ದತ್ತಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡಾ.ಪ್ರಕಾಶ ಗ.ಖಾಡೆ ಜನಪದ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ. ಬಾಗಲಕೋಟ (1.8.11)-ನಗರದ ಯುವ ಜಾನಪದ ಸಂಶೋಧಕ ಡಾ.ಪ್ರಕಾಶ ಗ.ಖಾಡೆ ಅವರ ‘ನೆಲಮೂಲ ಸಂಸ್ಕೃತಿ’ ಜನಪದ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಬೀಳಗಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ’2010 ನೇ ಸಾಲಿನ ಪುಸ್ತಕಪ್ರಶಸ್ತಿ ದೊರೆತಿದೆ. ಇವರೊಂದಿಗೆ ಕಾವ್ಯ ಪ್ರಕಾರದಲ್ಲಿ ಎಸ್ಕೆ.ಕೊನೆಸಾಗರ ಅವರ ‘ಮೌನ ಧ್ಯಾನ’ ಕೃತಿಗೆ,ಕಥಾ ಪ್ರಕಾರದಲ್ಲಿ ಹನಮಂತ ಹಾಲಿಗೇರಿ ಅವರ ‘ಕತ್ತಲ ಗರ್ಭದ ಮಿಂಚು’ ಕೃತಿಗಳಿಗೂ ಬೀಳಗಿ ದತ್ತಿ ಪ್ರಶಸ್ತಿಯನ್ನು ಕೇಂದ್ರ ಕ.ಸಾ.ಪ. ಪ್ರಕಟಿಸಿದೆ. ಸಾಹಿತ್ಯ ವಿವಿಧ ಪ್ರಕಾರಗಳÀಲ್ಲಿ 20 ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಡಾ.ಪ್ರಕಾಶ ಖಾಡೆ ಅವರು ಮೂಲತ: ಜಮಖಂಡಿ ತಾಲೂಕಿನ ತೊದಲಬಾಗಿಯವರು.ತೊದಲಬಾಗಿ,ಕೆರೂರು,ಇಳಕಲ್ಲ,ಧಾರವಾಡಗಳಲ್ಲಿ ಶಿಕ್ಷಣ ಪೂರೈಸಿ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ತಂದೆ ಜಿ.ಬಿ.ಖಾಡೆ ಅವರಿಂದ ಬಾಲ್ಯದಿಂದ ಬಂದ ಜಾನಪದ ಆಸಕ್ತಿಯಿಂದ ಈವರೆಗೆ ಐದು ಜನಪದಕೃತಿಗಳನ್ನು ಪ್ರಕಟಿಸಿದ್ದಾರೆ.ಇªರ ‘ಕೃಷ್ಣಾ ತೀರದ ಜನಪದ ಒಗಟುಗಳು’ ಕೃತಿಗೆ ಹುಬ್ಬಳ್ಳಿಯ ಪ್ರತಿಷ್ಠಿತ ಗೌರಮ್ಮ ಬೊಮ್ಮಾಯಿ ಪ್ರತಿಷ್ಠಾನದ ‘ಜನಪದ ಸಿರಿ’ ಪ್ರಶಸ್ತಿ ದೊರೆತಿದೆ. ಕ.ಸಾ.ಪ.ದತ್ತಿ ಪ್ರಶಸ್ತಿ ಪಡೆದ ‘ನೆಲಮೂಲ ಸಂಸ್ಕøತಿ’ ಕೃತಿಯಲ್ಲಿ ಕನ್ನಡ ನಾಡಿನ ಅದರಲ್ಲೂ ಉತ್ತರ ಕರ್ನಾಟಕದ ಜಾನಪದ ಶ್ರೀಮಂತಿಕೆಯ ವೈವಿಧ್ಯಮಯ ಲೋಕವನ್ನು ಅನಾವರಣಗೊಳಿಸುವಲ್ಲಿ ಸಹಕಾರಿಯಾಗಿದೆ.