ವಿಷಯಕ್ಕೆ ಹೋಗು

ಪೋನ್ವಾರ್ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋನ್ವಾರ್
ತಳಿಯ ಹೆಸರುಪೋನ್ವಾರ್
ಮೂಲಉತ್ತರ ಪ್ರದೇಶ
ವಿಭಾಗಕೆಲಸಗಾರ. ಮಧ್ಯಮ ಗಾತ್ರ
ಬಣ್ಣಬಿಳಿ ಪಟ್ಟೆಗಳಿಂದ ಕೂಡಿದ ಬೂದು ಅಥವಾ ಕಪ್ಪು ಬಣ್ಣ
ಮುಖಉದ್ದನೆಯ ಮುಖ, ದೊಡ್ಡ ಕಣ್ಣು
ಕೊಂಬುಮಧ್ಯಮ ಗಾತ್ರ
ಕಿವಿಉರುಟು ಕಿವಿ

ಉತ್ತರಪ್ರದೇಶದಲ್ಲಿ ಕೆಲಸಗಾರ ತಳಿ ಎಂದು ಖ್ಯಾತವಾದ ತಳಿ ಪೋನ್ವಾರ್. ಚುರುಕು ನಡಿಗೆಗೆ ಈ ತಳಿ ಪ್ರಖ್ಯಾತ. ಸ್ವಲ್ಪ ಅಂಜುಕುಳಿ ಕೂಡ. ಅತಿ ತುಂಟತಳಿಯೆಂಬ ಬಿರುದು ಕೂಡ ಇವುಗಳಿಗಿದೆ. ಅಪರೂಪದ ರೋಗ ನಿರೋಧಕತೆಗೆ ಪೋನ್ವಾರ್ ತಳಿ ಪ್ರಸಿದ್ಧ. ಫಿಲಿಭಿತ್ ಜಿಲ್ಲೆ ಪುರಾನ್‌ಪುರ್ ತಾಲೂಕು ಪೋನ್ವಾರ್ ತಳಿಯ ತವರು. ನಿರ್ದಿಷ್ಟವಾಗಿ ಹೇಳಬೇಕೆಂದರೆ ಮೈನಾಕೋಟ್, ಮಜ಼ರಾ, ಭಿರ್ಕೇರಾ ಊರುಗಳು ಈ ಅಪೂರ್ವತಳಿಯನ್ನು ಸೃಜಿಸಿದವು ಎನ್ನಬಹುದು. ಪೋನ್ವಾರ್ ತಳಿ ಕೆಲಸಗಾರ ತಳಿಯ ವಿಭಾಗಕ್ಕೆ ಸೇರುತ್ತದೆ. ಸಣ್ಣ ಗಾತ್ರದ ತಳಿಯಾಗಿ ವರ್ಗೀಕರಿಸಬಹುದಾದ ಪೋನ್ವಾರ್ ತಳಿಯಲ್ಲಿ ಗುಡ್ಡಗಾಡು ಹಾಗೆಯೆ ಬಯಲು ಪ್ರದೇಶದ ತಳಿಗಳ ಲಕ್ಷಣಗಳೆರೆಡೂ ಮೇಳೈಸಿವೆ ಅನ್ನುತ್ತಾರೆ ತಜ್ಞರು. ಚುರುಕಿನ ನಡಿಗೆಯೇ ಪೋನ್ವಾರ್ ತಳಿಯ ವಿಶೇಷ. ೮೦೦ರಿಂದ ಸಾವಿರ ಕಿಲೊವಷ್ಟು ತೂಕವನ್ನು ಹತ್ತು ಕಿ.ಮೀ.ವರೆಗೆ ಸುಲಭವಾಗಿ ಎಳೆಯಬಲ್ಲವು ಪೋನ್ವಾರ್. ಥಾರು ಬುಡಕಟ್ಟು ಜನಾಂಗದವರು ಪೋನ್ವಾರ್ ತಳಿಯನ್ನು ಕಾಬ್ರಿ ಎಂದೂ ಕರೆಯುತ್ತಾರೆ. ಹೈನುಗಾರಿಕೆಯೆ ಥಾರು ಜನಾಂಗದವರ ಕುಲಕಸುಬು. ಒಂದು ಜನಾಂಗ ಇದನ್ನೇ ನಂಬಿ ಶತಮಾನಗಳಿಂದ ಬದುಕುತ್ತಿದೆ. ಪೋನ್ವಾರ್ ತಳಿಯು ಮುಖ್ಯವಾಗಿ ಸಾಕಲ್ಪಡುತ್ತಿರುವ ಪ್ರದೇಶಗಳಲ್ಲಿ ಸದಾ ಮಂಜು ಮುಸುಕಿದ ವಾತಾವರಣ. ವಾರ್ಷಿಕ ಅಂದಾಜು ೧೨೫ರಿಂದ ೧೬೫ ಸೆಂ.ಮಿ. ಮಳೆ. ದುರ್ಗಮವಾದ ಅರಣ್ಯವೇ ಇವುಗಳ ಮೇವುತಾಣ. ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಇಲ್ಲಿ ಬೆಳೆಯುವ ಆಹಾರ ಬೆಳೆಗಳ ಉಪ ಉತ್ಪನ್ನಗಳು ವರ್ಷವಿಡೀ ಮೇವಾಗಲಾರವು. ಹೀಗಾಗಿಯೆ ಇಲ್ಲಿ ಕಟ್ಟಿ ಸಾಕುವುದಾಗಲೀ, ಹಟ್ಟಿಗೇ ಹುಲ್ಲು ತಂದು ಹಾಕುವ ಸಂಪ್ರದಾಯವಿಲ್ಲ. ಇಲ್ಲಿ ಇವು ಸದಾ ಮಾಂಸಾಹಾರೀ ಪ್ರಾಣಿಗಳ ಭಯದಲ್ಲೇ ಮೇವುಣ್ಣಬೇಕಾದ ಹಿನ್ನೆಲೆಯಲ್ಲಿ ಇವುಗಳು ಮಂದೆಯಲ್ಲಿಯೆ ಇರುತ್ತವೆ.

ಪೋನ್ವಾರ್ ತಳಿಗಳದ್ದು ಸಾಮನ್ಯವಾಗಿ ಬಿಳೀ ಪಟ್ಟೆಗಳಿಂದ ಕೂಡಿದ ಬೂದು ಅಥವಾ ಕಪ್ಪು ಬಣ್ಣ. ಪುಟ್ಟ ಉದ್ದನೆಯ ಮುಖ. ಅದಕ್ಕೆ ತಕ್ಕನೆಯ ಚಿಕ್ಕ ಉರುಟು ಕಿವಿ, ಆದರೆ ದೊಡ್ಡ ಕಣ್ಣುಗಳು, ಮಧ್ಯಮ ಗಾತ್ರದ ಕೊಂಬು ಇವು ಪೋನ್ವಾರ್ ತಳಿಯ ಉಪಲಕ್ಷಣಗಳು. ಪ್ರತಿದಿನ ಸುಮಾರು ಅರ್ಧದಿಂದ ೨ ಕಿಲೊಗ್ರಾಂ ಅಷ್ಟುಹಾಲು ನೀಡುತ್ತವೆ. ಅಪರೂಪದ ರೋಗ ನಿರೋಧಕತೆಗೆ ಪೋನ್ವಾರ್ ತಳಿ ಪ್ರಸಿದ್ಧ. ಇವುಗಳು ಕೊಂಚ ತಡವಾಗಿ ಪ್ರಾಯಕ್ಕೆ ಬರುತ್ತದೆ.

ಚಿತ್ರಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.