ಕಣ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಣ್ಣಿ ಎಂಬುದು ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲು ಬಳಸುವ ಹಗ್ಗ. ಸಾಮಾನ್ಯವಾಗಿ ಸೆಣಬು ಅಥವಾ ಕತ್ತವನ್ನು ಹೊಸೆದು ಮಾಡಲ್ಪಡುವ ಇದು, ಇತ್ತೀಚೆಗೆ ಪ್ಲಾಸ್ಟಿಕ್ ಮಾದರಿಯಲ್ಲೂ ದೊರೆಯುತ್ತಿದೆ. ಕಣ್ಣಿಯ ಎರಡೂ ತುದಿಯಲ್ಲಿ ಕುಣಿಕೆಗಳಿದ್ದು, ಒಂದು ಕುಣಿಕೆಯನ್ನು ಕೊಟ್ಟಿಗೆಯಲ್ಲಿ ಹುಗಿದಿರುವ ಗೂಟ ಅಥವಾ ಕೊಂಡಿಗೆ ಕಟ್ಟಿ ಇನ್ನೊಂದು ಕುಣಿಕೆಯನ್ನು ಜಾನುವಾರಿನ ಕೊರಳಿಗೆ ಬಿಗಿಯಲಾಗುತ್ತದೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿರುವ ಸಾಕುಪ್ರಾಣಿಯು ತಪ್ಪಿಸಿಕೊಂಡು ಹೋಗದಿರಲೆಂದು ಬಳಸುವ ಸಾಧನ ಇದಾಗಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಗೋಪೂಜೆಗೆ ಜಾನುವಾರುಗಳನ್ನು ಅಲಂಕರಿಸುವಾಗ ಬಣ್ಣಬಣ್ಣದ ಕಣ್ಣಿಗಳನ್ನು ಬಳಸಲಾಗುತ್ತದೆ.[೧]

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಂಗರಿಸಲಾಗಿರುವ ಜಾನುವಾರುಗಳು

ಆಕರಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2012-02-29. Retrieved 2013-07-15.

:

"https://kn.wikipedia.org/w/index.php?title=ಕಣ್ಣಿ&oldid=1054037" ಇಂದ ಪಡೆಯಲ್ಪಟ್ಟಿದೆ