ಕೆ. ಅಭಿಶಂಕರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್. ಶೇಷಗಿರಿರಾವ್


ಕಾರವಾರದಲ್ಲಿ ಕೆಲಸ ಮಾಡುವಾಗ ಶಿರಸಿಯ ಹತ್ತಿರ ನಡೆಯುವ ಕದಂಬೋತ್ಸವಕ್ಕೆ ಹೋಗುವ ಅವಕಾಶ ದೊರಕಿತು. ಅದು ಬನವಾಸಿಯಲ್ಲಿ, ಜೊತೆಗೆ ಪಂಪ ಪ್ರಶಸ್ತಿ ಬೇರೆ ಪ್ರದಾನ ಮಾಡುತಿದ್ದರು ." ಆರಂಕುಶಮಿಟ್ಟೊಡಂ ನೆನವುದನ್ನ ಮನಂ ಬನವಾಸಿ ದೇಶಮಂ" ಎಂಬ ಆದಿಕವಿ ಪಂಪನ ಅಭಿಮಾನದ ಸ್ಥಳವನ್ನು ನೋಡಲಾರದೆ ಇರಲಾಗುತ್ತದೆಯೇ, ಮರುಮಾತಿಲ್ಲದೆ ಹೊರಟುನಿಂತೆವು. ನಾವು ಹೋದಾಗಿನಿಂದ ಎಲ್ಲಕಡೆ ಬಹಳ ಚಟುವಟಿಕೆಯಿಂದ ಓಡಾಡುತ್ತಾ ಇದ್ದ ಒಬ್ಬ ಗೌರವವರ್ಣದ, ಮಧ್ಯಮ ಎತ್ತರದ, ದುಂಡು ಮೊಗದ , ಬಿಳಿ ಉಡುಪು ಧರಿಸಿದ ವ್ಯಕ್ತಿ ಗಮನ ಸೆಳೆದರು. ಬಂದ ಪ್ರತಿಯೊಬ್ಬರಿಗೂ ಎಲ್ಲ ಅನುಕೂಲ ಮಾಡಿಕೊಡುತಿದ್ದರು. ವಸತಿ , ಉಪಹಾರದ ನಂತರ ಬನವಾಸಿ ನೋಡಲು ಹೊರಟಾಗ ಅವರೇ ಬಹಳ ಆಸಕ್ತಿಯಿಂದ ಕರೆದೊಯ್ದು ಪ್ರತಿಯೊಂದನ್ನೂ ವಿವರಿಸಿದರು.. ಅವರನ್ನು ನೋಡಿದರೆ ಇತಿಹಾಸ, ಸಾಹಿತ್ಯ ಎರಡನ್ನೂ ಅರೆದು ಕೂಡಿದವರಂತಿದ್ದರು ಅವರು ನಮ್ಮನ್ನು ಕರೆದೊಯ್ದ ಕಡೆಗೆಲ್ಲ ಅವರಿಗೆ ವಿಶೇಷ ಗೌರವ ತೋರಿಸುತ್ತಿದ್ದಂತೆ ಭಾಸವಾಯಿತು. ಸಹಜವಾಗಿ ಮೂಡಿದ ಕುತೂಹಲದಿಂದ ಕೇಳಿದಾಗ ಗೊತ್ತಾಯಿತು. ಅವರು ಈ ಉತ್ಸವದ ರೂವಾರಿಯಾದ ಕೆ. ಅಭಿಶಂಕರ್‌ ಎಂದು.ಆದಿಕವಿಯ ಮಾತನ್ನು ಅನುರಣಿಸಿ , ನಾಡೆಲ್ಲ ಸುತ್ತಿ ಕೊನೆಗೆ ಹುಟ್ಟಿದೂರು ಬನವಾಸಿಯ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಜೀವ ಅಭಿಶಂಕರ್‌. ಪತ್ರಿಕೋದ್ಯಮ, ಸ್ಯಾತಂತ್ರ್ಯ ಚಳುವಳಿ,ಸಂಶೋಧನೆ ಮತ್ತು ಸಮಾಜ ಸುಧಾರಣೆಗೆ ಜೀವನ ಮುಡುಪಿಟ್ಟು ಸಾಕಷ್ಟು ಸಾಧನೆ ಮಾಡಿದರೂ ಜನ್ಮಸ್ಥಳವನ್ನು ಮರೆಯದೆ ಅದರ ಮುನ್ನೆಡೆಗೆ ಪ್ರಯತ್ನಿಸಿದವರು ಅಭಿಶಂಕರ್‌.

ಅಭಿಶಂಕರ್‌ ಅವರ ಪೂರ್ಣ ಹೆಸರು ಕೇಶವ ಅಭ್ಯಂಕರ್. ಅಭ್ಯಂಕರ್‌ ಮನೆತನದವರು ಮೂಲತಃ ಮಹಾರಾಷ್ಟ್ರದವರು, ಎರಡು ಶತಮಾನದ ಹಿಂದೆ ಕನ್ನಡ ನಾಡಿಗೆ ಬಂದರು. ಅವರದು ವೈದಿಕ ಮತ್ತು ವೈದ್ಯವೃತ್ತಿಯ ಮನೆತನ. ಮಧುಕೇಶ್ವರನ ಪೂಜೆ ಅವರದೇ. ಸಾಕಷ್ಟು ಸ್ಥಿತಿವಂತರ ಮನೆತನ. ಕೇಶವ ಅಭಿಶಂಕರರು 23, ನೆಯ 1921ರಲ್ಲಿ ಶಿರಸಿಯಲ್ಲಿ ಜನಿಸಿದರು. ತಂದೆ ಗುರುನಾಥ್‌. ಶಿಕ್ಷಕರು. ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯವಿತ್ತು. ಅವರು ಗಾಂಧಿವಾದಿ ಸೇವಾದಳದ ದೀಕ್ಷೆ ಪಡೆದಿದ್ದರು. ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸಮಾಜ ಸೇವೆಗ ನಿಂತರು. ಅವರ ಮನೆ ರಾಷ್ಟ್ರವಾದಿಗಳಿಗೆ ಸದಾ ಆಶ್ರಯತಾಣ. ಮನೆಯಲ್ಲಿ ನಿತ್ಯ ದಾಸೋಹ.. ತಾಯಿ ಯಶೋದಮ್ಮ.. ಅವರೂ ಸೇವಾದಳದ ಕಾರ್ಯಕರ್ತೆ. ಅದರಿಂದಾಗಿ ಬಾಲಕ ಕೇಶವನಿಗೆ ರಾಷ್ಟ್ರಪ್ರೇಮದ, ಸೇವಾಭಾವನೆಯ ತರಬೇತಿ ಮನೆಯಲ್ಲಿಯೇ ಲಭ್ಯ. ಬಾಲ್ಯದಲ್ಲಿಯೇ ಸ್ವದೇಶಿ, ಖಾದಿ, ಹರಿಜನಸೇವೆ, ಪ್ರಭಾತ್‌ಫೇರಿಯಲ್ಲಿ ಭಾಗವಹಿಸುವ ಅವಕಾಶ, ಇದು ಅವರ ತಂದೆಯ ಅಕಾಲ ಮರಣದಿಂದ ಕೊನೆಗೊಂಡಿತು. ಆಗ ಅಭಿಶಂಕರ್‌ ಇನ್ನೂ ಕುಮುಟಾ ಹೈಸ್ಕೂಲಿನಲ್ಲಿ ಸೇರಿದ್ದರು. ನಂತರ ಶಿರಸಿಯ ಅಧ್ಯಾಪಕ ತಿಮ್ಮಪ್ಪನಾಯಕರು ಪ್ರಭಾವ ಬೀರಿದರು. ಸಿರಸಿ ಮಾರಿಕಾಂಬ ಹೈಸ್ಕೂಲಿನಲ್ಲಿ ಮೆಟ್ರಿಕ್‌ ಮುಗಿಸಿದರು. ಅಣ್ಣ ಅಕ್ಕಂದಿರ ಸಹಕಾರದಿಂದ ಓದು ಸಾಗಿತು.. ಪೂನದಲ್ಲಿ ಇಂಟರ್‌ಗೆ ಸೇರಿದರು. ದೇಶ ಭಕ್ತಿ ಮತ್ತು ಸ್ವಾವಲಂಬನೆಯ ಹಂಬಲದಿಂದ ಇಂಟರ್‌ಮುಗಿದೊಡನೆ ಸೈನ್ಯದಲ್ಲಿನ ಸಿವಿಲ್‌ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ತಮ್ಮ ಬುದ್ಧಿಶಕ್ತಿ, ಕರ್ತವ್ಯ ಶೀಲತೆ ಮತ್ತು ನಡತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು. .ಆದರೆ ಅಲ್ಲಿ ಒಂದು ವರ್ಷವೂ ಇರಲಾಗಲಿಲ್ಲ. ಬ್ರಿಟಷ್‌ ಅಧಿಕಾರಿಯೊಬ್ಬನು ಭಾರತೀಯರನ್ನು ಹಿಯಾಳಿಸಿದುದಕ್ಕೆ ಅವರ ರಾಷ್ಟ್ರಪ್ರೇಮ ಜಾಗೃತಗೊಂಡಿತು. .ಅಧಿಕಾರಿಗೆ ಬುದ್ದಿ ಕಲಿಸಲು ಅವನ ಕಪಾಳಕ್ಕೆ ಹೊಡೆದರು. ಸೈನ್ಯದಲ್ಲಿ ಹಿರಿಯ ಅಧಿಕಾರಿಯಮೇಲೆ ಕೈ ಮಾಡುವುದು ಅಪರಾಧ. ಆದರೆ ಇವರ ರೀತಿನೀತಿ ಗಮನಿಸಿದ್ದ ಉನ್ನತ ಅಧಿಕಾರಿಗಳು ಅವರನ್ನು ಬೇರೊಂದು ಕಡೆ ವರ್ಗ ಮಾಡಿ ಆ ಸಮಸ್ಯೆಯನ್ನು ಮುಕ್ತಾಯ ಗೊಳಿಸಿದರು. ಆದರೆ ಸ್ವಾಭಿಮಾನಿ ಅಭಿಶಂಕರರು ಕೆಲಸಕ್ಕೆ ರಾಜಿನಾಮೆ ನೀಡಿ ಕೆಲಸ ಬಿಟ್ಟು ಮನೆಗ ಬಂದರು. ಹುಬ್ಬಳ್ಳಿಯಲ್ಲಿ ಕೆಲಕಾಲ ಆಡಿಟರ್‌ ಕೆಲಸ ಮಾಡಿದರು. ಅದುಸರಿಹೋಗದೆ ಗದಗಿನಲ್ಲಿ ಪತ್ರಿಕೆಯೊಂದರ ಸಂಪಾದಕರಾದರು. ಕಾಶಿಯಲ್ಲಿ ಸಂಸ್ಕೃತ ಅಭ್ಯಾಸ, ಅಲ್ಲಿಂದ ದೆಹಲಿ ಆಕಾಶವಾಣಿಯಲ್ಲಿ ಅನುವಾದಕನ ಹುದ್ದೆ ನಿರ್ವಹಿಸಿದರು., ಶ್ರದ್ಧೆ ಮತ್ತು ವಿದ್ಯಯಿಂದ ಅವರಿಗೆ ಉದ್ಯೋಗ ಸಿಗದೆಂಬ ಯೋಚನೆ ಇರಲಿಲಲ್ಲ. ಅಷ್ಟರಲ್ಲೇ . ಹೈದ್ರಾಬಾದ ವಿಮೋಚನೆಗೆ ನಡೆಯುತಿದ್ದ ಚಳುವಳಿ ಕೈಬೀಸಿ ಕರೆಯಿತು. ಹಿಂದು ಮುಂದು ನೋಡದೆ ೧೯೪೭ ರಲ್ಲಿ ಹೈದ್ರಾಬಾದ್ ವಿಮೋಚನಾ ಚಳುವಳಿಗೆ ಧುಮುಕಿದರು. ಅಲ್ಲಿನ ನೇತಾರ ಸ್ವಾಮಿರಾಮನಂದ ತೀರ್ಥರೊಂದಿಗೆ ಕೈ ಜೊಡಿಸಿದ್ದು. ಅಲ್ಲಿ ಚಳುವಳಿಯ ಮುಖವಾಣಿಯಾದ " ಪ್ರಜಾ" ಎಂಬ ಪತ್ರಿಕೆಯನ್ನು ಹೊರತಂದರು. ನೈಜಾಮ ಸರ್ಕಾರ ಪತ್ರಿಕೆಯನ್ನು ನಿಷೇಧಿಸಿದಾಗ ಆ ಕಾರ್ಯವನ್ನು ಮದ್ರಾಸಿನಿಂದ ನಿರ್ವಹಿಸಿದರು. ವಿಮೋಚನೆಯ ನಂತರ ರಮಾನಂದತೀರ್ಥರು ಸ್ಥಾಪಿಸಿದ ಅಜಂತಾ ಪ್ರೆಸ್‌ನ ಮ್ಯಾನೇಜರ್‌ ಆಗಿ ಐದು ಪತ್ರಿಕೆಗಳ ಉರ್ದು, ತೆಲುಗು, ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ದಿನಪತ್ರಿಕೆ ವಾರಪತ್ರಿಕೆಗಳ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರಾದರು.


