ಕಲಿಯುವಿಕೆ ಆರಂಭಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ.