ಹೊರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊರ್ತಿ
ಹೊರ್ತಿ
village
Population
 (೨೦೧೨)
 • Total೧೫೦೦೦

ಹೊರ್ತಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಹೊರ್ತಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಹೊರ್ತಿ ಗ್ರಾಮವು ವಿಜಯಪುರ - ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ - 13 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೩೫ ಕಿ. ಮಿ. ದೂರದಲ್ಲಿದೆ.

ಚರಿತ್ರೆ[ಬದಲಾಯಿಸಿ]

ರೇವಣಸಿದ್ಧೇಶ್ವರ ದೇವಸ್ಥಾನ

ರೇವಣಸಿದ್ಧೇಶ್ವರ ಹಳೇ ಜೋಡ ಗುಡಿಯ ದೇವಸ್ಥಾನಗಳ ಪಕ್ಕದಲ್ಲಿನ 108 ಅಡಿ ಎತ್ತರದ 3ನೇ ಬೃಹತ್ ರಾಜಗೋಪುರ ನಿರ್ಮಿಸಲಾಗಿದೆ.

ಹೊರ್ತಿ ಗ್ರಾಮವು ಪುರಾತನ ಕಾಲದಲ್ಲಿ ಸಿದ್ಧಪುರ ಎಂದು ಹೆಸರಾಗಿತ್ತು. ಇಲ್ಲಿ ಸಿದ್ಧರು ವಾಸಿಸುತ್ತಿದ್ದರು ಎಂಬ ಪ್ರತೀತಿ ಇದೆ. ಪುರಾತನಾ ಶಿವ ದೇವಾಲಯವಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಶ್ರೀ ಕ್ಷೇತ್ರ ಹರಡಿಕೊಂಡಿದೆ. ಇಲ್ಲಿ ಅನೇಕ ಸಿದ್ಧ ಪುರುಷರು ತಪಸ್ಸು ಮಾಡುತ್ತಿದ್ದರು ಎಂಬ ಐತಿಹ್ಯವಿದೆ.

ಆದಿ ಮಾಯಿ ಮಾಳಮ್ಮ ಉಪಟಳದಿಂದ ಸಿದ್ಧರಿಗೆ ತಪೋ ಭಂಗ ಉಂಟಾಗುತ್ತಿತ್ತು. ಆಗ ಅವರೆಲ್ಲರೂ ಸೇರಿ ರೇವಣಸಿದ್ಧನನ್ನು ನೆನೆದರು. ಅವರ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ರೇವಣ್ಣ ಸಿದ್ಧ ಆದಿ ಮಾಯಿ ಮಾಳಮ್ಮನ ಗರ್ಭ ಭಂಗ ಮಾಡಿದರು. ಮಾಳಮ್ಮನನ್ನು ಶಿಷ್ಯೆಯಾಗಿ ಸ್ವೀಕರಿಸಿ ದೇವಸ್ಥಾನದ ಎದುರಿನ ಬೆಟ್ಟದಲ್ಲಿ ನೆಲೆ ನಿಲ್ಲುವಂತೆ ಹೇಳಿದರು. ಈಗಲೂ ಈ ಬೆಟ್ಟಕ್ಕೆ ಮಾಳಮ್ಮ ಬೆಟ್ಟ ಎಂದು ಕರೆಯಲಾಗುತ್ತದೆ. ಆಗಿನಿಂದ ಗ್ರಾಮಕ್ಕೆ ಹೊರತಿ/ಹೊರ್ತಿ ಎಂಬ ಹೆಸರಾಯಿತು ಎಂದು ಇಲ್ಲಿನ ಜನರು ಹೇಳುತ್ತಾರೆ. ರೇವಣ್ಣ ಸಿದ್ಧೇಶ್ವರರು ಇಲ್ಲಿ ನೆಲೆ ನಿಂತರು ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಈ ಕ್ಷೇತ್ರದಲ್ಲಿ ಜಾತ್ರೆ ಆರಂಭವಾದಾಗಿನಿಂದಲೂ ಭಕ್ತ ಹಂಚನಾಳ ಬಸಪ್ಪನು ಪ್ರತಿ ವರ್ಷ ರೇವಣಸಿದ್ಧೇಶ್ವರರ ದರ್ಶನಕ್ಕೆ ಬರುತ್ತಿದ್ದನು. ಒಂದು ವರ್ಷ ಜಾತ್ರೆಗೆ ಬರುವಾಗ ದಾರಿಯಲ್ಲಿ ಪ್ರಾಣ ಬಿಟ್ಟನು.

ಆಗ ರೇವಣಸಿದ್ಧರು ಹಂಚಿನಾಳ ಬಸಪ್ಪನ ನೈವೇದ್ಯ ಬರಲಿಲ್ಲವೆಂದು ವಿಚಾರಿಸುತ್ತಾರೆ. ಆಗ ಭಕ್ತರು ಆತ ದಾರಿಯಲ್ಲಿ ಪ್ರಾಣ ಬಿಟ್ಟಿರುವುದನ್ನು ಹೇಳುತ್ತಾರೆ. ರೇವಣಸಿದ್ಧರು ಅಲ್ಲಿಗೆ ಹೋಗಿ ದರ್ಶನ ನೀಡಿದರು ಎಂಬ ನಂಬಿಕೆಯೂ ಈ ಭಾಗದಲ್ಲಿದೆ.

ಸುಮಾರು 1400 ವರ್ಷಗಳ ಹಿಂದೆ ರೇವಣಸಿದ್ಧರು ಅವಿಭಜಿತ ಆಂಧ್ರಪ್ರದೇಶದ ಕೊಲ್ಲಿಪಾಕಿ ಎಂಬಲ್ಲಿ ಸೋಮನಾಥ ಲಿಂಗದೊಳಗೆ ಜನ್ಮ ತಳೆದು ಉದ್ಭವಮೂರ್ತಿಗಳಾಗಿ ಅವತರಿಸಿದರು. ಶಿಷ್ಟರ ರಕ್ಷಕರಾಗಿ ಅವತಾರ ಪುರುಷರೆನಿಸಿಕೊಂಡರು ಎಂದು ಭಕ್ತರು ನಂಬುತ್ತಾರೆ.

ಭೌಗೋಳಿಕ[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ[ಬದಲಾಯಿಸಿ]

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 8970 ಇದೆ. ಅದರಲ್ಲಿ 4667 ಪುರುಷರು ಮತ್ತು 4303 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ[ಬದಲಾಯಿಸಿ]

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ[ಬದಲಾಯಿಸಿ]

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ[ಬದಲಾಯಿಸಿ]

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ರೇವಣ ಸಿದ್ದೇಶ್ವರ ದೇವಸ್ಥಾನ
  • ಶ್ರೀ ಮಹಾಲಕ್ಷ್ಮಿ ದೇವಸ್ಥಾನ
  • ಶ್ರೀ ಪಾಂಡುರಂಗ - ವಿಠ್ಠಲ ದೇವಸ್ಥಾನ
  • ಶ್ರೀ ಹಣಮಂತ ದೇವಾಲಯ

ಮಸೀದಿ[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ[ಬದಲಾಯಿಸಿ]

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ[ಬದಲಾಯಿಸಿ]

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ[ಬದಲಾಯಿಸಿ]

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ[ಬದಲಾಯಿಸಿ]

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ[ಬದಲಾಯಿಸಿ]

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ[ಬದಲಾಯಿಸಿ]

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಹೊರ್ತಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಹೊರ್ತಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಹೊರ್ತಿ
  • ಅನಿಕೇತನ ಕಿರಿಯ ಪ್ರಾಥಮಿಕ ಶಾಲೆ, ಹೊರ್ತಿ
  • ಶ್ರೀ ರೇವಣ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಹೊರ್ತಿ
  • ಸರ್ವೋದಯ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ, ಹೊರ್ತಿ
  • ಎಸ್.ವಿ.ಕೆ.ಬಿ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಹೊರ್ತಿ
  • ಎನ್.ಎಮ್.ಬಿ.ಆರ್.ಎಸ್. ಹಿರಿಯ ಪ್ರಾಥಮಿಕ ಶಾಲೆ, ಹೊರ್ತಿ
  • ಶ್ರೀ ಮಲ್ಲಿಕಾರ್ಜುನ ಅಂತರಾಷ್ಟ್ರೀಯ ಶಾಲೆ(ಸಿಬಿಎಸ್‌ಸಿ), ಹೊರ್ತಿ
  • ಸೋಮೇಶ್ವರ ಪ್ರೌಢ ಶಾಲೆ, ಹೊರ್ತಿ
  • ಸರ್ವೋದಯ ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಹೊರ್ತಿ
  • ಎಸ್.ಆರ್. ಪ್ರೌಢ ಶಾಲೆ, ಹೊರ್ತಿ
  • ಎನ್.ಎಮ್.ಬಿ.ಆರ್.ಎಸ್. ಪ್ರೌಢ ಶಾಲೆ, ಹೊರ್ತಿ
  • ಶ್ರೀ ರೇವಣ ಸಿದ್ದೇಶ್ವರ ಪದವಿಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹೊರ್ತಿ
  • ಸರ್ವೋದಯ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಹೊರ್ತಿ
  • ಶ್ರೀ ರೇಣುಕಾಚಾರ್ಯ ಕಲಾ ಮಹಾವಿದ್ಯಾಲಯ, ಹೊರ್ತಿ
  • ಚೈತ್ರ ಮಹಿಳಾ ಕಲಾ ಮಹಾವಿದ್ಯಾಲಯ, ಹೊರ್ತಿ
  • ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹೊರ್ತಿ

ಆರಕ್ಷಕ (ಪೋಲಿಸ್) ಠಾಣೆ[ಬದಲಾಯಿಸಿ]

ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ವಿದ್ಯುತ್ ಪರಿವರ್ತನಾ ಕೇಂದ್ರ[ಬದಲಾಯಿಸಿ]

೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.

ಸಾಕ್ಷರತೆ[ಬದಲಾಯಿಸಿ]

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ[ಬದಲಾಯಿಸಿ]

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಮಳೆ ಮಾಪನ ಕೇಂದ್ರ[ಬದಲಾಯಿಸಿ]

  • ಮಳೆ ಮಾಪನ ಕೇಂದ್ರ, ಹೊರ್ತಿ

ಬ್ಯಾಂಕ್[ಬದಲಾಯಿಸಿ]

  • ಸಿಂಡಿಕೇಟ್ ಬ್ಯಾಂಕ್, ಹೊರ್ತಿ
  • ಡಿ.ಸಿ.ಸಿ.ಬ್ಯಾಂಕ, ಹೊರ್ತಿ

ಗ್ರಾಮ ಪಂಚಾಯತಿ[ಬದಲಾಯಿಸಿ]

  • ಗ್ರಾಮ ಪಂಚಾಯತಿ, ಹೊರ್ತಿ

ದೂರವಾಣಿ ವಿನಿಮಯ ಕೇಂದ್ರ[ಬದಲಾಯಿಸಿ]

  • ದೂರವಾಣಿ ವಿನಿಮಯ ಕೇಂದ್ರ, ಹೊರ್ತಿ

ಅಂಚೆ ಕಚೇರಿ[ಬದಲಾಯಿಸಿ]

  • ಅಂಚೆ ಕಚೇರಿ, ಹೊರ್ತಿ
  • ಹೊರ್ತಿ - 586117 (ಡೋಮನಾಳ, ಹಡಲಸಂಗ, ಹಲಗುಣಕಿ, ಇಂಚಗೇರಿ, ಕಪನಿಂಬರಗಿ, ನಂದರಗಿ, ಸಾತಲಗಾಂವ ಪಿ.ಬಿ., ಸಾವಳಸಂಗ, ಅಗಸನಾಳ, ಬಬಲಾದ, ಬಳ್ಳೋಳ್ಳಿ, ಬಸನಾಳ, ಚವಡಿಹಾಳ, ದೇಗಿನಾಳ).

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ[ಬದಲಾಯಿಸಿ]

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹೊರ್ತಿ

ಹಾಲು ಉತ್ಪಾದಕ ಸಹಕಾರಿ ಸಂಘ[ಬದಲಾಯಿಸಿ]

  • ಹಾಲು ಉತ್ಪಾದಕ ಸಹಕಾರಿ ಸಂಘ, ಹೊರ್ತಿ

ಪ್ರಾಥಮಿಕ ಆರೋಗ್ಯ ಕೇಂದ್ರ[ಬದಲಾಯಿಸಿ]

  • ಪ್ರಾಥಮಿಕ ಆರೋಗ್ಯ ಕೇಂದ್ರ, ಹೊರ್ತಿ

ಪಶು ಆಸ್ಪತ್ರೆ[ಬದಲಾಯಿಸಿ]

  • ಪಶು ಆಸ್ಪತ್ರೆ ಮತ್ತು ಕೃತಕ ಗರ್ಭಧಾರಣಾ ಕೇಂದ್ರ, ಹೊರ್ತಿ

ಉಚಿತ ಪ್ರಸಾದನಿಲಯ[ಬದಲಾಯಿಸಿ]

  • ಮೆಟ್ರಿಕ್ ಪುರ್ವ ಬಾಲಕರ ಉಚಿತ ಪ್ರಸಾದನಿಲಯ, ಹೊರ್ತಿ
  • ಮೆಟ್ರಿಕ್ ಪುರ್ವ ಬಾಲಕಿಯರ ಉಚಿತ ಪ್ರಸಾದನಿಲಯ, ಹೊರ್ತಿ

ಕಟ್ಟಡ ನಿರ್ಮಾಣ ಸಹಕಾರ ಸಂಘ[ಬದಲಾಯಿಸಿ]

  • ಕಟ್ಟಡ ನಿರ್ಮಾಣ ಸಹಕಾರ ಸಂಘ, ಹೊರ್ತಿ

ಪಶು ಚಿಕಿತ್ಸಾಲಯ[ಬದಲಾಯಿಸಿ]

  • ಪಶು ಚಿಕಿತ್ಸಾಲಯ, ಹೊರ್ತಿ
"https://kn.wikipedia.org/w/index.php?title=ಹೊರ್ತಿ&oldid=921410" ಇಂದ ಪಡೆಯಲ್ಪಟ್ಟಿದೆ