ಅವರ ಮದುವೆ ೧೯೫೦ರಲ್ಲಿ ಬೆಂಗಳೂರಿನ ವಿಶಾಲಾಕ್ಷಿಯವರೊಂದಿಗೆ ಆಯಿತು. ಅದು ಅಂತರ್‌ಜಾತಿಯ ಮದುವೆ.. ಬ್ರಾಹ್ಮಣ ವರ, ಲಿಂಗಾಯತ ವರ. ಬಿ. ಶಿವಮೂರ್ತಿ ಸ್ವಾಮಿಗಳೇ ಮುಂದೆ ನಿಂತು ಮದುವೆ ಮಾಡಿಸಿದರು.ಅದೇ ಸಮಯದಲ್ಲಿ ಅವರಿಗೆ ಸಿದ್ದಗಂಗಾ ಶ್ರೀಗಳಿಂದ ಲಿಂಗಧಾರಣೆ ಆಯಿತು, ಅವರು ಅಭಿಶಂಕರ್‌ ಆದದ್ದು ಆಗಲೇ. ಆದರೆ ಅವರಿಗೆ ಜಾತಿಮತಗಳಲ್ಲಿ ನಂಬಿಕೆ ಇರಲಿಲ್ಲ. ಒಂದು ರೀತಿಯಲ್ಲಿ ಅವರು ಜಾತಿರಹಿತರು.ಆ ಮನೋಭಾವನೆ ಕೊನೆತನಕ ಇದ್ದಿತು. ಅವರು ದೇವರ ಕೋಣೆಯು ಅವರ ಮನಸಿನ ಸಂಕೇತವಾಗಿತ್ತು. ಅಲ್ಲಿ ಎಲ್ಲ ಧರ್ಮದ ಪೂಜಾರ್ಹರಿಗೂ ಸ್ಥಾನ ನೀಡಿದ್ದರು, ಹಿಂದು, ಮುಸ್ಲಿಮ್‌, ಬೌದ್ಧ, ಜೈನ ,ಕ್ರಿಸ್ತರೆಲ್ಲರೂ ಮಾನವರೇ ಎಂಬುದು ಅವರ ಧೃಡವಾದ ನಂಬಿಕೆ. ಹೈದ್ರಾಬಾದಿನಲ್ಲಿ ಪತ್ರಿಕೆ ಗಳನ್ನು ಯಶಸ್ವಿಯಾಗಿ ನಡೆಸಿದರು. ಒಳ್ಳೆಯ ಹೆಸರೂ ಬಂದಿತು. ಆದರೆ ಹಣಕಾಸಿನ ಕಡೆ ಗಮನ ಇರಲಿಲ್ಲ ಪಾಲುದಾರರು ವಂಚನೆ ಮಾಡಿದರು ಪರಿಣಾಮ ಒಂದು ಲಕ್ಷ ರುಪಾಯಿಯ ನಷ್ಟವಾಯಿತು.. ಮತ್ತೆ ಬೆಂಗಳೂರಿಗೆ ಬಂದರು. ಮಡದಿಯ ಒತ್ತಾಯದಿಂದ ಮುಂದೆ ಓದಲು ಮೊದಲು ಮಾಡಿದರು. ಉತ್ಕಲ ವಿಶ್ವ ವಿದ್ಯಾಲಯದಿಂದ ಬಿ.ಎ, ಭಾಗಲ್‌ಪುರ ವಿಶ್ವ ವಿದ್ಯಾಲಯದಿಂದ ಎಂ.ಎ, ಆಗ್ರಾದಿಂದ ಡಿ.ಲಿಟ್‌. ಪಡೆದರು. ಭಾರತ ಸರ್ಕಾರದ ಮೂಲಭೂತ ಸಂಶೋಧನೆಯ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆದು " ಭಾರತ ಸಂಪರ್ಕಭಾಷಾ ಪರಂಪರೆ" ಎಂಬ ಸಂಪ್ರಭಂಧ ರಚಿಸಿ ಡಿ. ಲಿಟ್‌ ಪಡೆದರು. ಜೊತೆಗೆ ಬನಾರಸ್‌ನಿಂದ ಸಾಹಿತ್ಯರತ್ನ ಮತ್ತು ಕಲಾವಿಶಾರದ ಪದವಿ ಪಡೆದರು. ಅದೇ ಸಮಯದಲ್ಲಿ ದೆಹಲಿಯ ಆಕಾಶವಾಣಿಯಲ್ಲಿ ಮುಖ್ಯ ಸಂಪಾದಕ ಮತ್ತು ಅನುವಾದಕರಾಗಿ ನೇಮಕವಾಯಿತು. ತಮ್ಮ ಪ್ರತಿಭೆಯಿಂದ, ನೆಹರೂ ಅವರಿಗೆ ಆಪ್ತರಾದರು. ಅಲ್ಲಿ ಅವರ ಸಂಪರ್ಕಜಾಲವೂ ಬೆಳೆಯಿತು. ಅವಕಾಶಗಳು ಬಹುವಾಗಿದ್ದವು. ಉದ್ಯೋಗವು ಅನ್ವೇಷಣೆಯ ಪಯಣವಾಗಿತ್ತು ಅವರ ಪಾಲಿಗೆ ಮತ್ತೆ ಬೆಂಗಳೂರಿಗೆ ಬಂದರು. ಬೆಂಗಳೂರಲ್ಲಿ ರಾಜಕೀಯ ನಾಯಕರ ಪರಿಚಯ ದೆಹಲಿಯಲ್ಲಿದ್ದಾಗಲೇ ಆಗಿತ್ತು. ಮುಖ್ಯಮಂತ್ರಿ ನಿಜಲಿಂಗಪ್ಪನವರು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ನಲ್ಲಿ ಮಾಸಿಕ ೫೦೦೦ ರೂವೇತನದ ಉನ್ನತ ಹುದ್ದೆ ನೀಡ ಬಯಸಿದರೂ ತಮ್ಮ ವೃತ್ತಿ ಮತ್ತು ಪ್ರವೃತಿ ಪರಸ್ಪರ ಪೂರಕವಾಗಿರಬೇಕೆಂದು ರಾಜ್ಯ ಗೆಜೆಟಯರ್‌ನ ಸಂಪಾದಕ ಹುದ್ದೆಯನ್ನು ಬರಿ ೯೦೦ ರೂ. ವೇತನಕ್ಕ ಒಪ್ಪಿಕೊಂಡು ನಿವೃತ್ತಿಯತನಕ ಅದರ ಏಳಿಗೆಗೆ ದುಡಿದರು. ಅವರ ಆದರ್ಶ ತಮ್ಮ ಊರಿನವರೇ ಕರ್ನಾಟಕ ಗಾಂಧಿ ಎಂದು ಹೆಸರಾದ ಹರ್ಡೇಕರ್‌ಮಂಜಪ್ಪನವರು. ಅವರಂತೆ ರಾಷ್ಟ್ರ ಸೇವೆ ಮತ್ತು ಪತ್ರಿಕೆಯ ಮೂಲಕ ಸಮಾಜ ಸೇವೆ ಮಾಡಲು ಬಯಸಿದರು ಅವರ ಹೋರಾಟ ಮತ್ತು ಪತ್ರಿಕಾ ಅನುಭವ ಅರಿತಿದ್ದ ವೀರೇಂದ್ರಪಾಟಿಲ್ ಅವರ ಆಹ್ವಾನದಂತೆ ಗೆಜೆಟಿಯರ್‌ನ ಸಂಪಾದಕರಾದರು. ತಮ್ಮ ಅಪಾರ ಅನುಭವ ಮತ್ತು ಸಂಶೋಧನಾ ಶಕ್ತಿಯಿಂದ ಗೆಜೆಟಿಯರ್‌ಗಳಿಗೆ ಹೊಸ ರೂಪವನ್ನೇ ಕೊಟ್ಟರು.ತಮ್ಮ ಕಚೇರಿಯಲ್ಲಿ ಅತ್ಯಾಧುನಿಕ ಪರಾಮರ್ಶನ ಗ್ರಂಥಾಲಯಮಾಡುವುದು ಅವರ ಮಹದಾಶೆ. ಅದರಂತೆ ಕರ್ನಾಟಕಾಲಜಿ ಎಂಬ ಹೊಸ ಪದವನ್ನೇ ಟಂಕಿಸಿ ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಸಂಶೋಧಕರಿಗೆ ಅಲ್ಲಿ ದೊರೆಯುವಂತೆ ಮಾಡಿದ ಕೀರ್ತಿ ಅವರದಾಯಿತು. ಅವರ ನಯ, ವಿನಯ, ಅನುನಯ ವಿದ್ವತ್‌ನಿಂದಾಗಿ ಅಜಾತ ಶತ್ರುವೆಂದೇ ಹೆಸರಾಗಿದ್ದರು. ಸರ್ಕಾರದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಹೃತ್ಪೂರ್ವಕವಾಗಿ ಸಹಕರಿಸಿದರು. ಗೆಜೆಟ್‌ ಮತ್ತು ಗೆಜೆಟಿಯರ್‌ಗಳ ನಡುವೆ ವ್ಯತ್ಯಾಸವು ಸುಶೀಕ್ಷಿತರಿಗೂ ಗೊತ್ತಿರದ ಕಾಲದಲ್ಲಿ ಗೆಜೆಟಿಯರ್‌ ಒಂದು ಗಣ್ಯಸ್ಥಾನ ಕಲ್ಪಿಸಿದವರು ಅಭಿಶಂಕರ್‌. ಗೆಜೆಟಿಯರ್‌ಒಂದು ರೀತಿಯಲ್ಲಿ ವಿಶ್ವ ಕೋಶದ ಮಾದರಿಯವು.ಒಂದು ಪ್ರದೇಶದ ಸಮಗ್ರ ಮಾಹಿತಿಯನ್ನು ಇತಿಹಾಸ ಪೂರ್ವಕಾಲದಿಂದ ಇತೀಚಿನವರೆಗೆ ಭೌಗೋಲಿಕ, ಆರ್ಥಿಕ,ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ಬೆಳವಣಿಗೆಯ ಮಾಹಿತಿಯನ್ನು, ಜನ ಜೀವನ, ಕೃಷಿ, ಕೈಗಾರಿಕೆ, ಶಿಕ್ಷಣ ಮೊದಲಾದ ವಿವಿಧ ವಿಷಯವನ್ನು ನಿಖರವಾಗಿ ನೀಡುವವು. ಇವು ಅಧಿಕೃತ ಮಾಹಿತಿಯ ಆಕರಗ್ರಂಥ ಎನ್ನಬಹುದು. ಆಡಳಿತಗಾರರಿಗೆ ಯೋಜನೆ ರೂಪಿಸಲು ಬಹು ಉಪಯೋಗಿ ಮತ್ತು ಮಾರ್ಗದರ್ಶಿಯಾಗಿರುವುದು ಎನ್ನಬಹುದು. ಸರ್ಕಾರದ ಅತ್ಯಂತ ಚಿಕ್ಕ ಇಲಾಖೆಯಾಗಿದ್ದು ಮೊದಲು ಅದನ್ನು ಒಂದು ಘಟಕ ಎಂದೇ ಕರೆಯುತಿದ್ದರು. ಡಾ.ಲಕ್ಷ್ಮಣ ತೆಲಗಾವಿ..ಡಾ. ದೇವರಕೊಡಾರೆಡ್ಡಿ, ಡಾ. ಅ.ಲ.ನರಸಿಂಹನ್‌, ಡಾ. ಎಂ.ಜಿ. ಪಾಟೀಲ್, ಡಾ.ಸೂರ್ಯನಾಥ್‌ಕಾಮತ್‌ ಮೊದಲಾದ ಅತಿರಥ ಮಹಾರಥ ಸಂಶೋಧಕರನ್ನು ಬೆಳಸಿದ್ದು ಅಭಿಶಂಕರ್‌ಅವರು ರೂಪಿಸಿದ ಗೆಜಟಿಯರ್‌ಇಲಾಖೆ.ಮತ್ತು ಅಲ್ಲಿ ಅವರು ಸ್ಥಾಪಿಸಿದ ಕರ್ನಾಟಿಕಾ ಆಕರ ಗ್ರಂಥಾಲಯ. ರಾಜ್ಯದ ಯಾವುದೇ ಮಾಹಿತಿ ದೊರಕುವ ಸ್ಥಳವಾಯಿತು. ವಿದ್ವಾಂಸರು ಮತ್ತು ಸಂಶೋಧಕರ ವಿಚಾರ ವಿನಿಮಯದ ವೇದಿಕೆಯಾಗಲು ಕಾರಣ ಅಭಿಶಂಕರ್. ಕದಂಬರು ಆಳಿದ ನಾಡಾದ ಬನವಾಸಿ ಸರ್ವಾಂಗೀಣ ಅಭಿವೃದ್ಧಿಗೆ 'ಬನವಾಸಿ ವಲಯ ಅಭ್ಯುದಯ ಸಮಿತಿ" ಯನ್ನು ೧೯೮೨ ರಲ್ಲಿ ಸ್ಥಾಪಿಸಿ ಎರಡುದಶಕಗಳ ವರೆಗೆ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶ ಸಾಧಿಸಿದರು. ಗ್ರಾಮಂತರದ ಯುವಜನತೆಗೆ ಗುಡಿಕೈಗಾರಿಕೆ, ಹೈನುಗಾರಿಕೆ, ಗೃಹಕೈಗಾರಿಕೆ ತರಬೇತಿ ಶಿಬಿರಗಳಿಂದ ಸ್ವಯಂಉದ್ಯೋಗಕ್ಕೆ ಅವಕಾಶ ಕಲ್ಪಿಸಿದರು, ಬನವಾಸಿಯ ಸುತ್ತಮುತ್ತಲಪ್ರದೇಶಗಳಿಗೆ ಸಂಪರ್ಕರಸ್ತೆ ಗ್ರಾಮೀಣ ವಿದ್ಯಾಪೀಠದ ರಚನೆ ಪ್ರತಿವರ್ಷ ಅಲ್ಲಿ ನಡೆವ ಕದಂಬೋತ್ಸವ ಮತ್ತು ನಾಡೋಜ ಪ್ರಶಸ್ತಿಪ್ರದಾನಕ್ಕೆ ಕಾರಣ .ಅವರ ಪ್ರಯತ್ನವೇ. ಗುಡ್ನಾಪುರದಲ್ಲಿ ಉತ್ಖನನ, ಬನವಾಸಿಯಲ್ಲಿ ಮ್ಯೂಜಿಯಂ ಅವರ ಕಾಣಿಕೆ. ಗ್ರಾಮವೊಂದರಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿ ಬಂದವರನ್ನು ಅಲ್ಲಿನ ಜನರೇ ತಮ್ಮ ತಮ್ಮ ಮನೆಯಲ್ಲಿ ಆತಿಥ್ಯ ನೀಡಿ ಸತ್ಕರಿಸಿದ್ದು ಒಂದು ದಾಖಲೆ .ತಾನು ಹುಟ್ಟಿದ ಊರಿನ ಅಭಿವೃದ್ಧಿ ಮಾಡಿ ಅದರ ಮೂಲಕ ರಾಜ್ಯದ ಮತ್ತು ರಾಷ್ಟ್ರದ ಏಳಿಗೆಗ ಶ್ರಮಿಸಿದ ಅಭಿಶಂಕರ್‌ ೧೯೯೮ರಲ್ಲಿ ಕಾಲವಾದಾಗ ಊರಿಗೆ ಊರೇ ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸಿ ಮೌನ ಮೆರವಣಿಗೆ ಮಾಡಿ ತನ್ನ ಮಣ್ಣಿನ ಮಗನಿಗೆ ನಮನ ಸಲ್ಲಿಸದ್ದು ಅವರ ಸೇವೆಗೆ ಸಂದ ಗೌರವ. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿ ನೀಡುವ ಮಾಶಾಸನವನ್ನು ಅವರು ಸ್ವೀಕರಿಸಲು ಒಪ್ಪಲಿಲ್ಲ. ಜಾತಿಯತೆಯು ಭಾರತದ ಪಾಲಿನ ಕಳಂಕವೆಂದು ದೃಢವಾಗಿ ನಂಬಿದವರು. ಅದಕ್ಕಾಗಿ ಅಂತರ್‌ಜಾತಿ ವಿವಾಹಗಳಿಗೆ ಸಹಕಾರ ಸಹಾಯ ಕೊಡುತ್ತಿದ್ದರು. ದಲಿತ ಮತ್ತು ಹರಿಜನರನ್ನು ಕಂಡರೆ ಅಪಾರಪ್ರೀತಿ. ಅವರಿಗೆ ಸಾಕಷ್ಟು ಸಹಾಯ ಮಾಡುವರು. ಮಾರ್ಗದರ್ಶನ ನೀಡುವರು.