ಅಡಿಹುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡಿಹುಡಿ
ಅಡಿಹುಡಿ
village
Population
 (೨೦೧೨)
 • Total೧೫೦೦೦

ಅಡಿಹುಡಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ಅಡಿಹುಡಿ ಗ್ರಾಮವು ಜಿಲ್ಲಾ ಕೇಂದ್ರ ಬಾಗಲಕೋಟ ದಿಂದ ಸುಮಾರು ೮೫ ಕಿ. ಮಿ. ದೂರ ಇದೆ.

ಚರಿತ್ರೆ[ಬದಲಾಯಿಸಿ]

ಅಡಿಹುಡಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ಬಿ.ಎಸ್.ಎನ್.ಎಲ್ ಕಚೇರಿ, ಬಸ್ ನಿಲ್ದಾಣ, ಅಂಚೆ ಕಚೇರಿ ಹಾಗೂ ಇತರೆ ಕಚೇರಿಗಳಿವೆ.

ದೇವಾಲಯಗಳು[ಬದಲಾಯಿಸಿ]

ಅಡಿಹುಡಿಯಲ್ಲಿ ಹಾಜಿಸಾಹೆಬ್ ದರ್ಗಾ ಮತ್ತು ಬಂಗಾಲಿ ಬಾಬಾಸಾಹೇಬ ದರ್ಗಾ ದ ವಿಶೇಷತೆ ಹೊಂದಿದೆ ಮತ್ತು ಹಜರತ ಇಮಾಮಸಾಬ ದೇವರ ಮಹೀಮೆ ವಿಷೇಶ ಎಕೆಂದರೆ ಹಾವು ಕಚ್ಚಿದಾಗ ಇಲ್ಲೀ ಅದರ ವೀ ಮಹಾಲಕ್ಷ್ಮಿ ದೇವಸ್ಥಾನ,ಶ್ರೀ ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗನ್ನು ನಿರ್ಮಿಸಿದ್ದಾರೆ.

ಮಸೀದಿಗಳು[ಬದಲಾಯಿಸಿ]

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಶ್ರೀ ಲಕ್ಷ್ಮೀ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಡ ಶಾಲೆಗಳು ಶಿಕ್ಷಣ ನೀಡುತ್ತಿವೆ.

"https://kn.wikipedia.org/w/index.php?title=ಅಡಿಹುಡಿ&oldid=1189853" ಇಂದ ಪಡೆಯಲ್ಪಟ್ಟಿದೆ