ಸಾವಿರಾರು ವರ್ಷದ ಪಾಪದ ಹೊರೆ ನೀಗಿಕೊಳ್ಳಲು ಈಗ ತ್ಯಾಗದ ಅಗತ್ಯವಿದೆ ಎಂದು ಪ್ರತಿಪಾದಿಸುತಿದ್ದರು. ಕರ್ನಾಟಕ ಇತಿಹಾಸ ಅಕಾದಮಿ, ಎಸ್‌ನಿಜಲಿಂಗಪ್ಪ ಟ್ರಸ್ಟ್‌, ಕೆಳದಿ ಮ್ಯೂಜಿಯಂ.ಬನವಾಸಿ ಅಭ್ಯುದಯ ಸಮಿತಿ, ಡಾ. ಹರ್ಡೇಕರ್‌ಮಂಜಪ್ಪ ಸ್ಮಾರಕ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಎಪಿಗ್ರಾಫಿಕಲ್‌ ಸೊಸೈಟಿ, ಮಹಾಬೋಧಿ ಸೊಸೈಟಿ, ಮಿಥೀಕ್‌ ಸೊಸೈಟಿ ಇತ್ಯಾದಿ ಹಲವು ಹದಿನೆಂಟು ಸಂಘಸಂಸ್ಥೆಗಳಿಗೆ ಅವರ ಸಕ್ರಿಯ ಸೇವೆ ಸಂದಿದೆ. ಅವರ ಸಂಶೋಧನೆ ಒಂದು ರಂಗಕ್ಕೆ ಸೀಮಿತವಲ್ಲ.ಇತಿಹಾಸ, ಗ್ರಾಮೀಣ ಅಭಿವೃದ್ಧಿ, ಧರ್ಮ ಹೀಗೆ ಹಲವು ರಂಗಗಳಲ್ಲಿ ತಮ್ಮ ಛಾಪು ಮೂಡಿಸಿದರು. Cult of warrior ವೀರಭದ್ರನ ಕುರಿತಾದ ಅಧ್ಯಯನವಾದರೆ ,some Socio-cultural aspects,Every Hindu is a Budhist ಸೇರಿದಂತೆ ಸುಮಾರು ೩೧ ಸಂಶೋಧನ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆದಿರುವರು. ಅಷ್ಟೇ ಸಂಖ್ಯೆಯ ಸಂಶೋಧನಾ ಬರಹಗಳನ್ನು ಇತಿಹಾಸ, ಅರ್ಥಶಾಸ್ತ್ರರ, ಧರ್ಮ, ಮಾನವೀಯ ಮೌಲ್ಯಗಳನ್ನು ಕುರಿತಂತೆ ವಿವಿಧ ವಿದ್ವತ್‌ಗೋಷ್ಠಿಗಳಲ್ಲಿ ಮಂಡಿಸಿರುವುರು . ಅಲ್ಲದೆ ಯಾವುದೇ ಸಾಮಾಜಿಕಸಮಸ್ಯೆ ಗಂಭೀರವಾಗಿ ಕಂಡು ಬಂದರೆ ತಕ್ಷಣ ಸರ್ಕಾರಕ್ಕೆ ವಿವರವಾದ ಪತ್ರ ಬರೆದು ಮಾರ್ಗದರ್ಶನ ನೀಡುತಿದ್ದರು. ಬಸವ ತತ್ವವನ್ನು ಕಾಯಾ ವಾಚಾ ಮತ್ತು ಮನಸಾ ಕಾರ್ಯ ರೂಪದಲ್ಲಿ ತಂದಿದ್ದರು. ಸರ್ವಜನ ಸಮ್ಮತವಾದ ಸರ್ವೋದಯಕ್ಕಾಗಿ ತಮ್ಮನ್ನು ತೊಡಗಿಸಿ ಕೊಂಡು ಅನುಭಾವಿಯಾಗಿ ಜನಮಾನಸದಲ್ಲಿ ಉಳಿದಿರುವರು. ತಮ್ಮಎಲ್ಲ ಸೇವಾ ಕಾರ್ಯಗಳಿಗೂ ೯-೯-೯೮ ರಂದು ವಿದಾಯಹೇಳಿ ನೆನಪಾಗಿ ಮಾತ್ರ ಉಳಿದರು. (ಮುಂದುವರಿಯುವುದು)